ಕನ್ನೇರಿ ಸ್ವಾಮಿಯ ರಾಜ್ಯ ಪ್ರವೇಶ ನಿಷೇಧಿಸಲು ಗಜೇಂದ್ರಗಡದಲ್ಲಿ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಗಜೇಂದ್ರಗಡ

ಮಾನಹಾನಿಕರ ಮತ್ತು ಸಮುದಾಯ ಭದ್ರತೆಗೆ ಹಾನಿಕಾರಕವಾದ ಹೇಳಿಕೆ ನೀಡಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯ ರಾಜ್ಯ ಪ್ರವೇಶ ನಿಷೇಧಿಸಬೇಕೆಂದು ಆಗ್ರಹಿಸಿ, ಗುರುವಾರ ಬಸವಪರ ಸಂಘಟನೆಗಳ ಪ್ರಮುಖರು ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಅಕ್ಟೋಬರ್ 09 ರಂದು ಮಹಾರಾಷ್ಟ್ರದ ಬೀರೂರು ಗ್ರಾಮದ ಧಾರ್ಮಿಕ ಸಭೆಯಲ್ಲಿ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ಮಠಾಧೀಶರ ಒಕ್ಕೂಟದ ಪೂಜ್ಯರ ಕುರಿತು ತೀರ ಅವಮಾನಕಾರಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಶಬ್ದಗಳನ್ನು ಬಳಸಿ ಮಾತನಾಡಿದ್ದಾರೆ.

ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರೆಂದು ಹೀಯಾಳಿಸಿ ಹೇಳಿಕೆ ನೀಡಿದ್ದಾರೆ. ಮುಂದುವರೆದು, ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಾಗು ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆಯನ್ನು ಬಳಸಿ ಅಪಮಾನ ಮಾಡಿದ್ದಾರೆ.

ಒಬ್ಬ ಮಠಾಧಿಪತಿಯಾಗಿ ಅವರ ಬಾಯಿಂದ ಈ ತರದ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಶಬ್ದಗಳು ಬರಬಾರದು. ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕಂಡು ಹೊಟ್ಟೆ ಉರಿಯಿಂದ ಯಾರನ್ನೋ ಮೆಚ್ಚಿಸಲು ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಅವರು ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಕನ್ನೇರಿ ಸ್ವಾಮಿ ಲಿಂಗಾಯತ ಮಠಾಧೀಶರನ್ನು ” …. ಮಕ್ಕಳು” ಎಂದು ನಿಂದಿಸುವುದರೊಂದಿಗೆ, “ಇಂತಹವರನ್ನು …. ನಿಂದ ಹೊಡೆಯಬೇಕು” ಎಂದು ಅತ್ಯಂತ ಅವಮಾನಕಾರ ಶಬ್ದ ಬಳಸುವುದರೊಂದಿಗೆ ಪ್ರತಿಷ್ಠಿತ ಒಕ್ಕೂಟದ ಮಠಾಧೀಶರನ್ನು ಹೆದರಿಸುವ ಮತ್ತು ಹಿಂಸಾತ್ಮಕ ಹಲ್ಲೆ ಮಾಡುವ ಉದ್ದೇಶದಿಂದ ಕೀಳುಮಟ್ಟದ ಭಾಷೆಯನ್ನು ಬಳಸಿ ಸಮಸ್ತ ಲಿಂಗಾಯತ ವಿರಕ್ತ ಮಠಗಳ ಪೀಠಾಧಿಪತಿಗಳನ್ನು ಅವಮಾನಿಸಿದ್ದಾರೆ.

ಇಂತಹ ಹೇಳಿಕೆಗಳು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೆ, ಸಮಾಜದ ಉದ್ರೇಕ ಮತ್ತು ದ್ವೇಷವನ್ನು ಹರಡಲು ಕಾರಣವಾಗುತ್ತದೆ. ಇದು ಲಿಂಗಾಯತ ಧರ್ಮದ ಪೀಠಾಧಿಪತಿಗಳ ಅವಹೇಳನ ಆಗಿರುವುದರಿಂದ ಲಿಂಗಾಯತ ಧರ್ಮಿಯರು ರೊಚ್ಚಿಗೇಳುವ ಸಂಭವ ಇರುತ್ತದೆ.

ಸ್ವಾಮಿ ವರ್ತನೆ ಭಾರತೀಯ ದಂಡ ಸಂಹಿತೆಯ (ಬಿ.ಎನ್.ಎಸ್.) ಕೆಳಗಿನ ವಿಧಿಗಳನ್ನು ಉಲ್ಲಂಘಿಸುತ್ತದೆ.

ಕಲಂ; ೧೯೬ ಸಮುದಾಯಗಳ ಮಧ್ಯೆ ಶತ್ರುತ್ವ ಹುಟ್ಟಿಸುವುದು.
ಕಲಂ; ೨೯೯ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯ.
ಕಲಂ; ೩೫೬ ಸುಮಾರು ನಾಲ್ಕು ನೂರು ಮಠಾಧೀಶರ ಮಾನಹಾನಿ.
ಕಲಂ; ೩೫೨ ಉದ್ದೇಶಪೂರ್ವಕವಾಗಿ ಶಾಂತಿಭಂಗ ಮಾಡುವ ಉದ್ದೇಶದಿಂದ ಮಾಡಿದ ಅವಮಾನದ ಹೇಳಿಕೆಯಾಗಿದೆ.

ಹೀಗಾಗಿ ನಾವು ವಿನಮ್ರವಾಗಿ ತಮ್ಮಲ್ಲಿ ಕೇಳಿಕೊಳ್ಳುವುದೆನೇಂದರೆ, ಈ ಕುರಿತು ಸೂಕ್ತ ತನಿಖೆ ನಡೆಸಿ. ಕನೇರಿ ಮಠದ ಸ್ವಾಮೀಜಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಲಾಗಿದೆ. ಅದಲ್ಲದೆ ಸದರಿ ಸ್ವಾಮಿಯನ್ನು ಕರ್ನಾಟಕ ರಾಜ್ಯ ಪ್ರವೇಶ ನಿಷೇದ ಮಾಡಬೇಕು, ಕಾರಣ ಇಲ್ಲಿನ ಬಸವಭಕ್ತರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಆತನಿಗೆ ರಾಜ್ಯ ಪ್ರವೇಶವನ್ನು ನಿಷೇಧಿಸಬೇಕೆಂದು ಸಂಘಟನೆಗಳು ಸರ್ಕಾರಕ್ಕೆ ವಿನಂತಿಸಿವೆ.

ಈ ಸಂದರ್ಭದಲ್ಲಿ ಬಸವ ಬ್ರಿಗೇಡ್ ರಾಜ್ಯ ಸಂಯೋಜಕ ಮಂಜುನಾಥ ಹೂಗಾರ, ಶರಣ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ಕನ್ನೇರಿ ಸ್ವಾಮಿ ಮಾತುಗಳನ್ನು ತೀವ್ರವಾಗಿ ಖಂಡಿಸಿ, ಅವರ ವಿರುದ್ಧ ಸರ್ಕಾರ ಸೂಕ್ತಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕಳಕಯ್ಯ ಸಾಲಿಮಠ, ಶರಣು ಪೂಜಾರ, ಮೈಲಾರಪ್ಪ ಸೋಂಪುರ, ಅಲ್ಲಾಭಕ್ಷಿ ಮುಚ್ಚಾವಲಿ, ಸಾಗರ ವಾಲಿ, ಬಾಲು ರಾಠೋಡ, ಬಸವರಾಜ ಶೀಲವಂತರ, ಪೀರು ರಾಠೋಡ, ರವಿ ಗಡೇದವರ, ಸುರೇಶ ಚೋಳಿನ ಮತ್ತಿತರರು ಇದ್ದರು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
2 Comments
  • ಸ್ವಾಮಿ ವರ್ತನೆ ಭಾರತೀಯ ದಂಡ ಸಂಹಿತೆಯ (ಬಿ.ಎನ್.ಎಸ್.) ಕೆಳಗಿನ ವಿಧಿಗಳನ್ನು ಉಲ್ಲಂಘಿಸುತ್ತದೆ.

    ಕಲಂ; ೧೯೬ ಸಮುದಾಯಗಳ ಮಧ್ಯೆ ಶತ್ರುತ್ವ ಹುಟ್ಟಿಸುವುದು.
    ಕಲಂ; ೨೯೯ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯ.
    ಕಲಂ; ೩೫೬ ಸುಮಾರು ನಾಲ್ಕು ನೂರು ಮಠಾಧೀಶರ ಮಾನಹಾನಿ.
    ಕಲಂ; ೩೫೨ ಉದ್ದೇಶಪೂರ್ವಕವಾಗಿ ಶಾಂತಿಭಂಗ ಮಾಡುವ ಉದ್ದೇಶದಿಂದ ಮಾಡಿದ ಅವಮಾನದ ಹೇಳಿಕೆಯಾಗಿದೆ. ತಮ್ಮ ಈ ಎಲ್ಲ ಹೇಳಿಕೆಗಳನ್ನು ಆಧಾರವಾಗಿಸಿ ಅವರಿಗೆ ಬಹಿಷ್ಕಾರ್ ಮಾಡುವ ತಮ್ಮ ನಿಲುವು ಬಹಳ ಮುಖ್ಯವಾಗಿದೆ. ಗ್ರಾಮಿ ಭಾಷೆ, ಕೇವಲ ಆಪ್ತರಲ್ಲಿ, ಮಿತ್ರರಲ್ಲಿ, ಬಳಸಂಗತಿಗಳಲ್ಲಿ ಬಳಸಬಹುದು. ಸಾಮಾನ್ಯ ಮತ್ತು ವಿಷಃಶ್ ವೇದಿಕೆಗಳಲ್ಲಿ ಬಳಸಬಾರದೆಂದು ಅವರಲ್ಲಿ ವಿನಂತಿ. ಎಲ್ಲರಿಗೂ ಶುಭವಾಗಲಿ. ಶರಣು ಶರಣಾರ್ಥಿ.

  • ಮಾನ್ಯ ಈಜರೆ ಯವರು ಹೇಳಿದಂತೆ ಕನೆರಿ ಹುಂಬ ಸ್ವಾಮಿಯ ಮೇಲೆ ಕ್ರಮದ ಪ್ರಕಾರ ಕೇಸು ದಾಖಲಿಸಿ ಬುದ್ದಿಕಲಿಸಬೇಕು. ಅವನ ಮಾತನ್ನು ಸಮರ್ಥಿಸುವ RSS ನ ದುರುಳರು ಗಳಿಗೆ ಅವರನ್ನು ಝಾಡಿಸಿ ಉಗಿಯಬೇಕು.

Leave a Reply

Your email address will not be published. Required fields are marked *