ಇಳಕಲ್ಲ:
ಲಿಂಗೈಕ್ಯ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನವನ್ನು ‘ವ್ಯಸನಮುಕ್ತ ದಿನಾಚರಣೆ’ಯೆಂದು ಇಳಕಲ್ಲಿನಲ್ಲಿ ಗುರವಾರ ಆಚರಿಸಲಾಯಿತು.
ಪಟ್ಟಣದ ನಂದಗೋಕುಲ ಶಾಲಾ ಮಕ್ಕಳು ಮಹಾಂತರ ವೇಷಭೂಷಣ ಧರಿಸಿ, ಊರಿನ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾ ಪೂಜ್ಯರ ಜನ್ಮದಿನದ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.
