ಹುಬ್ಬಳ್ಳಿ
ಲಿಂಗಾಯತರನ್ನು ವೀರಶೈವರನ್ನು ಒಂದುಗೂಡಿಸಲು ನಗರದಲ್ಲಿ ಶುಕ್ರವಾರ ನಡೆದ ಏಕತಾ ಸಮಾವೇಶದಲ್ಲಿ ಒಗ್ಗಟ್ಟಿಗಿಂತ ಭಿನ್ನಮತವೇ ಪ್ರದರ್ಶನವಾಗಿ ವೇದಿಕೆಯಲ್ಲೇ ಗೊಂದಲವುಂಟಾಯಿತು. ಒಂದು ಹಂತದಲ್ಲಿ ಬಸವರಾಜ ಬೊಮ್ಮಾಯಿ, ಶೆಟ್ಟರ್ ಸಭಾತ್ಯಾಗಕ್ಕೂ ಸಿದ್ದರಾಗಿದ್ದರು.
ಸ್ವತಂತ್ರ ಧರ್ಮ, ಜಾತಿ ಗಣತಿ ವಿಷಯಗಳಲ್ಲಿ ಹಲವಾರು ಭಿನ್ನಧ್ವನಿಗಳು ಕೇಳಿಬಂದವು. ಕೆಲವರು ‘ವೀರಶೈವ ಲಿಂಗಾಯತ’ ಪ್ರತ್ಯೇಕ ಧರ್ಮವೆಂದರೆ, ಕೆಲವರು ಪರೋಕ್ಷವಾಗಿ ಹಿಂದೂ ಧರ್ಮ ಬೆಂಬಲಿಸಿದರು, ಮತ್ತೆ ಕೆಲವರು ಅಡ್ಡ ಗೋಡೆ ಹತ್ತಿ ಕುಳಿತರು.
ಒಡಕಿನ ಕಾರಣದಿಂದ ಏಕತಾ ಸಮಾವೇಶ ಯಾವುದೇ ಸ್ವಷ್ಟ ನಿರ್ಣಯ ತೆಗೆದುಕೊಳ್ಳಲು ವಿಫಲವಾಯಿತು..

ಸ್ವತಂತ್ರ ಧರ್ಮೀಯರು
ಪ್ರಾಸ್ತಾವಿಕ ಭಾಷಣ ಮಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮ ಪಡೆಯುವ ಕಾಲ ಸನ್ನಿಹಿತವಾಗಿದೆ. ಜಾತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವ–ಲಿಂಗಾಯತ ಅಂತಲೇ ಬರೆಯಬೇಕು” ಎಂದು ಕರೆ ನೀಡಿದರು.
“ವೀರಶೈವ–ಲಿಂಗಾಯತ ಸಮಾಜ ಕವಲುದಾರಿಯಲ್ಲಿದೆ. ನಿರುದ್ಯೋಗ, ಬಡತನ ಸಮಸ್ಯೆಗಳು ಕಾಡುತ್ತಿವೆ. ಇದರ ಪರಿಹಾರ ಸಂಘಟನೆಯಲ್ಲಿದೆ. ಮಠಾಧೀಶರು ತಮ್ಮ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಿ ಬರಬೇಕು,” ಎಂದು ಹೇಳಿದರು.
ನಂತರ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್ ಬೇರೆ ಯಾವುದೇ ಧರ್ಮದ ಛತ್ರಿಯ ಅಡಿಯಲ್ಲಿ ನಿಲ್ಲುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.
“ನಾವು ಎಲ್ಲರೂ ವೀರರೂ, ಶೂರರೂ ಹೌದು. ಪ್ರತ್ಯೇಕ ಧರ್ಮ ಹುಟ್ಟು ಹಾಕೋ ಶಕ್ತಿ ನಮ್ಮಲ್ಲಿದೆ. ವೈಯಕ್ತಿಕ ಹಿತಾಸಕ್ತಿ ಬಿಟ್ಟು ಸಮಾಜದ ಹಿತಾಸಕ್ತಿ ಕಡೆಗೆ ತಿರುಗಬೇಕು. ನಮ್ಮನ್ನು ಯಾರಾದರೂ ಧರ್ಮದ ಅಡಿಯಲ್ಲಿ ಇರಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ” ಎಂದು ಕಿಡಿಕಾರಿದರು.
ಹಿಂದೂ ಧರ್ಮೀಯರು
ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವೀರಶೈವ-ಲಿಂಗಾಯತ ಹಿಂದೂ ಧರ್ಮದ ಭಾಗವೇ ಆಗಿದೆ. ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ, ಎಂದು ಹೇಳಿದರು.
ಜಾತಿಗಣತಿಯಲ್ಲಿ ಹಿಂದೂ ಎಂದು ಬರೆಯಲು ಸೂಚಿಸಿ, ಮಹಾರಾಷ್ಟ್ರದಲ್ಲಿ 2 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಆದರೆ ಕರ್ನಾಟಕದಲ್ಲಿ ಲಕ್ಷಗಳ ಲೆಕ್ಕದಲ್ಲಿ ತೋರಿಸಲಾಗುತ್ತಿದೆ. ಆದ ಕಾರಣ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಾವೀಗ ಸಂವಿಧಾನದಲ್ಲಿರುವ ಧರ್ಮವನ್ನಷ್ಟೇ ನಮೂದಿಸಬೇಕು ಎಂದು ಹೇಳಿ ಪರೋಕ್ಷವಾಗಿ ಹಿಂದೂ ಧರ್ಮ ನಮೂದಿಸುವಂತೆ ಸೂಚಿಸಿದರು.
ಆದರೆ “ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹತ್ತಾರು ವರ್ಷಗಳ ಹೋರಾಟವಿದೆ. ಸದ್ಯ ದೇಶದಲ್ಲಿ ಆರೇ ಧರ್ಮಗಳಿವೆ. ನಮ್ಮ ಪ್ರಯತ್ನಕ್ಕೆ ಮುಂದೆ ಜಯ ಸಿಕ್ಕೇ ಸಿಗುತ್ತದೆ. ಯಾವುದೇ ಧರ್ಮಕ್ಕೆ ಸೇರಿದರೂ ಲೆಕ್ಕಕ್ಕಿಲ್ಲ,” ಎಂದಲೂ ಹೇಳಿದರು.
ಸಂವಿಧಾನದಲ್ಲಿ ಆರು ಧರ್ಮಗಳಿಗೆ ಮಾನ್ಯತೆ ನೀಡಲಾಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂದು ಪ್ರಯತ್ನ ನಡೆದಿದೆ. ಈ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಇನ್ನೂ ಮಾನ್ಯತೆ ನೀಡಿಲ್ಲ. ಹೀಗಿರುವಾಗ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಧರ್ಮದ ಕಾಲಂನಲ್ಲಿ ಏನೆಂದು ನಮೂದಿಸಬೇಕು ಎಂಬುದನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ನಿರ್ಧರಿಸಬೇಕು ಎಂದು
ಏಕತಾ ಸಮಾವೇಶದಲ್ಲಿ ಮಾತನಾಡಿದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೊಸ ಧರ್ಮ ಹುಟ್ಟು ಹಾಕುವುದಕ್ಕಿಂತ ಈಗಿರುವ ಧರ್ಮವನ್ನು ಬೆಳೆಸುವುದು ಉತ್ತಮ. ಜಾತಿಗಣತಿಯಲ್ಲಿ ಮಾನ್ಯತೆ ಇಲ್ಲದೇ ಇರುವ ಧರ್ಮದ ಹೆಸರು ಬರೆಸಿದರೆ ಅದಕ್ಕೆ ಮಾನ್ಯತೆ ಸಿಗುವುದಿಲ್ಲ. ವೀರಶೈವ-ಲಿಂಗಾಯತ ಧರ್ಮವಾದರೆ ಉತ್ತಮ, ಆದರೆ ಸದ್ಯ ಆಗಿಲ್ಲ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದರು.

ವಿವೇಚನೆಗೆ ಬಿಡಿ
ಏಕತಾ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಧರ್ಮದ ಕಾಲಂನಲ್ಲಿ ಅವರವರ ವಿವೇಚನೆಗೆ ಬಿಟ್ಟಂತೆ ನಮೂದಿಸಿ. ಆದರೆ ಎಲ್ಲರೂ ಒಂದೇ ಎಂಬುದನ್ನು ಮರೆಯಬೇಡಿ ಎಂದು ಸ್ಪಷ್ಟಪಡಿಸಿದರು.
ಯಾವುದೇ ನಿರ್ಣಯವಿಲ್ಲ
ಏಕತಾ ಸಮಾವೇಶದ ಕೊನೆಗೆ ಮಾತನಾಡಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಏನು ಬರೆಸಬೇಕು ಎಂಬ ಬಗ್ಗೆ ಪಾಲ್ಗೊಂಡಿದ್ದ ಹಲವು ಶ್ರೀಗಳಿಂದ ಹಾಗೂ ರಾಜಕೀಯ ಮುಖಂಡರಿಂದ ಭಿನ್ನ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಮಾವೇಶದಲ್ಲಿ ಸಾಧ್ಯವಾಗಲಿಲ್ಲ ಎಂದರು.
ಇದು ಪ್ರಥಮ ಸಮಾವೇಶ ಆಗಿರುವುದರಿಂದ ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ. ನಮ್ಮ ಸಮಾಜದಲ್ಲಿ ಗುರು- ವಿರಕ್ತರು, ನಿವೃತ್ತ ನ್ಯಾಯಾಧೀಶರು, ವಕೀಲರು, ಹಿರಿಯ ರಾಜಕಾರಣಿಗಳು, ಸಾಹಿತಿಗಳು, ಸಂಶೋಧಕರು ಇದ್ದಾರೆ. ಅವರ ಜತೆಯಲ್ಲಿ ಚರ್ಚಿಸಿ ಮುಂದಿನ ಸಮಾವೇಶಗಳಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಈ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಒಂದೇ ಎಂಬ ನಿರ್ಣಯ ಮಾತ್ರ ತೆಗೆದುಕೊಳ್ಳಲಾಗಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಶಿವ ಸಂಘಟನೆ ಮಾತಿಗೆ ವಿರೋಧ
ಏಕತಾ ಸಮಾವೇಶದದಲ್ಲಿ ಮಹಾರಾಷ್ಟ್ರದ ಶಿವ ಸಂಘಟನೆಯ ಮನೋಹರ ದೋಂಡೆ ಮಾತನಾಡುವಾಗ ಜಾತಿ ಕಾಲಂನಲ್ಲಿ ಹಿಂದೂ ಎಂದು ಬರೆಸುವುದು ಬೇಡ. ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಪ್ರತಿಪಾದಿಸುತ್ತ, ಹಿಂದುತ್ವ ಪ್ರತಿಪಾದಿಸುವ ಕೇಂದ್ರ ಗೃಹಸಚಿವ ಅಮಿತ್ ಶಾ ಧರ್ಮವೂ ಬೇರೆಯಾಗಿದೆ. ಶಾ ಕೇಂದ್ರದಲ್ಲಿ ಎರಡನೆಯ ಸ್ಥಾನದಲ್ಲಿದ್ದಾರೆ ಎಂದು ಪ್ರಸ್ತಾಪಿಸಿದರು.
ಈ ಮಾತಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮಗೆ ಶಿಷ್ಟಾಚಾರ ಹೇಳಿದ್ದಿರಿ, ಆದರೆ ಈಗ ನೀವು ಅದನ್ನೇ ಉಲ್ಲಂಘಿಸಿದ್ದೀರಿ. ನಾವು ಮಾತನಾಡಲು ಆರಂಭಿಸಿದರೆ ಇದಕ್ಕಿಂತ ಹೆಚ್ಚು ಮಾತನಾಡುತ್ತೇವೆ” ಎಂದು ವೇದಿಕೆಯಲ್ಲಿ ಎದ್ದು ಹೇಳಿದರು. ಬೊಮ್ಮಾಯಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಬ್ಬರೂ ಆಕ್ರೋಶದಿಂದ ವೇದಿಕೆಯಿಂದ ಹೊರಡುವ ಸ್ಥಿತಿಗೆ ಬಂದರು.

ಈ ಘಟನೆಯಿಂದ ಬೇಸರಗೊಂಡ ಮಹಾರಾಷ್ಟ್ರದ ದೋಂಡೆ ಕಾರ್ಯಕ್ರಮ ಮುಗಿಯುವ ಮುನ್ನವೇ ಅಲ್ಲಿಂದ ಹೊರನಡೆದರು.
ಮಹಾರಾಷ್ಟ್ರದ ಶಿವ ಸಂಘಟನೆಯ ಕಾರ್ಯಕರ್ತರು ತಮ್ಮ ಅಧ್ಯಕ್ಷ ಮನೋಹರ್ ದೊಂಡೆ ಅವರನ್ನು ಹಿಂದಿನ ಸಾಲಿನಲ್ಲಿ ಕುಳ್ಳಿರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ನಾಯಕನಿಗೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು. ವೇದಿಕೆ ಕೆಳಗೆ ನಿಂತು ಸಂಘಟಕರ ವಿರುದ್ಧ ಆಕ್ರೋಶ ತೋರಿದ ಅವರು, ಕೊನೆಗೆ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಶಾಂತವಾದರು.
ಈ ಸಮಾವೇಶವು ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ನಡೆದಿದ್ದು, ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜ್ಜಿ ಜಗದ್ಗುರು, ಸಿದ್ದಗಂಗಾ ಶ್ರೀ ಸೇರಿದಂತೆ ಸಾವಿರಾರು ಮಠಾಧೀಶರ ಸಾನಿಧ್ಯತೆ ದೊರೆಯಿತು. ಮಾಜಿ ಸಿಎಂ ಶೆಟ್ಟರ್, ಬೊಮ್ಮಾಯಿ, ಸಚಿವರಾದ ಶರಣಬಸಪ್ಪ ದರ್ಶನಾಪುರ್, ಈಶ್ವರ್ ಖಂಡ್ರೆ, ಶಂಕರ ಬಿದರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಿವಲಿಂಗಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಬಸವನೆ ಸತ್ಯ, ಬಸವನೆ ನಿತ್ಯ,
ಬಸವನ ಬಿಟ್ಟು ಮಾಡೋ ಕಾರ್ಯಕ್ರಮ ಅದ್ಹೇಗೆ ಯಶಸ್ವಿಯಾಗಲು ಸಾಧ್ಯ. ಬಸವನೆಂಬುದು ದಯಾಸಾಗರ.
ಬಸವನ ಶಾಪ ಬಿಜ್ಜಲನಗೂ ತಟ್ಟಿದಂತೆ ದಿಂಗಾಲರಿಗೂ ತಪ್ಪಿದ್ದಲ್ಲ. ಎಡಬಿಡಂಗಿ ಧೋರಣೆ ಎದ್ದು ಕಂಡಿತು ಈ ಸಭೆಯಲ್ಲಿ. ಅವಹೇಳನ ಅಪಮಾನ ಸಂಘಟಕರಿಗೆ, ಮುಜುಗರ ಪಂ.ಪಿ ದವರಿಗೆ. ರತ್ನಖಚಿತ ಸಿಂಹಾಸನವೇ ಬೇಕು ಅದು ಅರ್ಧ ಅಡಿ ಎಲ್ಲರಿಗಿಂತ ಎತ್ತರದಲ್ಲಿ ಅನ್ನೋ ಅವರಿಗೆ ಡಿಂಗಾಲೇಶರು ಬುದ್ಧಿ ಕಳಿಸಿದರು. ಇನ್ನಾದರೂ ಡಿಂಗಾಲೇಶರು ಬಸವ ಮಂತ್ರ ಜಪಿಸಿ ಬಸವ ಪಥದಲ್ಲಿ ಬರಲಿ. ಒಳ್ಳೆ ವಾಗ್ಮಿಯಾಗಿದ್ದೀನಿ ಅಂತ ಸುಳ್ಳನ್ನೇ ಸತ್ಯದ ತಲೆ ಮೇಲೆ ಕೌಶಲ್ಯ ನಿಮ್ಮಲ್ಲಿ ಕರಗತವಾಗಿದೆ.
” ಉದರ ಪೋಷಣೆಗೆ ಲಾಂಚನವ ಧರಿಸಿಪ್ಪ ನಿಮಗೆ ಧಿಕ್ಕಾರ”
ವರ್ಣಮಾಲೆಗಳಿಂದ ಸರಿಯಾದ ಮಾಲೆಯನ್ನೇ ಹಾಕಿದ್ದೀರಿ . ಅಭಿನಂದನೆಗಳು ತಮಗೆ. 🌹🙏
ಬಸವ ತತ್ವದ ಸತ್ವವನ್ನು ಸಾರದೆ,, ವಚನ ವಾಚನ ಮಾಡದೆ, ಜನರನ್ನು ಜಮಾಯಿಸಿ ಸಭೆ ಸಮಾರಂಭ ಮಾಡುವ ವೀರಶೈವ ಲಿಂಗಾಯತರಿಗೆ ಲಿಂಗಾಯತ ಎನ್ನುವ ಪದ ಬಳಕೆ ಸಮಂಜಸವೇ?
ನಿಮ್ಮಲ್ಲಿ ಹಲವಾರು ಗೊಂದಲ ಇದೆ ಅದನ್ನು ಬಗೆಹರಿಸಿಕೊಳ್ಳಿ ಇನ್ನೊಬ್ಬರ ಚಿಂತೆ ನಿಮಗೆ ಬೇಡ, ಮಹಾಸಭಾದ ನಿರ್ಣಯ ಸರಿಯಾಗಿದೆ ಯಾವುದೇ ಗೊಂದಲವಿಲ್ಲ, ನೀವು ಅಲ್ಲಿ ಬಂದಿದ್ದರೆ ಗೊತ್ತಾಗುತ್ತಿತ್ತು, ನಿಮ್ಮಂತ ಮನೆಮುರಕ ಹೇಳಿಕೆಗಳನ್ನು ಯಾರು ಬೆಂಬಲಿಸುವುದಿಲ್ಲ, ಎಲ್ಲವನ್ನು ಬಿಟ್ಟು ಬಸವಣ್ಣನವರು ಬೋಧಿಸಿದ ಸಮಾನತೆಯ ಮಾರ್ಗದಲ್ಲಿ ನಡೆಯಿರಿ
ಮನದೊಳಗೆ ಮತ್ತು ಬಹಿರಂಗವಾಗಿ ಯಾರೇ ಆಗಲಿ ಬಸವಣ್ಣನವರಿಗೆ ದ್ರೋಹ ಮಾಡುವ ಮೂರ್ಖರಿಗೆ ಇದೆ ಗತಿ.ಅದು ಜಂಗಮರ ಏಕತೆಯ ಸಮಾವೇಶ ಕಾರಣ ಪರಿಶಿಷ್ಟ ಜಾತಿಯ ಸವಲತ್ತುಗಳನ್ನು ಪಡೆಯಲು ಬೇಡ ಜಂಗಮರ ಜಾತಿ ಪ್ರಮಾಣ ಪತ್ರಕ್ಕಾಗಿ ವೀರಶೈವ ಲಿಂಗಾಯತ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಈ ಮಾರುವೇಶಷದ ಈ ಸಮಾವೇಶ.ಆಂದ್ಆಂದ್ರದ ಆರಾಧ್ಯರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆತ್ಮವಂಚನೆ ಮಾಡಿಕೊಂಡು ವೀರಶೈವ ಲಿಂಗಾಯತ ಹೆಸರನ್ನು ಇಟ್ಟುಕೊಂಡು ಸಮಾವೇಶ ಮಾಡಿದ್ದಾರೆ.ನಮ್ಮ ಲಿಂಗಾಯತರಿಗೆ ನೀವೂ ವೀರಶೈವರು ಎಂದು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುವ ಆಂಧ್ರದ ಆರಾಧ್ಯ ಬ್ರಾಹ್ಮಣ ಪುರೋಹಿತರ ಮಾತನ್ನು ನಂಬಿ ಅವರ ಕುತಂತ್ರಕ್ಕೆ ಬಲಿಯಾಗಿ ಶ್ರೇಷ್ಠತೆಯ ವ್ಯಸನಕ್ಕೆ ಸಿಕ್ಕು ನಿಜವಾದ ಲಿಂಗಾಯತರು ಅವರ ಬೆನ್ನು ಹತ್ತಿದ್ದಾರೆ.ಆಂದ್ರದ ಆರಾಧ್ಯ ಬ್ರಾಹ್ಮಣ ಪುರೋಹಿತರು ಅವರ ಕೆಲಸ ಮಾಡಿಕೊಂಡು ಇವರಿಗೆ ಸತ್ಯ ಅರಿವಾಗುವುದರೊಳಗಾಗಿ ಇವರನ್ನು ಬಿಸಿಲಿನಲ್ಲಿ ಬಿಟ್ಟು ಅವರು ತಂಪಾದ ವಾಹನದಲ್ಲಿ ಕುಳಿತು ಪರಾರಿಯಾಗುತ್ತಾರೆ.ಆ ಮೇಲೆ ಲಿಂಗಾಯತರಿಗೆ ಜ್ಞಾನೋದಯ ಆಗಿ ನಾವು ಲಿಂಗಾಯತರು ಎಂದು ಕಣ್ಣು ತಿಕ್ಕಿಕೊಂಡು ಎಚ್ಚರವಾಗುವುದರೊಳಗಾಗಿ ಅವರು ಮಾಯವಾಗುತ್ತಾರೆ.ಇಷ್ಠೆ ಇವರ ಕಥೆ.ರೈಲು ಹೋದ ಮೇಲೆ ಎಚ್ಚರವಾದರೆ ಏನು ಪ್ರಯೋಜನ? ಹಾಗಾಗಬಾರದು ಎಂಬುದು ನಮ್ಮ ಕಳಕಳಿಯ ವಿನಂತಿ.
ಮೋಟ, ಮೂಕಾರ್ತಿಯರ ಮದುವೆಗೆ ಮುಪ್ಪರಸರು ನಿಬ್ಬನಕ್ಕೆ ಕೂಡಿದಂತಾಗಿದೆ ಸಮಾವೇಶ.
ಸಿದ್ದಗಂಗಾ ಸ್ವಾಮಿಯವರಿಗೆ ಏನಾಗಿದೆ
ಎನಗಿಂತ ಕಿರಿಯರಿಲ್ಲ ಎಂದು ಬಸವಣ್ಣನವರು ಹೇಳಿದರೆ, ಅದೇ ಬಸವಣ್ಣನ ಹೆಸರೇಳಿಕೊಂಡು ಅಹಂ ಭ್ರಮಾಸ್ಮಿ ಅನ್ನೋವುದೊಂದು ಪಂಗಡ
ಲಿಂಗಾಯತ ಇಷ್ಟ ಲಿಂಗವನ್ನು ಅರಿವಿನ ಕುರುಹು ಮಾಡಿಕೊಂಡು ಅಂತರಂಗದ ದೇವನನ್ನು ಕಾಣಬಹುದು. ಬಸವಣ್ಣ ಮತ್ತು ಇಸ್ತಲಿಂಗ ಯೋಗ. ಅವರಿಗೆ ಸಾಕಾರ ಗುರುವಿರಲಿಲ್ಲ. ನಿರಾಕಾರ ಗುರು ಅಂದರೆ ಶಿವ, ಸಂಗಮನಾಥ. ಅನುಭವ ಮಂಟಪ ನಿರ್ಮಾಣ ಮಾಡಿದ ಮಾಡಿದ ನಂತರ ಪ್ರಭುದೇವರನ್ನು ಗುರುವೆಂದು ಕರೆದರು.
ವೀರಶೈವರು,ಲಿಂಗಾಯತರು ಒಂದೇ ಎಂದು ಹೇಳುತ್ತಾರೆ. ಅದಕ್ಕೆ ಲಿಖಿತ ಮಾಹಿತಿ ನೀಡಿದ್ದಾರೆಯೇ? ಯಾವ ರೀತಿಯ ಅವೆರಡು ಎಂದು memorandum of understanding ( ಲಿಖಿತ ಒಡಂಬಡಿಕೆ ಬರೆದು ಹೇಳಿದ್ದಾರೆ) ಹಾಗಿದ್ದರೆ ಸರಿಯಾದ ಮಾಹಿತಿ ನೀಡಿ ಎರಡು ಏಕೆ ಒಂದೆ ಎಂದು ನಿರೂಪಿಸಲು ಅವಕಾಶ ಹುಬ್ಬಳ್ಳಿಯಲ್ಲಿ ಇತ್ತು. ಆದರೆ ಯಾವ ನಿರ್ಣಯದೊಂದಿಗೆ ಸಭೆ ಮುಕ್ತಾಯವಾಯಿತು? ಶರಣು ಶರಣಾರ್ಥಿ . ಎಲ್ಲರಿಗೂ ಶುಭವಾಗಲಿ.
If you attach veerashaiva to lingayat, it will never become a religion, If you eliminate word veerashaiva and use word lingayat, fight for it, one day it will become religion. Veerashaiva is part of hindu religion. I request veerashsiva to merge with lingayat. Lord Basava is founder of lingayat all of us follow his path to uplift the society as a whole. Sharanu sharanarthi.
Haudu sir, tamma abhipraya sariyagide
ನಮ್ಮ ಸಿದ್ದಗಂಗಾ ಮಠದ ಶ್ರೀಗಳೂ ಬಸವಣ್ಣನವರ ಕಾಯಕ ದಾಸೋಹ ನಂಬಿದವರು ಈ ಸಭೆಯಲ್ಲಿ ಸುಮ್ಮನೆ ಇರುವದು ಸರಿಯಲ್ಲ. ಲಿಂಗಾಯತ ಧರ್ಮವನ್ನು ಬಲವಾಗಿ ಪ್ರತಿಫಡಿಸಬೇಕಿತ್ತು