ಬಸವಾಭಿಮಾನಿಗಳನ್ನು ಒಗ್ಗೂಡಿಸಿದ ಬಸವ ಮೀಡಿಯಾ

ಬಸವ ತತ್ವದ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯುವ ಕೆಲಸವನ್ನು ಬಸವ ಮೀಡಿಯಾ ಮಾಡಿದೆ.

ದಾವಣಗೆರೆ

ಇವತ್ತು ರಾಜ್ಯದ ಬಸವಾಭಿಮಾನಿಗಳು ಪರಸ್ಪರ ಸಂಪರ್ಕದಲ್ಲಿ ಇದ್ದರೆ ಅದಕ್ಕೆ ಬಸವ ಮೀಡಿಯಾ ಕಾರಣ.

ಬಸವ ಮೀಡಿಯಾ ಒಂದನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದರ ಸಾಧನೆಗಳ ಬಗ್ಗೆ ನಾವು ಚಿಂತಿಸಬೇಕಾಗಿದೆ.

ಬಸವ ಮೀಡಿಯಾ ಬಸವ ತತ್ವದ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯುವ ಕೆಲಸವನ್ನು ಬಹಳ ಪರಿಣಾಮಕಾರಿಯಾಗಿ ಮಾಡಿದೆ.

ಮಂಗಳೂರಿನಲ್ಲಿ ಮನುವಾದಿಗಳಿಂದ ನಡೆದ ವಚನ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಸವಾದಿ ಶರಣರ ವಿಚಾರಗಳನ್ನು ತಿರುಚಿ, ಅಪಮೌಲ್ಯ ಮಾಡಿದ ಸಂದರ್ಭದಲ್ಲಿ ಬಸವಾಭಿಮಾನಿಗಳನ್ನು ಬಡಿದೆಬ್ಬಿಸುವ ಕೆಲಸ ಮಾಡಿದೆ.

ಬಸವಾದಿ ಶರಣರಿಗೆ ಅಪಚಾರ ಎಸಗುವ ವಚನ ದರ್ಶನ ಪುಸ್ತಕದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಿದೆ.

ಸೆಪ್ಟೆಂಬರನಲ್ಲಿ ರಾಜ್ಯಾದ್ಯಂತ ನಡೆಯಲಿರುವ ‘ಬಸವ ಸಂಸ್ಕೃತಿ ಅಭಿಯಾನ’ ನಡೆಯುವಲ್ಲಿ ಬಸವ ಮೀಡಿಯಾ ಪಾತ್ರ ಬಹಳ ದೊಡ್ಡದು ಇದೆ.

ವಚನ ದರ್ಶನ ಪುಸ್ತಕದ ಲೇಖಕರೊಬ್ಬರನ್ನು ಮೈಸೂರಿನ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಿಂದ ದೂರ ಸರಿಯುವಂತೆ ಮಾಡಿದ್ದರಲ್ಲಿ ಬಸವ ಮೀಡಿಯಾ ಪಾತ್ರ ಬಹಳ ಮುಖ್ಯವಾದುದು.

ವೀಣಾ ಬನ್ನಂಜೆ ಅವರು ಹೇಳಿದ ಅನುಭವ ಮಂಟಪ ನಿರಾಕರಣೆ ಬಗ್ಗೆ ಬಸವ ಮೀಡಿಯಾ ರಾಜ್ಯಾದ್ಯಂತ ಬಸವ ಭಕ್ತರನ್ನು ಪುಟಿದೆಬ್ಬಿಸಿತು.

ಬಸವ ಜಯಂತಿ ಸಂದರ್ಭದಲ್ಲಿ ಬಸವಣ್ಣನವರ ಪೋಟೋ ಜೊತೆಗೆ ರೇಣುಕಾಚಾರ್ಯ ಪೋಟೋ ಹಾಕಬೇಕು ಎಂಬ ಶಂಕರ್ ಬಿದರಿ ಅವರ ಆದೇಶದ ವಿರುದ್ಧ ಜನರನ್ನು ಜಾಗೃತಿ ಮಾಡಿದ್ದು ಬಸವ ಮೀಡಿಯಾ.

ರಾಜ್ಯದ ತುಂಬಾ ನಡೆಯುತ್ತಿರುವ ಬಸವಾದಿ ಶರಣರ ಕಾರ್ಯಕ್ರಮಗಳನ್ನು ರಾಜ್ಯದ ತುಂಬಾ ಶ್ರಮಪಟ್ಟು ಪ್ರಸಾರ ಮಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಪ್ರಾರಂಭ ಆದ ಮತ್ತು ಆಗಲೇಬೇಕಿದ್ದ ನಿಜಾಚರಣೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ, ಉಳಿದವರನ್ನು ನಿಜಾಚರಣೆ ಕಾರ್ಯಕ್ರಮ ಮಾಡುವಂತೆ ಪ್ರೇರೇಪಿಸಲು ಬಸವ ಮೀಡಿಯಾ ಮಹತ್ವದ ಕೆಲಸ ಮಾಡುತ್ತಿದೆ.

ಕೆಲವು ಬಸವತತ್ವ ಪ್ರಸಾರಕರ ವೇಷದಲ್ಲಿ ಇದ್ದು ಡಾಂಭಿಕತನ ತೋರುವವರ ಬಣ್ಣ ಬಯಲು ಮಾಡುತ್ತಿದೆ.

ಬಸವಾದಿ ಶರಣರ ವಿಚಾರಗಳನ್ನು ಅಪಮೌಲ್ಯ ಮಾಡುವವರಿಗೆ ಎಚ್ಚರಿಕೆ ಗಂಟೆಯಾಗಿ ಬಸವ ಮೀಡಿಯಾ ಕೆಲಸ ಮಾಡುತ್ತಿದೆ.

ಇದು ಇನ್ನೂ ಹೆಚ್ಚೆಚ್ಚು ಕೆಲಸ ಮಾಡುವ ಶಕ್ತಿ, ಉತ್ಸಾಹ ಬಸವ ಮೀಡಿಯಾ ತಂಡಕ್ಕೆ ಬರಲಿ.

ನಾವು ನೀವೆಲ್ಲರೂ ಈ ಬಸವ ಮೀಡಿಯಾಕ್ಕೆ ಇನ್ನೂ ಹೆಚ್ಚು ಸಹಕಾರ, ಪ್ರೋತ್ಸಾಹ ನೀಡೋಣ ಎಂದು ಕೇಳಿಕೊಳ್ಳುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
2 Comments
  • ಈ ಮಾಧ್ಯಮ ಇನ್ನೂ ಎತ್ತರಕ್ಕೆ ಬೆಳೆಯಲಿ, ನಾವು ಇದನ್ನು ಎತ್ತರಕ್ಕೆ ತೆಗೆದುಕೊಂಡು ಹೋಗೋಣ. ಜೈ ಬಸವೇಶ

    • ಬಸವ ಮೀಡಿಯ ಲಿಂಗಾಯತರೆಲ್ಲರ ನಾಡಿ ಮಿಡಿತವನ್ನು ಧರ್ಮ ಮಾನ್ಯತೆ ಹೋರಾಟಕ್ಕೆ ಬಡಿದೆಬ್ಬಿಸಲಿ…

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು