ಭಾರತದ ಅಸ್ಮಿತೆ ಅದರ ಬಹುತ್ವದಲ್ಲಿದೆ: ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದೆ. ಪ್ರತಿಯೊಂದರಲ್ಲಿಯೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಭಾರತದ ಅಸ್ಮಿತೆ ಬಹುತ್ವದಲ್ಲಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೧೨ ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಯುದ್ಧಗಳು ಹೆಚ್ಚಾಗುತ್ತಿವೆ. ಯುದ್ಧಗಳ ಪ್ರಭಾವದಿಂದ ಇಡೀ ಜಗತ್ತೆ ತಲ್ಲಣಿಸುತ್ತಿದೆ. ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ.

ಜಗತ್ತಿನಲ್ಲಿ ಶಾಂತಿ-ನೆಮ್ಮದಿ ಪ್ರೀತಿ ಮೂಡಬೇಕಾದರೆ ಮನುಷ್ಯ ಮನುಷ್ಯರ ಮಧ್ಯೆ ಭಾವಗಳು ಅರಳಬೇಕಾಗಿದೆ.

ಜಗತ್ತಿನಲ್ಲಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು, ಹೋರಾಟಗಾರರು ಜನ್ಮ ತಳೆದಿದ್ದಾರೆ. ಈ ಮಹಾತ್ಮರು ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ್ದಾರೆ. ಅವರಲ್ಲಿ ಮುಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರರು, ಬುದ್ಧ, ಮಹಾವೀರ ಹೀಗೆ ಅನೇಕರಿದ್ದಾರೆ. ಇಂಥವರ ಆದರ್ಶ, ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದು ಮಾತನಾಡಿದರು.

ಗದುಗಿನ ಖ್ಯಾತ ವೈದ್ಯರಾದ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ಬರೆದ ಭಾವೈಕ್ಯತೆಯ ಬೆಳಕು ಕೃತಿಯ ಬಿಡುಗಡೆ ಮಾಡಲಾಯಿತು.

ವಿಶ್ವಹಿರಿಯರ ದಿನಾಚರಣೆಯ ನಿಮಿತ್ಯ ಹಿರಿಯರಾದ ಮಾಜಿ ಸಚಿವರಾದ ಎಸ್. ಎಸ್. ಪಾಟೀಲ, ನಿವೃತ್ತ ಶಿಕ್ಷಕರಾದ ಚೆನ್ನಯ್ಯ ತೋಟಯ್ಯ ಹಿರೇಮಠ ಹಾಗೂ ಇನ್ನೋರ್ವ ನಿವೃತ್ತ ಶಿಕ್ಷಕರಾದ ಎಸ್. ಎಂ. ವಾಲಿ ಅವರನ್ನು ಸನ್ಮಾನಿಸಲಾಯಿತು.

ಭಾವೈಕ್ಯತೆಯ ಬೆಳಕು ಕೃತಿ ಪರಿಚಯ ಮಾಡಿದ ಗದುಗಿನ ಜಮಾತ್-ಎ-ಇಸ್ಲಾಂ ಅಧ್ಯಕ್ಷರಾದ ಎ.ಐ. ಶೇಖ್ ಅವರು ಭಾವಕ್ಯತೆಯ ಬೆಳಕು ಕೃತಿ ನಮ್ಮೆಲ್ಲರನ್ನು ಒಂದುಗೂಡಿಸುವ ಏಕತೆಯನ್ನು ಸಾಧಿಸುವ ಅಪರೂಪದ ಕೃತಿಯಾಗಿದೆ.

ಡಾ. ಸಮುದ್ರಿಯವರು ನಿಜಕ್ಕೂ ಭಾರತದ ಬಹುತ್ವವನ್ನು ಇದರಲ್ಲಿ ಎತ್ತಿ ಹಿಡಿದಿದ್ದಾರೆ. ಮೊದಲು ನಾವೆಲ್ಲರೂ ಭಾರತೀಯರು ಎಂಬುದನ್ನು ಸಾಧಿಸಿದ್ದಾರೆ ಎಂದರು. ಈ ಕೃತಿಯನ್ನು ಯುವಕರಿಗೆ ಅರ್ಪಿಸಿರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ ಎಂದರು.

‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯದ ಕುರಿತು ಗಿರಿಜಕ್ಕ ಧರ್ಮರಡ್ಡಿ ಅವರು ಪ್ರವಚನ ಮಾಡಿದರು.

ಕೃತಿಯ ಲೇಖಕ ಎಂ. ಡಿ. ಸಮುದ್ರಿಯವರು ಭಾವೈಕ್ಯತೆಯ ಬೆಳಕು ಕೃತಿಯನ್ನು ಬರೆಯಲು ನನ್ನ ತಂದೆ ತಾಯಿ, ಕುಟುಂಬ ಪರಿವಾರ, ಗುರುಗಳು ಆದಿಯಾಗಿ ಅನೇಕರ ಸಹಾಯ ಸಹಕಾರವನ್ನು ಸ್ಮರಿಸಿ ಅವರಿಗೆ ಚಿರಋಣಿಯಾಗಿದ್ದೇನೆ ಎಂದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಸ್ಫೂರ್ತಿ ಸೈದಾಪೂರ, ವಚನ ಚಿಂತನ ಪುಷ್ಪಾವತಿ ಮನೋಹರ ಮಾಲಿಪಾಟೀಲ ನೆರವೇರಿಸಿದರು.

ದಾಸೋಹ ಸೇವೆಯನ್ನು ಚನ್ನಮ್ಮ ಚಳ್ಳಮರದ, ಲಲಿತಾ ಕಾಶಿನಾಥಗೌಡ ಪಾಟೀಲ ಹಾಗೂ ಪರಿವಾರ, ಗಿರಿಜಾದೇವಿ ಚನ್ನಬಸಯ್ಯ ಕನಕೇರಿಮಠ ಸಾ. ಬಾಗಲಕೋಟೆ ಇವರ ಸ್ಮರಣಾರ್ಥ ಅವರ ಕುಟುಂಬವರ್ಗ, ರೇವಣಸಿದ್ದಪ್ಪ ಚನ್ನಪ್ಪ ಬ್ಯಾಕೋಡ ಸಾ. ಹುಣಸಗಿ ಇವರ ಕುಟುಂಬ ವರ್ಗದವರು ಕೈಗೊಂಡಿದ್ದರು.

ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಕಾರ್ಯಕ್ರಮ ನಿರೂಪಣೆ ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಕಲ್ಲನಗೌಡರ ಮಾಡಿದರು. ಉಪಾಧ್ಯಕ್ಷ ಪ್ರಭು ಗಂಜೀಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *