ಗಜೇಂದ್ರಗಡ:
ಗಜೇಂದ್ರಗಡ ಪಟ್ಟಣದಲ್ಲಿ ನವೆಂಬರ್ 25 ರಿಂದ ಡಿಸೆಂಬರ್ 26ರವರೆಗೆ ಭೀಮಕವಿ ರಚಿಸಿದ ಬಸವ ಪುರಾಣ ಕಾರ್ಯಕ್ರಮ ನಡೆಯಲಿದೆಯೆಂದು ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಕೆ.ಜಿ. ಬಂಡಿ ಗಾರ್ಡನ್ ನಲ್ಲಿ ಶುಕ್ರವಾರ ನಡೆದ ಬಸವ ಪುರಾಣದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಗಜೇಂದ್ರಗಡದಲ್ಲಿ ನಡೆಸುವ ಬಸವ ಪುರಾಣ 13ನೇ ಆವೃತ್ತಿಯದ್ದಾಗಿದೆ. ಗುಡೂರಿನ ಅನುದಾನೇಶ್ವರ ಶಾಸ್ತ್ರಿ ಪ್ರವಚನ ಮಾಡಲಿದ್ದಾರೆ.
ಹಾಲಕೆರೆ ಮಠದ 28 ಶಾಖಾಮಠಗಳ ಭಕ್ತರು ಹಾಗೂ ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸ್ವಾಮೀಜಿ ಹೇಳಿದರು.
ಸಭೆಯಲ್ಲಿ ಹಾಜರಿದ್ದ ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಈ ಪುರಾಣ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ತಾವು ಕೈಜೋಡಿಸುವುದಾಗಿ ಹೇಳಿದರು. ಪುರಾಣಿಕ ಗುಡೂರಿನ ಅನ್ನದಾನೇಶ್ವರ ಶಾಸ್ತ್ರೀ ಮಾತನಾಡಿದರು.
ವಿವಿಧ ಗ್ರಾಮಗಳ ಮುಖಂಡರು, ಗಜೇಂದ್ರಗಡ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಕಸಾಪ ಗಜೇಂದ್ರಗಡ ತಾ. ಘಟಕದ ಅಧ್ಯಕ್ಷ ಅಮರೇಶ ಗಾಣಿಗೇರ, ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕರ್, ಮುರ್ತುಜಾ ಡಾಲಾಯತ್, ಮುಖಂಡರಾದ ವಿ.ವಿ. ಸೋಮನಕಟ್ಟಿಮಠ, ಬಸವರಾಜ ಕೊಟಗಿ, ಕಳಕಯ್ಯ ಸಾಲಿಮಠ, ಶಶಿಧರ ಹೂಗಾರ, ಪ್ರಭು ಚವಡಿ, ಬಸಣ್ಣ ಮೂಲಿಮನಿ, ಶಿವಾನಂದ ಮಠದ, ನಾಗಯ್ಯ ಗೊಂಗಡಶೆಟ್ಟಿಮಠ, ಶರಣಪ್ಪ ರೇವಡಿ, ಪ್ರಭು ಹಿರೇಮಠ, ಬಸವರಾಜ ಬೇಲೇರಿ, ಬಸವರಾಜ ರೇವಡಿ ಮುತ್ತಿತರರು ಉಪಸ್ಥಿತರಿದ್ದರು.
ಒಳ್ಳೆಯ ಬೆಳವಣಿಗೆ ಶರಣಾಥಿ೯