ಬಸವ ಶಕ್ತಿ ಸಮಾವೇಶ: ಶಿಸ್ತಿನ ಕೆಲಸಕ್ಕೆ ತರಬೇತಿ ಅವಶ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ದಾವಣಗೆರೆ ರಾಷ್ಟ್ರೀಯ ಬಸವದಳದ ಅಧ್ಯಕ್ಷ ವೈ. ನಾರೇಶಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೆ? ಯಾಕೆ?

ಯಾವುದೇ ಸಂಸ್ಥೆ ತನ್ನ ಸಮುದಾಯದ ಸಾಮಾನ್ಯ ಜನರ ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಭಿವೃದ್ಧಿಗೆ ರಾಜಕೀಯ ಬಳಸಿಕೊಳ್ಳಲು ಅವಶ್ಯವಾಗಿ ಬೇಕಾಗುತ್ತೆ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೆ?

ಒಂದು ಸಂಘಟನೆಗೆ ತರಬೇತಿಯ ಅವಶ್ಯಕತೆ ತುಂಬಾನೆ ಇದೆ. ಯಾವುದೇ ಸಂಘ ಸಂಸ್ಥೆಗಳು ಒಂದು ಶಿಸ್ತು ಸಂಯಮದಿಂದ ಕೆಲಸ ಮಾಡಲು ನುರಿತ ಅನುಭವಿಗಳಿಂದ ತರಬೇತಿಯ ಅವಶ್ಯಕತೆ ಇದೆ.

3) ಬಸವಶಕ್ತಿ ಸಮಾವೇಶದ ರೂಪು಼ರೇಷೆಯ ಬಗ್ಗೆ ನಿಮ್ಮ ಸಲಹೆ?

ಬಸವ ಶಕ್ತಿ ಸಮಾವೇಶ ಮಾಡುವ ಬಗ್ಗೆ ನುರಿತ ಅನುಭವಿಗಳ, ಬಸವಪರ ಸಂಘಟನೆಗಳ, ತಳವರ್ಗದ ಸಮುದಾಯಗಳ ಸಹಕಾರದಿಂದ ಈ ಸಮಾವೇಶವನ್ನು ತುಂಬಾ ಅರ್ಥಪೂರ್ಣವಾಗಿ ಮಾಡಬಹುದು.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುವಿರಿ?

ದಾವಣಗೆರೆ ಜಿಲ್ಲೆಯ ರಾಷ್ಟ್ರೀಯ ಬಸವದಳದ ವತಿಯಿಂದ ಕನಿಷ್ಠ 200 ಜನ ಸಮಾವೇಶಕ್ಕೆ ಯಾವುದೇ ಜಿಲ್ಲೆಯಲ್ಲಿ ಕಾರ್ಯಕ್ರಮವಾದರೂ ಕರೆ ತರುವ ಪ್ರಯತ್ನ ಮಾಡುತ್ತೇವೆ.

5) ಈ ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿವಿದೆಯೇ?

ಕಾರ್ಯಕ್ರಮ ಸಂಘಟಿಸಲು ತುಂಬಾ ಉತ್ಸಾಹದಿಂದ ನಾವು ನಮ್ಮ ಸಂಸ್ಥೆ ಹಾಗೂ ಬಸವಪರ ಸಂಘಟನೆಗಳ ಸಹಕಾರದಿಂದ ತನು ಮನ ಧನ ಅರ್ಪಿಸುವ ಮೂಲಕ ಸನ್ನದ್ಧರಾಗಿದ್ದೇವೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *