ಮೈಸೂರು:
ಸುತ್ತೂರು ಶಾಖಾ ಮಠದಲ್ಲಿ ಭಕ್ತಾದಿಗಳಿಗೆ ಆಷಾಢ ಮಾಸದ ಕಡೆಯ ಶುಕ್ರವಾರದ ಹಿನ್ನಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ (ಅನ್ನದಾಸೋಹ) ವಿತರಣೆ ಆಯೋಜಿಸಲಾಗಿತ್ತು.
ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹೋಗುವ ಸಾವಿರಾರು ಭಕ್ತರು ಸುತ್ತೂರುಮಠಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಕೇಸರಿ ಬಾತ್, ಉಪ್ಪಿಟ್ಟು, ಚಿತ್ರನ್ನ, ಪುಳಿಯೋಗರೆ, ಮೊಸರನ್ನ, ಮೈಸೂರು ಪಾಕ್ ವಿತರಿಸಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಯರಾಜೇಂದ್ರರು ಸ್ವತಃ ತಾವೇ ಪ್ರಸಾದ ವಿತರಿಸಿದರು.