ಬೆಳಗಾವಿ
ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕಗಳ ವತಿಯಿಂದ 892ನೆಯ ವಿಶ್ವಗುರು ಬಸವ ಜಯಂತಿಯ ಕಾರ್ಯಕ್ರಮವು ಬಸವ ಮಂಟಪದಲ್ಲಿ ಭಕ್ತಿ ಶ್ರದ್ಧೆಯಿಂದ ನೆರವೇರಿತು.

ಕಾರ್ಯಕ್ರಮವನ್ನು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜು ಸೇಟ್ ಅವರು ಉದ್ಘಾಟಿಸಿದರು.
ಧ್ವಜಾರೋಹಣವನ್ನು ಪೂಜ್ಯ ಮಹಾಪೌರರಾದ ಮಂಗೇಶ್ ಪವಾರ್ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಸುಮಾರು 3000 ಲೀಟರ್ ತಂಪು ಪಾನೀಯವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಗಳ ಪದಾಧಿಕಾರಿಗಳು ಮತ್ತು ಹಲವಾರು ಶರಣ-ಶರಣಿಯರು ಪಾಲ್ಗೊಂಡಿದ್ದರು.