ರಾಯಚೂರು ಬಸವ ಕೇಂದ್ರದಲ್ಲಿ ಚನ್ನಬಸವಣ್ಣನವರ ಜಯಂತಿ

ರಾಯಚೂರು

ಬಸವ ಕೇಂದ್ರದಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಬೆಟ್ಟಪ್ಪ ಕಸ್ತೂರಿಯವರು ಮಾತನಾಡಿ, ಚನ್ನಬಸವಣ್ಣನವರು ಷಟ್ಯಸ್ಥಲ ಸಿದ್ಧಾಂತಕ್ಕೆ ಸುಭದ್ರವಾದ ಶಾಸ್ತ್ರೀಯ ತಳಹದಿಯನ್ನು ಹಾಕಿದ್ದರಲ್ಲದೆ, ಕರಣಹಸಗೆ, ಮಿಶ್ರಾರ್ಪಣ, ಪದಮಂತ್ರಗೋಷ್ಠಿ, ಮಂತ್ರಗೊಪ್ಯ, ಕಾಲಜ್ಞಾನಗಳನ್ನು ಬರೆದು ಲಿಂಗಾಯತ ತತ್ವಕ್ಕೆ ಭದ್ರಬುನಾದಿ ಹಾಕಿದರು ಎಂದರು.

ಡಾ. ಶಿವಕುಮಾರ ಮಾಟೂರ ಮಾತನಾಡಿ, ಚನ್ನಬಸವಣ್ಣನವರು ಹುಟ್ಟುವುದಕ್ಕೆ ಮುನ್ನ ಮಾತೃ ಗರ್ಭದಿಂದಲೇ ಬಸವತತ್ವ ಪ್ರಭಾವದ ಅಪೂರ್ವ ಅವಕಾಶವನ್ನು ಪಡೆದ ಮಹಾನ್ ದಾರ್ಶನಿಕ. ಇವರು ತ್ರಿವಿಧ ದಾಸೋಹದ ಪೂರ್ಣ ಮಾರ್ಗದಲ್ಲಿ ಬೆಳೆದು ಪರಿಪೂರ್ಣತೆಯ ಮಟ್ಟಕ್ಕೆರಿದ್ದರಲ್ಲದೆ, ಗುರು ಲಿಂಗ ಜಂಗಮ ದಾಸೋಹದ ಪೂರ್ಣ ಮಾರ್ಗದಲ್ಲಿ ಬೆಳೆದು ಪರಿಪೂರ್ಣತೆಯ ಮಟ್ಟಕ್ಕೇರಿದ ಮಹಾನ್ ಶರಣನೆಂದರು.

ಶರಣೆ ಸುಮಂಗಲಾ ಹಿರೇಮಠ ಮಾತನಾಡಿ, ಚನ್ನಬಸವಣ್ಣನವರ ಜನನ ದೀಪಾವಳಿ ಪಾಡ್ಯದಂದು, ಲಿಂಗೈಕ್ಯವಾಗಿದ್ದು ಭಾರತ ಹುಣಿಮೆ ದಿನ. ಅವರು ಬದುಕಿದ್ದು 24 ವರ್ಷವೆಂದು ಹೇಳಿದರಲ್ಲದೇ, ಕಲ್ಯಾಣಕ್ರಾಂತೀಯ ನಂತರ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಸಮಸ್ತ ಶರಣರೊಡನೆ ಕೂಡಿ, ಬಿಜ್ಜಳನ ಸೈನಿಕರೊಡನೆ ಹೋರಾಡಿ ವಚನ ಸಾಹಿತ್ಯವನ್ನು ರಕ್ಷಿಸಿದ ಮಹಾನ್ ಚೇತನ ಅವರೆಂದು ಹೇಳಿದರು.

ಪರಮೇಶ್ವರ ಸಾಲಿಮಠ, ಮಲ್ಲಿಕಾರ್ಜುನ ಗುಡಿಮನಿ ಮಾತನಾಡಿದರು. ರಾಚನಗೌಡ ಕೋಳೂರವರು ಅಧ್ಯಕ್ಷಿಯ ನುಡಿಗನ್ನಾಡಿದರು.

ರಾಘವೇಂದ್ರ ಆಶಾಪುರ, ಎಸ್. ಶಂಕರಗೌಡರು, ನಾಗೇಶಪ್ಪ, ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ವೀರೇಶ ಕಳ್ಳೊಳ್ಳಿ ಸ್ವಾಗತಿಸಿದರು. ಸಿ. ಬಿ. ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಮಹಾದೇವಪ್ಪ ಏಗನೂರ ವಂದಿಸಿದರು. ಅನೇಕ ಶರಣ, ಶರಣೆಯರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *