ಹಿಂಸೆಯಿಂದ ಪಂಚಾಚಾರ್ಯರಲ್ಲಿ ಲೀನವಾದ ಸಾರಂಗ ಮಠಗಳು

ಸಾರಂಗ ಮಠ

ಹಿಂಸೆಯಿಂದ ಪಂಚಾಚಾರ್ಯರಲ್ಲಿ ಲೀನವಾದ ಸಾರಂಗ ಮಠಗಳು

ಶ್ರೀಶೈಲದ ಸಾರಂಗ ಮಠದ ಮೇಲೆ ನಡೆದ ದಾಳಿ

ನಾಥ ಜೋಗಿಗಳು, ಸಿದ್ದರು ವೀರಶೈವರಲ್ಲಿ ಲೀನವಾದರು

ಒಗಟಾಗಿರುವ ಕೂಡಲಸಂಗಮದ ಸಾರಂಗ ಮಠ

12ನೇ ಶತಮಾನದಲ್ಲಿ ಕಾಪಾಲಿಕ, ಪಾಶುಪತ, ನಾಥರಂತಹ ಬಸವ ಪೂರ್ವ ಶೈವ ಪಂಥಗಳು ಶರಣ ಚಳುವಳಿಯಲ್ಲಿ ಲೀನವಾದವು. ಆದರೆ ಅಲ್ಲಲ್ಲಿ ಈ ಪಂಥಗಳ ಮಠಗಳು ಪ್ರತ್ಯೇಕವಾಗಿ ಉಳಿದಿದ್ದವು.

ವೀರಶೈವರು ಅವುಗಳ ಇತಿಹಾಸ ಬದಲಿಸಿ, ಕೃತಕ ಪುರಾಣ ಸೃಷ್ಟಿಸಿ, ಪಂಚಾಚಾರ್ಯ ಪೀಠಗಳಲ್ಲಿ ಸೇರಿಸಿಕೊಂಡರು. ಉದಾಹರಣೆ – ನಾಥ ಪಂಥದ ರೇವಣಸಿದ್ಧ ಪರಂಪರೆ, ಬಾಳೆ ಹೊನ್ನೂರು ಪೀಠ.

ಕೆಲವು ಕಡೆ ಹಿಂಸೆಯಿಂದಲೂ ಮಠಗಳು ಹಸ್ತಾಂತರವಾದವು. ಒಂದು ಪರಂಪರೆಯವರು ತಮ್ಮ ಪ್ರತಿಸ್ಪರ್ಧಿಗಳ ಮೇಲೆ ದಾಳಿ ಮಾಡಿ ಬಲಾತ್ಕಾರವಾಗಿ ಅವರ ಮಠಗಳನ್ನು ವಶಪಡಿಸಿಕೊಳ್ಳುತ್ತಿದ್ದರು.

ಕುಂಭಕೋಣಂ, ಶ್ರೀಶೈಲ, ಕೂಡಲ ಸಂಗಮ ಮುಂತಾದ ಕಡೆ ಅಸ್ತಿತ್ವದಲ್ಲಿದ್ದ ಸಾರಂಗ ಮಠಗಳು ಮೂಲತಃ ನಾಥ ಮಠಗಳು. ಅವು ಈ ತರಹ ದಾಳಿಗೆ ತುತ್ತಾಗಿ ಪಂಚಾಚಾರ್ಯರಲ್ಲಿ ಲೀನವಾದವು.

ನಾಥರಲ್ಲಿ ಎರಡು ಶಾಖೆಗಳಿದ್ದವು. ಭೈರವನನ್ನು ಆರಾಧಿಸುತ್ತಿದ್ದ ಮತ್ಸೇಂದ್ರನಾಥ, ನಾಗಾರ್ಜುನ ಮುಂತಾದವರಿದ್ದ ‘ಜೋಗಿ’ಗಳ ಶಾಖೆ. ಶಿವನನ್ನು ಪೂಜಿಸುತ್ತಿದ್ದ ರೇವಣಸಿದ್ಧ, ಸಿದ್ದರಾಮರ ‘ಸಿದ್ದ’ ಶಾಖೆ.

ಸಾರಂಗ ಮಠಗಳು ಮತ್ಸೇಂದ್ರನಾಥರ ಶಿಷ್ಯ ಚೌರಂಗಿನಾಥರಿಂದ ಸ್ಥಾಪನೆಯಾದವು. ಅವುಗಳ ಮೇಲೆ ಸಿದ್ದರು, ವೀರಮಾಹೇಶ್ವರರು ದಾಳಿ ನಡೆಸಿ ಹಿಂಸೆಯಿಂದ ವಶಪಡಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.

(‘ಚೌರಂಗಿ ಮಠ > ಸಾರಂಗ ಮಠ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 7)

Share This Article
Leave a comment

Leave a Reply

Your email address will not be published. Required fields are marked *