===================
ಇಂದು ಗೌರಿ ಲಂಕೇಶ್ ಮತ್ತು ಎಂ ಎಂ ಕಲ್ಬುರ್ಗಿ ಅವರ ಪ್ರತಿಭಟನೆ ನಡೆಯುತ್ತಿರುವುದು ಬೆಂಗಳೂರಿನಲ್ಲಿ, ಮುಂಚೆ ವರದಿ ಮಾಡಿದಂತೆ ದಾವಣಗೆರೆಯಲ್ಲಿ ಅಲ್ಲ.
ವೀರಶೈವ ಲಿಂಗಾಯತ ಸಮನ್ವಯ ವೇದಿಕೆಯ ಸಂಘಟಕರು ಕರೆ ಮಾಡಿ ಪ್ರತಿಭಟನೆಯ ಪೋಸ್ಟರ್ ಮತ್ತು ಕರ ಪತ್ರದಲ್ಲಿ ಬೆಂಗಳೂರಿನ ಬದಲು ದಾವಣಗೆರೆ ಎಂದು ತಪ್ಪಾಗಿ ಮುದ್ರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಗೊಂದಲಕ್ಕೆ ನಿಮ್ಮ ಕ್ಷಮೆಯಿರಲಿ ಎಂದು ಕೋರಿಕೊಳ್ಳುತ್ತೇವೆ.
ಈ ಮುಂಚೆ ನಾವು ಮಾಡಿದ್ದ ವರದಿಯಲ್ಲಿ ಸೂಕ್ತವಾದ ಬದಲಾವಣೆ ಮಾಡಿದ್ದೇವೆ.
ಪ್ರತಿಭಟನೆ ದಿನಾಂಕ – ಅಕ್ಟೋಬರ್ 18 (ಬೆಳಗ್ಗೆ 11 ಗಂಟೆ)
ಪ್ರತಿಭಟನೆ ಸ್ಥಳ – ಬಸವಣ್ಣನವರ ಪುತ್ಥಳಿ, ಚಾಲುಕ್ಯ ವೃತ್ತ, ಬೆಂಗಳೂರು
===================
ಗೌರಿ, ಕಲ್ಬುರ್ಗಿ ಹತ್ಯೆ ಆರೋಪಿಗಳಿಗೆ ಸನ್ಮಾನ: ಇಂದು ಲಿಂಗಾಯತ ವೇದಿಕೆಯಿಂದ ಪ್ರತಿಭಟನೆ
ಬಸವ ಅನುಯಾಯಿಗಳು ಸೇರಿದಂತೆ ಎಲ್ಲಾ ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಚಾಲಕರಿಂದ ಕರೆ
ಬೆಂಗಳೂರು
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಪ್ರೊಫೆಸರ್ ಎಂ ಎಂ ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ಆರೋಪಿಗಳಿಗೆ ಹಿಂದೂ ಸಂಘಟನಗೆಳು ಸನ್ಮಾನ ಮಾಡಿರುವುದನ್ನು ಖಂಡಿಸಲು ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ.
ವೀರಶೈವ ಲಿಂಗಾಯತ ಸಮನ್ವಯ ವೇದಿಕೆಯ ಸಂಚಾಲಕರಾದ ಬಿ ಆರ್ ಪಾಟೀಲ್ ಮತ್ತು ಸುಭಾಷ್ ಚಂದ್ರ ಅಕ್ಟೋಬರ್ 18 ಬೆಳಗ್ಗೆ 11 ಗಂಟೆಗೆ ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಯೆದುರು ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು. ಬಸವ ಅನುಯಾಯಿಗಳು ಸೇರಿದಂತೆ ಎಲ್ಲಾ ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಗೌರಿ ಲಂಕೇಶ್ ಮತ್ತು ಪ್ರೊಫೆಸರ್ ಎಂ ಎಂ ಕಲ್ಬುರ್ಗಿ ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ಬೆಳೆಸುತ್ತಿರುವವರ ವಿರುದ್ಧ ಹೋರಾಡಿ ಹುತಾತ್ಮರಾದರು. ಅವರ ಹತ್ಯೆಯ ಆರೋಪಿಗಳಿಗೆ ಹಿಂದೂ ಸಂಘಟನಗೆಳು ಇಷ್ಟು ಬಹಿರಂಗವಾಗಿ ಸನ್ಮಾನ ಮಾಡುವುದು, ಅದನ್ನು ವಿಡಿಯೋ ಮಾಡಿ ವೈರಲ್ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ.
ಇದು ಸಮಾಜದ ಸ್ವಾಸ್ತ್ಯವನ್ನು ಕೆಡಸುವ ಕೆಲಸ, ಇವರ ವಿರುದ್ದ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಎಂದು ಬಿ ಆರ್ ಪಾಟೀಲ್ ಮತ್ತು ಸುಭಾಷ್ ಚಂದ್ರ ಹೇಳಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ ವಿಜಯಪುರದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಅವರಿಗೆ ಕಳೆದ ಶನಿವಾರ ಸಂಘಪರಿವಾರದ ಕಾರ್ಯಕರ್ತರು ಸನ್ಮಾನಿಸಿ ಅದ್ದೂರಿ ಸ್ವಾಗತ ಕೋರಿದರು.
ಇಬ್ಬರೂ ಆರೋಪಿಗಳು, ನಗರದ ಕಾಳಿಕಾ ಮಂದಿರದಲ್ಲಿ ಪೂಜೆ ಮಾಡಿ ಪ್ರಾರ್ಥಣೆ ಸಲ್ಲಿಸಿದರು. ಬಳಿಕ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು.
ಇದರ ಬಗ್ಗೆ ಕಿಡಿ ಕಾರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಉಮೇಶ್ ವಂದಾಲ್ ಹಾಗೂ ಕಂಪನಿ ಈ ಸನ್ಮಾನ ಮಾಡಿದೆ. ಇದು ಅತ್ಯಂತ ಕೆಟ್ಟ ಕೆಲಸ. ಗೌರಿ ಲಂಕೇಶ್ ಹಾಗೂ ಇತರ ಚಿಂತಕರ ಹತ್ಯೆಯ ಆರೋಪಿಗಳಿಗೆ ಸನ್ಮಾನ ಮಾಡಿದವರ ವಿರುದ್ಧ ಕೇಸ್ ದಾಖಲಿಸಲು ಚಿಂತನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಪ್ಪಾಗಿ ಮುದ್ರಣವಾಗಿದ್ದ ಪೋಸ್ಟರ್

Bjp garige nachikeyagabeku modiyavaru basava tatvada bagge dhoodda dhoodda bashana maduttare intaha neecha kruthyavannu easagidavarige maranadhandaneyannu needidare modiyavaru nijavada basava tatva anuyayigalu…illadiddare swarga rajakarani.
ಕೊಲೆ ಅಪರಾಧಿಗಳಿಗೆ ಸನ್ಮಾನ ಮಾಡುವುದು ಅತ್ಯಂತ ಹೇಯ ಕ್ರತ್ಯ , ನೈತಿಕ ಅದಃಪತನ, ಹಿಂದೂ ಹೆಸರಿನ ಸಂಘಟನೆಗಳು ಇಂತಹ ಕೆಲಸ ಮಾಡುವುದು ಸಂಘ ಪರಿವಾರ ಇಂತಹ ಹೀನಕ್ರತ್ಯಕ್ಕೆ ಕುಮ್ಮಕ್ಕು ಕೊಡುವುದು ಕ್ರೌರ್ಯ. ಸಂಘ ಪರಿವಾರ ಒಂದು ಕಡೆ ವಚನ ದರ್ಶನ ಪುಸ್ತಕದ ಮೂಲಕ ಶರಣರದು ಬಂಡಾಯವೇ ಅಲ್ಲ ಎಂದು ನಮ್ಮ ವಚನ ಸಾಹಿತ್ಯ ವನ್ನು ಭಕ್ತಿ ಪರಂಪರೆ ಎಂದು ಬಿಂಬಿಸಲು ಹೊರಟಿರುವುದು ಮತ್ತೊಂದು ಕಡೆ ಕೊಲೆಗಡುಕರನ್ನು ಸನ್ಮಾನಿಸುವ ದರಿದ್ರ ಕೆಲಸ ಮಾಡುತ್ತಿದೆ. ಶರಣ ಪರಂಪರೆಯವರು ಎಚ್ಚರಗೊಳ್ಳಲಿ, ಅದರಲ್ಲಿಯೂ ವಚನ ದರ್ಶನ ಪರವಾಗಿ ಜಾತಿ ಪೀಠದ ಸ್ವಾಮಿಗಳು ಕಣ್ತೆರೆದು ಓದಿಕೊಳ್ಳಲಿ.
ನಮ್ಮಲ್ಲೇ ಇರುವ ದ್ವಂದ್ವ ಇವಕ್ಕೆಲ್ಲ ಕಾರಣ. ಬಸವ ಅನುಯಾಯಿಗಳು, ಮೊದಲು, ಮೌಡ್ಯ ಬಿಡಬೇಕು.ನಮ್ಮ ಎಲ್ಲಾ ಮಠದ ಸ್ವಾಮಿಗಳು ಒಂದಾಗಿ ಒಂದು ಸಾಮಾನ್ಯ ನಡವಳಿಕೆಯನ್ನು ರೂಪಿಸಬೇಕು..ಬಸವ ತತ್ವ ಕೇವಲ ಭಾಷಣಕ್ಕೆ ಸೀಮಿತ ಆಗಬಾರದು. ವೀರಶೈವ ಮತ್ತು ಲಿಂಗಾಯತ ಭೇಧ ತೊಲಗಿಸಿ ಒಂದು ಸಾಮಾನ್ಯ ಚಿಂತನೆ ರೂಪುಗೊಳ್ಳಬೇಕು…ಈಗ ಸುಮಾರು family ಗಳಲ್ಲಿ ಎರಡೂ ಸಂಪ್ರದಾಯದವರು ಸಂಬಂದಿಕರಾಗಿದ್ದಾರೆ. ಅಲ್ಲಿ ಏನು ಮಾಡುವುದು? ನಮ್ಮ ಗುರುಗಳೆಲ್ಲ ಒಂದೆಡೆ ಸೇರಿ ಒಂದು ಸಮನ್ವಯ ರೀತಿ ನೀತಿ ಗಳನ್ನು ರೂಪಿಸುವುದು ಒಳ್ಳೆಯದು. ಬಸವಣ್ಣನನ್ನು ನಮ್ಮ ಧರ್ಮದ ತಳಹದಿಯಾಗಿ ಇಟ್ಟುಕೊಂಡು…..ಯೋಚಿಸಿ
I support.