‘ಮೊದಲು ಹಿಂದೂ ನಂತರ ಲಿಂಗಾಯತ ಅನ್ನುವ ತನಕ ಬಿಡುವುದಿಲ್ಲ ‘
ರಬಕವಿ-ಬನಹಟ್ಟಿ:
ಲಿಂಗಾಯತ ಮಠಾಧೀಶರನ್ನು ನಿಂದಿಸಿ ಹೈ ಕೋರ್ಟ್,ಸುಪ್ರೀಂ ಕೋರ್ಟುಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ಕನ್ನೇರಿ ಸ್ವಾಮಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ನಡೆದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದಲ್ಲಿ ಮಾತನಾಡಿದ ಅವರು “ನೀವು ಮಾತಾಡಿದ್ ಕಡಿಮೆ ಆತು ಅವರನ್ನ ಬಡಿಬೇಕಿತ್ತು ಅಂತ ಮಂದಿ ಅಂತಾರ,” ಎಂದು ಹೇಳಿದರು.
“ಕುಸುಬಿ ಎತ್ತೆತ್ತಿ ಬಡಿತಾರಲ್ಲ ಹಂಗ ಎತ್ತೆತ್ತಿ ಬಡಿಬೇಕಾಗತ್ತ, ಹೀಗೆ ಬಡಿಯೋದ್ರಿಂದ ಕುಸುಬಿ ಝಳ ಝಳ ಉದುರಿ ಬೀಳ್ತಾವು,” ಎಂದು ಎಚ್ಚರಿಕೆ ನೀಡಿದರು.
ಬಸವ ಸಂಸ್ಕೃತಿ ಅಭಿಯಾನದಲ್ಲಿ ಕಮ್ಯೂನಿಷ್ಟ್ ಖಾವಿಧಾರಿಗಳಿಂದ ಹಿಂದೂ ದೇವರಿಗೆ, ಆಚರಣೆಗಳಿಗೆ, ರಾಮಾಯಣ ಮಹಾಭಾರತಗಳಿಗೆ ಅವಮಾನ ಮಾಡುವ ಕೆಲಸ ನಡೆಯಿತು. ಬಸವಾದಿ ಶರಣರ ಹೆಸರು ಹೇಳಿಕೊಂಡು ಹಿಂದೂ ಧರ್ಮ ಸಣ್ಣದು ಮಾಡುವ, ಒಡೆಯುವ ಕೆಲಸ ನಡೆಯಿತು. “ಅವರಿಗೆ ಹೇಳೋರು, ಕೇಳೋರು ಯಾರೂ ಇಲ್ಲಂತ ತಿಳ್ಕೋಬಾರದು ಅಂತ ಹೆಟ್ಟಿದ್ದೆ ನಾನು,” ಎಂದು ಹೇಳಿದರು.
“ಅದಕ್ಕೆ ಹೆದರಿ ಸಂಧಾನಕ್ಕೆ ಲಿಂಗಾಯತ ಸ್ವಾಮಿಗಳೊಬ್ಬರನ್ನು ಕಳಿಸಿದ್ದರು. ಪ್ರತ್ಯೇಕ ಧರ್ಮ ಕೇಳುತ್ತಿರುವವರು ಸುದ್ದಿಗೋಷ್ಠಿ ನಡೆಸಿ ತಾವು ಮೊದಲು ಹಿಂದೂ ನಂತರ ಲಿಂಗಾಯತ ಎಂದರೆ ಬಸವಾದಿ ಶರಣರ ಸಮಾವೇಶ ನಿಲ್ಲಿಸುತ್ತೇನೆ, ” ಎಂದು ಹೇಳಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಕೇಳುತ್ತಿರುವವರು ತಾವು ಹಿಂದೂಗಳು ಎಂದು ಒಪ್ಪಿಕೊಳ್ಳುವ ತನಕ ಹೋರಾಟ ಮುಂದುವರೆಯಲಿದೆ ಎಂದು ಕನ್ನೇರಿ ಸ್ವಾಮಿ ಎಚ್ಚರಿಕೆ ನೀಡಿದರು. ಬಬಲೇಶ್ವರ ಶುರುವಾದ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಯಾದಗಿರಿ, ಬೆಳಗಾವಿ, ಬೀದರದಲ್ಲಿ ಮುಂದುವರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್, ಸಿದ್ದು ಸವದಿ, ಶಿರೋಳದ ಶಂಕರಾರೂಢ ಶ್ರೀಗಳು, ಹಳೇ ಹುಬ್ಬಳ್ಳಿಯ ಜಗದ್ಗುರು ಯೋಗಾಚಾರ್ಯ ಶ್ರೀ, ಶಿವಶಂಕರ ಶಿವಾಚಾರ್ಯರು, ಮೈಗೂರಿನ ಗುರುಪ್ರಸಾದ ಶ್ರೀಗಳು, ಹುಲ್ಯಾಳದ ಹರ್ಷಾನಂದ ಶ್ರೀಗಳು, ಹಿ೦ದೂ ಮುಖಂಡರಾದನಂದು ಗಾಯಕವಾಡ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಾಬುಗೌಡ ಪಾಟೀಲ, ಗೌರಿ ಮಿಳ್ಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಬಾಯಲ್ಲಿ ಬಡಿಯುವ ಮಾತು ಬಂದಿದೆ. ಬಡಿದು ನೋಡಲಿ ಲಿಂಗಾಯತರನ್ನ ಒಮ್ಮೆ. ಸರಿಯಾದ ಉತ್ತರ ಕೊಡುವ ಅವಶ್ಯಕತೆ ಇದೆ. ಲಿಂಗಾಯತರೆಲ್ಲರೂ ಜಾಗೃತರಾಗಿ.
ಹುಚ್ಚರ ಸಂಘದ ಅಧ್ಯಕ್ಷ. ಧರ್ಮಬೃಷ್ಟ, ಎಡಬಿಡಂಗಿ, ಕಪಟಿ , ಗೋಮುಖ ವ್ಯಾಘ್ರ, .
ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡಿಸ್ತು.
ಪಾಪ್, ನೀವು ಲಿಂಗಾಯತರು ನಾನು ಇಷ್ಟು ಮಾತಾಡಿದರು, ತನ್ನನ್ನು ಬಡೆದಿಲ್ಲ, ಅಂತ ಬಡೆಯಲು ನೆನಪು ಮಾಡಿ ಕೊಟ್ಟಂತೆ ಇದೆ.
ಬಡಿದು ಮುಸ್ಲಿಂರನ್ನಗಿಸುವ ತಾಲಿಬಾನಿ ಗಳಿಗೂ ಇವ್ರಿಗೂ ವ್ಯತ್ತಾಸ್ ಇಲ್ಲ ಎಂಬುದು ಶಿದ್ಧಿಸಿದ ಹಿಂದೂ ತಾಯಿಬಾನಿ ಭಯೋತ್ಪಾದಕ ನಾಯಿ ಬೊಗಳಿದೆ ನಾವು ಅದು ಹುಚ್ಚು ನಾಯಿ ಎಂದು ಹೇಳ್ಬೇಕು