ಬೆಸ್ಟ್ ಆಫ್ ಬಸವ ಮೀಡಿಯಾ – ಓದುಗರು ಮೆಚ್ಚಿದ ಬರಹಗಳು 2024-25
ಬೆಂಗಳೂರು
ಆಗಸ್ಟ್ 8ಕ್ಕೆ ಬಸವ ಮೀಡಿಯಾಗೆ ಒಂದು ವರ್ಷ ತುಂಬುತ್ತದೆ.
12 ತಿಂಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬೆಳೆದಿದ್ದೇವೆ. ಅನೇಕ ಬೆಳವಣಿಗೆಗಳ ಭಾಗವಾಗಿದ್ದೇವೆ. ಶರಣ ಸಮಾಜದ ಗಟ್ಟಿ ಧ್ವನಿಯಾಗಲು ಪ್ರಯತ್ನಿಸಿದ್ದೇವೆ. ಒಂದು ಸಂಸ್ಥೆಯಾಗಿ ರೂಪುಗೊಂಡಿದ್ದೇವೆ.
ಇದನ್ನೆಲ್ಲಾ ಸಾಧ್ಯಗೊಳಿಸಿದ ಎಲ್ಲರಿಗೂ ನಮ್ಮ ಹೃದಯಾಂತರಾಳದ ಕೃತಜ್ಞತೆಗಳು.
ಬಸವ ಮೀಡಿಯಾದ ಮೊದಲನೇ ಹುಟ್ಟಿದ ಹಬ್ಬವನ್ನು ಆಚರಿಸಲು ಒಂದು ವರ್ಷದಲ್ಲಿ ಪ್ರಕಟವಾದ ಅತ್ಯಂತ ಜನಪ್ರಿಯವಾದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರುತ್ತಿದ್ದೇವೆ:

388 ಪುಟಗಳ, 38 ಲೇಖಕರ ನೂರಕ್ಕೂ ಹೆಚ್ಚು ಬರಹಗಳಿರುವ ಪುಸ್ತಕ ಈಗ ಮುದ್ರಣದಲ್ಲಿದೆ. ಪುಸ್ತಕ ಮುಗಿಸಿದ ಮೇಲೆ ನಮಗೆ ಲಿಂಗಾಯತ ಧರ್ಮದ ಹೋರಾಟ ಬಹಳ ಮಹತ್ವದ ಕಾಲಘಟ್ಟ ಪ್ರವೇಶಿಸಿದೆ ಎಂದು ಅನಿಸಿತು.
ಕಳೆದ ಒಂದು ವರ್ಷದಿಂದ ಲಿಂಗಾಯತರ ಮೇಲೆ ನಿರಂತರವಾದ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ನಮ್ಮ ಇತಿಹಾಸವನ್ನು ಅಳಿಸುವಂತಹ, ಕಲ್ಯಾಣದ ಕ್ರಾಂತಿಯನ್ನೇ ನಿರಾಕರಿಸುವಂತಹ, ವಚನಗಳನ್ನು ತಿರುಚುವಂತಹ, ಬಸವಣ್ಣನವರನ್ನು ಹಿಂದೂ ಯೋಗಿಯಂತೆ ಚಿತ್ರಿಸುವಂತಹ ಪ್ರಯತ್ನಗಳು ಒಂದರ ಹಿಂದೆ ಒಂದು ನಡೆದಿವೆ.
ವಚನ ದರ್ಶನ ಪುಸ್ತಕ, ಶರಣರ ಶಕ್ತಿ ಚಲನಚಿತ್ರ, ಕುಂಭಮೇಳಕ್ಕೆ ಲಿಂಗಾಯತರನ್ನು ಸೆಳೆಯುವ ಪ್ರಯತ್ನ, ಸೇಡಂನಲ್ಲಿ ಸಂಘ ಪರಿವಾರದ ಉತ್ಸವ, ವೀಣಾ ಬನ್ನಂಜೆ ಕಣ್ಣಿಗೆ ಕಾಣಿಸುವ ಕೆಲವು ಉದಾಹರಣೆಗಳಷ್ಟೇ.
ಇದರ ಜೊತೆ ಬಸವಣ್ಣನವರ, ಬಸವ ಭಕ್ತರ ಬಗ್ಗೆ ಹಗುರವಾಗಿ ಬಾಯಿ ಬಿಟ್ಟ ಯತ್ನಾಳ ಮತ್ತು ಕನ್ಹೇರಿ ಶ್ರೀ, ಶಂಕರ್ ಬಿದರಿಯವರ ಮೂಢ ಆವಾಂತರ, ಲಿಂಗಾಯತರ ಹೆಗಲೇರಲು ನಡೆಸುತ್ತಿರುವ ಪಂಚಾಚಾರ್ಯರ ಹತಾಶೆಯ ಪ್ರಯತ್ನಗಳು ಈ ಸಂಘರ್ಷದ ಮತ್ತೊಂದು ಆಯಾಮ.
ಬಸವ ಮೀಡಿಯಾ ಪುಸ್ತಕದಲ್ಲಿ ಲಿಂಗಾಯತರ ಮೇಲೆ ಬಿದ್ದ ಏಟುಗಳು ಮತ್ತವರು ಅದಕ್ಕೆ ಕೊಟ್ಟ ಎದಿರೇಟುಗಳು ಕೂಡ ದಾಖಲಾಗಿವೆ.
ಲಿಂಗಾಯತರು ಹೇಗೆ ತಿರುಗಿ ಬೀಳಲು ಶುರುಮಾಡಿದ್ದಾರೆ ಎಂದು ಪುಸ್ತಕ ನೋಡಿದರೆ ಅರ್ಥವಾಗುತ್ತದೆ.
ವಚನ ದರ್ಶನಕ್ಕೆ ವಿರುದ್ಧವಾಗಿ ಎರಡು ಉತ್ಕೃಷ್ಟ ಪುಸ್ತಕಗಳು ಬಂದವು. ಶರಣರ ಶಕ್ತಿ ಬಿಡುಗಡೆಯಾಗಲು ತಿಣುಕಾಡಬೇಕಾಯಿತು. ಶಂಕರ ಬಿದರಿ ಸುತ್ತೋಲೆ ಬಂದ ವೇಗದಲ್ಲೇ ಕಣ್ಮರೆಯಾಯಿತು.
ಬೆಂಗಳೂರಿನಲ್ಲಿ ಪುಸ್ತಕ ಸುಟ್ಟಿದ್ದು, ಕಲಬುರ್ಗಿಯಲ್ಲಿ 50 ಶರಣ ಶರಣೆಯರು ಪೊಲೀಸ್ ಅತಿಥಿಯಾಗಿದ್ದು, ಮಲ್ಲೇಪುರಂ ವೆಂಕಟೇಶ್ ಮೈಸೂರು ಕಾರ್ಯಕ್ರಮದಿಂದ ಹೊರಗುಳಿದಿದ್ದು, ಬಿಜೆಪಿ ಶಾಸಕ ಶ್ರೀವತ್ಸ ಭಾಷಣ ನಿಲ್ಲಿಸಿದ್ದು, ವೀಣಾ ಬನ್ನಂಜೆ ಬೆದರಿ ವಿಡಿಯೋ ಡಿಲೀಟ್ ಮಾಡಿದ್ದು ಇವೆಲ್ಲಾ ವಿವರವಾಗಿ ದಾಖಲಾಗಿದೆ.
ಇವೆಲ್ಲರ ಜೊತೆ ಅನಿಯಂತ್ರಿತ ವೇಗದಲ್ಲಿ ನಡೆಯುತ್ತಿರುವ ಬಸವ ತತ್ವದ ಪ್ರಚಾರ, ಸುದ್ದಿ ಮಾಡಿದ ಶರಣ, ಶರಣೆಯರು, ಎಲ್ಲೆಲ್ಲೂ ನಡೆಯುತ್ತಿರುವ ನಿಜಾಚರಣೆಗಳೂ ಪುಸ್ತಕದಲ್ಲಿವೆ.

ಇಂದು ಲಿಂಗಾಯತರು ನಡೆಸುತ್ತಿರುವ ಹೋರಾಟ ಕೇವಲ ಕಾನೂನಿನ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟವಲ್ಲ. ಒಂದು ದೊಡ್ಡ ಸಮಾಜ ತನ್ನ ಅದ್ಭುತ ಪರಂಪರೆಯನ್ನು ಮತ್ತೆ ಸ್ಥಾಪಿಸಲು ನಡೆಸುತ್ತಿರುವ ಹೋರಾಟ. ಕರ್ನಾಟಕದ ಸಾಂಸ್ಕೃತಿಕ ನಾಯಕರ ಋಣ ತೀರಿಸುವ ಪ್ರಯತ್ನ. ಇದು ಸಾಣೇಹಳ್ಳಿ ಶ್ರೀಗಳು ಹೇಳುವಂತೆ ಸರ್ವಜನಾಂಗದ ಶಾಂತಿಯ ತೋಟವನ್ನು ಮಂಗಗಳಿಂದ ರಕ್ಷಿಸಿಕೊಳ್ಳಲು ನಡೆಯುತ್ತಿರುವ ಸಂಘರ್ಷ.
ಈ ನಿಟ್ಟಿನಲ್ಲಿ ನಮ್ಮ ಕೆಲಸ ಮುಂದುವರೆಸುತ್ತ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಿಮ್ಮ ಬೆಂಬಲ, ಅಭಿಮಾನ, ಪ್ರೀತಿ ಹೀಗೆಯೇ ಮುಂದುವರೆಯಲಿ. ನೆನಪಿರಲಿ, ಬಸವ ಮೀಡಿಯಾ ನಿಮ್ಮ ದಾಸೋಹದಿಂದಲೇ ನಡೆಯುತ್ತಿರುವ ಮಾಧ್ಯಮ. ಸಾಧ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ಶಕ್ತಿ ತುಂಬಿ ಎನ್ನುವುದು ನಮ್ಮ ವಿನಮ್ರ ಮನವಿ.
ಬಸವ ಮೀಡಿಯಾ ಪುಸ್ತಕದ ಕನಿಷ್ಠ ಎರಡು ಪ್ರತಿ ತೆಗೆದುಕೊಳ್ಳಿ. ಒಂದು ನೀವಿಟ್ಟುಕೊಳ್ಳಿ, ಇನ್ನೊಂದು ನಿಮ್ಮ ಪಕ್ಕದ ಮನೆಯವರಿಗೆ ಕೊಡಿ. ಇಂದು ಲಿಂಗಾಯತರಲ್ಲಿ ಆಗುತ್ತಿರುವ ಬದಲಾವಣೆ ಎಲ್ಲರಿಗೂ ತಿಳಿಯಲಿ.
ಬೆಸ್ಟ್ ಆಫ್ ಬಸವ ಮೀಡಿಯಾ – ಓದುಗರು ಮೆಚ್ಚಿದ ಬರಹಗಳು 2024-25.
ಪುಟಗಳು | 388 |
ಮುನ್ನುಡಿ | ಎಸ್ ಎಂ ಜಮದಾರ್ |
ಪ್ರಸ್ತಾವನೆ | ಟಿ ಆರ್ ಚಂದ್ರಶೇಖರ್ |
ಸಂಪಾದಕರು | ಎಂ ಎ ಅರುಣ್/ರವೀಂದ್ರ ಹೊನವಾಡ |
ಬೆಲೆ | 300 ರೂ (ಆರಂಭದ ರಿಯಾಯತಿ 250 ರೂ + ಅಂಚೆ) |
ಲೇಖಕರು
ಎಸ್. ಎಂ. ಜಾಮದಾರ | ಪ್ರಕಾಶ್ ಹೆಬ್ಬಳ್ಳಿ |
ವೀರಣ್ಣ ರಾಜೂರ | ಶಿವಣ್ಣ ಇಜೇರಿ |
ವಿಶ್ವೇಶ್ವರಯ್ಯ ಬಿ. ಎಂ. | ಬಿ. ಚನ್ನಪ್ಪ |
ನಂದೀಶ್ವರ ದಂಡೆ | ಶಿವಾನಂದ ಗುಂಡಾನವರ |
ಟಿ.ಆರ್. ಚಂದ್ರಶೇಖರ | ಪೂಜ್ಯ ಶಿವಾನಂದ ಸ್ವಾಮೀಜಿ |
ಮಹಾಂತೇಶ ದೊಡ್ಮನಿ | ಪೂಜ್ಯ ಬಸವಗೀತಾ ಮಾತಾಜಿ |
ಡಿ.ಪಿ. ನಿವೇದಿತಾ | ಜೆ.ಎಸ್. ಪಾಟೀಲ |
ರವೀಂದ್ರ ಹೊನವಾಡ | ಎಚ್. ಶಿವಕುಮಾರ |
ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿ | ಎಂ ಎಂ ಕಲ್ಬುರ್ಗಿ |
ಹೆಚ್. ಎಂ. ಸೋಮಶೇಖರಪ್ಪ | ಪೂಜ್ಯ ಓಂಕಾರೇಶ್ವರ ಸ್ವಾಮೀಜಿ |
ಪಿ. ರುದ್ರಪ್ಪ ಕುರಕುಂದಿ | ಬಸವರಾಜ ರೊಟ್ಟಿ |
ಶಾಂತಕುಮಾರ ಹರ್ಲಾಪುರ | ಕೆ. ನೀಲಾ |
ಡಾ. ರಾಜಶೇಖರ ನಾರನಾಳ | ಪ್ರಮಥ ಸತ್ಯಂಪೇಟೆ |
ವೀರಣ್ಣ ಕಲ್ಮನಿ | ಪೂಜ್ಯ ಬಸವಪ್ರಭು ಸ್ವಾಮೀಜಿ |
ಸಿದ್ದೇಶ ಬಣಕಾರ | ಶ್ರೀಶೈಲ ಜಿ ಮಸೂತೆ |
ಎಂ. ಎ. ಅರುಣ್ | ಡಾ ಎನ್.ಬಿ. ಶ್ರೀಧರ |
ರಂಜಾನ್ ದರ್ಗಾ | ಮಹಾಂತೇಶ ತೋರಣಗಟ್ಟಿ |
ಪ್ರೊ. ಸಂಜಯ ಮಾಕಲ | ಶ್ರೀಧರ ಗೌಡರ |
ಕುಮಾರಣ್ಣ ಪಾಟೀಲ್ | ಶ್ರೀಕಾಂತ ಸ್ವಾಮಿ |
ರಮೇಶಸ್ವಾಮಿ ಮಠಪತಿ | ಪ್ರಕಾಶ ಗಿರಿಮಲ್ಲನವರ |

(ಪ್ರತಿಗಳಿಗೆ ಸಂಪರ್ಕಿಸಲು ಜಂಗಮವಾಣಿ ಸಂಖ್ಯೆಯನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು. ಪುಸ್ತಕಕ್ಕೆ ದಾಸೋಹ ನೀಡಿರುವ ಅಶೋಕ ಬರಗುಂಡಿ, ಟಿ ಆರ್ ಚಂದ್ರಶೇಖರ್ ಮತ್ತು ಎಚ್ ಎಂ ಸೋಮಶೇಖರಪ್ಪ ಅವರಿಗೆ ಧನ್ಯವಾದಗಳು.)
ಬಸವ ಮೀಡಿಯಾ ಒಂದು ಮೀಡಿಯಾವಾಗಿದೆ ಎನ್ನುವುದಕ್ಕಿಂತಲೂ ಲಿಂಗಾಯತ ಧರ್ಮದ ತತ್ವಸಿದ್ದಾಂತಗಳನ್ನ ಅರಿವು ಮೂಡಿಸುವ ಮಹಾಸಾಗರವಾಗಿಯೇ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು. ಬಸವ ಮೀಡಿಯಾ ಲಿಂಗಾಯತ ಧರ್ಮದ ತತ್ವಸಿದ್ದಾಂತಗಳನ್ನ ಮತ್ತು ಬಸವ ಧರ್ಮಿಯರು ನಡೆಸುವ ಕಾರ್ಯಗಳನ್ನ ನಿರಂತರ ಬಿತ್ತರಿಸಿ ಹಾಗು ಲಿಂಗಾಯತ ಧರ್ಮದ ವಿರೋಧಿಗಳ ಕುತಂತ್ರಗಳ ಬಗ್ಗೆ ಲಿಂಗಾಯತ ಪರರನ್ನ ಮತ್ತಷ್ಟು ಎಚ್ಚರವಹಿಸಲು ಶ್ರಮಿಸಿದ ರೀತಿ ಶ್ಲಾಘನೀಯ.
ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಲಿಂಗಾಯತ ಧರ್ಮದ ವಿಚಾರಗಳನ್ನ ಹತ್ತಿಕ್ಕುವ ಕುತಂತ್ರಿಗಳ ಬಗೆಗಿನ ವಿಚಾರಗಳನ್ನ ಹಾಗು ನಿರಂತರವಾಗಿ ಬಸವ ತತ್ವದ ಕಾರ್ಯಗಳು ಕೂಡಾ ನಡೆಯುತ್ತಿರುವ ಬಗ್ಗೆ ಪುಸ್ತಕ ರೂಪದಲ್ಲಿ ತಂದಿರುವುದು ಬಹಳ ಉಪಯೋಗದಿಂದ ಕೂಡಿದೆ. ಯಾಕಂದ್ರೆ ಮೀಡಿಯಾ ಮುಖಾಂತರ ಬಂದದ್ದು ಅಂದಂದಿನ ವಿಷಯ ಮಾತ್ರ ಜ್ಙಾಪಕ ಇರುತ್ತಿತ್ತು ಆದರೆ ಪುಸ್ತಕವು ದಾಖಲೆಯಾಗಿ ಉಳಿಯಲಿದೆ ಆದ್ದರಿಂದ ಪುಸ್ತಕದಲ್ಲಿ ಇರುವುದನ್ನ ಮಸ್ತಕಕ್ಕೆ ತುಂಬಿಕೊಳ್ಳಲು ಸಹಕಾರಿಯಾಗಲಿದೆ. ಬಸವ ಮೀಡಿಯಾಕ್ಕೆ ಅನಂತ ಶರಣು ಶರಣಾರ್ಥಿಗಳು
Deliberately some swamijies are forced to avoid the names and the achievements of 12th century Saints..Sharanas in the Keerthana , purana , pravachan and such religious functions.
ಲಿಂಗಾಯತ ಮಹಾಸಭಾ ದಲ್ಲಿ ಅಥವ ಬಸವ ಮೀಡಿಯಾ ದಲ್ಲಿ ಯಾಗಲಿ ಎಷ್ಟು ಜನ ಪಧಾಧಿ ಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡ ದವರಿದ್ದಾರೆ. ಎಷ್ಟರ ಮಟ್ಟಿಗೆ ಬಸವಣ್ಣ ನವರ್ ಆಲೋಚನೆ ಗಳನ್ನು ಅನುಸರಿಸಿ ಲಾಗಿದೆ
They must come forward and use the opportunity.