ಬಸವ ಶಕ್ತಿ ಸಮಾವೇಶ: ರಾಜಕೀಯ ಪ್ರಜ್ಞೆ ಅವಶ್ಯ, ಆದರೆ ಎಚ್ಚರವಿರಲಿ

ಬಸವ ಮೀಡಿಯಾ
ಬಸವ ಮೀಡಿಯಾ

ಜೆ. ಎಲ್. ಎಂ ಸದಸ್ಯರು ಬಸವ ಶಕ್ತಿ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ನಾನೂ ಭಾಗವಹಿಸುತ್ತೇನೆ.

ಬೆಂಗಳೂರು

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಮಾತನಾಡುತ್ತ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ್ ರಾಜಾಶ್ರಯವಿಲ್ಲದೆ ಯಾವ ಧರ್ಮವೂ ಬೆಳೆದಿಲ್ಲ ಎಂದು ಹೇಳುತ್ತಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

ಒಬ್ಬ ಪ್ರಜೆಯಾಗಿ, ಮತದಾರರಾಗಿ ಜನತಾ ಪ್ರತಿನಿಧಿಗಳನ್ನು ಪ್ರಶ್ನಿಸುವುದು ನಮ್ಮ ಸಂವಿಧಾನಾತ್ಮಕ ಹಕ್ಕು. ಈ ಚೌಕಟ್ಟಿನಲ್ಲಿ ಬಸವ ಸಂಘಟನೆಗಳು ಕೆಲಸ ಮಾಡಬೇಕು. ರಾಜಕೀಯ ಪ್ರಜ್ಞೆ ಬೆಳೆಸಿಕೊಂಡರೆ ಈ ಕೆಲಸ ಚೆನ್ನಾಗಿ ಮಾಡಬಹುದು. ರಾಜಕೀಯದಲ್ಲಿ ನಮ್ಮ ಪ್ರಭಾವವೂ ಬೆಳೆಯುತ್ತದೆ.

ಬಸವ ಸಂಘಟನೆಗಳಲ್ಲಿ, ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದು ಒಳ್ಳೆಯ ಪ್ರಯತ್ನ. ಆದರೆ ಇದು ಕತ್ತಿಯ ಅಲುಗಿನ ಮೇಲೆ ನಡೆದಂತೆ, ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

ಕರ್ನಾಟಕದ ಯಾವುದೇ ಪಕ್ಷದಲ್ಲಿ ಸೈದ್ಧಾಂತಿಕ ಬದ್ಧತೆಯಿಲ್ಲ. ಬಹುತೇಕ ರಾಜಕಾರಣಿಗಳಿಗೆ ಸಿದ್ದಾಂತ, ಜನಹಿತ ಮುಖ್ಯವಲ್ಲ. ತಮ್ಮ ಸ್ವಾರ್ಥಕ್ಕೆ ನಿಮ್ಮನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತವರ ಒಡನಾಟ ಅಪಾಯಕಾರಿ, ಒಂದಲ್ಲ ಒಂದು ದಿನ ತಿರುಗು ಬಾಣವಾಗುತ್ತದೆ.

ಒತ್ತಡ ತರುತ್ತೀವಿ ಅಂತ ಹೋಗಿ ನಾವೂ ರಾಜಕೀಯ ಮಾಡಬಾರದು. ಬಸವ ಸಂಘಟನೆಗಳಲ್ಲಿದ್ದುಕೊಂಡು ರಾಜಕೀಯ ಮಾಡುವವರು ಬಹಳ ಅಪಾಯಕಾರಿ. ಅದರಿಂದ ನಮಗೆ ಯಾವತ್ತೂ ಅಪಾಯವೇ. ಬಸವ ಸಂಘಟನೆಗಳು ಪಕ್ಷದ ರಾಜಕೀಯದಿಂದ ದೂರವುಳಿಯಬೇಕು.

ಆದರೆ ರಾಜಕೀಯ ಇಂದು ಸಮಾಜದ ಎಲ್ಲಾ ರಂಗಗಳನ್ನು ನಿಯಂತ್ರಿಸುತ್ತದೆ. ರಾಜಕೀಯ ಪ್ರಭಾವವಿದ್ದರೆ ಮಾತ್ರ ನಮ್ಮ ಗುರಿ ಮುಟ್ಟಬಹುದು. ಅದಕ್ಕೆ ಎಚ್ಚರಿಕೆಯಿಂದ ಸರಿಯಾದ ರೀತಿಯಲ್ಲಿ ಅದನ್ನು ನಿಭಾಯಿಸಬೇಕು.

ರಾಜಾಶ್ರಯವಿಲ್ಲದೆ ಯಾವ ಧರ್ಮವೂ ಬೆಳೆದಿಲ್ಲ ಎನ್ನುವುದು ಇತಿಹಾಸದ ಪಾಠ. ಬೌದ್ಧ, ಜೈನ ಧರ್ಮ ಬೆಳೆದದ್ದು ಖಾರವೇಲ, ಅಶೋಕರಂತಹ ರಾಜರ ಬೆಂಬಲದಿಂದ. ಕ್ರೈಸ್ತ ಧರ್ಮ ಬೆಳೆದದ್ದು ರೋಮ್ ಚಕ್ರವರ್ತಿ ಕಾನ್ಸ್ಟಂಟೈನ್ ಮತಾಂತರವಾದ ಬಳಿಕ. ಇಸ್ಲಾಂ ಬೆಳೆದದ್ದು ಹಲವಾರು ಖಲೀಫರ ಬೆಂಬಲದಿಂದ.

ನಾವು ರಾಜಕಾರಣಿಗಳನ್ನು ಬಳಸಿಕೊಳ್ಳಬೇಕು, ಅವರು ನಮ್ಮನ್ನು ಬಳಸಿಕೊಳ್ಳಬಾರದು

ಲಿಂಗಾಯತ ಧರ್ಮವೂ ಸಂಗಮ, ಕೆಳದಿ, ಕೊಡಗು ಮುಂತಾದ ರಾಜರ ಆಶ್ರಯದಿಂದಲೇ ವಿಸ್ತಾರವಾಗಿ ಬೆಳೆದದ್ದು.

ಇಂದು ರಾಜರಿಲ್ಲ, ಪ್ರಜಾಪ್ರಭುತ್ವವಿದೆ. ಜನ ಪ್ರತಿನಿಧಿಗಳ ಜೊತೆ ಕೆಲಸ ಮಾಡುವುದು ಅನಿವಾರ್ಯ. ಆದರೆ ನಾವು ಅವರನ್ನು ಬಳಸಿಕೊಳ್ಳಬೇಕು. ಅವರು ನಮ್ಮನ್ನು ಬಳಸಿಕೊಳ್ಳಬಾರದು.

ಬಸವ ಸಂಘಟನೆಗಳು ರಾಜಕೀಯದಲ್ಲಿ ಒಂದು pressure group ಆಗಿ ಮಾತ್ರ ಕೆಲಸ ಮಾಡಬೇಕು. ಇದರಿಂದ ನಮ್ಮ ಸಮಾಜ ಮತ್ತು ಧರ್ಮಕ್ಕೂ ಒಳ್ಳೆಯದಾಗುತ್ತದೆ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಚುನಾವಣೆ ಸಮಯದಲ್ಲಿ ಮಾತ್ರವಲ್ಲದೆ ಇತರ ಸಂದರ್ಭದಲ್ಲೂ ನಾವು ಸಕ್ರಿಯವಾಗಿರಬೇಕು. ಅವಶ್ಯಬಿದ್ದಾಗ ರಾಜಕಾರಣಿಗಳ ಮುಖಾಮುಖಿ ಭೇಟಿಯಾಗುವುದು, ಪತ್ರಗಳ ಅಭಿಯಾನ ನಡೆಸುವುದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯಬೇಕು. ನಿರಂತರವಾಗಿ ಅವರ ಮೇಲೆ ಒತ್ತಡ ತರುವ ಮಾರ್ಗಗಳನ್ನು ಹುಡುಕಬೇಕು.

ಚುನಾವಣೆ ಸಂದರ್ಭದಲ್ಲಿ ಬಹಳ ಸೂಕ್ಷ್ಮವಾಗಿ ಕೆಲಸ ಮಾಡಬೇಕು. ನಮ್ಮ ನಿಲುವಿನಿಂದ ಯಾರ ರಾಜಕೀಯ ದ್ವೇಷವೂ ಕಟ್ಟಿಕೊಳ್ಳದ ಹಾಗೆ ನೋಡಿಕೊಳ್ಳಬೇಕು. ಕೆಲವು ಕೆಲಸಗಳನ್ನು ಬಹಿರಂಗವಾಗಿ, ಕೆಲವು ಕೆಲಸಗಳನ್ನು ಗೋಪ್ಯವಾಗಿ ಮಾಡಬೇಕಾಗುತ್ತದೆ. ಆ ಜಾಣತನ ನಮ್ಮಲಿರಬೇಕು.

ಈ ಎಲ್ಲಾ ವಿಷಯಗಳನ್ನು ಚರ್ಚಿಸಿ ಸರಿಯಾದ ರೀತಿಯಲ್ಲಿ ಮುಂದುವರೆಯುವುದು ಮುಖ್ಯ. ಇದಕ್ಕೆ ಅನುಭವ, ತರಬೇತಿ ಸಿಕ್ಕರೆ ಒಳ್ಳೆಯದು.

ಚುನಾವಣೆ ಸಮಯದಲ್ಲಿ ಮಾತ್ರವಲ್ಲದೆ ಇತರ
ಸಂದರ್ಭದಲ್ಲೂ ನಾವು ಸಕ್ರಿಯವಾಗಿರಬೇಕು.

3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.

ಸರಿಯಾದ ಸಿದ್ಧತೆಯಿಂದ ಈ ಸಮಾವೇಶ ನಡೆಯಬೇಕು. ಬಸವ ಸಂಘಟನೆಗಳ, ಪ್ರಗತಿಪರ ಸಂಘಟನೆಗಳ, ಚಿಂತಕರ ಜೊತೆ ಸಮಾಲೋಚಿಸಿ ಇದನ್ನು ರೂಪಿಸಬೇಕು. ಸುಮ್ಮನೆ ಕಾಲ ಕಳೆದು ಮನೆಗೆ ಹೋಗುವಂತ ಸಮಾವೇಶವಾಗಬಾರದು. ಇಲ್ಲಿ ಶುರುವಾಗುವ ಪ್ರಯತ್ನ ಮುಂದುವರೆಯಬೇಕು. ಲಿಂಗಾಯತ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತೀರಾ?

ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯರು ಬಸವ ಶಕ್ತಿ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ನಾನೂ ಭಾಗವಹಿಸುತ್ತೇನೆ.

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

ಅವಶ್ಯವಾದ ನೆರವು ನೀಡುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
7 Comments
  • RSS ಗೆ ಪ್ರಬಲವಾಗಿ RBD ಬೆಳೆಯಿಸ ಬೇಕು ಇದನ್ನು ಬೆಳೆಸುವಲ್ಲಿ ಎಲ್ಲಾ ಮಠಮಾನ್ಯಗಳು ಸಕ್ರೀಯ ಪಾತ್ರವಹಿಸ ಬೇಕು. ಅಂದಾಗ ಮಾತ್ರ ಲಿಂಗಾಯತರು ರಾಜಕೀಯ ಶಕ್ತಿ ಪಡೆಯುವಲ್ಲಿ ಯಶಸ್ವಿ ಸಾಧಿಸ ಬಲ್ಲರು.

  • ಖಂಡಿತ ಲಿಂಗಾಯತರಿಗೆ ನೈತಿಕ ರಾಜಕಾರಣದ ಪ್ರಜ್ಞೆ ತುಂಬಾ ಅವಶ್ಯ. ಇಂದು ಕರ್ನಾಟಕದ ರಾಜಕೀಯದ ಮುನ್ನಲೆ ಇದ್ದರು ಅದು ಸ್ವಾರ್ಥ ಸಾಧನೆಗಾಗಿ ಆಗುತ್ತಿದೆ. ಬಸವ ಸಮಾವೇಶದಿಂದ ರಾಜಕಾರಣದ ಪ್ರಜ್ಞೆ ಜನ ಸಾಮಾನ್ಯರಲ್ಲಿ ಮುಟ್ಟುವಂತೆ ಆಗಲಿ. ತಮ್ಮ ಏಚ್ಚರಿಕೆಯ ನುಡಿಗಳನ್ನು ಆಲಿಸಿ ಮುಂದೆ ಹೆಜ್ಜೆ ಹಾಕಲಿ. ರಾಜಕಾರಣದ ಪ್ರಜ್ಞೆಯಿಲ್ಲದೆ ಇಂದು ಏನೂ ಸಾಧಿಸಲು ಆಗಲ್ಲ.

  • ಇಷ್ಟೆಲ್ಲಾ ಹೇಳುತ್ತೀರಿ ಅಪ್ಪಟ ಬಸವಣ್ಣನವರ ತತ್ವಗಳನ್ನು ಬಿತ್ತರಿಸುವ ಏಕೈಕ ಉದ್ದೇಶದಿಂದ ಪ್ರಾರಂಭವಾದ ಬಸವ ಟಿವಿ ಇವತ್ತು ನಷ್ಡದಲ್ಲಿದ್ದು ಮುಚ್ಚುವ ಸ್ಥತಿಯಲ್ಲಿದೆ .ಇಷ್ಟೆಲ್ಲಾ ಲಿಂಗಾಯತ ಮಠಾಧೀಶರು,ರಾಜಕಾರಣಿಗಳು, ಬಸವ ಪರಸಂಘಟನೆಗಳಿದ್ದರೂ ಆ ಬಸವ ಟಿವಿ ಉಳಿಸಿಕೊಳ್ಳಲಾಗಲಿಲ್ಲ ಇದು ಲಿಂಗಾಯತ ಧರ್ಮದ ದುರದೃಷ್ಟ.

    • ಕಾರಣಗಳ ವಿಮರ್ಶಾತ್ಮಕ ಅವಲೋಕನ ಸಹಕಾರಿ.

  • 1)ರಾಜಕೀಯ ಪ್ರಭಾವವಿಲ್ಲದೆ ನಮ್ಮ ಕೆಲಸ ಅಷ್ಟು ಸುಲಭಸಾಧ್ಯವಲ್ಲ, ಅದಕ್ಕಾಗಿ.
    2)ತರಬೇತಿಯ ಅಗತ್ಯತೆ ಅತ್ಯಂತ ಅವಶ್ಯ. ಏಕೆಂದರೆ ಎಲ್ಲರೂ ಒಂದೇ ಅಭಿಪ್ರಾಯದಂತೆ ಕಾರ್ಯತಂತ್ರ ರೂಪಿಸುವದು ಅವಶ್ಯವಾಗಿದೆ.
    3)ಸಮಾಜದ ಎಲ್ಲಾಮಟ್ಟದಲ್ಲಿಯ ಬಸವಾಭಿಮಾನಿಗಳನ್ನು ಒಳಗೊಂಡಿರಬೇಕು. ಬಸವಾದಿ ಶರಣರ ಆಶಯದಂತೆ ಧರ್ಮ ಉಳಿದು ಜಗತ್ತಿನಾದ್ಯಂತ ಹರಡುವಂತೆ ನೋಡಿಕೊಳ್ಳುವ ನಿರಾಪೇಕ್ಷೆ ಭಾವನೆ ಬೆಳೆಯುವಂತೆ ತರಬೇತಿ ನೀಡಬೇಕು.
    4)ನಮ್ಮದು ಬಸವಕೇಂದ್ರ ಹುಬ್ಬಳ್ಳಿ. ನನ್ನ ವೖಯಕ್ತಿಕ ಅಭಿಪ್ರಾಯದ ಮೇರೆಗೆ ನಾವು ಸುಮಾರು ಕನಿಷ್ಠ 300-500 ಜನರನ್ನು ಸಂಘಟಿಸಬಹುದು.
    5)ಈ ಧರ್ಮ ವಿಶ್ವಮಾನವ ಧರ್ಮ. ಇದರಲ್ಲಿ ಹುಟ್ಟಿದ್ದು ನನ್ನ ಪುಣ್ಯ. ಬಸವಾದಿ ಶರಣರ ಆಶಯ ಅಜರಾಮರವಾಗಿ ಉಳಿರಬೇಕು. ಇದಕ್ಕಾಗಿ ನಾನು ಸದಾ ಆಸಕ್ತದಾಯಕನಾಗಿದ್ದೇನೆ.

    ಶರಣು, ಶರಣಾರ್ಥಿಗಳು 🙏🙏

  • 1)ರಾಜಕೀಯ ಪ್ರಭಾವವಿಲ್ಲದೆ ನಮ್ಮ ಕೆಲಸ ಅಷ್ಟು ಸುಲಭಸಾಧ್ಯವಲ್ಲ, ಅದಕ್ಕಾಗಿ.
    2)ತರಬೇತಿಯ ಅಗತ್ಯತೆ ಅತ್ಯಂತ ಅವಶ್ಯ. ಏಕೆಂದರೆ ಎಲ್ಲರೂ ಒಂದೇ ಅಭಿಪ್ರಾಯದಂತೆ ಕಾರ್ಯತಂತ್ರ ರೂಪಿಸುವದು ಅವಶ್ಯವಾಗಿದೆ.
    3)ಸಮಾಜದ ಎಲ್ಲಾಮಟ್ಟದಲ್ಲಿಯ ಬಸವಾಭಿಮಾನಿಗಳನ್ನು ಒಳಗೊಂಡಿರಬೇಕು. ಬಸವಾದಿ ಶರಣರ ಆಶಯದಂತೆ ಧರ್ಮ ಉಳಿದು ಜಗತ್ತಿನಾದ್ಯಂತ ಹರಡುವಂತೆ ನೋಡಿಕೊಳ್ಳುವ ನಿರಾಪೇಕ್ಷೆ ಭಾವನೆ ಬೆಳೆಯುವಂತೆ ತರಬೇತಿ ನೀಡಬೇಕು.
    4)ನಮ್ಮದು ಬಸವಕೇಂದ್ರ ಹುಬ್ಬಳ್ಳಿ. ನನ್ನ ವೖಯಕ್ತಿಕ ಅಭಿಪ್ರಾಯದ ಮೇರೆಗೆ ನಾವು ಸುಮಾರು ಕನಿಷ್ಠ 300-500 ಜನರನ್ನು ಸಂಘಟಿಸಬಹುದು.
    5) ಶರಣರ ಆಶಯ ಅಜರಾಮರವಾಗಿ ಉಳಿಯಬೇಕು. ಇದಕ್ಕಾಗಿ ನಾನು ಸದಾ ಆಸಕ್ತದಾಯಕನಾಗಿದ್ದೇನೆ.

    ಶರಣು, ಶರಣಾರ್ಥಿಗಳು 🙏🙏

Leave a Reply

Your email address will not be published. Required fields are marked *