ಬಸವ ತತ್ವಕ್ಕೆ ವಿರುದ್ಧವಾಗಿ ಬೆಳೆದ ವೀರಶೈವರು
‘ಲಿಂಗಾಯತ’, ‘ವೀರಶೈವ’ ಪದಗಳನ್ನು ಸಮಾನಾರ್ಥಕ ಪದಗಳಂತೆ ಬಳಸುವುದು ಸರಿಯಲ್ಲ. ಈ ಪದಗಳ ಅರ್ಥ, ಹುಟ್ಟಿದ ಕಾಲ, ಬೆಳೆದ ಉದ್ದೇಶಗಳಲ್ಲಿ ಯಾವುದೇ ಸಾಮ್ಯತೆಯಿಲ್ಲ.
೧೨ನೇ ಶತಮಾನದ ಶರಣ ಸಮಾಜದಲ್ಲಿ ಲಿಂಗವಂತ, ಲಿಂಗಾಯತ ಮುಂತಾದ ಪದಗಳು ಚಾಲ್ತಿಯಲ್ಲಿದ್ದವು. ಸಾಹಿತ್ಯದಲ್ಲಿ ‘ಲಿಂಗವಂತ’ ಜನರಲ್ಲಿ ‘ಲಿಂಗಾಯತ’ ಹೆಚ್ಚಿನ ಬಳಕೆಯಲ್ಲಿತ್ತು.
ಬಸವಣ್ಣ, ಉರಿಲಿಂಗಪೆದ್ದಿಯಂತವರ ವಚನಗಳಲ್ಲಿ ‘ಲಿಂಗವಂತ’ ಪದ ಕಂಡರೆ, ಚನ್ನಬಸವಣ್ಣನವರು ‘ಲಿಂಗಾಯತ’ ಪದ ಬಳಸಿದರು. ವಚನಗಳಲ್ಲಿ ವೀರಶೈವ ತತ್ವದ ಸುಳಿವಿಲ್ಲ.
ಲಿಂಗ+ಆಯತ ಎಂದರೆ ವಿಧಿಪೂರ್ವಕವಾಗಿ ಲಿಂಗ ದೀಕ್ಷೆ ಪಡೆಯುವುದು ಎಂದು ಅರ್ಥ. ಹೀಗೆ ದೀಕ್ಷೆ ಪಡೆದವರನ್ನು ಮತ್ತವರ ಧರ್ಮವನ್ನು ‘ಲಿಂಗಾಯತ’ ಪದ ಸೂಚಿಸುತ್ತಿತ್ತು. (ಆಯತ = ಕ್ರಮಬದ್ಧ.)
ಆಂಧ್ರದ ಶೈವ ಬ್ರಾಹ್ಮಣ ಆರಾಧ್ಯರು ಬಸವಣ್ಣನವರ ಅನುಯಾಯಿಗಳಾದರೂ, ವೈದಿಕತೆ ಬಿಡದೆ ಪ್ರತ್ಯೇಕವಾಗಿ ಉಳಿದರು. ಇವರ ಪ್ರಭಾವ ವಿಜಯನಗರ, ಕೆಳದಿ ರಾಜರ ಸಮಯದಲ್ಲಿ ಬೆಳೆಯಿತು.
ಬಸವಣ್ಣನವರ ಸಮ ಸಮಾಜ ಕಟ್ಟುವ ಪ್ರಯತ್ನಗಳನ್ನು ವಿರೋಧಿಸಿದ ಇವರು, ಶರಣ ಧರ್ಮದ ಮೇಲೆ ಹಿಡಿದ ಸಾಧಿಸಲು ಲಿಂಗಾಯತ ಪದಕ್ಕೆ ಪರ್ಯಾಯವಾಗಿ ವೀರಶೈವ ಪದವನ್ನು ಬೆಳೆಸಿದರು.
(‘ಲಿಂಗಾಯತವಂತ >ಲಿಂಗವಂತ/ಲಿಂಗಾಯತ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)