ಖಾನಾಪುರ
ಖಾನಾಪುರ ತಾಲೂಕು, ಹಿರೇಅಂಗ್ರೊಳ್ಳಿ ಗ್ರಾಮದ ರೈತ ಬಸವರಾಜ ಅಡಿವೆಪ್ಪ ಅಕ್ಕಿ ಅವರು ತಮ್ಮ ಹೊಲದಲ್ಲಿ ಮಾಡಿದ ಭತ್ತದ ರಾಶಿಯ ಮೇಲೆ ಲಿಂಗಾಯತ ಧರ್ಮ ಹಾಗೂ ಬಸವತತ್ವ ಪ್ರಚಾರ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಇದೀಗ ಆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಕಾಯಕವೇ ಕೈಲಾಸ, ಶ್ರೀಗುರು ಬಸವ, ಓಂ ಶ್ರೀಗುರು ಬಸವಲಿಂಗಾಯ ನಮಃ, ಸೃಷ್ಟಿಕರ್ತ ಲಿಂಗದೇವನ ಪ್ರಸಾದ ಎಂಬ ಬರಹಗಳು ಹಾಗೂ ತ್ರಿಕೋನಾಕಾರದ ಷಟಸ್ಥಲ ಚಿಹ್ನೆ ಬಿಡಿಸುವ ಮೂಲಕ ಶರಣರ ಸಂದೇಶ, ಧರ್ಮ ಮಂತ್ರ ಹೇಳಿ ತಮ್ಮ ಧರ್ಮ ಹಾಗೂ ಬಸವತತ್ವಾಭಿಮಾನ ಮೆರೆದಿದ್ದಾರೆ.
ಬುಟ್ಟಿಯಲ್ಲಿ ಒಣ ಹುಲ್ಲು ಸುಟ್ಟು ಬೂದಿ ಮಾಡ್ತೇವು, ಆ ಬೂದಿ ಜೊತೆಗೆ ಭತ್ತ ಮಿಶ್ರ ಮಾಡಿ, ಸ್ವಲ್ಪ ನೀರು ಹಾಕಿ ಹಸಿ ಮಾಡ್ತೇವು, ಆಗ ಭತ್ತ ಕಪ್ಪು ಬಣ್ಣಕ್ಕೆ ತಿರುಗುತ್ತೆ. ಅದೇ ಭತ್ತದಿಂದ ನಿಧಾನಕ್ಕೆ ಬರೆಯುವುದು, ಚಿತ್ರ ಬಿಡಿಸುವುದು ಮಾಡುತ್ತೇವೆ ಎನ್ನುತ್ತಾರೆ ರಾಷ್ಟ್ರೀಯ ಬಸವ ದಳದ ಬಸವರಾಜ ಅಕ್ಕಿ ಅವರು.
(ಬಸವ ಮೀಡಿಯಾದ ‘ಶರಣ ಬದುಕು’ ಅಂಕಣ ಸಾಮಾನ್ಯ ಶರಣರ ವಿಶಿಷ್ಟ ಸಾಧನೆ, ಅನುಭವಗಳನ್ನು ಗುರುತಿಸಲು ಯತ್ನಿಸುತ್ತದೆ.
ಇಂತಹ ಶರಣರು ನಿಮಗೆ ಗೊತ್ತಿದ್ದರೆ ಅವರ ವಿವರವನ್ನು ದಯವಿಟ್ಟು basavamedia1@gmail.comಗೆ ಇಮೇಲ್ ಮಾಡಿ. ಅವರನ್ನು ಸಂಪರ್ಕಿಸಿ ವರದಿ ಮಾಡುತ್ತೇವೆ. ಅವರ ಬದುಕು, ಸಾಧನೆ ಇತರರಿಗೂ ಪ್ರೇರಣೆಯಾಗಲಿ.)
ಶರಣು ಶರಣಾರ್ಥಿ ಶರಣಾರ್ಥಿ ಶರಣರೀಗೇ
ಶರಣೂ ಶರಣಾರ್ಥಿಗಳು
ವಿಶ್ವಗುರು ಅಪ್ಪ ಬಸವಣ್ಣನವರು ಮತ್ತು ಬಸವಾದಿ ಶರಣರು ತತ್ವಗಳನ್ನು ನುಡಿದಂತೆ ನಡೆದು ತೋರಿಸಿದರು ನಮ್ಮೆಲ್ಲರ ಬಾಳಿಗೆ ಮಾರ್ಗದರ್ಶನರು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಮ್ಮ ಜೀವನವನ್ನು ನಡೆಸಿ ಪವಿತ್ರರಾಗೋಣ ಇಂತಹ ಶರಣರ ವಚನಗಳನ್ನು ನಾವೆಲ್ಲರೂ ಸೇರಿ ಪ್ರಚಾರ ಮಾಡೋಣ ಅದರಂತೆ ನಡೆಯೋಣ ಶರಣು ಶರಣಾರ್ಥಿ
ಶರಣೂ ಶರಣಾರ್ಥಿಗಳು