ವಿಜಯಪುರ:
‘ಇವ ನಮ್ಮವ, ಇವ ನಮ್ಮವ’ ಎಂಬ ಕರ್ನಾಟಕದ ಬಸವವಾದದ ಮೇಲೆ ಮನುವಾದಿಗಳಿಂದ ದಾಳಿ ಆರಂಭವಾಗಿದ್ದು, ಬಸವ ಸಂಸ್ಥೃತಿ ಉಳಿವಿಗಾಗಿ ನಾಡಿನ ಪ್ರಜ್ಞಾವಂತರು ಎಚ್ಚರ ವಹಿಸಬೇಕಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ‘ಅಂಬೇಡ್ಕರ್ ಹಬ್ಬ’ದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯಾರು ಬುದ್ಧನ ಅವಹೇಳನ ಮಾಡಿದ್ದಾರೋ, ಯಾರು ಬಸವಣ್ಣನನ್ನು ತಿರಸ್ಕಾರ ಮಾಡಿದ್ದರೋ, ಯಾರು ಅಂಬೇಡ್ಕರ್ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದಿದ್ದಾರೋ ಅವರೇ ಇದೀಗ ‘ವಚನ ದರ್ಶನ’ ಎಂಬ ಪುಸ್ತಕದ ಮೂಲಕ ವಚನ ಸಾಹಿತ್ಯದ ಮೇಲೂ ದಾಳಿ ಆರಂಭಿಸಿದ್ದಾರೆ. ವಚನ ಸಾಹಿತ್ಯದ ಸಾರಾಂಶ ತಿರುಚಿ, ಅದನ್ನು ಅವಹೇಳನ ಮಾಡಿ, ಅದನ್ನು ಜನರು ತಿರಸ್ಕರಿಸುವಂತೆ ಸಂಚು ರೂಪಿಸಿದ್ದಾರೆ’ ಎಂದರು.
‘ಬಸವಣ್ಣ ಪ್ರತಿಪಾದಿಸಿದ ತತ್ವವೇ ಕರುನಾಡಿನ ನಿಜವಾದ ಗುಣ, ತತ್ವವಾಗಿದೆ. ಜಾತಿ, ಕುಲ ಬಿಟ್ಟು ಮನುಷ್ಯರಾಗಿ ಬದುಕಿ ಎಂದು ಬಸವಣ್ಣ ಹೇಳಿದ್ದಾರೆ. ಈ ಕಾರಣಕ್ಕಾಗಿ ನಮ್ಮ ರಾಜ್ಯ
ಸರ್ಕಾರವು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದೆ’ ಎಂದರು.
‘ಕರ್ನಾಟಕದ ಮಣ್ಣಿನ ಗುಣವನ್ನು ಬಸವಣ್ಣವರನ್ನು ಹೊರತುಪಡಿಸಿ ಮತ್ತೊಬ್ಬರು ಪ್ರತಿಬಿಂಬಿಸಲು ಸಾದ್ಯವಿಲ್ಲ. ಬಸವಣ್ಣನವರ ತತ್ವವೇ ನಮ್ಮ ಸಂವಿಧಾನದ ಅಶಯ. ಅದನ್ನೇ ಕುವೆಂಪು ಮುಂದುವರಿಸಿದ್ದಾರೆ’ ಎಂದರು.

‘ಸಂಪ್ರದಾಯದ ವಿರುದ್ಧ ಧ್ವನಿ ಎತ್ತಿ, ಮಾನವತಾವಾದವನ್ನು ಪ್ರತಿಪಾದಿಸಿದವನು ಬುದ್ಧ, ಮನುಷ್ಯರೆಲ್ಲರೂ ಒಂದೇ ಕುಲ, ಒಂದೇ ಜಾತಿ, ಮೇಲು-ಕೀಳು ಭೇಧಭಾವ ಇರಬಾರದು ಎಂದು ಮಾನವತಾವಾದವನ್ನು ಪ್ರತಿಪಾದಿಸಿದರು. ಇದೇ ವಿಚಾರವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ, ನಡವಳಿಕೆ ಮೂಲಕ ಬುದ್ಧನ ವಿಚಾರಗಳನ್ನು ಇನ್ನಷ್ಟು ವ್ಯಾಪಕವಾಗಿ ಕರ್ನಾಟಕದಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ಪ್ರತಿಪಾದಿಸಿದ್ದಾರೆ’ ಎಂದರು.
‘ಬುದ್ಧ, ಬಸವಾದಿ ಶರಣರು ಧರ್ಮ, ತತ್ವದ ಆಧಾರದ ಮೇಲೆ ಹೇಳಿರುವುದಕ್ಕೆ ಸಂವಿಧಾನದ ಭಾಷೆ ಕೊಟ್ಟವರು ಅಂಬೇಡ್ಕರ್. ಬುದ್ಧ, ಬಸವಣ್ಣ ಬಿತ್ತಿದ ಸಮಾನತೆ, ಸೌಹಾರ್ದತೆ ತತ್ವ ವಿಚಾರಗಳು ಅಂಬೇಡ್ಕರ್ ಅವರಿಂದ ಸಂವಿಧಾನದ ರೂಪಲ್ಲಿ ನಮಗೆ ಸಿಕ್ಕಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು, ‘ಜೀವಪರವಾದ ಹೋರಾಟ ಮಾಡಿದ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಸ್ಮರಣೆ ಮಾಡಿಕೊಳ್ಳಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಸಮಾಜಮುಖಿ ಚಿಂತನೆ ಇದ್ದವು. ಸತ್ಯ, ಅಹಿಂಸೆ, ಪ್ರೇಮ ಇಂತಹ ಮೌಲ್ಯ ಅಳವಡಿಸಿಕೊಂಡಿದ್ದರು. ಇಂದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯದೇ ಇದ್ದರೆ ನಮಗೂ ಭವಿಷ್ಯ ಇಲ್ಲ, ನಮ್ಮ ನಾಡುಗೂ ಭವಿಷ್ಯವಿಲ್ಲ’ ಎಂದು ಹೇಳಿದರು.

‘ಧರ್ಮ, ರಾಜಕೀಯ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಧರ್ಮದ ತಳಹದಿಯ ಮೇಲೆ ರಾಜಕಾರಣ ಮಾಡಿದರೆ ಸಮಾಜಮುಖಿಯಾದ ಕೆಲಸ, ಕಾರ್ಯ ಮಾಡಲು ಸಾಧ್ಯವಿದೆ. ಆದರೆ, ಇಂದು ಅವೆರಡರ ಕಲಸುಮೇಲೊಗರ ನಡೆದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಇಂದು ನುಡಿ ಜಾಣರು ಬೇಕಾದಷ್ಟು ಇದ್ದಾರೆ. ಆದರೆ, ನಡೆ ವೀರರ ಕೊರತೆ ಎದ್ದು ಕಾಣುತ್ತಿದೆ. ಬಸವಣ್ಣ ನುಡಿಜಾಣರೂ ಅಗಿದ್ದರು, ನಡೆ ಜಾಣರೂ ಅಗಿದ್ದರು’ ಎಂದು ಬಣ್ಣಿಸಿದರು.
’12ನೇ ಶತಮಾನದಲ್ಲೇ ಧಾರ್ಮಿಕ ಸಂಸತ್ತು ನೀಡಿದವರು ಬಸವಣ್ಣ. ಅಂಬೇಡ್ಕರ್ ಸಂವಿಧಾನದಲ್ಲಿ ಇರುವ ಎಲ್ಲ ಆಶಯಗಳು ಬಸವತತ್ವದಲ್ಲಿ ಅಡಕವಾಗಿವೆ. ಬಸವಣ್ಣನ ಅನೇಕ ಅಂಶಗಳನ್ನು ಇಂದಿಗೂ ಅಳವಡಿಸಿಕೊಳ್ಳಲು ಸಾದ್ಯವಾಗಿಲ್ಲ’ ಎಂದರು.
ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಘಟಕದ ಅದ್ಯಕ್ಷ ಶ್ರೀನಾಥ ಪೂಜಾರಿ, ಪತ್ರಕರ್ತ ಇರ್ಫಾನ್ ಶೇಖ್, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅದ್ಯಕ್ಷ ವಿ.ಸಿ. ನಾಗಠಾಣ, ದಲಿತ ಮುಖಂಡ ಚಿದಾನಂದ ಚಲವಾದಿ, ಫರುಜಾನ್ ಪಾಸಾದಾರ್, ಪರುಶರಾಮ ಹೊಸಮನಿ ಇದ್ದರು.
Correct.
They are always thinking themselves as we superior over others , it’s a great tragedy of them in future generation
It’s their dream that they are superior over others it will not possible in coming generation
ಬಸವ ಜಯಂತಿ ಆಚರಣೆ ಯಲ್ಲಿ ರೇಣುಕರ ಫೋಟೋ ಇಡದಂತೆ ನಿರ್ಭoದಿಸಲು, ನ್ಯಾಯಾಲಯ ದಿಂದ ಆದೇಶ ಪಡೆ ದುಕೊಂಡು ಫೋಟೋ ಇಡ ದಂತೆ ಮಾಡಬೇಕು. ಬಸವಭಿಮಾನಿಗಳ ಮನಸ್ಸಿಗೆ ನೋವು ವುಂಟಾಗದಂತೆ ತಡೆಯಬೇಕು. ನ್ಯಾಯ ವಾದಿ ಮಿತ್ರರೇ ಈ ಬಗ್ಗೆ ಯೋಚಿಸಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿ
ಜೈ ಗುರು ಬಸವ.
ಭೖರೇಗೌಡರ ಮಾತುಗಳು ಮನುವಾದಿಗಳ ಮರ್ಮಕೆ ನೇರವಾಗಿ ಹೊಡೆತಹಾಕಿದ್ದಾರೆ. ನಾವು ಇಂದು ಎಲ್ಲಾ ಸಮಾಜದ ಪ್ರಮುಖರು ಮಠಾಧೀಶರು ಬಹಿರಂಗವಾಗಿ ತಿರುಗಿ ನಿಲ್ಲಬೇಕು. ನಮ್ಮ ಕಲಬುರ್ಗಿ ಯವರನ್ನು ಹಾಗು ಗೌರಿಲಂಕೇಶರನ್ನು ಕೊಲೆಗೖದ ಕೊಲೆಗಾರರೂ ಇವರೇ ಆಗಿದ್ದಾರೆ.