ವಿಜಯಪುರ
ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ್ ಅವರು ಇಂಗ್ಲಿಷ್ ಭಾಷೆಗೆ ಅನುವಾದಿಸಿರುವ ಬಸವಣ್ಣನವರ ವಚನಗಳು ‘My Me is Thee’ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ.
ಈ ಕೃತಿಯನ್ನು ಯಲಿಗಾರ್ ಅವರು ಇತ್ತೀಚೆಗೆ ಸಚಿವ ಎಂ. ಬಿ. ಪಾಟೀಲರಿಗೆ ನೀಡಿದರು. “ಈ ಕೃತಿ ಕೇವಲ ಅನುವಾದವಲ್ಲ, ಇದು ಬಸವಣ್ಣನವರ ದಿವ್ಯ ದರ್ಶನದ ಪ್ರತಿಬಿಂಬ,” ಎಂದು ಪಾಟೀಲರು ಬಸವರಾಜ ಯಲಿಗಾರ್ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ.
ಯಲಿಗಾರ್ ಅವರು ಬಸವಣ್ಣನವರ ಷಟಸ್ಥಲ ವಚನಗಳಲ್ಲಿ 952 ವಚನಗಳನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ಪುಸ್ತಕದಲ್ಲಿ ಮೇಲೆ ಕನ್ನಡ ವಚನ, ಕೆಳಗೆ ಇಂಗ್ಲಿಷ್ ಅನುವಾದವಿದೆ.

ಕನ್ನಡ ಬಾರದವರಿಗೆ ವಚನಗಳನ್ನು ತಲುಪಿಸಲು ಯಲಿಗಾರ್ ಅವರು ಅನುವಾದದ ಕಾರ್ಯವನ್ನು ಕೈಗೆತ್ತಿಕೊಂಡು ಮುಗಿಸಿದ್ದಾರೆ. ಈಗಿನ ಪೀಳಿಗೆ ಇಂಗ್ಲಿಷ್ ಮಾಧ್ಯಮದತ್ತ ವಾಲುತ್ತಿರುವುದರಿಂದ ಕನ್ನಡದ ಎಲ್ಲಾ ಸಂತರು, ಶರಣರು, ಹಾಗೂ ವಚನಕಾರರ ಸಾಹಿತ್ಯ ಇಂಗ್ಲಿಷ್ ಭಾಷೆಯಲ್ಲೂ ಲಭ್ಯವಾಗಬೇಕು ಎನ್ನುವುದು ಅವರ ಉದ್ದೇಶ.
ಯಲಿಗಾರ್ ಅವರು ಸಂತ ಶಿಶುನಾಳ ಶರೀಫರ ತತ್ತ್ವ ಪದಗಳನ್ನೂ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಅವರ ‘ಸೋರುತಿಹುದು ಮನೆಯ ಮಾಳಿಗೆ’ ತತ್ತ್ವ ಪದದ ಅನುವಾದ ಬೆಂಗಳೂರು ವಿಶ್ವವಿದ್ಯಾಲಯದ ಬಿಎ ಆಪ್ಷನಲ್ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆಯಾಗಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IxxC2m7AXyW84KPf73t5iL
ಯಲಿಗಾರ್ ರವರಿಗೆ ತುಂಬ ತುಂಬ ಧನ್ಯವಾದಗಳು. ಬಸವ ಮೀಡಿಯಾ ಈ ವಿಷಯ ತಿಳಿಸಿದ್ದು ಬಹಳ ಸಂತೋಷವಾಯಿತು
ಯಲಿಗಾರ ಸರ್ ಕಾಯ೯ ಶ್ಲಾಘನೀಯ, ಶರಣು ಜೀವಿ ಬಸವರಾಜ್ ಯಲಿಗಾರ ಸರ್ ಗೆ ಶರಣು ಶರಣಾಥಿ೯ಗಳು.
Soooper sir
ಒಳ್ಳೆಯ ಕಾರ್ಯ ಸರ್
ಯಲಿಗಾರ್ ರವರಿಗೆ ತುಂಬು ಹೃದಯದ ಧನ್ಯವಾದಗಳು
ಶರಣು ಶರಣಾರ್ಥಿಗಳು
🙏🙏🙏💐
ಶರಣು ಶರಣಾರ್ಥಿಗಳು ಎಲ್ಲಿಗಾರ ಸರ್
ನಿಮ್ಮ ಕಾರ್ಯ ಶ್ಲಾಘನೀಯ ಬಸವ ಪ್ರಜ್ಞೆ ಜಗತ್ತಿನದ್ಯತ ನಿಮ್ಮಂತವರ ಪ್ರಯತ್ನದಿಂದ ಪಸರಿಸಲಿ…. 🙏🙏🙏
ಅತ್ಯವಶ್ಯಕವಾದ ಸಾಧನೆ ಮಾಡಿದ ಶರಣ ಬಸವರಾಜ ಯಲಿಗಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ಪುಸ್ತಕ ದೊರೆಯುವ ಸ್ಥಳ ವಿಳಾಸ ಇತರೆ ಮಾಹಿತಿ ಕೊಡಬೇಕೆಂದು ಕೋರುವೆ
ಆತ್ಮೀಯ ಸಹೊಇದರ ಶರಣ ಬಂಧುಗಳೆ,
ಈ ಪುಸ್ತಕ ಇನ್ನೂ ಬಿಡುಗಡೆಯಾಗಿಲ್ಲ. ಶರಣ ಬಂಧುಗಳಾದ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲ ಸಾಹೇಬರಿಗೆ ಹಸ್ತಪ್ರತಿಯನ್ನು ತೋರಿಸಿ, ಅದರ ಬಿಡುಗಡೆಗೆ ಅವರ ದಿನಾಂಕವನ್ನು ಕೇಳಲು ಹೋಗಿದ್ದೆ. ಈ ಪುಸ್ತಕ ಬಹುಶಃ ಎಪ್ರೀಲ್ 12 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಬಹುದು. ಶರಣ ಬಂಧುಗಳಿಗೆಲ್ಲ ಆದರದ ಸ್ವಾಗತ.
ಬಸವರಾಜ ಯಲಿಗಾರ. ಡಿ ಎಸ್ ಪಿ
DSP ಎಲಿಗಾರವರಿಗೆ ಅಭಿನಂದನೆಗಳು 💐🙏🏻🙏🏻