ವಚನಗಳ ಮೇಲಿನ ದಾಳಿಗೆ ಬೆಲ್ದಾಳ ಶರಣರ ಗ್ರಂಥದಲ್ಲಿ ಉತ್ತರ: ಶಿವರಾಜ ಪಾಟೀಲ್

ಬಸವ ಮೀಡಿಯಾ
ಬಸವ ಮೀಡಿಯಾ

“ಶರಣರ ಮೇಲೆ ಸವಾರಿ ಮಾಡಲು, ಪ್ರಭುತ್ವ ಸಾಧಿಸಲು ಸುಳ್ಳು ಸಾಹಿತ್ಯ ಸೃಷ್ಟಿಯಾಗುತ್ತಿದೆ.

ಬೆಂಗಳೂರು

ಬಸವಕಲ್ಯಾಣದ ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು ರಚಿಸಿರುವ 1364 ಪುಟಗಳ ಬಹು ಚರ್ಚಿತ ಬೃಹತ್ ಗ್ರಂಥ ‘ಸತ್ಯ ಶರಣರು-ಸತ್ಯ ಶೋಧ’ ವರಿಷ್ಠ ನ್ಯಾಯಾಲಯದ ನಿವ್ರತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರಿಂದ ರವಿವಾರ ಲೋಕಾರ್ಪಣೆಗೊಂಡಿತು.

ಬಿಡುಗಡೆ ಗೊಳಿಸಿದ ಮೇಲೆ ಮಾತನಾಡಿದ ನ್ಯಾಯಮೂರ್ತಿ ಶಿವರಾಜ ಪಾಟೀಲರು, ಈ ಸಂಶೋಧನಾ ಗ್ರಂಥ ಪೂಜ್ಯ ಬೆಲ್ದಾಳ ಶರಣರು ಒಂಬತ್ತು ವರ್ಷಗಳ ಶ್ರಮ ವಹಿಸಿದ ತಪಶ್ಚರ್ಯ ಗ್ರಂಥ, ಇಂತಹ ಗ್ರಂಥ ಎಲ್ಲರಿಗೂ ಬರೆಯಲು ಆಗಲ್ಲ, ಇದಕ್ಕೆ ದೈವೀ ಶಕ್ತಿ ಬೇಕು.

ಬಸವಣ್ಣನವರ ಆಯ್ಕೆ

ಬಸವಣ್ಣನವರೇ ವಚನ ಸಾಹಿತ್ಯದ ಮೇಲೆ ಆಗುತ್ತಿರುವ ಆಕ್ರಮಗಳಿಗೆ ಉತ್ತರಿಸಲು ಪೂಜ್ಯ ಬೆಲ್ದಾಳ ಶರಣರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಮುಂದೆ ವಚನ ಸಾಹಿತ್ಯ ಸಂಶೋಧನೆ ಮಾಡುವವರಿಗೆ ಇದು ಆಕಾರ ಗ್ರಂಥವಾಗಲಿದೆ.

ಬಸವಣ್ಣನವರೇ ವಚನ ಸಾಹಿತ್ಯದ ಮೇಲೆ ಆಗುತ್ತಿರುವ ಆಕ್ರಮಗಳಿಗೆ ಉತ್ತರಿಸಲು ಪೂಜ್ಯ ಬೆಲ್ದಾಳ ಶರಣರನ್ನು ಆಯ್ಕೆ ಮಾಡಿದ್ದಾರೆ.

ನಾನು ಈ ಪುಸ್ತಕದ ನನ್ನ ಜಡ್ಜ್ಮೆಂಟ್ ಘೋಷಿಸುತ್ತೇನೆ, ಇದು ಜಗ ಕಂಡರಿಯದ ಅಸತ್ಯದ ಮೇಲೆ ಸತ್ಯದ ಮೌಲಿಕ ಗ್ರಂಥ, ಪೂಜ್ಯರು ಶರಣರಿಗೆ ಕೊಟ್ಟ ನ್ಯಾಯ ಆಗಿದೆ, ಇದು ಕೇವಲ ಕೈತೊಳೆದುಕೊಂಡು ಓದುವ ಗ್ರಂಥ ಅಲ್ಲ ಸಂಪೂರ್ಣ ಸ್ನಾನ ಮಾಡಿ, ಹಣೆಗೆ ಒತ್ತಿಕೊಂಡು ನಮಸ್ಕರಿಸಿ, ಪ್ರಾಂಜಲ ಮನಸ್ಸಿನಿಂದ ಓದುವ ಗ್ರಂಥ, ಅದಕ್ಕಾಗಿ ಪೂಜ್ಯರಿಗೆ ನನ್ನ ವತಿಯಿಂದ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಾ, ಚಿರಋಣಿ ಯಾಗಿರುತ್ತೇವೆ ಎಂದು ನಿಮ್ಮ ಪಾದಕ್ಕೆ ನಮಸ್ಕರಿಸಿ ಹೇಳುತ್ತೇನೆ ಎಂದು ಘೋಷಿಸಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಡಾ ಶರದಚಂದ್ರ ಮಹಾಸ್ವಾಮೀಜಿ ಕುಂದೂರು ಮಠ ಮೈಸೂರು ಹಾಗು ಸಂಸ್ಕೃತ ವಿದ್ವಾಂಸರು ಮಾತನಾಡಿ, ಇದು ಅದ್ಬುತ ಗ್ರಂಥ, ಪೂಜ್ಯ ಬೆಲ್ದಾಳ ಶರಣರು ಭಾರತ ದೇಶ ತುಂಬಾ ಸುತ್ತಾಡಿ ಎಲ್ಲಾ ವೇದ ಆಗಮಗಳು ಉಪನಿಷತ್ತು ಸಂಗ್ರಹಿಸಿ ಅಧ್ಯಯನ ಮಾಡಿದ ಫಲಶೃತಿ.

ಇದು ಜಗ ಕಂಡರಿಯದ ಅಸತ್ಯದ ಮೇಲೆ ಸತ್ಯದ ಮೌಲಿಕ ಗ್ರಂಥ, ಪೂಜ್ಯರು ಶರಣರಿಗೆ ಕೊಟ್ಟ ನ್ಯಾಯ ಆಗಿದೆ,

ಮುಖ್ಯ ಅತಿಥಿಗಳು ಬಂದಿದ್ದ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಅವರ ಬಗ್ಗೆ ಮಾತಾಡುತ್ತಾ ಜಸ್ಟಿಸ್ ಪಾಟೀಲರು ಹೇಳಿದ್ದು, ಮಹಾದೇವಪ್ಪ ಕೊರಳಲ್ಲಿ ಇರುವ ಚೈನ್ ಪದಕದಲ್ಲಿ ಇರುವ ಒಂದು ಕಡೆ ಬುದ್ಧ ಮತ್ತೊಂದು ಕಡೆ ಬಸವಣ್ಣನವರ ಫೋಟೋ ಕಂಡು ಬೆರಗಾದೆ, ಅವರ ಬಸವ ಅಭಿಮಾನಕ್ಕೆ ಶರಣು ಎಂದು ಹೇಳಿದ್ದಾರೆ.

ವಚನಗಳನ್ನು ಜನರಿಗೆ ಮುಟ್ಟಿಸಿ

ಕಾರ್ಯಕ್ರಮದ ದೀಪ ಪ್ರಜ್ವಲಿಸಿದ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಪೂಜ್ಯ ಡಾ ಸಿದ್ದರಾಮ ಶರಣರು ರಚಿಸಿದ ಸಂಶೋಧನಾ ಗ್ರಂಥ ಬಸವ ತತ್ವ ಸಿದ್ದಾಂತ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕ ದರ್ಶಕ ಗ್ರಂಥ ಆಗಿ ಹೊರ ಹೊಮ್ಮಲಿ ಎಂದು ಹೇಳಿದರು.

ಜಗತ್ತು ದೇಶದಲ್ಲಿ ನೈತಿಕತೆ ಅಧೋಗತಿಗೆ ಹೋಗುತಿದೆ, ಮೌಢ್ಯ ಮೌಢ್ಯಾಚರಣೆ ಜಾತಿಯತೆ ಇಂದ ಧರ್ಮ ನಾರುತ್ತಿದೆ, ಇಂತಹ ಸಮಯದಲ್ಲಿ ದೇಶಕ್ಕೆ ಅಲ್ಲದೆ ಜಗತ್ತಿಗೆ ಬಸವ ತತ್ವ ಸಿದ್ದಾಂತ ಅಗತ್ಯ ಆಗಿದೆ. ಬಸವಣ್ಣನವರ ವಚನ ಚಳುವಳಿಯ ಫಲಶೃತಿ ಸಂದೇಶಗಳನ್ನು ಜನರ ಬಾಗಿಲಿಗೆ ಮುಟ್ಟಿಸಲು ನಾವೆಲ್ಲರೂ ಎಡವಿದ್ದೇವೆ. ವಚನಗಳನ್ನು ಜನರ ಮನೆ ಮನಗಳಿಗೆ ಮುಟ್ಟಿಸುವ ಕೆಲಸ ನಾವೆಲ್ಲರೂ ಮಾಡೋಣ, ದೇಶದಲ್ಲಿ ಸಾಮಾಜಿಕ ಸಾಮರಸ್ಯ ತರೋಣ ಎಂದು ಹೇಳಿದರು.

ಬಸವಣ್ಣನವರ ವಚನ ಚಳುವಳಿಯ ಫಲಶೃತಿ ಸಂದೇಶಗಳನ್ನು ಜನರ ಬಾಗಿಲಿಗೆ ಮುಟ್ಟಿಸಲು ನಾವೆಲ್ಲರೂ ಎಡವಿದ್ದೇವೆ.

‘ಸತ್ಯ ಶರಣರು ಸತ್ಯ ಶೋಧ’ ಸಂಶೋಧನಾ ಗ್ರಂಥ ಸರಕಾರದ ವತಿಯಿಂದ ಮುದ್ರಣ ಮಾಡಿ ಎಲ್ಲಾ ಗ್ರಂಥಾಲಯ ಶಾಲಾ ಕಾಲೇಜುಗಳಿಗೆ ಮುಟ್ಟಿಸು ಹಾಗೆ ಮಾಡಬೇಕೆಂದು ಜಸ್ಟಿಸ್ ಶಿವರಾಜ ಪಾಟೀಲ ಅವರ ಬೇಡಿಕೆಗೆ ಸಚಿವರು ಸಮ್ಮತಿ ಸೂಚಿಸಿದ್ದಾರೆ, ಹಾಗು ತ್ವರಿತಗತಿಯಲ್ಲಿ ಮುದ್ರಣ ಮಾಡುತ್ತೇವೆ ಎಂದು ಹೇಳಿದರು.

ದಾಖಲೆಗಳ ಮೂಲಕ ಉತ್ತರ

ಇದು ವಚನ ಸಾಹಿತ್ಯ ಅಧ್ಯಯನಕ್ಕೆ, ಬಸವ ತತ್ವ ಸಿದ್ದಾಂತಗಳ ಮೇಲೆ ಮಾಡಿದ್ದ ಆಪಾದನೆಗಳಿಗೆ, ಲಿಂಗಾಯತ ಧರ್ಮ ದಾಖಲೆಗಳ ಮುಖಾಂತರ ಉತ್ತರ ನೀಡುತ್ತಾ, ಶರಣರ ವಚನಗಳು ಸ್ವತಂತ್ರ ಅನುಭವಗಳು, ಯಾವುದೇ ಪ್ರಾಚೀನ ಸಂಸ್ಕೃತ ಗ್ರಂಥಗಳ ಕಾಪಿ ಅಲ್ಲ, ಯಾವುದೇ ಧರ್ಮಗಳ ಆಚರಣೆ ಅನುಕರಣೆ ಅಲ್ಲ, ಇವು ಜಗತ್ತಿನ ಹೊಸ ವಿಚಾರಗಳು ಸಿದ್ಧಾಂತಗಳು ಎಂದು ಹೇಳಿದರು.

ಗ್ರಂಥ ರಚಿಸಿದ ಪೂಜ್ಯ ಬೆಲ್ದಾಳ ಶರಣರು ಮಾತಾಡುತ್ತಾ, ಈ ಗ್ರಂಥ ನನ್ನ 75 ವರ್ಷದ ಅಧ್ಯಯನದ ಶ್ರಮದ ಗ್ರಂಥ. ಈ ಗ್ರಂಥದಲ್ಲಿ ಎಲ್ಲಾ ಪುರಾವೆ ಸಮೇತ ಸತ್ಯ ಹೊರಹಾಕಿದ್ದು, ಬಸವಾದಿ ಶರಣರ ಅನುಭಾವದ ವಚನಗಳು ಸ್ವತಂತ್ರ, ಬಸವಣ್ಣನವರಿಗೆ ಗುರು ಯಾರು ಇದ್ದಿಲ್ಲ, ಜಾತವೇದ ಮುನಿ ಅನ್ನುವ ವ್ಯಕ್ತಿ ಹುಟ್ಟೆ ಇಲ್ಲ, ದೇವರೇ ಬಸವಣ್ಣನವರ ಗುರು, ಎಂದು ತೋರಿಸಿದ್ದೇನೆ.

ಶರಣರ ವಚನಗಳು ಸ್ವತಂತ್ರ ಅನುಭವಗಳು, ಯಾವುದೇ ಪ್ರಾಚೀನ ಸಂಸ್ಕೃತ ಗ್ರಂಥಗಳ ಕಾಪಿ ಅಲ್ಲ,

ವೇದ ಉಪನಿಷತ್ತು ಆಗಮಗಳಲ್ಲಿ ಬಸವ ತತ್ವ ಸಿದ್ದಾಂತದ ಯಾವುದೇ ಕುರುಹು ಇಲ್ಲ, ಇದೆ ಎಂದು ಹೇಳುವವರು ಶುದ್ಧ ಸುಳ್ಳು ಹೇಳುತ್ತಿದ್ದಾರೆ ಅದಕ್ಕೆ ಪುರಾವೆ ಇಲ್ಲ. ವೀರಶೈವ ಆಗಮಗಳೂ ಖೊಟ್ಟಿ ಎಂದು ಸಾಬೀತಾಗಿದೆ, ಶೈವ ಆಗಮಗಳು ಕೂಡ ಬಸವಣ್ಣನವರ ನಂತರದಲ್ಲಿ ಬರೆದಿದ್ದು.

ವೀರಶೈವರು ಆಗಮಗಳನ್ನು ಸೃಷ್ಟಿ ಮಾಡಿ ಅದರಲ್ಲಿ ಶರಣರ ಪಂಚಾಚಾರ, ಶಟಸ್ಥಲ, ಅಷ್ಟಾವರಣ ಸೇರಿಸಿ, ಇವೆಲ್ಲ ಶರಣರ ಮೊದಲೇ ಇದ್ದವು ಎಂದು ತೋರಿಸಲು ಕುತಂತ್ರ ಮಾಡಿದ್ದಾರೆ ಎಂದು ನುಡಿದರು. ಸಿದ್ಧಾಂತ ಶಿಖಾಮಣಿ ಗ್ರಂಥ ಕೂಡ ಬಸವಾದಿ ಶರಣರ ಕಾಲದ ನಂತರ ಸೃಷ್ಟಿ ಮಾಡಿದ್ದ ಸಂಸ್ಕೃತ ಗ್ರಂಥ, ನಾನು ಮೂಲ ಸಿದ್ದಾಂತ ಶಿಖಾಮಣಿ ಹುಡುಕಿ ತೆಗೆದಿದ್ದೇನೆ.

ಅದು ಬಸವ ಸ್ತೋತ್ರದಿಂದ ಅಂದರೆ ” ಓಂ ಶ್ರೀಗುರು ಬಸವ ಲಿಂಗಾಯ ನಮಃ” ಎಂದು ಬರೆದು ಪ್ರಾರಂಭ ಮಾಡಿದ್ದಾರೆ. ಆದರಿಂದ ಸಿದ್ಧಾಂತ ಶಿಖಾಮಣಿ ಬಸವ ಪೂರ್ವ ಗ್ರಂಥ ಅಲ್ಲ. ಬಸವಣ್ಣನವರಿಗೆ ದೀಕ್ಷೆ ಕೊಟ್ಟಿದ್ದವರು ವೀರಶೈವ ಗುರುಗಳು ಅನ್ನೋದು ಶುದ್ಧ ಸುಳ್ಳು,

ವೀರಶೈವರು ಆಗಮಗಳನ್ನು ಸೃಷ್ಟಿ ಮಾಡಿ ಅದರಲ್ಲಿ ಶರಣರ ಪಂಚಾಚಾರ, ಷಟ್ಸ್ಥಲ, ಅಷ್ಟಾವರಣ ಸೇರಿಸಿ, ಇವೆಲ್ಲ ಶರಣರ ಮೊದಲೇ ಇದ್ದವು ಎಂದು ತೋರಿಸಲು ಕುತಂತ್ರ ಮಾಡಿದ್ದಾರೆ

ಇಷ್ಟಲಿಂಗ ಸಂಶೋಧನೆ ಮಾಡಿದ್ದೇ ಬಸವಣ್ಣನವರು. ಜಗತ್ತಿನಲ್ಲಿ ಪ್ರಥಮ ಇಷ್ಟಲಿಂಗ ದೀಕ್ಷೆ ನೀಡಿದ್ದು ಮಹಿಳೆಗೆ ತನ್ನ ಹಿರಿಯ ಸಹೋದರಿ ಅಕ್ಕ ನಾಗಾಂಬಿಕೆ ದೇವಿಯವರಿಗೆ. ಆದರಿಂದ ಇಷ್ಟಲಿಂಗ ಜನಕ ಬಸವಣ್ಣ. ಈ ಗ್ರಂಥ ಓದಿ ಯಾರಾದರೂ ಪುರಾವೆ ಸಹಿತ ಚರ್ಚೆಗೆ ಬಂದರೆ ಮನಪೂರ್ವಕ ಸ್ವಾಗತ್ತಿಸುತ್ತೇನೆ, ಸುಳ್ಳು ಮಾತುಗಳಿಗೆ ಒಪ್ಪುವುದಿಲ್ಲ ಎಂದು ಮನ ಬಿಚ್ಚಿ ಮಾತನಾಡಿದರು.

ಶರಣರ ಮೇಲೆ ಸವಾರಿ

ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ ಬೆಲ್ದಾಳ ಶರಣರು ಮಾನವರೆಲ್ಲ ಒಂದು ಎಂದು ಸಂದೇಶ ನೀಡಿದ ಬಸವಾದಿಶರಣರನ್ನು ಸೀಮಿತಗಳಿಸುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ. ಶರಣರ ಮೇಲೆ ಸವಾರಿ ಮಾಡುವ, ಪ್ರಭುತ್ವ ಸಾಧಿಸುವ ಪ್ರಯತ್ನಗಳೂ ನಡೆಯುತ್ತಿದೆ. ಆದರೆ ಇದು ಹೊಸದಲ್ಲ, ಕಳೆದ ನಾಲ್ಕು ನೂರು ಐದು ನೂರು ವರ್ಷಗಳಿಂದ ನಡೆಯುತ್ತಿರುವ ಪ್ರಯತ್ನ.

ಇದಕ್ಕಾಗಿ ಶರಣರ ಮೇಲೆ ಸುಳ್ಳು ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಶರಣರ ಸಾಹಿತ್ಯದ ಸತ್ಯವನ್ನು ಶ್ರಮಪಟ್ಟು ದಾಖಲೆ ಸಂಗ್ರಹಿಸಿ ಬರೆದಿದ್ದೇನೆ, ಇದನ್ನು ಎಲ್ಲರೂ ಓದಿ ತಮ್ಮ ಜೀವನವನ್ನು ಹಸನು ಮಾಡಿಕೊಳ್ಳಬೇಕೆಂದು ಹೇಳಿದರು.

ಶರಣರ ಮೇಲೆ ಸುಳ್ಳು ಸಾಹಿತ್ಯ ಸೃಷ್ಟಿಯಾಗುತ್ತಿದೆ.

ಶರಣ ಸಾಹಿತ್ಯ ಪುರೋಹಿತಶಾಹಿಗಳು, ಪಂಡಿತರು ಬರೆದ ಸಾಹಿತ್ಯವಲ್ಲ. ಇದು ಕೂಲಿ ಮಾಡುವವರು, ರೈತರು, ಕಸಬರಿಕೆ ಹೊಡೆಯುವವರು, ಮೆಟ್ಟು ಹೊಲೆಯುವಂತಹ ಸಾಮಾನ್ಯ ಜನರು ಅನುಭಾವಿಗಳಾಗಿ ಬರೆದಿರುವ ಸ್ವತಂತ್ರ, ಪ್ರಜಾಪ್ರಭುತ್ವದ ಸಾಹಿತ್ಯ, ಎಂದು ಬೆಲ್ದಾಳ ಶರಣರು ಹೇಳಿದರು.

ಸ್ವಾಗತ ಭಾಷಣ ಶ್ರೀಕಾಂತ ಸ್ವಾಮಿ ಬೀದರ ಮಾಡಿದರು, ನಿರೂಪಣೆ ಪೂಜ್ಯ ಮಾತೆ ಸತ್ಯದೇವಿ ಮಾತಾಜಿ ಬಸವ ಮಹಾಮನೆ ನೆರವೇರಿಸಿದ್ದರು, ವೇದಿಕೆ ಮೇಲೆ ಪೂಜ್ಯ ಜಗದ್ಗುರು ಡಾ ಚನ್ನಬಸವಾನಂದ ಮಹಾಸ್ವಾಮೀಜಿ ಕುಂಬಳಗೋಡು ಪೀಠ ಬೆಂಗಳೂರು, ಪೂಜ್ಯ ಡಾ ಗಂಗಾಂಬಿಕೆ ಅಕ್ಕ, ಸನ್ಮಾನ್ಯ ಅರವಿಂದ ಜತ್ತಿ ಅಧ್ಯಕ್ಷರು ಬಸವ ಸಮಿತಿ ಬೆಂಗಳೂರು, ಕೃಷ್ಣಪ್ಪ ಮಾಲಿಕರು ಬಸವ ಟಿವಿ ಬೆಂಗಳೂರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
4 Comments
  • It is real renaissance period of Lingayatism.Lingayats will not tolerate attack with ulterior motives on Vachana literature. Stating from Bidari to the other end Chamarajanagara, there is explosion of Lingayat philosophy. We bow our heads before Sri Beldal Sharanaru and his work.

  • ಪೂಜಾ ಶ್ರೀಸಿದ್ದರಾಮೆಶ್ವರ್ ಗುರೂಜಿ ಅಂದರೆ ಸುಮ್ಮ್ನ್ನ್ ಪ್ರವ್ಛನ್ ಮಾಡುವರಲ್ಲ.. ಅದು ಸತ್ಯ ವಾಗಿದ್ದರೆ ಮಾತ್ರ ಸಮಾಜಕ್ಕೆ ನೀರ್ಭಯ ವಾಗಿ ಹೇಳ್ ಬಲ್ಲ ವಕ್ತಿ ದೇಶದಲ್ಲಿ ಯಾರಾದ್ರೂ ಇದ್ದರೆ ಅದು ಶ್ರೀ ಬೆಲ್ದಲ್ ಗುರೂಜಿ ಮಾತ್ರ….ಅವರ ಬಗ್ಗೆ ವರ್ಣನೆ ಮಾಡಕ್ಕೆ ಶಬ್ದಗಲೆ ಇಲ್ಲ.

  • ವೈದಿಕ, ಪಟ್ಟಭದ್ರ ,ಕುತಂತ್ರ ಮಾಡುವರ ಮಾತುಗಳಿಗೆ ಮರುಳ್ಆಗದೆ, ಲಿಂಗ(ಸೂಕ್ಷ್ಮ ಶರೀರ, ಚಿದಬೆಳಕು, ಪರಮಾತ್ಮ) ಆಯತ, ಲಿಂಗ ಸನ್ನಿಹಿತ, ಲಿಂಗ ಸ್ವಾಯತ ಅದವರನ್ನು ಮಾತ್ರ ಲಿಂಗಾಯತ ಎಂದು ಪರಿಗಣಿಸಿ. ಉಳಿದವರನ್ನು ಕೇವಲ ಶೈವರೆಂದು(ಸ್ಮಮಾರ್ಥ) ಪರಿಗಣಿಸಿ.ಪಂಚ ಪೀಠದವರಿಗೆ ಆರೈಸಬೇಕಾಗಿಲ್ಲ.ಅವರು ಸಮಾನತೆ ಸಾರುವಡಿಲ್ಲ, ವರ್ಗ ಭೇದ, ವರ್ಣಭೇದ, ಸ್ತ್ರೀ, ಪುರುಷ ಸಮಾನತೆ ತೋರದೆ, ಸ್ತ್ರೀ ಎನ್ನು ದೇವತೆಯಾಗಿ ಕಾಣದೆ, ಶೋಷಣೆ ಮಾಡುತ್ತಾರೆ. ಅದಕ್ಕೆ ಅವರು ನಮ್ಮ ಸಮನರಲ್ಲವೇ ಅಲ್ಲ

  • ಯಾರೇ ಆಗಲಿ ಮರೆಮಾಸಲು ಪ್ರಯತ್ನಿಸಿದಂತೆ ಇನ್ನೂ ಹೆಚ್ಚು ಹೆಚ್ಚು ಪ್ರಕಾಶಿಸುವುದು ಲಿಂಗಾಯತ ಧರ್ಮ.

    ಶ್ರೀ ಬೆಲ್ದಾಳ ಶರಣರು ಸತ್ಯಶೋಧಕರು. ಆಳವಾದ ಅಧ್ಯಯನ ಮತ್ತು ಸಂಶೋಧನೆಯ ಅಮೂಲ್ಯ ಅನುಭಾವಿಗಳು.

    ಅವರ ಸಾಹಿತ್ಯದ ಮುಂದೆ ಕೈಮುಗಿದು ತಲೆಬಾಗಿಸುವೆ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗಿರಲಿ.

    ಡಾ ಸಂಗಮೇಶ ಕಲಹಾಳ ಕೊಪ್ಪಳ

Leave a Reply

Your email address will not be published. Required fields are marked *