ಭಾಲ್ಕಿಯಲ್ಲಿ ಮೂರು ವಿಶೇಷ ಕಾರ್ಯಕ್ರಮಗಳಿಗೆ ಭರ್ಜರಿ ಸಿದ್ಧತೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಬಸವ ಜಯಂತಿ, ವಚನ ಜಾತ್ರೆ, ಪೂಜ್ಯ ಚನ್ನಬಸವ ಪಟ್ಟದ್ದೇವರ 27ನೆ ಸ್ಮರಣೋತ್ಸವ, ಪೂಜ್ಯ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವಗಳನ್ನು ಆಚರಿಸಲು ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಗುರುಬಸವ ಪಟ್ಟದ್ದೇವರು ಮೂರು ಕಾರ್ಯಕ್ರಮಗಳು ಕೂಡಿ ಬಂದಿರುವುದು ವಿಶೇಷ ಸಂಗತಿಯಾಗಿದೆ. ಎಲ್ಲಾ ಸದ್ಭಕ್ತರು ಇಂತಹ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೊಳಿಸಲು ತನು-ಮನ-ಧನದಿಂದ ಸಹಕರಿಸಬೇಕೆಂದು ನುಡಿದರು.

ಜೊತೆಗೆ ಈ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿರುವ ಪ್ರವಚನ, ವಚನ ಪಾರಾಯಣ, ಯೋಗ, ವಾಲಿಬಾಲ ಪಂದ್ಯಾವಳಿ, ಮೆರವಣಿಗೆ ಮುಂತಾದವುಗಳ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಸಾಮೂಹಿಕ ವಚನ ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷರನ್ನಾಗಿ ಮಲ್ಲಮ್ಮ ಆರ್. ಪಾಟೀಲ, ಮೆರವಣಿಗೆ ಸಮಿತಿಯ ಅಧ್ಯಕ್ಷರನ್ನಾಗಿ ಯೋಗೇಶ ಸೋಮನಾಥಪ್ಪ ಅಷ್ಟೂರೆ, ಯೋಗ ಸಮಿತಿಯ ಅಧ್ಯಕ್ಷರನ್ನಾಗಿ ಚಂದ್ರಕಾಂತ ಹೈಬತಪರೆ, ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯ ಅಧ್ಯಕ್ಷರನ್ನಾಗಿ ವಿಲಾಸ ಬಕ್ಲಾ ಅವರುಗಳನ್ನು ನೇಮಿಸಿ, ಆಶೀರ್ವದಿಸಲಾಯಿತು.

ಹಿರಿಯ ಪೂಜ್ಯರಾದ ಡಾ. ಬಸವಅಂಗ ಪಟ್ಟದ್ದೇವರು ಶ್ರೀಮಠದ ಎಲ್ಲ ಕಾರ್ಯಗಳಲ್ಲಿ ಭಕ್ತರ ಸೇವೆಯೇ ಪ್ರಮುಖವಾದದ್ದು, ಸಕಲ ಸದ್ಭಕ್ತರು ತಾವೇ ಮುಂದಾಳತ್ವ ವಹಿಸಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕೆಂದು ಆಶೀರ್ವಚನ ನೀಡಿದರು. ಪೂಜ್ಯ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದರು.

ಪೂರ್ವಭಾವಿ ಸಭೆಯಲ್ಲಿ ಶಂಭುಲಿಂಗ ಕಾಮಣ್ಣ, ಡಾ. ಅಮೀತ ಅಷ್ಟೂರೆ, ಚಂದ್ರಕಾಂತ ಪಾಟೀಲ, ಮಹಾನಂದ ಮಾಶೆಟ್ಟೆ, ಕಿರಣ ಖಂಡ್ರೆ, ಶ್ರೀಕಾಂತ ಭೂರಾಳೆ, ಚಂದ್ರಕಾಂತ ಬಿರಾದಾರ, ನಾಗಶೆಟ್ಟೆಪ್ಪ ಲಂಜವಾಡೆ ಮತ್ತಿತರ ಗಣ್ಯರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಶಿವು ಲೋಖಂಡೆ ಅವರು ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥಪ್ಪ ಬಿರಾದಾರ, ರಾಚಪ್ಪ ಗೋರ್ಟೆ ಬಸವ ಗುರುಪೂಜೆ ನೆರವೇರಿಸಿದರು. ಭಾಲ್ಕಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆ ಯಶಸ್ವಿಗೊಳಿಸಿದರು. ದೀಪಕ ಠಮಕೆ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *