ಲೈವ್: ಬಸವ ಜನ್ಮಭೂಮಿಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ
18Posts
Auto Updates

Contents
ವೇದಿಕೆಯ ಕಾರ್ಯಕ್ರಮ ಲೈವ್ಸಾವಿರಾರು ಶರಣ ಶರಣೆಯರನ್ನ ಸೆಳೆದ ಪಾದಯಾತ್ರೆಕಲಬುರ್ಗಿ ಕೊಲೆ ಮಾಡಿದ ನೀಚರು ಈ ನಾಡಿನಲ್ಲಿದ್ದಾರೆ: ಸಾಣೇಹಳ್ಳಿ ಶ್ರೀಮಕ್ಕಳಿಂದ ಬಂದ ಪ್ರಶ್ನೆ: ಭಕ್ತಿ ಎಂದರೇನು?ಸಂವಾದ ಕಾರ್ಯಕ್ರಮದ ಉದ್ಘಾಟನೆಮಕ್ಕಳಿಂದ ಮಲ್ಲಕಂಬದಾಟ ಪ್ರದರ್ಶನನಿಜಗುಣಾನಂದ ಶ್ರೀಗಳಿಂದ ನಿರೂಪಣೆಧ್ವಜಾರೋಹಣದಲ್ಲಿ ಕೇಳಿದ ಮಾತುಗಳುಹೇ ಶರಣ ಬಂಧುಗಳೇ ….ಬಸವ ಧ್ವಜಾರೋಹಣದೊಂದಿಗೆ ಅಭಿಯಾನ ಶುರುಷಟಸ್ಥಲ ಧ್ವಜಾರೋಹಣಕ್ಕೆ ಸಜ್ಜುಕೆಲವೇ ಸಮಯದಲ್ಲಿ ಅಭಿಯಾನಕ್ಕೆ ಚಾಲನೆಅಭಿಯಾನದ ವೇದಿಕೆಯನ್ನು ಪರಿಶೀಲಿಸುತ್ತಿರುವ ಮಠಾಧೀಶರು, ಮುಖಂಡರುಇಂದಿನಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಬಾಗೇವಾಡಿಯಲ್ಲಿ ಬೈಕ್‌ ರ‍್ಯಾಲಿಸಹಸ್ರ ಸಂಖ್ಯೆಯಲ್ಲಿ ಅಭಿಯಾನ ಯಶಸ್ವಿಗೊಳಿಸಲು ಸಚಿವೆ ಹೆಬ್ಬಾಳ್ಕರ ಕರೆಬನ್ನಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳೋಣಬಸವರಥ ವಿಡಿಯೋ

2 months agoSeptember 1, 2025 5:45 pm

ವೇದಿಕೆಯ ಕಾರ್ಯಕ್ರಮ ಲೈವ್

2 months agoSeptember 1, 2025 5:41 pm

ಸಾವಿರಾರು ಶರಣ ಶರಣೆಯರನ್ನ ಸೆಳೆದ ಪಾದಯಾತ್ರೆ

ಅಭಿಯಾನದ ಸಾಂಸ್ಕೃತಿಕ ಪಾದಯಾತ್ರೆ ಬಸವ ಜನ್ಮಸ್ಥಳ ಬಸವಸ್ಮಾರಕ ಭವನದಿಂದ ಆರಂಭವಾಗಿ ಬಸವೇಶ್ವರ ಸಿ ಬಿ ಎಸ್ ಸಿ ಶಾಲೆಯ ಆವರಣದವರೆಗೆ ನಡೆಯಿತು.

2 months agoSeptember 1, 2025 3:45 pm

ಕಲಬುರ್ಗಿ ಕೊಲೆ ಮಾಡಿದ ನೀಚರು ಈ ನಾಡಿನಲ್ಲಿದ್ದಾರೆ: ಸಾಣೇಹಳ್ಳಿ ಶ್ರೀ

https://basavamedia.com/kalaburgi-kole-madidavaru
2 months agoSeptember 1, 2025 1:29 pm

ಮಕ್ಕಳಿಂದ ಬಂದ ಪ್ರಶ್ನೆ: ಭಕ್ತಿ ಎಂದರೇನು?

ಸಂವಾದದಲ್ಲಿ ಮಕ್ಕಳಿಂದ ಪೂಜ್ಯರಿಗೆ ಪ್ರಶ್ನೆಗಳು ಗಮನ ಸೆಳೆಯುವಂತಹ ಬರುತ್ತಿವೆ. ಒಂದು ಹೈಸ್ಕೂಲು ಹುಡಗಿ ಭಕ್ತಿ ಎಂದರೇನು ಎಂದು ಕೇಳಿದಳು.

ನಮ್ಮನ್ನ ನಾವು ಪ್ರೀತಿಸುವಂತೆ ನಾವು ದೇವರನ್ನು ಪ್ರೀತಿಸಿದರೆ ಅದು ಭಕ್ತಿ. ಅದರಿಂದ ಸಿಗುವುದು ಮೋಕ್ಷ. ಮೋಕ್ಷವೆಂದರೆ ಸತ್ತ ಮೇಲೆ ಸಿಗುವ ಯಾವುದೋ ಸ್ಥಿತಿಯಲ್ಲ. ಈ ಬದುಕಿನಲ್ಲಿಯೇ ದುಃಖ ದುಮ್ಮಾನವಿಲ್ಲದೆ ಸಂತೃಪ್ತಿಯಿಂದ ಬದುಕುವ ಸ್ಥಿತಿ, ಎಂದು ಗದಗಿನ ಶ್ರೀಗಳು ಉತ್ತರಿಸಿದರು.

2 months agoSeptember 1, 2025 12:02 pm

ಸಂವಾದ ಕಾರ್ಯಕ್ರಮದ ಉದ್ಘಾಟನೆ

ಭಾಲ್ಕಿ, ಸಾಣೇಹಳ್ಳಿ, ಗದಗ ಶ್ರೀಗಳು ಸಸಿಗೆ ನೀರೆರೆದು ನಂದೀಶ್ವರ ರಂಗ ಮಂದಿರದಲ್ಲಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಎಸ್. ಎಂ. ಜಾಮದಾರ, ಬಸವ ಸಮಿತಿಯ ಅರವಿಂದ ಜತ್ತಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದೇವರು, ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ, ಗದಗ ತೋಂಟದ ಸಿದ್ಧರಾಮ ಶ್ರೀ, ಶೇಗುಣಸಿ ಮಹಾಂತಪ್ರಭು ಸ್ವಾಮೀಜಿ, ಬೆಳಗಾವಿ ಅಲ್ಲಮ ಪ್ರಭು ಸ್ವಾಮೀಜಿ, ಹುಲಸೂರು ಶಿವಕುಮಾರ ಸ್ವಾಮೀಜಿ, ಸಚಿವ ಶಿವಾನಂದ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

2 months agoSeptember 1, 2025 12:00 pm

ಮಕ್ಕಳಿಂದ ಮಲ್ಲಕಂಬದಾಟ ಪ್ರದರ್ಶನ

ನಂದೀಶ್ವರ ರಂಗ ಮಂದಿರದಲ್ಲಿ ಮಕ್ಕಳಿಂದ ಮಲ್ಲಕಂಬದಾಟ ಪ್ರದರ್ಶನ

2 months agoSeptember 1, 2025 11:14 am

ನಿಜಗುಣಾನಂದ ಶ್ರೀಗಳಿಂದ ನಿರೂಪಣೆ

*11 ಗಂಟೆಗೆ ಬಸವೇಶ್ವರ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ಸಂವಾದ
*ಮದ್ಯಾಹ್ನ ಮೂರು ಗಂಟೆಗೆ ಮೆರವಣಿಗೆ
*ಇದೇ ಶಾಲೆಯ ಆವರಣದಲ್ಲಿ ಸಂಜೆ 6 ಗಂಟೆಗೆ ಅಭಿಯಾನ
*ನಿರಂತರ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿದೆ

2 months agoSeptember 1, 2025 11:04 am

ಧ್ವಜಾರೋಹಣದಲ್ಲಿ ಕೇಳಿದ ಮಾತುಗಳು

ಪ್ರತಿ ವ್ಯಕ್ತಿ ಬಸವ ತತ್ವ ಮೈಗೂಡಿಸಬೇಕು. ಅಭಿಯಾನದ ಮೂಲಕ
ಬಸವ ತತ್ವ ಎಲ್ಲರಿಗೂ ತಲುಪಬೇಕು.
ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿ

ಬಸವ ಧ್ವಜ ನಮ್ಮ ಧರ್ಮದ ಸಂಕೇತ. ಅದಕ್ಕೆ ನಾವು ಭಕ್ತಿ ಗೌರವ ತೋರಬೇಕು. ಬಸವಾದಿ ಶರಣರು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದರು. ಅವರ ಸಂದೇಶವನ್ನು ಜನಮನಕೆ ತಲುಪಿಸಲು ಅಭಿಯಾನ ಶುರುವಾಗಿದೆ.
ಪೂಜ್ಯ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಗದಗ

ಅಣ್ಣ ಬಸವಣ್ಣ ಜಾತ್ಯತೀತ ಸಮಾಜದ ಕನಸು ಕಂಡರೂ. ಅವರ ಕನಸು ನನಸಾಗಬೇಕು.
ಸಚಿವ ಶಿವಾನಂದ ಪಾಟೀಲ್

2 months agoSeptember 1, 2025 11:23 am

ಹೇ ಶರಣ ಬಂಧುಗಳೇ ….

ಧ್ವಜಾರೋಹಣದಲ್ಲಿ ಬಸವಧರ್ಮ ಗೀತೆ ಹಾಡಲಾಯಿತು..

2 months agoSeptember 1, 2025 10:47 am

ಬಸವ ಧ್ವಜಾರೋಹಣದೊಂದಿಗೆ ಅಭಿಯಾನ ಶುರು

ಬಸವ ಜನ್ಮಭೂಮಿಯಲ್ಲಿ ಬಸವ ಧ್ವಜಾರೋಹಣದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ಚಾಲನೆಯಾಗಿದೆ. ಬಸವೇಶ್ವರ ದೇವಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.

ಇಂಗಳೇಶ್ವರ ವಿರಕ್ತಮಠದ ಪೂಜ್ಯ ಚನ್ನಬಸವ ಸ್ವಾಮೀಜಿ ಧ್ವಜಾರೋಹಣ ಮಾಡಿದರು.

ನಾಡಿನಾದ್ಯಂತದ ಬಸವಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ …

ಉಪಸ್ಥಿತಿ

ಪೂಜ್ಯರಾದ ತೋಂಟದ ಸಿದ್ದರಾಮ ಶ್ರೀ, ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ, ಬೈಲೂರು ನಿಜಗುಣಾನಂದ ಶ್ರೀ, ಹುಲಸೂರು ಶಿವಕುಮಾರ ಶ್ರೀ, ಅಥಣಿ ಪ್ರಭುಚನ್ನಬಸವ ಶ್ರೀ, ಸಿದ್ಧಲಿಂಗ ಸ್ವಾಮೀಜಿ ….

ಸಚಿವ ಶಿವಾನಂದ ಪಾಟೀಲ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ …

2 months agoSeptember 1, 2025 9:16 am
2 months agoSeptember 1, 2025 10:23 am

ಷಟಸ್ಥಲ ಧ್ವಜಾರೋಹಣಕ್ಕೆ ಸಜ್ಜು

ಕೆಲವೇ ಸಮಯದಲ್ಲಿ ಅಭಿಯಾನಕ್ಕೆ ಚಾಲನೆ

ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಉದ್ಘಾಟನೆ ಇನ್ನು ಕೆಲವೇ ಸಮಯದಲ್ಲಿ ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ.

ಬಹಳ ತಿಂಗಳಿಂದ ನಾಡಿನ ಬಸವ ಭಕ್ತರು ಉತ್ಸಾಹದಿಂದ ಸಿದ್ಧವಾಗಿರೋ ಕಾರ್ಯಕ್ರಮವಿದು. ನಾಡಿನ ಮೂಲೆ ಮೂಲೆಗಳಿಂದ ಮಠಾಧೀಶರು, ಬಸವ ಭಕ್ತರು ಬಸವ ಜನ್ಮಭೂಮಿಗೆ ಆಗಮಿಸುತ್ತಿದ್ದಾರೆ.

2 months agoSeptember 1, 2025 9:43 am

ಅಭಿಯಾನದ ವೇದಿಕೆಯನ್ನು ಪರಿಶೀಲಿಸುತ್ತಿರುವ ಮಠಾಧೀಶರು, ಮುಖಂಡರು

2 months agoSeptember 1, 2025 9:24 am

ಇಂದಿನಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ

2 months agoSeptember 1, 2025 9:26 am

ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಬಾಗೇವಾಡಿಯಲ್ಲಿ ಬೈಕ್‌ ರ‍್ಯಾಲಿ

2 months agoSeptember 1, 2025 9:28 am

ಸಹಸ್ರ ಸಂಖ್ಯೆಯಲ್ಲಿ ಅಭಿಯಾನ ಯಶಸ್ವಿಗೊಳಿಸಲು ಸಚಿವೆ ಹೆಬ್ಬಾಳ್ಕರ ಕರೆ

2 months agoSeptember 1, 2025 9:30 am

ಬನ್ನಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳೋಣ

2 months agoSeptember 1, 2025 9:46 am

ಬಸವರಥ ವಿಡಿಯೋ

Share This Article
Leave a comment

Leave a Reply

Your email address will not be published. Required fields are marked *