ಭಾಲ್ಕಿ:
ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮವನ್ನು ಭಾಲ್ಕಿ ಹಿರೇಮಠ ಸಂಸ್ಥಾನದಿಂದ ಅಕ್ಟೋಬರ್ 03ರಿಂದ 12ರ ವರೆಗೆ ಪ್ರತಿದಿನ ಸಂಜೆ 05.30ಗಂಟೆಗೆ ಶ್ರೀ ಚನ್ನಬಸವಾಶ್ರಮ ಭಾಲ್ಕಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು ಅನುಭವ ಮಂಟಪ, ಬಸವಕಲ್ಯಾಣ ಹಾಗೂ ಪೂಜ್ಯ ಶ್ರೀ ಗುರುಬಸವ ದೇವರು ಹಿರೇಮಠ ಸಂಸ್ಥಾನ, ಭಾಲ್ಕಿ ಇವರುಗಳು ವಹಿಸಲಿದ್ದಾರೆ.
ಶರಣೆ ಚಂದ್ರಕಲಾ ಪ್ರಭು ಡಿಗ್ಗೆ ಅಧ್ಯಕ್ಷರು, ಮರಣವೇ ಮಹಾನವಮಿ, ಕಲ್ಯಾಣ ಕ್ರಾಂತಿ ವಿಜಯೋತ್ಸವ ಸೇವಾ ಸಮಿತಿ, ಭಾಲ್ಕಿ ಇವರು ಉಪಸ್ಥಿತರಿರಲಿದ್ದಾರೆ.
ಪ್ರತಿದಿನ ಬೆಳಿಗ್ಗೆ 5:00 ಗಂಟೆಗೆ ಶರಣೆ ಮಲ್ಲಮ್ಮ ನಾಗನಕೆರೆ ಅವರಿಂದ ಶಿವಯೋಗ ಇರುತ್ತದೆ.
ಅಕ್ಕನ ಬಳಗ, ಭಾರತೀಯ ಬಸವ ಬಳಗ, ಹಿರೇಮಠ ಸಂಸ್ಥಾನ, ಭಾಲ್ಕಿ ಇವರುಗಳು ಸರ್ವರಿಗೂ ಸ್ವಾಗತ ಕೋರಿದ್ದಾರೆ.