ಸಂಘರ್ಷದ ದಿನಗಳು 1: ಬಸವ ವಿರೋಧಿಗಳ ‘ಬಸವಾದಿ ಶರಣರ ಹಿಂದೂ ಸಮಾವೇಶ’

ಹಿಂದುತ್ವವಾದಿಗಳು ಬಸವಾದಿ ಶರಣರನ್ನು ಶೂದ್ರರನ್ನಾಗಿ ಮಾಡಲು ಹೊರಟಿದ್ದಾರೆ.

ಬೆಂಗಳೂರು

ಒಂದು ತಿಂಗಳ ಕಾಲ ಕರ್ನಾಟಕದ ೩೦ ಜಿಲ್ಲೆಗಳಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಿಂದ ಗಲಿಬಿಲಿಗೊಂಡಿರುವ ಹಿಂದುತ್ವ ಮತಾಂಧರು ಬಸವಣ್ಣನನ್ನು, ಲಿಂಗಾಯತರನ್ನು ವಿರೋಧಿಸುವ ಸಲುವಾಗಿಯೇ ‘ಬಸವಾದಿ ಶರಣರ ಹಿಂದೂ ಸಮಾವೇಶ’ ನಡೆಸಲು ಮುಂದಾಗಿದ್ದಾರೆ.

ಈವರೆಗೆ ಹಿಂದುತ್ವವಾದಿ ಮತಾಂಧರು ಲಿಂಗಾಯತರಿಗೆ ‘ಅಜೆಂಡ’ ನೀಡುತ್ತಿದ್ದರು. ಲಿಂಗಾಯತರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಈಗ ಇದು ತಲೆಕೆಳಕಾಗಿದೆ. ಬಸವ ಸಂಸ್ಕೃತಿ ಅಭಿಯಾನ ಎಂಬ ಅಜೆಂಡವನ್ನು ಲಿಂಗಾಯತರು ನೀಡಿದ್ದರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಈಗ ಬಸವಾದಿ ಶರಣರು ಹಿಂದೂ ಸಮಾವೇ಼ಷ. ಅವರು ಈಗ ಲಿಂಗಾಯತರಿಗೆ ಉತ್ತರ ನೀಡಬೇಕಾಗಿದೆ.

ಇವರು ನಡೆಸಲು ಹೊರಟಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಎನ್ನುವುದು ಪರಸ್ಪರ ವಿರುದ್ಧವಾದ ಪರಿಭಾವನೆಗಳಾಗಿವೆ. “ಬಸವಾದಿ ಶರಣರು’ ಮತ್ತು ‘ಹಿಂದೂ ಸಮಾವೇಶ’ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಅವುಗಳ ನಡುವೆ ವಿರೋಧದ ಸಂಬಂಧವಿದೆ. ಬಸವಾದಿ ಶರಣರು ‘ಹಿಂದೂ’ಗಳಲ್ಲ. ಅವರು ಹಿಂದುತ್ವದ ಯಾವ ಶ್ರೇಣಿಗೂ ಸೇರುವುದಿಲ್ಲ. ಬಸವಾದಿ ಶರಣರನ್ನು ಈ ಹಿಂದುತ್ವವಾದಿ ಮತಾಂಧರು ಹಿಂದುವಿನ ಹೆಸರಿನಲ್ಲಿ ಶೂದ್ರರನ್ನಾಗಿ ಮಾಡಲು ಹೊರಟಿದ್ದಾರೆ.

ಬಸವಾದಿ ಶರಣರು ಮತ್ತು ಹಿಂದೂ ಸಮಾವೇಶಗಳ ವಿರೋಧಾತ್ಮಕ ನೆಲೆಗಳನ್ನು ಗುರುತಿಸಬಹುದು:

೧. ಬಸವಾದಿ ಶರಣರ ಪ್ರಣಾಳಿಕೆಯಲ್ಲಿ ಜಾತೀಯತೆಗೆ ಅವಕಾಶವಿಲ್ಲ. ವರ್ಣಾಶ್ರಮ ವ್ಯವಸ್ಥೆಯಲ್ಲಿ ಜಾತೀಯತೆಯು ಮೂಲ ಸಿದ್ಧಾಂತವಾಗಿದೆ.

೨. ಬಸವ ಸಿದ್ಧಾಂತದಲ್ಲಿ ವರ್ಣ, ವರ್ಗ, ಲಿಂಗ ಅಂತಸ್ತು ಭೇದವಿಲ್ಲ. ವೇದಾಗಮಶಾಸ್ತ ವ್ಯವಸ್ಥೆಯು ಅಸಮಾನತೆಯ ಕೂಪ.

೩. ಬಸವಾದಿ ಶರಣರ ಪ್ರಣಾಳಿಕೆಯು ’ಅಭೇದ ಸಂಸ್ಕೃತಿ’ ಚಾತುರ್ವರ್ಣವು ‘ಭೇದ’ ಸಂಸ್ಕೃತಿಯಾಗಿದೆ.

೪. ಬಸವ ಪ್ರಣಾಳಿಕೆಯಲ್ಲಿ ಎಲ್ಲರೂ ಸಮಾನ, ವರ್ಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ನಗಳು ‘ದ್ವಿಜ’ರು. ಶೂದ್ರರು ‘ದ್ವಿಜರಲ್ಲ’.

೫. ಬಸವಾದಿ ಶರಣರ ವ್ಯವಸ್ಥೆಯಲ್ಲಿ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಚಾತುರ್ವರ್ಣದಲ್ಲಿ ಮೇಲು-ಕೀಳೂ, ಪವಿತ್ರ-ಅಪವಿತ್ರ ಮುಂತಾದ ಭೇಧಗಳುಂಟು.

೬. ಲಿಂಗಾಯತ ಧರ್ಮವು ಅವೈದಿಕ ಧರ್ಮವಾಗಿದೆ. ಚಾತುರ್ವರ್ಣವು ವೈದಿಕ ಧರ್ಮವಾಗಿದೆ.

೭. ಬಸವಾದಿ ಶರಣರ ವ್ಯವಸ್ಥೆಯಲ್ಲಿ ಯಜ್ಞ-ಯಾಗ ಹವನ-ಹೋಮಗಳಿಗೆ ಅವಕಾಶವಿಲ್ಲ. ಚಾತುರ್ವರ್ಣದಲ್ಲಿ ಇವು ಅವಿಭಾಜಕ್ಯ ಅಂಗ

೮. ಬಸವ ಪ್ರಣಾಳಿಕೆಯು ‘ಕರ್ಮಫಲಭೋಗ’ ಸಂಸ್ಕೃತಿಯಾಗಿದೆ, ವರ್ಣ ವ್ಯವಸ್ಥೆಯು “ಕರ್ಮಫಲತ್ಯಾಗ’ ಪ್ರಣಾಳೀಕೆಯಾಗಿದೆ.

೯. ಶರಣರ ಪರಿಭಾಷೆ: ಅಯ್ಯಾ ಎಂದರೆ ಸ್ವರ್ಗ: ಎಲವೋ ಎಂದರೆ ನರಕ. ಚಾತುರ್ವರ್ಣದ ಪರಿಭಾಷೆಯು “ಯತ್ನಾಳ್’, ‘ಕನ್ನೇರಿ’ ಪರಿಭಾಷೆಯಾಗಿದೆ.

೧೦. ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಕಾಳವ್ವೆ ಮುಂತಾದ ದಲಿತರಿಗೆ ಬಸವ ಪ್ರಣಾಳಿಕೆಯಲ್ಲಿ ಪ್ರವೇಶವಿದೆ. ಚಾತುರ್ವರ್ಣದಲ್ಲಿ ಅಪ್ಪಿತಪ್ಪಿಯೂ ಮಾದಾರರಿಗೆ, ಡೋಹರರಿಗೆ ಪ್ರವೇಶವಿರಲಿ ಅವರ ಕೂಡ ಮಾತಾಡುವುದೂ ನಿಷೇಧ.

ಈ ಎಲ್ಲ ವೈರುಧ್ಯಗಳು-ದ್ವಂದ್ವಗಳಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಬಸವಾದಿ ಶರಣರ ತತ್ವ-ಸಿದ್ಧಾಂತವನ್ನು ತುಳಿಯುವುದಕ್ಕೆ ನಡೆಸುತ್ತಿರುವ ಹುನ್ನಾರವಾಗಿದೆ. ಬಸವಾದಿ ಶರಣರ ಮಾರಣ ಹೋಮ ನಡೆಸಿದ ಶಕ್ತಿಗಳೆ ಇಂದು ಈ ಸಮಾವೇಶ ನಡೆಸಲು ಹೊರಟ್ಟಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
3 Comments
  • ಸತ್ಯ ಶರಣ ಬಸವ ಬಳಗ ನಮ್ಮೆಲ್ಲರ ಧರ್ಮದ ನೀತಿ ಮನುಷ್ಯ ಕುಲದ ಆಧಾರ್.ಯಾಕೆ ಈ ರೀತಿ ಹಿಂದೂ ನಾವೆಲ್ಲ ಒಂದು ಎಂದು ಹೇಳಿ ಮೋಸಮಾಡಿ ತಮ್ಮ ಒಳ ಗುಟ್ಟು ಹೊರಗೆ ತೂರದೆ ನಮ್ಮ ಲಿಂಗಾಯತ ಜನಕ್ಕೆ ಮೋಸ ಮಾಡುವ ನರಿ ಬುದ್ದಿ ಜನಕ್ಕೆ ಪಾಠ ಕಲಿಸಬೇಕು 🙏🏻

  • ಬಸವ ತತ್ವದ ಲಿಂಗಾಯತ ಎಲ್ಲಿ ಇದೆ. ಸಮಾನತೆ ಎಲ್ಲಿದೆ ಈಗಲೂ ಲಿಂಗಾಯತರಲ್ಲಿ ಜಾತಿ ಪಧತಿ ಹೋಗಿಲ್ಲ. ಹಿಂದುಳಿದ ಜಾತಿ ಬಿಟ್ಟು ಬಿಡಿ ಮೇಲ್ಜಾತಿ ಯಲ್ಲೂ ಸಮಾನತೆ, ವಿವಾಹ ಜಾರುಗುವದಿಲ್ಲ. ಅದನ್ನು ಕಟ್ಟು ನಿಟ್ಟಾಗಿ ಪಾಲಿಸಿ ಆಮೇಲೆ ಹಿಂದೂಗಳ ಬಗ್ಗೆ ಮಾತಾಡಿ

  • ಬಸವ ತತ್ವದ ಸಮಾನತೆ ಕೋರುವ ಲಿಂಗಾಯತರು ಸಿದ್ದರಾಮಯ್ಯ ಸರಕಾರದ ಜಾತಿ ಗಣತಿಯನ್ನು ಯಾಕೆ ವಿರೋಧಿಸಿಲ್ಲ. ಜಾತಿ ಗಣತಿಯನ್ನು ಪ್ರೋತ್ಸಾಹಿಸಿ ಅದರಲ್ಲಿ ಜಾತಿ ಉಪ ಜಾತಿ ಬಗ್ಗೆ ಬರೆಸಲು ಕರೆ ಕೊಟ್ಟಿದ್ದೇಕೆ.

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು