ಪಂಚಾಚಾರ್ಯರ ನಿಜ ಸ್ವರೂಪ 11/12
ಶುದ್ಧ ಶೈವ ಬ್ರಾಹ್ಮಣ ಕುಟುಂಬದಿಂದ ಬಂದರೂ ಬಸವಣ್ಣ ಜನಿವಾರ, ವೈದಿಕ ಆಚರಣೆಗಳನ್ನು ತಿರಸ್ಕರಿಸಿದರು. ಶರಣ ಚಳುವಳಿಯ ಮೂಲಕ ವೈಚಾರಿಕ, ಸಮ ಸಮಾಜ ಕಟ್ಟಲು ಹೋರಾಡಿದರು.
ಅವರ ಅನುಯಾಯಿಗಳಾಗಿ ಬಂದ ಶೈವ ಬ್ರಾಹ್ಮಣ ಆರಾಧ್ಯರು ಶರಣ ತತ್ವಕ್ಕೆ ವೈದಿಕತೆ ಬೆರೆಸಿ ತಮ್ಮ ಮಿಶ್ರ ಧರ್ಮ ವೀರಶೈವವನ್ನು ಲಿಂಗಾಯತಕ್ಕೆ ಪರ್ಯಾಯವಾಗಿ ಬೆಳೆಸಿದರು.
ಅದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲು ಪಂಚಾಚಾರ್ಯರನ್ನು ಸೃಷ್ಟಿಸಿದರು. ವಚನಗಳಿಗೆ ಆಗಮ ಬೆರೆಸಿ, ಆಗಮಗಳಿಗೆ ಷಟ್ಸ್ಥಲ ಸಿದ್ದಾಂತ ಸೇರಿಸಿ, ಕನ್ನಡದ ಬದಲು ಸಂಸ್ಕೃತ ಪೋಷಿಸಿದರು.
ಲಿಂಗಾಯತ ವಟುಗಳು ಕಾಶಿಗೆ ಹೋಗಿ ಅಲ್ಲಿ ಸಂಸ್ಕೃತದ ವೈದಿಕ ಗ್ರಂಥಗಳಲ್ಲಿ ಪಂಡಿತರಾದರು. ಅಲ್ಲಿಂದ ಬಂದು ಇಲ್ಲಿನ ಮಠಗಳಲ್ಲಿ, ಪಾಠಶಾಲೆಗಳಲ್ಲಿ ತಾವು ಕಲಿತಿದ್ದನ್ನೇ ಬಿತ್ತಿದರು.
ಪಂಚಾಚಾರ್ಯರ ವೇಷ, ಆಚರಣೆ, ಸಂಸ್ಕೃತ ಭಾಷೆಗಳಿಗೆ ಮಾರುಹೋಗಿ ಲಿಂಗಾಯತರು ಬಸವ ಮಾರ್ಗದಿಂದ ದೂರವಾಗಿ ಜಾತಿ, ವರ್ಣ, ಕರ್ಮಾಚರಣೆಗಳನ್ನು ಮತ್ತೆ ಅಂಟಿಸಿಕೊಂಡರು.
ಬಸವಣ್ಣ ತಿರಸ್ಕರಿಸಿದ್ದ ವೈದಿಕ ಸಿದ್ದಾಂತ, ಆಚರಣೆಗಳು ಕಾಲಕ್ರಮೇಣ ಲಿಂಗಾಯತ ಸಮಾಜವನ್ನು ಮತ್ತೆ ಆವರಿಸಿಕೊಂಡವು. ಒಳಗೆ ಬಂದವರು ಇಡೀ ಸಮುದಾಯವನ್ನೇ ಹಿಡಿತಕ್ಕೆ ತೆಗೆದುಕೊಂಡರು.
(ಮಾರ್ಗ ೩, ೪, ೭ ರ ವಿವಿಧ ಲೇಖನಗಳಿಂದ ಆಯ್ದುಕೊಳ್ಳಲಾಗಿದೆ.)