ಚಿತ್ರದುರ್ಗ
ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧೀಶರ ಕುರಿತು ಮಾನಹಾನಿಕರ ಮತ್ತು ದ್ವೇಷಬಿತ್ತುವ ಹೇಳಿಕೆ ನೀಡಿದ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ, ಜಿಲ್ಲೆಯ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿಪತ್ರ ನೀಡಲಾಯಿತು.
ಶತ್ರುತ್ವ ಹುಟ್ಟಿಸುವ, ಧಾರ್ಮಿಕ ಭಾವನೆ ಧಕ್ಕೆ ತರುವ ಉದ್ದೇಶದಿಂದ ಭಾರತೀಯ ದಂಡ ಸಂಹಿತೆಯ ವಿಧಿಗಳನ್ನು ಉಲ್ಲಂಘಿಸಿರುವ ಸ್ವಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಮುಖಂಡರಾದ ಕೆಂಚವೀರಪ್ಪ ಜಿ.ಡಿ, ಶೈಲಜಾ ಆರ್. ಬಾಬು, ಬಸವರಾಜ ಕಟ್ಟಿ, ಷಣ್ಮುಖಪ್ಪ, ಪಾರ್ವತಮ್ಮ ರವೀಂದ್ರ, ಪ್ರೊ.ಜಿ.ಎನ್. ಮಲ್ಲಿಕಾರ್ಜುನಪ್ಪ, ಜೆ. ಮಲ್ಲೇಶ, ನಾಯಿಗೆರೆ ರಂಗನಾಥ, ಆರ್. ನಾಗರಾಜಪ್ಪ, ಸದಾಶಿವಪ್ಪ, ಚಂದ್ರಶೇಖರ ಕೈನೋಡು, ಮಂಜುನಾಥ, ಧನಂಜಯ್ಯ, ಲಕ್ಷ್ಮಿಸಾಗರ ಮತ್ತಿತರ ಮುಖಂಡರು ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.