ಬೆಂಗಳೂರು
ರಾಯಬಾಗ
ಬಸವೇಶ್ವರರ ಜಯಂತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಮೆರವಣಿಗೆಯಲ್ಲಿ ಶಾಸಕ ದುರ್ಯೋಧನ ಐಹೊಳೆ ಟ್ರಾಕ್ಟರ್ ಚಲಾಯಿಸಿದರು.

ಕೋಲಾರ
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ವೀರಶೈವ ಲಿಂಗಾಯತ ಸಮುದಾಯದ ವತಿಯಿಂದ ನಡೆದ ಅದ್ದೂರಿ ಬಸವಜಯಂತಿ ಶೋಭಾಯಾತ್ರೆ ಗಮನ ಸೆಳೆಯಿತು.

ರಾಣೆಬೆನ್ನೂರು
ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ಮೂರ್ತಿ ಎತ್ತಿನ ಮೆರವಣಿಗೆ ಮತ್ತು ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.

ಬಸವಕಲ್ಯಾಣ
ನಗರದಲ್ಲಿ ಬಸವೇಶ್ವರರ 75ನೇ ಜಾತ್ರಾ ಅಮೃತ ಮಹೋತ್ಸವ ಪ್ರಯುಕ್ತ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ವತಿಯಿಂದ ಮೆರವಣಿಗೆ ಏರ್ಪಡಿಸಲಾಗಿತ್ತು.

ಮೈಸೂರು
ಮೈಸೂರಿನಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಜ್ಜಿಗೆಯನ್ನು ವಿತರಿಸಿದರು.

ಜೇವರ್ಗಿ
ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಭವ್ಯ ಮೆರವಣಿಗೆಯಲ್ಲಿ ಶಾಸಕ ಡಾ.ಅಜಯಸಿಂಗ್ ಭಾಗಿಯಾದರು.

ಹುಬ್ಬಳ್ಳಿ
ಇಲ್ಲಿಯ ಮೂರುಸಾವಿರ ಮಠ ವೀರಶೈವ ಸಂಟನಾ ಸಮಿತಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಅಂಗವಾಗಿ ಬುಧವಾರ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.
