ಏಪ್ರಿಲ್ 1 ನಡೆಯಬೇಕಿದ್ದ ‘ಬಸವ ಸಂಸ್ಕೃತಿ ಅಭಿಯಾನ’ ಸಭೆ ಮುಂದೂಡಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

“ರಾಜ್ಯಾದ್ಯಂತ ಅಭಿಯಾನ ಆಯೋಜಿಸಲು ಕೆಲವೇ ತಿಂಗಳಿವೆ. ಎಲ್ಲರೂ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮುನ್ನೆಲೆಗೆ ತರದೆ ಅಭಿಯಾನಕ್ಕೆ ಮಾತ್ರ ಬದ್ಧತೆ ತೋರಿಸಬೇಕು.”

ಧಾರವಾಡ

ನಗರದಲ್ಲಿ ಏಪ್ರಿಲ್ 1 ನಡೆಯಬೇಕಿದ್ದ ‘ಬಸವ ಸಂಸ್ಕೃತಿ ಅಭಿಯಾನದ’ ಪೂರ್ವಭಾವಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ.

ಮುಂಬರುವ ಸೆಪ್ಟೆಂಬರ್ ತಿಂಗಳು ಪೂರ್ತಿ ನಡೆಯಲಿರುವ ಅಭಿಯಾನದ ರೂಪುರೇಷೆ ಸಿದ್ಧಪಡಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹಾಗೂ ಬಸವಪರ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಸಮಿತಿ ಇಂದು ಸಭೆ ಸೇರಬೇಕಿತ್ತು.

ಮಠಾಧಿಪತಿಗಳು ಬೇರೆ ಕಾರ್ಯಕ್ರಮಗಳ ಒತ್ತಡದಲ್ಲಿದ್ದಾರೆ. ಅಲ್ಲದೇ ಬೇಸಿಗೆ ಬಿಸಿಲಿನಿಂದ ದೂರದ ಪ್ರಯಾಣ ಮಾಡಲು ಕಷ್ಟವಾಗುತ್ತದೆ, ಎಂದು ಒಬ್ಬರು ಮುಖಂಡರು ಹೇಳಿದರು.

ಆದರೆ ಇನ್ನೊಬ್ಬ ಪ್ರಮುಖರು ಸಭೆ ನಡೆಯುವ ಬಗ್ಗೆ ಮೊದಲೇ ಅನುಮಾನವಿತ್ತು. ಸಮಿತಿಯೊಳಗೆ ಕೆಲವು ಭಿನ್ನಾಭಿಪ್ರಾಯಗಳಿವೆ, ಆದ್ದರಿಂದ ಸಭೆಗೆ ಸ್ಪಷ್ಟವಾದ ಅಜೆಂಡಾವಿರಲಿಲ್ಲ, ಎಂದು ಹೇಳಿದರು.

ರಾಜ್ಯಾದ್ಯಂತ ಅಭಿಯಾನ ಆಯೋಜಿಸಲು ಕೆಲವೇ ತಿಂಗಳಿವೆ. ಎಲ್ಲರೂ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮುನ್ನೆಲೆಗೆ ತರದೆ ಅಭಿಯಾನಕ್ಕೆ ಮಾತ್ರ ಬದ್ಧತೆ ತೋರಿಸಬೇಕು. ಹಾಗಾದರೆ ಮಾತ್ರ ಅಭಿಯಾನ ಸಫಲವಾಗುತ್ತದೆ, ಇಂತಹ ಸಮಸ್ಯೆ ಮರುಕಳಿಸುವುದಿಲ್ಲ, ಎಂದು ಹೇಳಿದರು.

ಬಹಳ ವರ್ಷಗಳ ನಂತರ ಎಲ್ಲಾ ಜಿಲ್ಲೆಗಳಲ್ಲಿಯೂ ದೊಡ್ಡದಾಗಿ ಶರಣರನ್ನ ಸಂಘಟಿಸುವ ಪ್ರಯತ್ನ ನಡೆಯುತ್ತಿದೆ. ಇದು ಬಸವ ತತ್ವ, ಧರ್ಮಗಳ ಅಸ್ತಿತ್ವದ ಪ್ರಶ್ನೆ ಎನ್ನುವುದನ್ನೂ ಯಾರೂ ಮರೆಯಬಾರದು, ಎಂದು ಹೇಳಿದರು.

ಮುಂದಿನ ಸಭೆಯ ದಿನಾಂಕ ಇನ್ನೂ ನಿಗದಿತಯಾಗಿಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
4 Comments
  • ಲಿಂಗಾಯತ ಮಠಾಧೀಶರೆಲ್ಲ ಧರ್ಮ ಪ್ರಸಾರಕ್ಕೆ ತಮ್ಮ ಭದ್ದತೆ ತೋರಿ ಸಮಯ ಮೀಸಲಿಟ್ಟರೆ ಅದು ಅತ್ಯುತ್ತಮ ಬೆಳವಣಿಗೆ, ಸಮಾಜದಲ್ಲಿ ಧರ್ಮ ಜಾಗ್ರತಿಗೆ ಜೈನ ಮುನಿಗಳೇ ಮಾದರಿ, ಇದೇ ರೀತಿ ಲಿಂಗಾಯತ ಮಠಾಧೀಶರು ಶರಣ ತತ್ವ ಪ್ರಸಾರಕ್ಕೆ ತಮ್ಮ ಸಮಯ ಮೀಸಲು ಇಟ್ಟರೆ ,ಒಂದಿಡೀ ಜನಾಂಗವನ್ನು ಆಚಾರ,ವಿಚಾರ ,ಸಂಸ್ಕ್ರತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿ ಕೊಡಬಹುದು.

  • ಭಿನ್ನಾಭಿಪ್ರಾಯ ಇರುವವರು ಒಕ್ಕೂಟದಿಂದ ಹೊರನಡೆಯಲಿ. ಯಾವುದೇ ಕಾರಣಕ್ಕೂ ಹಮ್ಮಿಕೊಂಡಿರುವ ಕಾರ್ಯಕ್ರಮದಿಂದ ಹಿಂದೆ ಸರಿಯಬಾರದು.

  • Whatever has happened to these Swamijis. With all hurdles, there was consensus about the abhiyans.b Now it is being alleged to be derailed. We should not leave it to happen. We shouldknow that Lingayatism js going through Renaissance period today. We shall join together and empower Basava followers and make the abhiyana a great success.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ. says:

    ಈ ಅಭಿಯಾನವು ಕೇವಲ ಒಂದು ಸಭೆಗೆ ಸೀಮಿತವಾಗಬಾರದು ಇದು ಸಮಸ್ತ ಲಿಂಗಾಯತರಲ್ಲಿ ಸಂಚಲನವನ್ನುಂಟು ಮಾಡುವಂತಾಗಬೇಕು, ಸಮಾಜವು ಕಣ್ಣುತೆರೆದು ನೋಡುವಂತಾಗಬೇಕು.ಒಂದಾಗಿ ನಿಲ್ಲಬೇಕೆಂಬ ಅರಿವು ಮತ್ತು ಎಚ್ಚರ ಬರಬೇಕು.

Leave a Reply

Your email address will not be published. Required fields are marked *