(ಏಪ್ರಿಲ್ 11 ಪ್ರಜಾವಾಣಿಯಲ್ಲಿ ಪ್ರಕಟವಾದ ಎಸ್ ಎಂ ಜಾಮದಾರ್ ಅವರ ಲೇಖನದ ಪೂರ್ಣ ಆವೃತ್ತಿ)
ಬೆಂಗಳೂರು
ʼವಚನ ದಶ೯ನʼ ಎಂಬ ಹೆಸರಿನ ಗ್ರಂಥವು ಬಿಜೆಪಿ ಮತ್ತು ಆರೆಸ್ಸೆಸ್ಸ್ ಪಟಾಲಂನಿಂದ ಕಳೆದ ವಷ೯ದ ಜುಲೈ ತಿಂಗಳಿಂದ ಡಿಸೆಂಬರ್ ವರೆಗೆ ಕನಾ೯ಟಕದ ಒಂಬತ್ತು ಸ್ಥಳಗಳಲ್ಲಿ ಮತ್ತು ದಿಲ್ಲಿಯಲ್ಲಿ ಅಪಾರ ಖಚಿ೯ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.
ಆ ಎಲ್ಲ ಸ್ಥಳಗಳಲ್ಲಿ ಸಂಘಪರಿವಾರದ ವಕ್ತಾರರು ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು. ಇವುಗಳನ್ನು ನೋಡುತ್ತ ಆ ಪುಸ್ತಕವನ್ನು ಓದಿದ ಓವ೯ ಚಾಣಾಕ್ಷನು ಸಾಮಾಜಿಕ ಜಾಲತಾಣದಲ್ಲಿ “ಚಾರ ಆಣೆ ಮುಗಿ೯ ಕೋ ಬಾರಾ ಆಣೆ ಮಸಾಲಾ” (ನಾಲ್ಕಾನೆ ಕೋಳಿಮಾಂಸಕ್ಕೆ ಹನ್ನೆರಡಾಣೆ ಮಸಾಲೆ} ಎಂದು ವ್ಯಂಗ್ಯವಾಡಿದ್ದಾನೆ.
ಅದು ಈ ಪುಸ್ತಕದ ಸಾರಾಂಶ, ಅದರ ಹಿಂದಿನ ಸಂಘಪರಿವಾರದ ದುರುದ್ದೇಶವನ್ನು ಧಾರಾಳವಾಗಿ ಬಿಂಬಿಸುತ್ತದೆ. ಅದರ ಕೆಲವು ಮಹತ್ವದ ಅಂಶಗಳನ್ನು ಈ ಲೇಖನವು ಚಚಿ೯ಸುತ್ತದೆ.
ಸಂಘಪರಿವಾರದ ದುರುದ್ದೇಶ
ಮೊದಲನೆಯದು, ವಚನ ದಶ೯ನ ಗ್ರಂಥದ ಪ್ರಧಾನ ಸಂಪಾಕರಾಗಿರುವ ಶ್ರೀ ಸದಾಶಿವಾನಂದ ಸ್ವಾಮಿಗಳು ಯಾವ ಲೇಖನವನ್ನು, ಪ್ರಸ್ತಾವನೆ ಅಥವಾ ಮುನ್ನುಡಿಯನ್ನು ಬರೆದಿಲ್ಲ. ಆದರೆ ಅವರ ಭಾವಚಿತ್ರ ಮಾತ್ರ ಇದೆ. ಕಾರಣ ಅವರೊಬ್ಬ ಲಿಂಗಾಯತ ಮುಖವಾಡದ ವೇದಾಂತಿ!
ಎರಡನೆಯದು, ಈ ಪುಸ್ತಕ ಬಿಡುಗಡೆ ಕಾಯ೯ಕ್ರಮಗಳಿಗೆ ಲಿಂಗಾಯತರು ಬಹುಸಂಖ್ಯಾತರಾಗಿರುವ ಕನಾ೯ಟಕದ ಒಂಬತ್ತು ಪ್ರಮುಖ ಜಿಲ್ಲೆಗಳನ್ನೇ ಆಯ್ಕೆ ಮಾಡಿ, ಗ್ರಂಥವನ್ನು ಬಿಡುಗಡೆ ಮಾಡಲು ಲಿಂಗಾಯತ ಸ್ವಾಮಿಗಳನ್ನೇ ಆಮಂತ್ರಿಸಿ, ಆದಷ್ಟು ಮಟ್ಟಿಗೆ ಲಿಂಗಾಯತರ ಸಭಾಭವನಗಳಲ್ಲಿಯೇ ಕಾಯ೯ಕ್ರಮ ನಡೆಸಲು ಯೋಜನೆ ತಯಾರಿಸಲಾಗಿತ್ತು. ಅದರ ಹಿಂದಿನ ಉದ್ದೇಶ ಲಿಂಗಾಯತರನ್ನು ಹಿಂದುತ್ವ ಮತ್ತು ಬಿಜೆಪಿಯತ್ತ ಸೆಳೆಯುವುದು.
ಮೂರನೆಯದು, ಮೇಲ್ನೋಟಕ್ಕೆ ʼವಚನ ದಶ೯ನʼ ಎಂಬ ಹೆಸರು ಹನ್ನೆರಡನೆಯ ಶತಮಾನದ ಶರಣರ ವಚನಗಳನ್ನು ಕುರಿತಾದ ಮತ್ತೊಂದು ಕೃತಿಯೆಂದು ಸಾಮಾನ್ಯ ಓದುಗನಿಗೆ ಅನಿಸುತ್ತದೆ. ಆದರೆ ಅದರ ಒಳಗಿನ ಹೂರಣವೆಲ್ಲ ಶರಣ ತತ್ವಗಳಿಗೆ ವಿರುದ್ಧವಾದದ್ದು. ಅದಕ್ಕಾಗಿಯೇ ಆ ರೀತಿಯ ವಂಚನೆಯ ಹೆಸರನ್ನು ಇಡಲಾಗಿದೆ.
ನಾಲ್ಕನೆಯದು, ಅದರ ಮುಖಪುಟದ ಮೇಲಿನ ಬಸವಣ್ಣನವರ ಚಿತ್ರವು ವಿಚಿತ್ರವಾಗಿದೆ. ಬಸವಣ್ಣನವರನ್ನು ಓವ೯ ತಪೋಮಗ್ನ ವೈದಿಕ ಋಷಿಯಂತೆ ಪದ್ಮಾಸನದಲ್ಲಿ ಕುಳ್ಳಿರಿಸಿ ಎರಡೂ ಕೈಗಳನ್ನು ಎಡಬಲ ಮಂಡಿಗಳ ಮೇಲೆ ಇಟ್ಟು ಯೋಗಮುದ್ರೆಯಂತೆ ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಚಿತ್ರಿಸಲಾಗಿದೆ. ಲಿಂಗವನ್ನು ಎದೆಯ ನಡುವೆ ಬಿಗಿಯಲಾಗಿದೆ. ಅವರ ಎರಡೂ ಕಣ್ಣುಗಳು ಗಟ್ಟಿಯಾಗಿ ಮುಚ್ಚಿವೆ. ಗೌರವಣ೯ದ ಬಸವಣ್ಣನವರನ್ನು ತಿಳಿನೀಲ ಬಣ್ಣದಲ್ಲಿ ಜಟಾಧಾರಿ ಶಿವನ ಶೈಲಿಯಲ್ಲಿ ತೋರಿಸಲಾಗಿದೆ. ಇದು ಈಗ ಚಾಲ್ತಿಯಲ್ಲಿರುವ ಬಸವಣ್ಣನವರ ಅಥವಾ ಯಾವುದೇ ಶರಣರ ಚಿತ್ರವನ್ನು ಹೋಲುವುದೇ ಇಲ್ಲ.
ಈವರೆಗೆ ಹಣೆಯ ಮೇಲೆ ಮೂರು ಬೆರಳಿನ ವಿಭೂತಿ, ಎಡಗೈಯಲ್ಲಿ ಇಷ್ಟಲಿಂಗ, ಅಧ೯ತೆರೆದ ಕಣ್ಣುಗಳ ಇಷ್ಟಲಿಂಗಾಚ೯ಕ ಬಸವಣ್ಣನವರ ಚಿತ್ರವನ್ನು ನೋಡಿಕೊಂಡು ಬೆಳೆದಿದ್ದ ಲಿಂಗಾಯತರನ್ನು ಈ ಚಿತ್ರವು ದಿಗ್ಬ್ರಮೆಗೊಳಿಸಿತು. ಮೇಲಿನ ಬಲಮೂಲೆಯಲ್ಲಿ ಚಿತ್ತಿಸಿದ ಬಾಣಹೊತ್ತ ಬಿಲ್ಲು ‘ಜೈ ಶ್ರೀರಾಮʼ ಘೋಷಣೆಯಂತೆ ಭಾಸವಾಯಿತು. ಬಸವಣ್ಣ ತಿಳಿನೀಲ ವಣ೯ದ ಜಟಾಧಾರಿ ಶಿವನಂತೆ ಕಾಣುತ್ತಾರೆ. ಈ ವಣ೯ಚಿತ್ರದ ಹಿಂದೆ ಅಡಗಿರುವ ದುರುದ್ದೇಶವೆಂದರೆ:

(೧) ಲಿಂಗಾಯತರು ಹಿಂದೂ ಶೈವರು ಎಂಬಂತೆಯೂ, ಮತ್ತು (೨) ಲಿಂಗಾಯತರು ವೈದಿಕರ ಸಾಕಾರ ಶಿವನ ಆರಾಧಕರು ಎನ್ನುವಂತೆಯೂ ಚಿತ್ರಿಸಿ ಲಿಂಗಾಯತರನ್ನು ಹಿಂದುತ್ವದ ಪರಿಧಿಯಲ್ಲಿ ಬಿಂಬಿಸುವುದು ಸಂಘಪರಿವಾರದವರ ವ್ಯಥ೯ ಪ್ರಯತ್ನವಾಗಿದೆ.
ಜಾಗ್ರತ ಪ್ರಜ್ಞೆ
ಈ ಹುನ್ನಾರಗಳನ್ನು ಲಿಂಗಾಯತರು ಬಹುಬೇಗ ಅಥ೯ಮಾಡಿಕೊಂಡರು. ಅದು ಪ್ರಜ್ಞಾವಂತ ಲಿಂಗಾಯತರಲ್ಲಿ ಈ ಪುಸ್ತಕವನ್ನು ತಕ್ಷಣ ಓದುವ ಜಿಜ್ಞಾಸೆ ಮೂಡಿಸಿತು. ಅನೇಕರು ಆ ಪುಸ್ತಕವನ್ನು ಅದು ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ಕೊಂಡುಕೊಂಡು ಓದಿದರು, ಇತರರಿಗೆ ಹೇಳಿದರು. ಲಿಂಗಾಯತ ಪ್ರಜ್ಞೆ ಜಾಗ್ರತವಾಯಿತು.
ಐದನೆಯದು, ಬೆಂಗಳೂರಲ್ಲಿ ಈ ಗ್ರಂಥವನ್ನು ಲಿಂಗಾಯತ ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿಗಳು ಲೋಕಾಪ೯ಣೆ ಮಾಡಬೇಕಿತ್ತು. ಆದರೆ ಲಿಂಗಾಯತರು ಆರೆಸ್ಸೆಸ್ಸಿನ ಕುತಂತ್ರ ವಿವರಿಸಿ, ಬೇಲಿಮಠದ ಶ್ರೀಗಳು ಕಾಯ೯ಕ್ರಮಕ್ಕೆ ಹೋಗದಂತೆ ನೋಡಿಕೊಂಡರು. ಅವರ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಬರ ಟು ನಾಯಕ ಶ್ರೀ ಹೊಸಬಾಳೆಯವರು ಅದನ್ನು ಬಿಡುಗಡೆ ಮಾಡಿದವರು. ಅಂದು ವಿಚಿತ್ರ ಮತ್ತು ತೀವ್ರ ಪ್ರಚೋದನಕಾರಿ ಭಾಷಣ ಮಾಡಿದವರೆಂದರೆ ಆರೆಸ್ಸಸ್ ನ ಬೆಂಗಳೂರು ಕಚೇರಿಯ ಮುಕುಂದ ಅವರು.
ಇದೇ ರೀತಿ ಹುಬ್ಬಳ್ಳಿಯಲ್ಲಿ ಶ್ರೀ ಮೂರುಸಾವಿರಮಠದ ಸ್ವಾಮಿಗಳು, ಕಲಬುಗಿ೯ಯಲ್ಲಿ ಪೂಜ್ಯ ಶರಣಬಸವಪ್ಪನವರು, ಬಿಜಾಪುರದಲ್ಲಿ ಜ್ಞಾನಯೋಗಾಶ್ರಮದ ಸ್ವಾಮಿಗಳು ಆ ಪುಸ್ತಕವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಅವರೆಲ್ಲರೂ ದೂರ ಉಳಿದರು. ಸಭಿಕರಿಲ್ಲದೆ ಬಹುತೇಕ ಕಾಯ೯ಕ್ರಮುಗಳು ವಿಫಲವಾದವು. ಆದಾಗ್ಯೂ ಬಿ.ಎಲ್. ಸಂತೋಷ ಅವರು ಕಲಬಗಿ೯ಯಲ್ಲಿ, ಶಂಕರಾನಂದರು ಬಿಜಾಪುರದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದರು.

ಆರನೆಯದು, ಈ ಗ್ರಂಥವನ್ನು ಪ್ರಕಟಿಸಿದವರು ಸಂಘಪರಿವಾರದ ಪ್ರಜ್ಞಾ ಪ್ರಕಾಶನ ಸಂಸ್ಥೆ ಮತ್ತು ಅಯೋಧ್ಯಾ ಪ್ರಕಾಶನ. ನೀರಿನಂತೆ ಹಣವನ್ನು ಖಚು೯ ಮಾಡಿದವರು, ಈ ಎಲ್ಲ ಕಾಯ೯ಕ್ರಮಗಳ ಸಂಪೂಣ೯ ಜವಾಬ್ದಾರಿಯನ್ನು ನಿವ೯ಹಿಸಿದವರು, ಪುಸ್ತಕದಲ್ಲಿನ ಲೇಖನಗಳನ್ನು ಬರೆದವರೆಲ್ಲರೂ ಬಲಪಂಥೀಯ ಕಟ್ಟರ್ ಅನುಯಾಯಿಗಳೆಂದು ಎಂದು ಬೇರೆ ಹೇಳಬೇಕಿಲ್ಲ. ದಿಲ್ಲಿಯ ಇದೇ ಕಾಯ೯ಕ್ರಮಕ್ಕೆ ಬಿಜೆಪಿಯಿಂದ ಆರಿಸಿ ಹೋದ ಕೇಂದ್ರ ಸಕಾ೯ರದಲ್ಲಿ ರೇಲ್ವೆಯ ರಾಜ್ಯ ಸಚಿವರಾಗಿರುವ ಲಿಂಗಾಯತರಾದ ಶ್ರೀ ಸೋಮಣ್ಣನವರನ್ನೇ ಆಯ್ಕೆಮಾಡಲಾಗಿತ್ತು. ಲಿಂಗಾಯತರನ್ನು ಬಿಟ್ಟರೆ ಈ ಪುಸ್ತಕವನ್ನು ಬಿಡುಗಡೆ ಮಾಡಲು ಬೇರೆ ಯಾವ ಯೋಗ್ಯರೂ ಸಿಗದಿದ್ದುದು ಶೋಚನೀಯ!
ಭಾರತೀಯ ಜ್ಞಾನ ಪರಂಪರೆ?
ಈ ಗ್ರಂಥದಲ್ಲಿನ ಒಟ್ಟು ಇಪ್ಪತ್ತು ಲೇಖನಗಳಲ್ಲಿ ಐದು ಲೇಖಕರು ಲಿಂಗಾಯತರು. ಅವರಲ್ಲಿ ಡಾ. ಸವದತ್ತಿಮಠರು ಜಾತಿಯಿಂದ ಮತ್ತು ಪ್ರವೃತ್ತಿಯಿಂದ ವೀರಶೈವರಾಗಿದ್ದು ದೀಘ೯ಕಾಲದಿಂದ ಶರಣರ ನಿಂದೆಗೆ, ವಚನಗಳ ತಿರುಚುವಿಕೆಗೆ ಕುಪ್ರಸಿದ್ಧರಾಗಿರುವವರು. ಆದರೆ ವಚನ ದಶ೯ನದಲ್ಲಿನ ಅವರ ಲೇಖನದಲ್ಲಿ ಯಾವುದೇ ಪ್ರಚೋದನಕಾರಿ ಅಂಶಗಳೇ ಇಲ್ಲದಿರುವುದು ಸೋಜಿಗ! ಉಳಿದ ನಾಲ್ಕಾರು ಲಿಂಗಾಯತರ ಲೇಖನಗಳಲ್ಲಿ ಡಾ. ಡೋಣೂರ ಅವರ ಲೇಖನದಲ್ಲಿ ಎರಡೇ ಎರಡು ವಾಕ್ಯಗಳನ್ನು ಬಿಟ್ಟರೆ ಉಳಿದ ಅಂಶಗಳು ಪ್ರಶ್ನಾಹ೯ವಾಗಿಲ್ಲ. ವಚನ ದಶ೯ನದ ಉಳಿದ ಪ್ರಮುಖ ವಕ್ತಾರರೆಲ್ಲರೂ ಲಿಂಗಾಯತೇತರ ಉತ್ತಮ ಜಾತಿಯವರು.
ಸಮಗ್ರ ಪುಸ್ತಕವನ್ನು ಓದದೆ ಕೇವಲ ಮಲ್ಲೇಪುರಂ ಜಿ. ವೆಂಕಟೇಶ ಅವರ ಮುನ್ನುಡಿಯನ್ನು ಓದಿ ಶುಭಾಶಯಗಳನ್ನು ಕಳಿಸಿದವರು ತುಮಕೂರಿನ ಪ್ರಸಿದ್ದ ಸಿದ್ಧಗಂಗಾ ಮಠದ ಶ್ರೀಗಳು. ಅದು ಸಂಘ ಪರಿವಾರಕ್ಕೆ ಏಕೆ ಮುಖ್ಯವೆಂದರೆ ಆ ಮಠದ ಹೆಸರೇ ಲಿಂಗಾಯತರನ್ನು ಮಂತ್ರಮುಗ್ದರನ್ನಾಗಿಸುತ್ತದೆ!

ಈ ಗ್ರಂಥದ ಮಹತ್ವದ ವಾದಗಳಿಗೆ ಸಂಬಂಧಿಸಿದಂತೆ, ವಚನ ದಶ೯ನಕ್ಕೆ ಬರೆದ ಮುನ್ನುಡಿಯಲ್ಲಿ ಡಾ.ಮಲ್ಲೇಪುರಂ ವೆಂಕಟೇಶರು ಹೀಗೆ ಹೇಳಿದ್ದಾರೆ:
(೧) “ವಚನ ದಶ೯ನʼ ಈ ಗ್ರಂಥದಲ್ಲಿ ಸಂಕಲಿಸಿರುವ ಲೇಖನಗಳು ಸಮಾಜವಾದಿ ಮತ್ತು ಮಾಕ್ಸ೯ವಾದಿ ದೃಷ್ಟಿಕೋನಗಳಿಗಿಂತ ಸಂಪೂಣ೯ವಾಗಿ ಭಿನ್ನವಾಗಿ ಸಾಗಿವೆ”. ಅಂದರೆ ಈ ಲೇಖನಗಳು ಸಮಾಜವಾದದ ದೃಷ್ಟಿಕೋನವನ್ನು ಖಂಡಿಸುವುದಕ್ಕಾಗಿ ಬರೆಯಲ್ಪಟ್ಟಿವೆ.
(೨) ಮುಂದುವರೆದು, ಡಾ. ವೆಂಕಟೇಶ ಅವರು ಹೇಳುತ್ತಾರೆ: “ನಾವು ಈಗ ʼಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲೂ ಕನ್ನಡನಾಡಿನ ಅನುಭಾವಿಕ ಹಿನ್ನೆಲೆಯಲ್ಲೂ ವಚನಸಾಹಿತ್ಯವನ್ನು ಅನುಸಂಧಾನಿಸುವುದು ಅಗತ್ಯವಿದೆ”.
ಆದರೆ, ಡಾ.ವೆಂಕಟೇಶ ಅವರು “ಭಾರತೀಯ ಜ್ಞಾನ ಪರಂಪರೆ” ಎಂದರೇನು ಎಂಬುದನ್ನು ವಿಶದಪಡಿಸಿಲ್ಲ. ಸಾಮಾನ್ಯವಾಗಿ, (ತಕ೯, ನ್ಯಾಯ ಮೀಮಾಂಶೆಗಳನ್ನು ಬದಿಗಿಟ್ಟು) ಭಾರತೀಯ “ಜ್ಞಾನ ಪರಂಪರೆ” ಎಂದರೆ ಯಾವಾಗಲೂ ವೇದಗಳು, ಪುರಾಣಗಳು, ಹಿಂದೂ ಧಮ೯ಶಾಸ್ತ್ರಗಳು, ಆಗಮಗಳು, ರಾಮಾಯಣ ಮಹಾಭಾರತಗಳು ಮತ್ತು ವೇದಾಂತಿಗಳ ಭಾಷೆಯಲ್ಲಿ ಇಲ್ಲವೆ ಅವರ ಶೈಲಿಯೆಲ್ಲಿಯೇ ಚಚೆ೯, ವಾದವಿವಾದಗಳು, ಅನುಸಂಧಾನಗಳು ಇರಬೇಕು. ಚವಿ೯ತ ಚವ೯ಣವನ್ನೇ ಮತ್ತೆ ಮತ್ತೆ ಕುಟ್ಟುತ್ತಿರಬೇಕು! ವೇದ ಪ್ರಮಾಣ್ಯವಲ್ಲದ್ದು ʼಭಾರತೀಯ ಪರಂಪರೆʼ ಆಗಲಾರದು.
ಪುಂಡರ ಗೋಷ್ಟಿ
ಹಾಗಾದರೆ, “ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಟಿʼ ಎಂದಿರುವ ಅಲ್ಲಮ ಪ್ರಭುಗಳ ಮಾತು ಯಾವ ಪರಂಪರೆಯದು? ಅದೇ ರೀತಿ, “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗು ಕೊಯ್ಯುವೆ, ತಕ೯ದ ಬೆನ್ನ ಭಾರವನೆತ್ತುವೆ” ಎಂಬ ಬಸವಣ್ಣನವರ ವಚನ ಯಾವ ಪರಂಪರೆಯದು? ಇಂತಹ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಚನಗಳ ಮೂಲಕ ಲಿಂಗಾಯತ ಶರಣರು ವೇದಗಳನ್ನು ಒಪ್ಪಲಿಲ್ಲ ಮತ್ತು ಅವುಗಳಿಗೆ ಪಯಾ೯ಯವಾದ ಹೊಸ ಸಿದ್ಧಾಂತ ಮತ್ತು ಆಚರಣೆಗಳನ್ನು ನಿಮಿ೯ಸಿದರು.
ಇಷ್ಟಾಗಿಯೂ ಶರಣ ಧಮ೯ವನ್ನೂ ವೈದಿಕ ಹಿನ್ನೆಲೆಯಲ್ಲೇ ವಿಮಶಿ೯ಸಬೇಕೇಂಬ ಕಟ್ಟುಕಟ್ಟಳೆಗೆ ಆಧಾರವೇನೆಂಬುದನ್ನು ಯಾರೂ ಹೇಳಿಲ್ಲ. ಅದೇ ಡಾ. ಮಲ್ಲೇಪುರಂ ವೆಂಕಟೇಶ ಅವರು ಹೇಳಿದ “ಕನ್ನಡ ನಾಡಿನ ಅನುಭಾವಿಕ ಹಿನ್ನೆಲೆ”. ಅದನ್ನೇಕೆ ಖಂಡಿಸಬೇಕು? ಮತ್ತು ಆ ಅಧಿಕಾರವನ್ನು ಈ ಸ್ವಯಂಘೋಷಿತ ನೈತಿಕ ಗುತ್ತಿಗೆದಾರರಿಗೆ ಯಾರು ನೀಡಿದರೆಂದು ಪ್ರಶ್ನಿಸಲೇ ಬೇಕಾಗಿದೆ.
ಡಾ. ಮಲ್ಲೇಪುರಂ ವೆಂಕಟೇಶ ಅವರ ಮತ್ತು ಡಾ. ರಾಜಾರಾಮ ಹೆಗಡೆಯವರ ಇನ್ನೊಂದು ಮೊಂಡವಾದವೆಂದರೆ ಸಮಾಜದಾದವು ಪರಕೀಯದು, ವಿದೇಶದಿಂದ ಬಂದದ್ದು ಅದು ಭಾರತೀಯ ಜ್ಞಾನ ಪರಂಪರೆಗೆ ಹೊರಗಿನದು ಅದಕ್ಕೆ ಮಹತ್ವ ಕೊಡಬಾರದು. ಈ ವಾದದ ವಿಚಿತ್ರತೆಯನ್ನು ಈ ಗ್ರಂಥದ ʼಸಂಪಾದಕೀಯʼ ಲೇಖನದಲ್ಲಿ ನೋಡಬಹುದು.
ಸಂಪಾದಕೀಯ ಲೇಖನವು ಮಹಾ ಉಪನಿಷತ್ತಿನ “ಆನೋ ಭದ್ರಾ: ಕೃತವೋ ಎಂತು ವಿಸ್ವತಃ” ಎಂಬ ಉದ್ಧರಣೆಯಿಂದ ಪ್ರಾರಂಭವಾಗುತ್ತದೆ. ಅದರ ಪ್ರಕಾರ ಎಲ್ಲ ಶ್ರೇಷ್ಠ ವಿಚಾರಗಳು ವಿಶ್ವದ ಎಲ್ಲ ಕಡೆಗಳಿಂದಲೂ ಸ್ವಾಗತ” ಎಂದಾಗುತ್ತದೆ. ಇದರ ಅಥ೯ವನ್ನು ತಿಳಿಯದ ಗಾಂಪರಂತೆ ಈ ಗ್ರಂಥದ ಸಂಪಾದಕ ಮಂಡಲಿಯು ಕೆಲಸ ಮಾಡಿದೆ ಎಂಬುದು ಸ್ಪಷ್ಟ!

ಮಾಕ್ಸ೯ವಾದ
ಇವರಿಬ್ಬರ ಎರಡನೆಯ ವಾದವೆಂದರೆ ಮಾಕ್ಸ೯ವಾದವು ವಿದೇಶಿ ಹಿನ್ನೆಲೆಯದು, ಆದ್ದರಿಂದ ಅದು ಭಾರತಕ್ಕೆ ಅನ್ವಯಿಸುವುದಿಲ್ಲ ಎಂದಾಗಿದೆ. ವಾಸ್ತವಿಕವಾಗಿ ನೋಡಿದರೆ, ಹನ್ನೆರಡನೆಯ ಶತಮಾನದಲ್ಲಿ ಕಾಲ್೯ ಮಾಕ್ಸ೯ನಾಗಲಿ, ಎಂಗೆಲ್ಸನಾಗಲಿ, ಲೆನಿನ್, ಸ್ಟಾಲಿನ್ ಮತ್ತು ಮಾವೋತ್ಸೆ ತುಂಗನಾಗಲಿ, ಫಿಡೆಲ್ ಕ್ಯಾಸ್ಟ್ರೊ ಆಗಲಿ ಇರಲಿಲ್ಲ. ಅವರೆಲ್ಲ ಹುಟ್ಟಿದ್ದು ಬೆಳೆದದ್ದು ಮಾಕ್ಸ೯ವಾದಿ ಪ್ರಯೋಗಗಳು ನಡೆದಿದ್ದು ಹತ್ತೊಂಬತ್ತನೆಯ ಶತಮಾನದ ಉತ್ತರಾಧ೯ದಲ್ಲಿ ಮತ್ತು ಆ ನಂತರ. ಕಾಲಮಾನದ ಅರಿವೂ ಈ ಲೇಖಕರಿಗೆ ಇದ್ದಂತೆ ಕಾಣುವುದಿಲ್ಲ.
ಭಾರತದ ನೆಲದಲ್ಲಿಯೇ ಹುಟ್ಟಿದ ವೈದಿಕವಲ್ಲದ ಯಾವುದೆ ಐತಿಹಾಸಿಕ, ಆಥಿ೯ಕ, ಸಾಮಾಜಿಕ, ರಾಜಕೀಯ ವಿಚಾರಗಳು ʼಭಾರತೀಯ ಪರಂಪರೆʼಗೆ ವಿರುದ್ಧವಾದದ್ದೆಂದೂ ಅಂತಹ ವಿಚಾರ ಮತ್ತು ಸಿದ್ಧಾಂತಗಳನ್ನು ಹತ್ತಿಕ್ಕಬೇಕು ಎನ್ನುವುದು ಇಂದಿನ ಈ ಪುಸ್ತಕ ಬರೆದವರ, ಪ್ರಕಟಿಸಿದವರ ಮತ್ತು ಬೆಂಬಲಿಸುವವರ ವಾದವಾಗಿದೆ. ಅದನ್ನೇ ಅವರ ಹಿಂದಿನವರೂ ಬೌದ್ಧ ಧಮ೯ದ ವಿರುದ್ಧ, ಜೈನ ಧಮ೯ದ ವಿರುದ್ಧ, ಸಿಖ್ಖ ಧಮ೯ದ ವಿರುದ್ಧ ಈಗ ಲಿಂಗಾಯತ ಧಮ೯ದ ವಿರುದ್ಧ ಮಾಡುತ್ತಾ ಬಂದಿರುವುದು ಒಂದು ಐತಿಹಾಸಿಕ ದುರಂತ.
ಈಗ ಇದೇ ಜನರು ಹೇಳುತ್ತಿರುವ ಲಿಂಗಾಯತ ಧಮ೯ದ ಪ್ರಮುಖ ಸಿದ್ಧಾಂತದ ಬಗ್ಗೆ ನೋಡೋಣ. ಮಾಕ್ಸ೯ವಾದವು ಯುರೋಪಿನಲ್ಲಿ ಹುಟ್ಟುವ ಎಂಟು ನೂರು ವಷ೯ ಮೊದಲೇ ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಕ್ರಾಂತಿಯ ಮೂಲ ತತ್ವಗಳಲ್ಲಿ ಸಮತಾವಾದದ ಬೀಜಗಳನ್ನು ಕಾಣಬಹುದು.
ಸಮಸ್ತ ಮಾನವ ಸಮಾನತೆ, ಸ್ತ್ರೀ ಸಮಾನತೆ, ವಿಶ್ವ ಬಂಧುತ್ವ, ವ್ಯಕ್ತಿ ಸ್ವಾತಂತ್ರ‍್ಯ, ದೈಹಿಕ ದುಡಿಮೆಯ ಮಹತ್ವ (ಕಾಯಕ) ಮತ್ತು ಗಳಿಸಿದ ಸಂಪತ್ತಿನ ಸಾಮಾಜಕೀಕರಣ (ದಾಸೋಹ) ತತ್ವಗಳು ಮಾಕ್ಸ೯ವಾದದ ಮೂಲ ಅಂಶಗಳು. ಈ ರೀತಿಯ ಸಮತಾವಾದ ವಿದೇಶದಿಂದ ಬರಲಿಲ್ಲ. ಭಾರತದಲ್ಲಿಯೇ, ಕನ್ನಡದ ಗಂಡು ನೆಲದಲ್ಲಿಯೇ ಹುಟ್ಟಿ ಬೆಳೆಯಿತು! ಇಲ್ಲಿನ ಆಗಿನ ಪರಂಪರಾವಾದಿಗಳ ಕುತಂತ್ರಗಳೇ ಅದು ಕನಾ೯ಟಕವನ್ನು ಬಿಟ್ಟು ಭಾರತದ ಉಳಿದ ಕಡೆಗಳಲ್ಲಿ ಹರಡದಂತೆ ಮತ್ತು ವಿದೇಶಗಳಿಗೆ ತಲುಪದಂತೆ ಮಾಡಿದವು ಮತ್ತು ಇಂದಿಗೂ ರಾಜಾರಾಮ ಹೆಗಡೆ ಮತ್ತು ವೆಂಕಟೇಶ ತರಹದ ಮನೋಭಾವದವರು ಅದನ್ನೇ ಮಾಡುತ್ತಿದ್ದಾರೆ ಎಂದರೆ ಅತಿಶಯವಲ್ಲ. ಹೀಗೆ ಶರಣರ ನೈಜ ಭಾಷೆಯಲ್ಲಿ ಹೇಳಿದರೆ, ಅದು ಮಾಕ್ಸ೯ವಾದ, ಅದನ್ನು ಖಂಡಿಸಲೇಬೇಕು ಎನ್ನುವುದು ರಾಜರಾಮ ಹೆಗಡೆ ಮತ್ತು ಅವರ ಪಟಾಲಂನ ಡಂಕಿನ ಜಳ್ಕಿ, ಬಾಲಗಂಗಾಧರ ಮತ್ತು ಇತ್ತೀಚೆಗೆ ಆ ಗುಂಪಿಗೆ ಸೇರುತ್ತಿರುವ ವೀಣಾ ಬನ್ನಂಜೆ, ಮಲ್ಲೇಪುರಂ ತರಹದವರ ವಾದ. ಆ ಅಪಥ್ಯವೆ ʼಶರಣ ದಶ೯ನʼದ ಹುರುಳು!
ಮೊದಲ ಸಂಸತ್
ನಮ್ಮ ಇಂದಿನ ಪ್ರಧಾನಿಗಳು ಪದೇ ಪದೇ ವಿದೇಶಗಳಲ್ಲಿ, ಸಂಸತ್ತಿನಲ್ಲಿ, ವಿಜ್ಞಾನ ಭವನದಲ್ಲಿ ಹೇಳುತ್ತಿರುವಂತೆ ಪ್ರಜಾಪ್ರಭುತ್ವದ ನೆಲೆಗಟ್ಟಾದ ಪಾಲಿ೯ಯಮೆಂಟ್ ಪದ್ಧತಿ ʼಅನುಭವ ಮಂಟಪʼದ ರೂಪದಲ್ಲಿ ಮೊಟ್ಟಮೊದಲೆ ಜಗತ್ತಿನಲ್ಲಿ ಸ್ಥಾಪನೆಯಾದದ್ದು ಕ್ರಿ.ಶ.೧೧೫೫ರಲ್ಲಿ ಭಾರತದಲ್ಲಿ ಅದೂ ಕನಾ೯ಟಕದಲ್ಲಿ. ಇದು ಪರಂಪರಾವಾದಿಗಳಿಗೆ ನುಂಗಲಾಗದ ಬಿಸಿತುಪ್ಪವಾಗಿದೆ! ಇಂಗ್ಲೆಂಡಿನ ಮ್ಯಾಗ್ನಾ ಕಾಟಾ೯ ಅಸ್ತಿತ್ವಕ್ಕೆ ಬಂದಿದ್ದು ಕ್ರಿ.ಶ.೧೨೧೫ರಲ್ಲಿ. ಆದ್ದರಿಂದ ಪ್ರಧಾನ ಮಂತ್ರಿಗಳು ಹೇಳಿತ್ತಿರುವಂತೆ (ಕೆಲವು ಅಂಶಗಳಿಗೆ ಸೀಮಿತವಾಗಿ) ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾದದ್ದು ಇಂಗ್ಲೆಂಡಿನಲ್ಲಿ ಅಲ್ಲ ಕನಾ೯ಟಕದಲ್ಲಿ!
ಶರಣರು ವೈದಿಕ ಧಮ೯ವನ್ನು ಒಪ್ಪಲಿಲ್ಲ. ಆದ್ದರಿಂದ ಶರಣ ಧಮ೯ವನ್ನು ಸ್ವಲ್ಪಾದರೂ ನಂಬುತ್ತಿರುವ ಲಿಂಗಾಯತರನ್ನು ಹೇಗಾದರೂ ಮಾಡಿ ʼಹಿಂದೂʼ ಅಥವಾ ‘ವೈದಿಕʼ ಪರಿಧಿಯಲ್ಲಿ ತರಬೇಕು. ಅದೇ ಉದ್ದೇಶವು ಸಂಘಪರಿವಾರದ ಈ ಎಲ್ಲ ಸಕ೯ಸ್ಸಗಳಿಗೆ ಕಾರಣವಾಗಿದೆ. ಅವರಿಗೆ ಕೆಲವು ರಾಜಕಾರಣಿ ತರಹದ ಲಿಂಗಾಯತ ಮಠಾಧೀಶರು ಮತ್ತು ಪಂಚಾಚಾಯ೯ರೆಂಬ ಮೂಲತಃ ವೈದಿಕರಾಗಿದ್ದ ವೀರಶೈವ ಪಂಥದವರೂ ಸಾಥ ನೀಡುತ್ತಿದ್ದಾರೆ. ಇಲ್ಲಿ ಲೇಖನಗಳನ್ನು ಬರೆದ ಲಿಂಗಾಯತರು ಮತ್ತು ಗೌರವ ಸಂಪಾದಕ ಸ್ವಾಮಿಗಳು ಅದೆ ಗುಂಪಿಗೆ ಸೇರಿದವರು ಎಂಬುದನ್ನು ನೆನಪಿಡಬೇಕು.
ಭಾಷಾಂತರವಂತೆ?

ಮುಂದುವರೆದು, ವೀಣಾ ಬನ್ನಂಜೆ, ನಾ. ಮೊಗಸಾಲೆ, ಪೇಜಾವರ ಶ್ರೀ, ಮಲ್ಲೆಪುರಂ ವೆಂಕಟೇಶ ಅವರ ಪ್ರಕಾರ ಶರಣರ ವಚನಗಳು ವೈದಿಕರ ಉಪನಿಷತ್ತುಗಳ ಮತ್ತು ವೇದಗಳ ಕನ್ನಡದ ಭಾಷಾಂತರವಾಗಿವೆ. ಹಾಗಾದರೆ, ಈ ಭಾಷಾಂತರಗಳಲ್ಲಿ ವೇದಗಳನ್ನು ನಿಂದಿಸುವ, ಆಗಮಗಳನ್ನು ತಿರಸ್ಕರಿಸುವ, ಶಾಸ್ತ್ರಗಳನ್ನು ವಿಮಶಿ೯ಸುವ, ಪುರಾಣಗಳನ್ನು ಪುಂಡರ ಗೋಷ್ಟಿಗಳೆಂದು ಕರೆಯುವ ವಚನಗಳು ಯಾವ ವೇದಗಳ, ಉಪನಿಷತ್ತುಗಳ ಶ್ಲೋಕಗಳ ಭಾಷಾಂತರಗಳಾಗಿವೆ ಎಂಬುದನ್ನು ಇದರಲ್ಲಿ ಯಾರೂ ಹೇಳುವುದಿಲ್ಲ.
ಹದಿನೈದನೆಯ ಶತಮಾನದಲ್ಲಿ ವಚನಗಳ ಸಂಕಲನಗಳು (ಶೂನ್ಯ ಸಂಪಾದನೆಗಳು) ಆದಾಗ ಸುಮಾರು ೬೪೮ ಸಂಸ್ಕೃತ ಶ್ಲೋಕಗಳನ್ನು ವಚನಗಳಲ್ಲಿ ಸೇರಿಲಾಗಿದೆ. ವಿಚಿತ್ರವೆಂದರೆ ಆ ಶ್ಲೋಕಗಳನ್ನು ಕಿತ್ತು ಹಾಕಿದರೂ ಆಯಾ ವಚನಗಳ ಅಥ೯ದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಇವುಗಳನ್ನು ತಮ್ಮ ವಾದಗಳಿಗೆ ಪುಷ್ಟಿ ನೀಡಲು ಕೆಲಸಲ ಶರಣರು ಕ್ವಚಿತ್ತವಾಗಿ ಬಳಿಸಿದ್ದಾರೆ. ಅಂತಹ ಅತಿ ಸಣ್ಣ ಪ್ರಮಾಣದ ವಚನಗಳನ್ನು ಓದಿ ಇಂಥ ಕ್ಷುಲ್ಲಕ ವಾದಗಳನ್ನು ಹುಟ್ಟಿಹಾಕುವುದು ಇಲ್ಲಿನ ಲೇಖಕರ ಗುಣವಾಗಿದೆ.
ಇದೇ ಪಟಾಲಂನ ಇನ್ನೊಂದು ವಿಕೃತ ವಾದವಿದೆ. ಅನುಭವ ಮಂಟಪವೆಂಬ ಸಂಸ್ಥೆ ಅಥವಾ ಗೋಷ್ಟಿಗಳು ಹನ್ನೆರಡನೆಯ ಶತಮಾನದಲ್ಲಿ ಇರಲೇ ಇಲ್ಲ. ಅದು ಹದಿನಾರನೆಯ ಶತಮಾನದ ಸಂಪಾದನಾಕಾರರು ಹುಟ್ಟು ಹಾಕಿದ ಕಪೋಲ ಕಲ್ಪಿತ ಸಂಗತಿ ಎಂಬುದು ವೀಣಾ ಬನ್ನಂಜೆಯವರ ವಾದವಾಗಿದೆ. ಆ ವಾದವನ್ನು ಆಧಾರ ಸಹಿತವಾಗಿ ೧೯೪೦ ದಶಕದಲ್ಲಿ ತಿರಸ್ಕೃತವಾದ ಮೇಲೆ ಅದಕ್ಕೆ ಸಂಬಂಧಿಸಿ ಯಾವುದೋ ಒಂದು ಪುಸ್ತಕವನ್ನೋ ಲೇಖನವನ್ನೋ ಓದಿ ವೀಣಾ ಅವರು ಈಗ ಮತ್ತೆ ಎತ್ತಿದ್ದಾರೆ. ಅದಕ್ಕೆ ಅವರಿಗೆ ತಕ್ಕ ಉತ್ತರವೂ ದೊರೆತಿದ್ದರಿಂದ ಅವರು ತೆಪ್ಪಗಾಗಿದ್ದಾರೆ.
ವೀಣಾ ಬನ್ನಂಜೆ ಅವರ ಮತ್ತೊಂದು ವಾದವೆಂದರೆ, ಶರಣರ ತತ್ವಗಳು, ೭ನೆಯ ಶತಮಾನದಿಂದ ಹದಿನೈದನೆಯ ಶತಮಾನಗಳಲ್ಲಿ ನಡೆದ ಅನೇಕ ಭಕ್ತಿ ಪಂಥದ ಚಳುವಳಿಗಳ ಒಂದು ಉದಾಹರಣೆ ಮಾತ್ರ ಆಗಿದೆ. ಶರಣರು ಭಕ್ತಿಯನ್ನೂ ಆಳವಾಗಿ ಬೊಧಿಸಿದರು. ಆದರೆ ಅದು ಅಲ್ಲಿಗೇ ಸೀಮಿತವಾಗಲಿಲ್ಲ. ಯಾವ ಭಕ್ತಿ ಪಂಥವು ಬೀದಿಗಿಳಿದು ಹೊಸ ಧಮ೯ವನ್ನೇ ಕಟ್ಟಲು ಪ್ರಯತ್ನಿಸಿತು? ಸಿಖ್ಖ ಧಮ೯ದಲ್ಲಿ ಅಗಾಧವಾದ ಭಕ್ತಿಯ ಸೆಲೆಯಿದೆ. ಸಿಖ್ಖರ ಧಮ೯ಗ್ರಂಥ ʼಗುರುಗ್ರಂಥʼ ಸಾಹಿಬದಲ್ಲಿ ಭಕ್ತಿಪಂಥದ ಪ್ರಮುಖ ಕಬೀರದಾಸ, ರವಿದಾಸ, ಸೂರದಾಸ, ಗೀತಗೋವಿಂದವನ್ನು ಬರೆದ ಜಯದೇವ, ವಾರಕರಿ ಪಂಥದ ನಾಮದೇವ, ಸೇನಾ, ಇತ್ಯಾದಿ ಹನ್ನೆರಡು ಜನ ಭಕ್ತಿ ಭಂಡಾರಿಗಳ ಗೀತೆಗಳೂ ಅದರಲ್ಲಿವೆ. ಅಂದ ಮಾತ್ರಕ್ಕೆ ಸಿಖ್ಖ ಧಮ೯ವು ವೈದಿಕರ ಭಕ್ತಿ ಪಂಥದ ಒಂದು ಭಾಗವೇ? ಹಾಗೇನಾದರೂ ವೀಣಾ ಅವರು ಹೇಳಿದರೆ ಸಿಖ್ಖರಿಂದ ಎಂಥ ಪ್ರತಿಕ್ರಿಯೆ ಬರಬಹುದೆಂಬುದು ಅವರಿಗೆ ಗೊತ್ತಿದೆ! ಇದೆ ಎಲ್ಲ ವಾದಗಳನ್ನು ವೀಣಾರವರು ಕೇವಲ ವಚನ ದಶ೯ನದಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ನಡೆಸುತ್ತಿದ್ದಾರೆ.
ಜಾಮದರ್ ಸರ್ ರವರಿಗೆ ಅನಂತ ಶರಣು …ಲಿಂಗಾಯತ ಧರ್ಮದ ತತ್ವಸಿದ್ದಾಂತಗಳನ್ನ ದಾಖಲೆ ಸಮೇತ ಸ್ಪಷ್ಟಪಡಿಸುತ್ತಿರುವ ಜಾಮದರ್ ಸರ್ ಮತ್ತು ಇತರೆ ಲಿಂಗಾಯತ ಧರ್ಮದ ಅನುಯಾಯಿಗಳು ಅಥವಾ ಬಸವ ಅನುಯಾಯಿಗಳಿಗೂ ಶರಣು ಶರಣಾರ್ಥಿಗಳು. ಇವೆರೆಲ್ಲಾ ಇಷ್ಟೊಂದು ದಾಖಲೆ ನೀಡಿದ್ದಾಗಿಯೂ ಸಹ ಲಿಂಗಾಯತ ಧರ್ಮದ ಮೇಲೆ ಆಕ್ರಮಣ ನಡೆಯುತ್ತಿದೆ ಇವರುಗಳು ದಾಖಲೆ ಸಂಗ್ರಹಿಸದಿದ್ದರೆ ಲಿಂಗಾಯತ ವಿರೋಧಿಗಳು ಈಗಾಗಲೇ ಲಿಂಗಾಯತ ಧರ್ಮದ ತತ್ವಸಿದ್ದಾಂತಗಳನ್ನ ಗಾಳಿಗೆ ತೂರಿಬಿಡುತಿದ್ದರು. ಇಂತವರ ಲೇಖನಗಳನ್ನ ಪ್ರಕಟಿಸಿ ನಮಗೆ ಅರಿವು ಮೂಡಿಸುತ್ತಿರುವ ಬಸವ ಮೀಡಿಯಾಗೆ ಕೋಟಿ ಕೋಟಿ ಶರಣು
ಆರ್ ಎಸ್ ಎಸ್ ನವರ ಈ ಪುಸ್ತಕ ವನ್ನು ಅವರು ಬಿಡುಗಡೆ ಮಾಡುವಾಗ ನಾವು ಬಿಡುಗಡೆಗೆ ತಡೆಯೊಡ್ಡಿ ಬಲವಾಗಿ ಪ್ರತಿಭಟಿಸಿದ್ದರೆ, ಅವರ ಕುತಂತ್ರಕ್ಕೆ ಬಲವಾದ ಹೊಡೆತಬೀಳುತ್ತಿತ್ತು. ಈ ಕೆಲಸವನ್ನು ನಮ್ಮವರು ಮೊದಲೇಮಾಡಬೇಕಿತ್ತು. ಈಗಲೂ ಸಮಯಮೀರಿಲ್ಲ. ಸಂಘ ಪರಿವಾರದ ಎಲ್ಲಾ ನಮ್ಮ ವಿರುಧದ ಕಾರ್ಯಗಳಿಗೆ ಬಹಿರಂಗವಾಗಿ ಪ್ರತಿಭಟಿಸಬೇಕು. ಪತ್ರಿಕಾ ಹೇಳಿಕೆಗಳನ್ನು ನೀಡಬೇಕು. ನಮ್ಮ ಸಮಾಜವನ್ನು ಎಚ್ಚರಿಸಬೇಕಾದರೆ ಈ ಕೆಲಸವನ್ನು ಮಾಡಬೇಕು. ವಂದನೆಗಳೊಂದಿಗೆ.
ತಾವು ದಾಖಲೆಗಳ ಸಮೇತ ಕೊಟ್ಟಿರುವ ಉತ್ತರ ವಚನ ದರ್ಶನ ಪುಂಡರ ಗೋಷ್ಠಿಗೆ ತಕ್ಕುದಾಗಿದೆ. ಇನ್ನಾದರೂ ಇಂತಹ ಹುಚ್ಚು ಧೈರ್ಯಕ್ಕೆ ಮತ್ತು ಸಾಹಸಕ್ಕೆ ಕೈಹಾಕುವುದಿಲ್ಲ ಎಂದುಕೊಂಡಿದ್ದೇನೆ.
Who is BL santhosh to attend this function, Vachan words discovered and used by Lingayat These people not aware vof Meaning of Vachan How can they chaired this function..
ಲಿಂಗಾಯತ ಸ್ವತಂತ್ರ ಧರ್ಮ ಅಲ್ಲವೆಂದು ಸಾಧಿಸಲು ಹೊರಟಿರುವ ಪುಂಡರ ಗೋಷ್ಠಿ,,, ಉಡುಪಿ ಸ್ವಾಮಿಗೋಳು ತಾವು ಹಿಂದೂ ಅಂತ ಒಪ್ಪಿಕೊಳ್ಳಲು ಅವರ ಮನಸ್ಸಿಗೆ ಕಿರಿಕಿರಿ ಆಗುವುದು,,, ಯಾಕೆಂದ್ರೆ ಹಿಂದುತ್ವವೇ ಬೇರೆ ಬ್ರಾಹ್ಮಣರ ಬ್ರಾಹ್ಮಣ್ಯವೇ ಬೇರೆ,,ಅಂತಾ ಇವರ ದೊಡ್ಡ ಅಜ್ಜಾರು ಹೇಳಿದ ವೀಡಿಯೊ ಆದರೆ,, ಆದರೆ ಲಿಂಗಾಯತರನ್ನು ಹಿಂದೂ ಮಾಡಲು ಉಸಾಬರಿ ಮಾಡುವರು,,
ಈ ಆರ್ ಎಸ್ ಎಸ್ ಸಂಘಿಗಳು ನಮ್ಮನ್ನು ಹಿಂದೂಯೆಂದು ಮಾಡಲು ಹೊರಟಿದ್ದಾರೆ. ಇವರನ್ನು ನಾವು ಕುರುಡರಂತೆ ಅವರ ಆಳು ಗಳಂತೆ ಇರಬೇಕು ಅನ್ನುತ್ತಾರೆ. ಈ ಜ್ಯಾತಿವಾದಿ ಹಾರುವರು.
ಯಾರು ಏನೇ ಬರೆದರೂ, ಹೇಳಿದರೂ ಲಿಂಗಾಯತ, ವೀರಶೈವ ಮತ್ತು ಹಿಂದೂ ಹಾಗೂ ಸನಾತನಕ್ಕೂ ಏನೂ ತೊಂದರೆ ಯಾಗುವುದಿಲ್ಲ ಪರ್ಕ ಬೀಳುದಿಲ್ಲ. ವಿಚಾರಗಳಿಗೆ, ಚಿಂತನೆಗಳಿಗೆ ಮೇಲಿನ ಎಲ್ಲ ಆಚರಣೆಗಳು, ಪದ್ಧತಿಗಳು ಮತ್ತು ವ್ಯವಸ್ಥೆಗಳು ಸ್ವಾತಂತ್ರ್ಯ ಕೊಟ್ಟಿವೆ.