ನಾನಾಗಿದ್ದರೆ ಲಿಂಗಾಯತ ಮಠಾಧೀಶರಿಗೆ ಇನ್ನೂ ಕೆಟ್ಟ ಪದ ಬಳಸುತ್ತಿದ್ದೆ: ಈಶ್ವರಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ನೆನ್ನೆ ಬಸವ ಮೀಡಿಯಾದಲ್ಲಿ ಶಿವ ಸಂಕಲ್ಪ ವರದಿ ಪ್ರಕಟವಾದ ಮೇಲೆ ಮಾಜಿ ಮುಖ್ಯಮಂತ್ರಿ ಈಶ್ವರಪ್ಪನವರ ಬೆಂಬಲಿಗ ಅಂತ ಹೇಳಿಕೊಂಡು ಒಬ್ಬರು ಫೋನ್ ಮಾಡಿ ದಬಾಯಿಸಿದರು.

ವರದಿಯಲ್ಲಿ ಬರೆದಂತೆ ಲಿಂಗಾಯತ ಮಠಾಧೀಶರ ಮೇಲೆ ಕನ್ನೇರಿ ಸ್ವಾಮಿಗಿಂತ ಕೆಟ್ಟ ಭಾಷೆ ಬಳಸುತ್ತಿದ್ದೆ ಅಂತ ಈಶ್ವರಪ್ಪ ಎಲ್ಲಿ ಹೇಳಿದ್ದಾರೆ. ಸುಮ್ಮನೆ ಯಾಕ್ರೀ ಅಪಪ್ರಚಾರ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಬಸವ ಸಂಸ್ಕೃತಿ ಅಭಿಯಾನವಾದ ಮೇಲೆ ಲಿಂಗಾಯತ ಸ್ವಾಮಿಗಳ ಮೇಲೆ ಈಶ್ವರಪ್ಪ ಬಹಳ ಕಡೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ನುಡಿಮುತ್ತುಗಳ ಎರಡು ವಿಡಿಯೋ ಇಲ್ಲಿ ಹಾಕಿದ್ದೇವೆ.

ಕನ್ನೇರಿ ಸ್ವಾಮಿಗಿಂತ ಕೆಟ್ಟ ಪದ ಬಳಸುತ್ತಿದ್ದೆ

ಮೂರು ತಿಂಗಳ ಹಿಂದೆ ವಿಜಯಪುರ, ಬಾಗಲಕೋಟೆಗಳಿಂದ ಕನ್ನೇರಿ ಸ್ವಾಮಿ ಗಡೀಪಾರಾದ ಮೇಲೆ ಈಶ್ವರಪ್ಪ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಸರಕಾರದ ನಿರ್ಧಾರವನ್ನು ಖಂಡಿಸಿದರು.

ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಸ್ವಾಮೀಜಿಗಳು ಮಾತಾಡಿದಕ್ಕೆ ಕನ್ನೇರಿ ಸ್ವಾಮಿ ಉತ್ತರ ಕೊಟ್ಟಿದ್ದಾರೆ. ಎಲ್ಲಾ ಸಾಧುಗಳು ಮೆತ್ತಗಿರೋದಿಲ್ಲ, ಕೆಲವರು ಆ ಪದಗಳನ್ನೂ ಬಳಸ್ತಾರೆ. ನಾನಾಗಿದ್ರೆ ಇನ್ನೂ ಕೆಟ್ಟ ಪದ ಬಳಸುತ್ತಿದ್ದೆ. ಇದು ಆಕ್ಷನ್ ಗೆ ರಿಯಾಕ್ಷನ್, ಎಂದು ಈಶ್ವರಪ್ಪ ಮೊಳಗಿದ್ದರು.

ಲಿಂಗಾಯತ ಸ್ವಾಮಿಗಳು ಬಸವ ತಾಲಿಬಾನ್

ನಂತರ ಒಂದು ತಿಂಗಳ ಹಿಂದೆ ಬಾಗಲಕೋಟೆಯಲ್ಲಿ ಈಶ್ವರಪ್ಪ ಅದೇ ದಾಟಿಯಲ್ಲಿ ಮತ್ತೆ ಮಾತನಾಡಿದರು.

“ಬಸವ ಸಂಸ್ಕೃತಿ ಅಭಿಯಾನದಲ್ಲಿ ಲಿಂಗಾಯತ ಸಮುದಾಯಕ್ಕೆ ಲಿಂಗಾಯತ ಸ್ವಾಮೀಜಿಗಳು ದಾರೂ ಕುಡೀರಿ, ಮಾಂಸ ತಿನ್ನಿರಿ, ದೇವರ ಮೂಲೆಗೆ ಎಸೆಯಿರಿ ಎಂದಿದ್ದಾರೆ.

ಅಂತವರನ್ನು ಬಸವ ತಾಲಿಬಾನ್ ಎಂದು ಕರೆದಿರುವುದು ಸರಿ. ಅವರನ್ನು ಸನ್ಯಾಸಿ ಅಂತ ಕರಿಬೇಕಾ. ಕಮ್ಮಿ ನಿಷ್ಠೆಯ ಕಮ್ಯುನಿಸ್ಟ್ ಸ್ವಾಮಿಗಳಿಗೆ ಇದನ್ನು ಹೇಳಿರುವುದು.

ಬೇರೆ ಯಾವ ಜಾತಿಯ ಸನ್ಯಾಸಿಗಳೂ ಈ ರೀತಿ (ಹಿಂದೂ ಧರ್ಮದ ಬಗ್ಗೆ) ಮಾತಾಡಿಲ್ಲ. ಲಿಂಗಾಯತರಲ್ಲಿರುವ ಕೆಲವು ಸನ್ಯಾಸಿಗಳು ಮಾತ್ರ ಈ ರೀತಿ ಮಾತಾಡುತ್ತಾರೆ,” ಎಂದು ಹೇಳಿದರು.

ಈ ಎರಡೂ ಸುದ್ದಿಗೋಷ್ಠಿಗಳಲ್ಲಿ ಈಶ್ವರಪ್ಪ ಮತ್ತು ಪತ್ರಕರ್ತರ ನಡೆದ ಚಕಮಕಿ ಪ್ರತಿಭಟನೆ ಬಂದಿರುವುದು ಗಮನಿಸಿ. ಬಸವಣ್ಣ ಮತ್ತು ತಾಲಿಬಾನ್ ಪದಗಳನ್ನು ಜೋಡಿಸುವುದನ್ನುಅಲ್ಲಿದ್ದ ಪತ್ರಕರ್ತರೇ ಪ್ರತಿಭಟಿಸಿ ಈಶ್ವರಪ್ಪನವರ ಬೆವರು ಇಳಿಸಿದರು. ಬೆಳಗಾವಿಯಲ್ಲಿ ಚಕ್ರವರ್ತಿ ಸೂಲಿಬೆಲೆಗೂ ಇದೆ ಅನುಭವವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
3 Comments
  • ನೀವು ಈ ಮಾತನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಈಶ್ವರಪ್ಪನವರೇ. ನಿಮ್ಮ ಹೆಸರು ಹೇಳಿದರೆ ಸಾಕು ನೀವು ಎಂತಹ ಮಾತುಗಳನ್ನು ಆಡಬಹುದು ಅಂತ ಎಲ್ಲರಿಗೂ ಗೊತ್ತಿದೆ. ಆದರೆ, ನಿಮಗೆ, ನಿಮ್ಮ ಪಟಾಲಾಮ್ಮಿಗೆ, ನಿಮ್ಮೆಲ್ಲರ ಗುರುಗಳಾದ ಕನ್ನೇರಿ ಸ್ವಾಮೀಜಿಯವರಿಗೆ ಗೊತ್ತಿಲ್ಲದ ವಿಷಯ ಒಂದಿದೆ, ಅದೇನೆಂದರೆ ನೀವು ಹಾಗೆ ಮಾತನಾಡಿದಹಾಗೆ ಬೇರೆಯವರಿಗೂ ಅದಕ್ಕೆ ತಕ್ಕ ಮತ್ತು ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ಕೊಡಲು ಬರುತ್ತದೆ, ಆದರೆ ಅವರೆಲ್ಲಾ ಸಾಮಾಜಿಕ ಮತ್ತು ಸಾರ್ವಜನಿಕ ಜೀವನದ ಮೌಲ್ಯಗಳನ್ನು ಮುರಿಯಬಾರದು ಅನ್ನುವ ಕಾರಣಕ್ಕೆ ಸುಮ್ಮನಿದ್ದಾರೆ. ಎಲ್ಲರೂ ನಿಮ್ಮ ಹಾಗೆ ಮಾತನಾಡಲು ಪ್ರಾರಂಭಿಸಿದರೆ ಅಮಾಜದ ಆರೋಗ್ಯ ಏನಾಗಬಹುದು ಅಂತ ಸ್ವಲ್ಪ ಯೋಚಿಸಿನೋಡಿ, ಹಾಗೂ, ಮಾತನಾಡಬೇಕು ಅನಿಸಿದರೆ ಮಾತನಾಡಿ. ಲಿಂಗಾಯತ ಮಾತಾಧೀಷರು ಮತ್ತು ಅವರ ಅನುಯಾಯಿಗಳೂ ನಿಮ್ಮಂತಹವರಿಗೆ ತಕ್ಕ ಉತ್ತರ ಕೊಡಲು ತಯಾರಿ ನಡೆಸುತ್ತಿದ್ದಾರೆ. ಇದು ಬೆದರಿಕೆಯಲ್ಲ ಅಂತ ತಿಳಿಸಲು ಇಚ್ಚಿಸುತ್ತೇನೆ. ಶರಣು ಶರಣಾರ್ಥಿ 🙏.

  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ says:

    😡ನಮ್ಮ ದೇಶದಲ್ಲಿ ನಿಮ್ಮಂತಹ ರಾಜಕೀಯದವರಿಂದಲೇ ಸ್ವಾಮಿಗಳು ಸ್ವಾವಿಗಳಾಗಿ ಉಳಿಯುತಿಲ್ಲ ಅದಕ್ಕೆ ದೇಶ ದಲ್ಲಿ ಹಿಂದೂಗಳು ಹಿಂದೆ ಉಳುದಿರೋದು . ಬಿಜೆಪಿ ,ಕಾಂಗ್ರೇಸ್, ಜೆಡಿಎಸ್ ನವರು ನೀವುಗಳು ಮಾಡಿದ ಕಿತಾಪತಿ ಯಿಂದಾಗಿ ದೇಶದಲ್ಲಿ ಬಹುಜನರ ಬಳಿ ಇರಬೇಕಾದ ಆಸ್ತಿ ಕೆಲವರ ಕೈಯಲ್ಲಿ ಇದೆ . ನೀವುಗಳೆಲ್ಲ ಬಂಡವಾಳ ಶಾಹಿಗಳ ಗುಲಾಮರು ನಿಮ್ಮಲ್ಲಿ ಅರಿವು ಮೊದಲು ಇಲ್ಲ ನಿಮ್ಮನ್ನು ನೀವು ಮೊದಲು ಸುಧಾರಿಸಿಕೊಳ್ಳಿ ಅಣ್ಣ ತಮ್ಮ ರನ್ನು ದಾಯದಿಗಳಾಗಿ ಮಾಡುವವರು ನೆಗೆನೆಗೆಣ್ಯಂದಿರು ಹಾಗೆ ನೀವು ರಾಜಕೀಯದವರು ನಿವೇನು ಕಮ್ಮಿ ಇಲ್ಲ ಅವರೇನು ಜಾಸ್ತಿ ಇಲ್ಲ ಸ್ವಾಮಿಗಳ ಜಗಳ ಸ್ವಾಮಿಗಳೆ ಬಗೆಹರಿಸಿಕೊಳ್ಳಲಿ ಬಿಡಿ ಯಾರೆನು ಸಾಚಾ ಇಲ್ಲ ಇ ಜಗದೊಳಗೆ ಉರಿಯೊ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವುದು ಬಿಡಿ ಅಭಿವೃದ್ಧಿ ಕಡೆ ಗಮನ ಕೊಡಿ ಸಾಕು ಭಾಷಣ ನಿಲ್ಲಿಸಿ.

  • ಇವನು ಪಾಪ ತನ್ನ ಅಸ್ತಿತ್ವಕ್ಕಾಗಿ ಬಹಳ ಕಷ್ಟ ಪಡುತ್ತಿದ್ದಾನೆ.
    ಈತನ ಬಾಯಿ ಬಚ್ಚಲಿಗೆ ಸಮಾನ.
    ಚಾತುರ್ವರ್ಣ ಉಳಿಸುವುದಕ್ಕೋಸ್ಕರ ಪಾಪ ಹೋರಾಡುತ್ತಿದ್ದಾನೆ.

Leave a Reply

Your email address will not be published. Required fields are marked *