ಚಿತ್ರದುರ್ಗ
ರಾಷ್ಟ್ರೀಯ ಬಸವದಳ ಚಿತ್ರದುರ್ಗ ಜಿಲ್ಲಾಮಟ್ಟದ ಅಧಿವೇಶನ, ಡಾ. ಮಾತೆ ಮಹಾದೇವಿಯವರ 79 ನೇ ಜಯಂತಿ ಮತ್ತು ಆರನೇ ವರ್ಷದ ಲಿಂಗೈಕ್ಯ ಸಂಸ್ಕರಣೆ ಸಮಾರಂಭ ಮಾರ್ಚ್ 23 ನಗರದ ಬಸವ ಮಂಟಪದಲ್ಲಿ ಜರುಗಲಿದೆ.
ಸಮಾವೇಶದ ಸಾನಿಧ್ಯವನ್ನು ಪೂಜ್ಯ ದಾನೇಶ್ವರಿ ಮಾತಾಜಿಯವರು, ಪೂಜ್ಯ ಬಸವಯೋಗಿ ಸ್ವಾಮೀಜಿ ನೇತೃತ್ವ ವಹಿಸುವರು.
ಸಮ್ಮುಖವನ್ನು ಪೂಜ್ಯ ಬಸವೇಶ್ವರ ಮಾತಾಜಿ, ಅಧ್ಯಕ್ಷತೆಯನ್ನು ಶರಣ ವೆಂಕಟೇಶ ರೆಡ್ಡಿ, ಉದ್ಘಾಟನೆಯನ್ನು ಶರಣ ಸುಮಿತ ಬಿ.ಎನ್, ಧ್ವಜಾರೋಹಣ ಈಶ್ವರ ಲಿಂಗಾಯತ ನೆರವೇರಿಸುವರು. ಹುರುಳಿ ಬಸವರಾಜ ಉಪನ್ಯಾಸ ನೀಡುವರು. ಪ್ರಾಸ್ತಾವಿಕವಾಗಿ ಎನ್. ಚಂದ್ರಮೌಳಿ ಮಾತನಾಡಲಿದ್ದಾರೆ.



