ಬೆಳಗಾವಿ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿವಿಧ ಕನ್ನಡಪರ ಹಾಗೂ ಯುವ ಸಂಘಟನೆಗಳು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.
ವಿಶೇಷವಾಗಿ “ಲಿಂಗಾಯತ ಸಂಘಟನೆ” ಪ್ರತಿ ವರ್ಷದಂತೆ ಈ ವರ್ಷವೂ ಸಹ ಶುಕ್ರವಾರ ಕೂಟ ಹತ್ತಿರ ವೇದಿಕೆಯನ್ನು ನಿರ್ಮಾಣ ಮಾಡಿ ಕನ್ನಡ ಮನಸುಗಳನ್ನು ಹುರಿದುಂಬಿಸುವುದರ ಜೊತೆಗೆ ಸ್ಮರಣಿಕೆಗಳನ್ನ ನೀಡಿ ಗೌರವಿಸಿತು.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಗುರುವಾರ ಮಧ್ಯರಾತ್ರಿ 12 ಗಂಟೆಗೆ ರಾಜ್ಯೋತ್ಸವಕ್ಕೆ
ವಿವಿಧ ಕನ್ನಡಪರ ಸಂಘಟನೆಗಳು ವಿದ್ಯುಕ್ತ ಚಾಲನೆ ನೀಡುವುದರ ಮುಖಾಂತರ ರಾಜ್ಯೋತ್ಸವದ ರಂಗು ಹೆಚ್ಚಿಸಿದವು.
ಶನಿವಾರ ಮುಂಜಾನೆ 11 ಗಂಟೆಗೆ ಪ್ರಾರಂಭವಾದ ರಾಜ್ಯೋತ್ಸವ ಮೆರವಣಿಗೆಯು ಸರಿಸುಮಾರು ಮಧ್ಯರಾತ್ರಿ 1 ಗಂಟೆಯವರೆಗೂ ನಡೆಯಿತು.
ಕನ್ನಡ ನಾಡು ನುಡಿ ಪ್ರತಿನಿಧಿಸುವ ಹಲವಾರು ರೂಪಕಗಳ ಪ್ರದರ್ಶನ ತೆರೆದ ವಾಹನಗಳಲ್ಲಿ ಸಾಗಿತು, ಜೊತೆಗೆ ಡಾಲ್ಬಿ ಸೌಂಡ್ ಸಿಸ್ಟಮ್ ಲೈಟಿಂಗ್ ವಿಶೇಷವಾಗಿ ಯುವಕರನ್ನ ಸೆಳೆಯಿತು.
ಮೆರವಣಿಗೆಯು ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಪ್ರಾರಂಭಗೊಂಡು ಕಾಕತಿ ವೆಸ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಾಲೇಜ ರಸ್ತೆ ಮಾರ್ಗವಾಗಿ ಮತ್ತೆ ಚೆನ್ನಮ್ಮ ವೃತ್ತದಿಂದ ಆಗಮಿಸಿತು.
ರಸ್ತೆ ಉದ್ದಕ್ಕೂ ಸಂಘಟನೆಗಳನ್ನ ಹುರದುಂಬಿಸಲು ಬೆಳಗಾವಿಯ ಎಲ್ಲ ಸಂಘ-ಸಂಸ್ಥೆಗಳು ವೇದಿಕೆಗಳನ್ನ ನಿರ್ಮಾಣ ಮಾಡಿದ್ದವು.
ಇಷ್ಟೆಲ್ಲ ಜನಸ್ತೋಮದ ನಡುವೆಯೂ ಬಂದು ಅಂಬುಲೆನ್ಸ್ ಗೆ ದಾರಿ ಮಾಡಿ ಕೊಟ್ಟು ಹೃದಯ ವೈಶಾಲ್ಯ ಮೆರೆಯಲಾಯಿತು. ಕನ್ನಡವೇ ಹಸಿರು ಉಸಿರು ಎಂದು ಆರಾಧಿಸುವ ಲಕ್ಷಾಂತರ ಕನ್ನಡ ಮನಸುಗಳು ಒಂದೆಡೆ ಸೇರಿ, ಹಗಲು ರಾತ್ರಿ ಎನ್ನದೆ ಕನ್ನಡ ಎನೆ ಕುಣಿದಾಡುವುದೆನ್ನೆದೆ ಎನ್ನುತ, ಬೆಳಗಾವಿಯಲ್ಲಿ ವಿಶೇಷ ಮತ್ತು ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಬೆಳಗಾವಿಯಲ್ಲಿ ಕನ್ನಡತನವನ್ನು ಮತ್ತು ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಲು ಜೋಳಿಗೆ ಹಿಡಿದು ಹೋರಾಟ ಮಾಡಿದ ನಮ್ಮ ಗಡಿನಾಡಿನ ಭಗೀರಥ ತ್ರಿವಿಧ ದಾಸೋಹಿಗಳು ಶತಾಯುಷಿಗಳು ಆದ ನಾಗನೂರಿನ ರುದ್ರಾಕ್ಷಿ ಮಠದ ಪರಮಪೂಜ್ಯ ಶ್ರೀ ಶಿವಬಸವ ಅಜ್ಜನವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.