ಹಗರಿಬೊಮ್ಮನಹಳ್ಳಿ:
ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಮತ್ತು ಯುವಜನರಲ್ಲಿ ವೈಚಾರಿಕ ಚಿಂತನೆ ಬೆಳೆಸಲು ವಿಶಾಲವಾದ ಧೂರದೃಷ್ಟಿ ಇಟ್ಟುಕೊಂಡು ಮೌಢ್ಯತೆಯಿಂದ ಆಚರಿಸುವ ನಾಗರ ಪಂಚಮಿಯನ್ನು ‘ಬಸವ ಪಂಚಮಿ’ ಹೆಸರಿನಲ್ಲಿ ವಿಶೇಷವಾಗಿ ಆಚರಿಸಲು ಇಂದು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಇಂದು ಸಂಜೆ ಪಟ್ಟಣದ ಕೃಷಿಕ ಸಮಾಜ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಬಸವ ಪಂಚಮಿ ಅಂಗವಾಗಿ ಮಾಡುವ ಕಾರ್ಯಕ್ರಗಳು:
- ದಿನಾಂಕ: 9.8.2024 ರಂದು ನಡೆಯುವ ನಾಗರ ಪಂಚಮಿಯ ದಿನ ಬೆಳಿಗ್ಗೆ 10.00 ಗಂಟೆಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿರುವ ಬಸವಣ್ಣ ಮೂರ್ತಿಗೆ ಹೂವಿನ ಹಾಕಿ, ಅಲ್ಲಿಂದ ತಾಲೂಕು ಸರ್ಕಾರಿ ಆಸ್ಪತ್ರೆವರೆಗೆ ಕಾಲ್ನಡಿಗೆ ಮೂಲಕ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚುತ್ತಾ ಮೆರವಣಿಗೆ ಹೊರಟು, ಆಸ್ಪತ್ರೆಯಲ್ಲಿನ ಎಲ್ಲಾ ರೋಗಿಗಳಿಗೆ, ಅಪೌಷ್ಠಿಕತೆ ಹೊಂದಿರುವ ಮಕ್ಕಳು ಮತ್ತು ಮಹಿಳೆಯರಿಗೆ ಕುಡಿಯಲು ಹಾಲು ನೀಡಿ ಬಸವ ಪಂಚಮಿಯ ಉದ್ದೇಶ ಹೇಳುವ ಮೂಲಕ ಜಾಗೃತಿ ಮೂಡಿಸುವುದು.
- ದಿನಾಂಕ: 4.8.2024 ರಂದು ತಂಬ್ರಹಳ್ಳಿಯ ಹಾಸ್ಟೆಲ್ ನಲ್ಲಿ.
- ದಿ: 5.8.2024 ರಂದು ಹಗರಿಬೊಮ್ಮನಹಳ್ಳಿ ಗಂ.ಭೀ.ಪ.ಪೂ ಕಾಲೇಜಿನಲ್ಲಿ.
- ದಿ: 6.8.2024 ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಅಗತ್ಯವಿರುವ ಸಂಪನ್ಮೂಲ, ಹಣಕಾಸು ಮತ್ತು ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ಕೆಲವರು ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಧನ ಸಹಾಯ ಮಾಡಿದರು.
ಮಾನವ ಬಂಧುತ್ವ ವೇದಿಕೆಗೆ ನೀಡಬೇಕಾದ ನೌಕರರ, ನಿವೃತ್ತ ನೌಕರರ, ಪ್ರಗತಿಪರ ಸಾಹಿತಿ, ಬರಹಗಾರರು, ಕಲಾವಿದರ, ಸಾಮಾಜಿಕ ಹೋರಾಟಗಾರರ ಮಾಹಿತಿ ಭರ್ತಿ ಮಾಡಿಕೊಡಲು 50 ಮಾಹಿತಿ ಸಂಗ್ರಹದ ಪ್ರತಿಗಳನ್ನು ಹಂಚಲಾಯಿತು. ಭರ್ತಿ ಮಾಡಿಕೊಟ್ಟ ಪ್ರತಿಗಳನ್ನು ರಾಜ್ಯಕೇಂದ್ರಕ್ಕೆ ಕಳಿಸುವುದಾಗಿ ತಿಳಿಸಲಾಯಿತು.
ಸಾಹಿತಿಗಳು, ಕಲಾವಿದರು, ಪ್ರಗತಿಪರ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ವೈಚಾರಿಕ ಚಿಂತಕರು ಅನೇಕ ಜನ ಭಾಗವಹಿಸಿದ್ದರು.
ವೀರಣ್ಣ ಕಲ್ಮನಿಯವರು ಮಾನವ ಬಂಧುತ್ವ ವೇದಿಕೆಯ ಬಗ್ಗೆ ಮತ್ತು ಬಸವ ಪಂಚಮಿ ಕಾರ್ಯಕ್ರಮ ಆಚರಿಸುವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಉಸ್ಮಾನ್ ಬಾಷರವರು ಸ್ವಾಗತಿಸಿ ವಂದಿಸಿದರು.