೨೦೧೮ ಆಗಸ್ಟ್ ೧೫ ಭಾರತ ಸ್ವತಂತ್ರ ದಿನಾಚರಣೆಯಾ ದಿನದಂದೇ ನಾಗರ ಪಂಚಮಿ ಹಬ್ಬವು ಕೂಡ ಇತ್ತು. ಅಂದು ನಾನು ಗದುಗಿನ ಮಠದಲ್ಲಿ ಪೂಜ್ಯ ಲಿಂಗೈಕ್ಯ ವೈಚಾರಿಕ ಜಗದ್ಗುರು ತೋಂಟದ ಸಿದ್ಧಲಿಂಗ ಗುರುಗಳ ಜೊತೆಗಿದ್ದೆ.
ಬೆಳಿಗ್ಗೆ ಗುರುಗಳು ನನ್ನಿಂದ ಭಾರತದ ರಾಷ್ಟ್ರೀಯ ಧ್ವಜವನ್ನ ಆರೋಹಣ ಮಾಡಿಸಿದರು.
ಇವತ್ತು ನಾಗ ಪಂಚಮಿ ಹಬ್ಬವೂ ಕೂಡ ಇದೆ, ಅದನ್ನು ನಾವು ಬಸವ ಪಂಚಮಿ ಎಂದು ಆಚರಿಸುತ್ತಿದ್ದೇವೆ. ನಾಗಪಂಚಮಿ ಮೌಢ್ಯಗಳಿಂದ ಕೂಡಿರುವ ಅವೈಜ್ಞಾನಿಕ ಆಚರಣೆಯಾದರೆ, ಬಸವ ಪಂಚಮಿ ಮಕ್ಕಳಿಗೆ ಹಾಲು ಉಣಿಸುವ, ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಆಚರಣೆ. ನೀನು ಇವತ್ತು ನಮ್ಮ ಮಠದ ಸಿಬ್ಬಂದಿಯೊಂದಿಗೆ ಮೊರಾರ್ಜಿ ವಸತಿ ಶಾಲೆಗೆ ಹೋಗಿ ಮಕ್ಕಳಿಗೆ ಕುಡಿಯಲು ಹಾಲು ಕೊಟ್ಟು ಬಾ ಎಂದು ಹೇಳಿದರು.
ಅಂದಿನಿಂದ ನಾನು ಪ್ರತಿ ವರ್ಷವೂ ಬಸವ ಪಂಚಮಿ ಆಚರಿಸುತ್ತಿದ್ದೇನೆ. ನೀವುಗಳು ಕೂಡ ಆಚರಿಸಿ. ಕಂದಾಚಾರಗಳಿಂದ ಮುಕ್ತವಾದ ವೈಚಾರಿಕ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕೋರಣೇಶ್ವರ ಸ್ವಾಮೀಜಿ, ಶ್ರೀ ತೋಂಟದಾರ್ಯ ಅನುಭವ ಮಂಟಪ, ಆಳಂದ.