ಬಸವಶಕ್ತಿ ಶಿಬಿರಗಳು ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸಲಿ: ಡಾ. ಸರ್ವಮಂಗಳ ಸಕ್ರಿ

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರು

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ರಾಯಚೂರು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸರ್ವಮಂಗಳ ಸಕ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಪ್ರಭಾವ ಬೆಳೆಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ದರ್ಮದ ಹೋರಾಟ ಬಲವಾಗುತ್ತದೆಯೇ?

ಬಸವ ಸಂಘಟನೆಗಳಿಗೆ ರಾಜಕೀಯ ಶಕ್ತಿ ಅವಶ್ಯ ಬೇಕಾಗುತ್ತದೆ. ಆದರೆ ಧರ್ಮವೇ ರಾಜಕೀಯವಾಗಬಾರದು. ರಾಜಕೀಯ ಶಕ್ತಿಗಳ ಪ್ರಭಾವ ಹೆಚ್ಚಾದಂತೆಲ್ಲ ಲಿಂಗಾಯತ ಧರ್ಮದಲ್ಲಿ ಒಳ ಜಗಳಗಳು ಹೆಚ್ಚಾಗುತ್ತವೆ. ರಾಜಕಾರಣಿಗಳು ಬಲಿಷ್ಟರಾಗಿ ಶರಣ ಧರ್ಮದ ಕಾರ್ಯಕರ್ತರು ಅಸಹಾಯಕರಾಗುತ್ತಾರೆ.

ಅದಕ್ಕೆ ಅವಶ್ಯಕತೆಗೆ ತಕ್ಕಷ್ಟು ರಾಜಕಾರಣಿಗಳ ಪ್ರವೇಶವಿರಬೇಕು. ರಾಜಕೀಯದಲ್ಲಿ ಶರಣ ಧರ್ಮ ಸೇರ್ಪಡೆಯಾದರೆ ಧರ್ಮದ ಪವಿತ್ರತೆಗೆ ದಕ್ಕೆಯಾಗುತ್ತದೆ. ಅವರಿಗೆ ರಾಜಕೀಯ ಒಂದು ಚದುರಂಗದಾಟವಿದ್ದಂತೆ. ರಾಜಕಾರಣಿಗಳು ಏಕಮುಖ ವ್ಯಕ್ತಿತ್ವದವರಾಗಿರುವುದಿಲ್ಲ.

ಈಗ ಕಾಲ ಬದಲಾಗಿದೆ ಸಾಮಾನ್ಯ ಶರಣ ಮನಸ್ಸುಳ್ಳವರು ಬಸವಪ್ರಜ್ಞೆಯ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಲಿಂಗಾಯತ ಧರ್ಮದ ಪರ ವಿರೋಧಗಳ ಚರ್ಚೆ ಮತ್ತು ಸಂವಾದಗಳು ನಡೆಯುತ್ತಿವೆ. ಈ ಜಾಗೃತಿ ರಾಜಕೀಯ ಪ್ರಜ್ಞೆಯಾಗಿಯೂ ಬೆಳೆಯಬೇಕು.

ಎದ್ದೇಳು ಕರ್ನಾಟಕ ದಲಿತ, ಅಲ್ಪಸಂಖ್ಯಾತ, ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡುತ್ತಾರೆ. ಇದೇ ರೀತಿ ಬಸವ ಸಂಘಟನೆಗಳಿಗೆ ತರಬೇತಿ ನೀಡಬೇಕೆ?

ಬಸವಶಕ್ತಿ ಶಿಬಿರಗಳಲ್ಲಿ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುವಂತಹ ಕೆಲಸವಾಗಬೇಕು.

ತರಬೇತಿದಾರರಿಗೆ ಒಂದು ಸಿಲಬಸ್ ಮಾದರಿಯಲ್ಲಿ ಪುಸ್ತಕಗಳು ಪ್ರಕಟವಾಗಬೇಕು. ಕೆಲ ಚಿಂತಕರು, ಲೇಖಕರು ಕಿರುಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಆದರೆ ಅದು ಸಾಲದು. ನೇರಾನೇರ ಪಾಯಿಂಟ್ ಟು ಪಾಯಿಂಟ್ ಇರಬೇಕು.

ತರಬೇತಿದಾರರಿಗೆ ಪಠ್ಯಕ್ರಮದಲ್ಲಿ ಹೇಳುವ ಕುಶಲತೆ ಅಲ್ಲಿರಬೇಕು. ಬೇರೆ ಸಮುದಾಯದವರ ಅನುಕರಣೆಯಾಗದೆ ಸ್ವತಂತ್ರ ಅಭಿಪ್ರಾಯದ ಗಟ್ಟಿತನವಿರಬೇಕು. ಸಾಕಷ್ಟು ಮಹಿಳೆಯರಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಕೆಲಸವಾಗಬೇಕು.

ಬಸವಶಕ್ತಿ ಶಿಬಿರಗಳಲ್ಲಿ ಶರಣ ಸಂಘಟನೆಗಳಿಗೆ ವೇದಿಕೆಯ ಮೇಲೆ ಮಾತನಾಡುವ ತಂತ್ರಕಲೆ ಕುರಿತು ತರಬೇತಿ ನೀಡಬೇಕು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ತೋರಿಸಬೇಕು.

ಈ ನಿಟ್ಟಿನಲ್ಲಿ ಬಸವ ಶಕ್ತಿ ಶಿಬಿರ ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾದಕಗಳೇನು?

ಬಸವ ಸಂಸ್ಕೃತಿ ಅಭಿಯಾನದ ಮಾದರಿಯಂತೆ ಕಾರ್ಯಕ್ರಮಗಳನ್ನು ರೂಪಿಸಲು ನಡೆಸಲು ಲಿಂಗಾಯತ ಧರ್ಮದ ಯುವಕರು ಮತ್ತು ಯುವತಿಯರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹದ ವಾತಾವರಣ ಇರುವುದಿಲ್ಲ. ನಮ್ಮ ಧರ್ಮದಲ್ಲಿ ನಾಯಕತ್ವದ ಕೊರತೆ ಇದೆ.

ಲಿಂಗಾಯತ ದಳಪಡೆಗಳು ಬೆಳೆಯಬೇಕು. ವಚನಗಳನ್ನು ಅಸ್ತ್ರಗಳಂತೆ ಬಳಸಿ ವಿರೋಧಿಗಳನ್ನು ಸದೆಬಡಿಯುವ ವಾಕ್ ಪಡೆಯ ಗುಂಪುಗಳನ್ನು ಹುಟ್ಟು ಹಾಕಬೇಕು. ಪ್ರತಿ ಜಿಲ್ಲೆ ತಾಲೂಕು ಹೋಬಳಿ ಮಟ್ಟಗಳಲ್ಲಿ ಇವರ ಜೊತೆ ಸಂವಹನ ಮಾಧ್ಯಮ ಸೃಷ್ಟಿಯಾಗಬೇಕು.

ಯುವಪಡೆಯ ಅಸ್ತ್ರ ಇಲ್ಲವೆಂದರೆ ಗಾಳಿಯಲ್ಲಿ ಯುದ್ಧ ಮಾಡಿದಂತಾಗುತ್ತದೆ.

ನಿಮ್ಮ ಜಿಲ್ಲೆ ತಾಲೂಕಿನಲ್ಲಿ ಬಸವಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು, ನೆರವಾಗಲು ನಿಮಗೆ ಆಸಕ್ತಿ ಇದೆಯೇ, ಹೇಗೆ ಕೈ ಜೋಡಿಸುತ್ತೀರಿ?

ಬಸವಶಕ್ತಿ ಸಮಾವೇಶವನ್ನು ನಮ್ಮ ಜಿಲ್ಲೆ ಮತ್ತು ತಾಲೂಕಿನಲ್ಲಿ ಆಯೋಜಿಸಲು ನಾವು ಸಿದ್ಧರಿದ್ದೇವೆ.

ಆಧುನಿಕತೆಯ ಅಬ್ಬರದಲ್ಲಿ ನಮ್ಮ ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಬಸವಶಕ್ತಿಯ ಸಮಾವೇಶ ಮಾಡುವಲ್ಲಿ ನಾವು ಶ್ರಮ ಪಡಲೆಬೇಕಾಗಿದೆ. ಬೇರೆ ಧರ್ಮೀಯರ ದೌರ್ಜನ್ಯ, ಅಟ್ಟಹಾಸ ಮತ್ತು ಶೋಷಣೆಗಳಿಗೆ ನಮ್ಮ ಧರ್ಮದ ಮೂಲಕ ಉತ್ತರ ಕೊಡಬೇಕಾಗಿದೆ. ಸರಿ ತಪ್ಪುಗಳ ಮಾರ್ಗದರ್ಶನ ನೀಡಬೇಕಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *