ಚಿಂಚೋಳಿ
ಜಡ್ಡುಗಟ್ಟಿದ ಸಮಾಜದಲ್ಲಿ ಮೌಡ್ಯಗಳೆ ತುಂಬಿದ ಆಚರಣೆಗಳನ್ನು ಪ್ರಶ್ನಿಸುವ ಮನೋಧೈರ್ಯ ತುಂಬಿದವರು ಬಸವಾದಿ ಶರಣರು. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಿದರು. ಆಚರಣೆಗಳು ಇರಲಿ. ಆದರೆ ಅಂಧಾಚರಣೆಗಳಿಂದ ಮಾನಸಿಕ ಮಾಲಿನ್ಯದೊಂದಿಗೆ ಪರಿಸರ ಮಾಲಿನ್ಯ ಆಗುತ್ತದೆ. ಹಾವು ಹಾಲು ಕುಡಿಯುವುದಿಲ್ಲ. ಕಾರಣ ಹಾಲನ್ನು ಹುತ್ತಕ್ಕೆ ಸುರಿಯದೇ ಅಗತ್ಯತೆಯುಳ್ಳವರಿಗೆ ಕೊಡಿ ಎಂದು ಕವಿಯಿತ್ರಿ ಜ್ಯೋತಿ ಬೊಮ್ಮಾ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಶರಣೆ ನೀಲಾಂಬಿಕೆ ಟ್ರಸ್ಟ್ ಹಾಗೂ ಬಸವಪರ ಸಂಘಟನೆಗಳು ತಾಲೂಕಾ ಆಸ್ಪತ್ರೆಯಲ್ಲಿ ಏರ್ಪಡಿಸಿದ ಬಸವಪಂಚಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹಿರಿಯ ಮುಖಂಡರಾದ ಬಾಬುರಾವ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಹನ್ನೆರಡನೆ ಶತಮಾನದ ಬಸವಾದಿ ಶರಣರ ಕ್ರಾಂತಿ ಮಾನವನನ್ನು ಪ್ರಗತಿಪಥದೆಡೆಗೆ ಕರೆದೊಯ್ಯುವ ಕ್ರಾಂತಿಯಾಗಿತ್ತು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಶರಣರು ಮನುಕುಲದ ಉದ್ದಾರಕರಾಗಿದ್ದಾರೆ. ಆದರೆ ಬಸವಣ್ಣನವರ ವಿಚಾರಗಳನ್ನು ಪ್ರಚಾರ ಮಾಡುವವರು ಭಯದ ವಾತವರಣದಲ್ಲಿ ಬದುಕುವಂತಾಗಿದೆ ಎಂದು ಬಾಬುರಾವ ಪಾಟೀಲ ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಡಿ. ಗಫೂರ, ಶಕುಂತಲಾ ಹುಲಿ ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಂದಿಕುಮಾರ ಪಾಟೀಲ ಪ್ರಾರ್ಥಿಸಿದರು. ಸೂರ್ಯಕಾಂತ ಹುಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ್ ನಿರೂಪಿಸಿದರು. ಕಾಶಿನಾಥ ಹುಣಜೆ ವಂದಿಸಿದರು.