ಇದು ನಿಜಕ್ಕೂ ಲಿಂಗಾಯತರಿಗೆ ಅಳಿವು ಉಳಿವಿನ ಕಾಲವಾಗಿದೆ.
ಗಂಗಾವತಿ
ಬಸವೋತ್ತರ ಕಾಲದಿಂದಲೂ ಒಂದಲ್ಲ ಒಂದು ರೀತಿಯಾಗಿ ಲಿಂಗಾಯತದ ತತ್ವಗಳನ್ನು, ಸಿದ್ದಾಂತಗಳನ್ನು ಘಾಸಿಗೊಳಿಸುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡು ಬರುತ್ತಿವೆ.
ಜಾತಿಯ ಶ್ರೇಷ್ಠತೆಯ ಹುಚ್ಚನ್ನು ಮುಗ್ದ ಲಿಂಗಾಯತರ ತಲೆಗೆ ತುಂಬಿದ ಪುರೋಹಿತಶಾಹಿ ಪಂಗಡ, ತಾನು ಮಾತ್ರ ಪಲ್ಲಕ್ಕಿಯಲ್ಲಿ ಕೂತು, ಅವರನ್ನು ಹೊತ್ತುಕೊಂಡು ತಿರುಗುವ ಕೆಲಸವನ್ನು ಲಿಂಗಾಯತ ಸಮುದಾಯಕ್ಕೆ ಹಚ್ಚಿದೆ.
ಪಟ್ಟಭದ್ರರ ಈ ಕುತಂತ್ರವನ್ನು ಅರಿತ ಬಹುತೇಕ ಪ್ರಗತಿಪರ ವೈಚಾರಿಕ ಲಿಂಗಾಯತರು ಇಂತಹ ಗುಲಾಮಗಿರಿಯಿಂದ ಲಿಂಗಾಯತರನ್ನು ಹೊರತರಲು ಪ್ರಯತ್ನಿಸಿತ್ತಿರುವುದು ಪಟ್ಟಭದ್ರರ ನಿದ್ದೆಗೆಡಿಸಿದೆ.
ಬಸವ ಗುರುವಿನ ಹೆಸರು ಬಲ್ಲಾತರಿಲ್ಲ
ಹುಸಿ ಮಾತಾಡಬೇಡ
ಲಿಂಗಾಯತಕ್ಕೆ ಬಸವಣ್ಣನೇ ಕರ್ತೃ ಸರ್ವಜ್ಞ
ಲಿಂಗಾಯತ ಬಸವಣ್ಣನೆ ಕರ್ತೃ ಎಂದು ಹೇಳಿದ ಸರ್ವಜ್ಞನಿಗಿಂತ ಮತ್ತೊಂದು ಸಾಕ್ಷಿ ಬೇಕೆ? ಲಿಂಗಾಯತರಲ್ಲಿ ಜಾಗೃತಿಯನ್ನು ಮೂಡಿಸಲು ಶ್ರಮಿಸುತ್ತಿರುವ ಅನೇಕ ಪೂಜ್ಯರ, ಗಣ್ಯರ ನೇತೃತ್ವದಲ್ಲಿ ಇಂದು ಲಿಂಗಾಯತರು ತಮ್ಮ ಅಸ್ಮಿತೆಗಾಗಿ ಹೋರಾಡುತ್ತಿದ್ದಾರೆ.
ಅದನ್ನು ಸಹಿಸದ ಆ ಪಟ್ಟಭದ್ರರು ವಿವಿಧ ಹೇಳಿಕೆಗಳನ್ನು ನೀಡಿ ಲಿಂಗಾಯತ ಸಮುದಾಯವನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ.
ಲಿಂಗಾಯತದಲ್ಲಿ ಹುಟ್ಟಿ ವೀರಶೈವದ ಬಕೆಟ್ ಹಿಡಿದಿರುವ ಕೆಲವೊಬ್ಬ ಜಾತಿ ಲಿಂಗಾಯತರಿಂದ ಬಣ್ಣ ಬಣ್ಣದ ಹೇಳಿಕೆ ನೀಡಿಸಿ ಲಿಂಗಾಯತರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ.
ಇದು ನಿಜಕ್ಕೂ ಲಿಂಗಾಯತರಿಗೆ ಅಳಿವು ಉಳಿವಿನ ಕಾಲವಾಗಿದೆ. ತಾವು ಸ್ವತಂತ್ರರೆಂದು ಜಾತಿಗಣತೆಯಲ್ಲಿ ತೋರಿಸಿಕೊಂಡರೆ ಲಿಂಗಾಯತ ಎನ್ನುವ ಅಸ್ಮಿತೆ ಉಳಿಯುತ್ತೆ. ಇಲ್ಲದಿದ್ದರೆ ವೀರಶೈವರಿಂದ ಶತಮಾನಗಳಿಂದ ಬಂದಂತಹ ಗುಲಾಮಗಿರಿಯ ಬಳುವಳಿಯಲ್ಲಿಯೇ ಬದುಕಬೇಕಾಗುತ್ತದೆ.
ಇದನ್ನು ತಪ್ಪಿಸಲು ಲಿಂಗಾಯತ ಸಮುದಾಯದ ವಿಚಾರವಂತರು ಸಾಮಾನ್ಯ ಲಿಂಗಾಯತರ ಮನೆ ಮನೆಗೆ ಹೋಗಿ ಅರಿವು ಮೂಡಿಸಿಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ವೀರಶೈವ ಲಿಂಗಾಯತ ಅಂತ ಬರೆಸಿದರೆ ಮುಂದಿನ ತಮ್ಮ ಪೀಳಿಗೆಗೆ ತಾವು ಮಾಡಬಹುದಾದ ಅತಿ ದೊಡ್ಡ ಮೋಸ ಎಂದು ಮನವರಿಕೆ ಮಾಡಿಕೊಡಬೇಕಾಗಿದೆ.
ಲಿಂಗಾಯತ ವಿಚಾರವಂತರು ಮನೆ ಮನೆಗೆ ಹೋಗಿ ಅರಿವು ಮೂಡಿಸಿಬೇಕಾದ ಅನಿವಾರ್ಯತೆ ಇದೆ.
ನೋಟದ ಭಕ್ತಿ ಬಸವಣ್ಣನಿಂದಾಯಿತ್ತು.
ಕೂಟದ ಜ್ಞಾನ ಬಸವಣ್ಣನಿಂದಾಯಿತ್ತು ಕಾಣಾ
ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವಣ್ಣನಲ್ಲದೆ?
ಮಹಾಜ್ಞಾನ, ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ
ಕಪಿಲಸಿದ್ದ ಮಲ್ಲಿಕಾರ್ಜುನ
ಮಹಾಜ್ಞಾನದ ಬಸವಣ್ಣನ ಲಿಂಗಾಯತ ಧರ್ಮದವರು ನಾವು ಎನ್ನುವ ಸತ್ಯವನ್ನು ಮನದಲ್ಲಿ ಮೂಡಿಸಬೇಕಿದೆ. ವೀರಶೈವರ ಬಣ್ಣ ಬಣ್ಣದ ಮಾತಿಗೆ ಮರುಳಾಗದೆ ವೀರಶೈವ ಲಿಂಗಾಯತ ತದ್ವಿರುದ್ದ ಎನ್ನುವುದನ್ನು ತಿಳಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ನೀವು ಬಸವ ಸಂಸ್ಕೃತಿ ಪ್ರಚಾರ ಮಾಡುತಿದಿರೋ ಅಥವಾ, ವಿರಶೈವ ವಿರೋದಿಸುವ ಪ್ರಚಾರ ಮಾಡುತಿದಿರೋ, ಎಂಥ ಹೀನ ಸಂಸ್ಕೃತಿ ಗೆ ಬಂದು ಬಿಟ್ಟಿದೀರೀ, ಇಧು ಬಸವ ತತ್ವದ ಸಂಸ್ಕೃತಿ ಅಲ್ಲ ಅವರ ಹೆಸರಿಗೆ ಮಸಿ ಬಡಿಯುವ ರೀತಿ ಅಲ್ಲೀ ನಡೆದುಕೊಳ್ಳು ತೀಡಿರೀ
ನಿತೀಶ್, ನೀವು ವೀರಶೈವ – ಲಿಂಗಾಯತ ಎನ್ನುವ ಕೂಡು ಪದವನ್ನು ಉಪಯೋಗಿಸಿ ಜನರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿದರೆ ಲಿಂಗಾಯತರಿಗೆ ವೀರಶೈವರ ಬಗ್ಗೆ ಮಾತನಾಡು ಏನೂ ಉಳಿಯುವುದಿಲ್ಲ. ಆದುದರಿಂದ ಲಿಂಗಾಯತರನ್ನು ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ.
ಅದನ್ನೇ ನಾನು ಹೇಳುತಿರುವುಧು ಲಿಂಗತರು ಅವರ ಪಾಡಿಗೆ ಅವರು ಇರಲಿ ವೇರಶೈವರು ಅವರ ಪಾಡಿಗೆ ಇರಲಿ,!!!!!! ಈವರು ವಿರಶೈವ ಹಂಗೆ ಲಿಂಗಾತಾ ಹಿಂಗೇ ಯಾಕೆ ಹೇಳಬೇಕು????? ನೀವೇ ಹೇಳಿ ಸರ್
Mr. Nitish we are fighting for our existence. From many centuries, veerashaivas are cheating us. Now we are collectively opposing veerashaiva practices and educating all our people to cultivate lingayat practices.
Have some decency while commenting on someone.
ಎಲ್ಲರನ್ನೂ ಸಮಾನವಾಗಿ ಸಮಾನತೆ ತೋರದ ವೀರಶೈವರು 2002 ರಿಂದ ವೀರಶೈವ ಲಿಂಗಾಯತ ಎಂದು ಹೇಳಿದರು. ಅವರು ಸಮಾಜಕ್ಕಾಗಿ ಮಾಡಿದ್ದೇನು?, ತಮ್ಮ ತಮ್ಮ ಮಕ್ಕಳ,ಮೊಮ್ಮಕ್ಕಳ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದಾರೆ, ಕಡಿದಾಳ್ ಮಂಜಪ್ಪನವರು, ಮಾನ್ಯ ಜತ್ತಿ ಯವರು ಇನ್ನೂ ಅನೇಕ ಹೋರಾಟಗಾರರು ಹಾಗೂ ಬಿಕ್ಷೆ ತಂದು ಬಡ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಿದ ಅನೇಕ ಮಠಾಧಿಪತಿಗಳ ನಿಷ್ಕಲ್ಮಷ ಸೇವೆಯ ಹೋರಾಟದ ಫಲ ಇದೇನ ಲಿಂಗಾಯತರು ಇವರಿಗೆ ಸಂಖ್ಯಾಬಲಕ್ಕೆ ಮಾತ್ರವೇ?
ಒಂದು ಕಾಲದಲ್ಲಿ ದಯವೇ ಧರ್ಮದ ಮೂಲವಯ್ಯ, ಸಕಲ ಜೀವಾತ್ಮಗಳಿಗೂ ಲೇಸನ್ನೇ ಬಯಸುತ್ತಿದ್ದ ಧರ್ಮ
ಇಂದಿನ 20 ರಿಂದ 30 ವರ್ಷದ ಯುವಕ ಯುವತಿಯರ ಪ್ರಕಾರ ಅಂದಕಾರದ ಗೂಡು ಆಗಿದೆ. ಇದಕ್ಕೆಲ್ಲ ಯಾವ
ವೀರಶೈವ ಲಿಂಗಾಯತ ಮಹಾಸಭಾವು ತಲೆಕೆಡಿಸಿ ಕೊಳ್ಳುವುದಿಲ್ಲ ಅವರಿಗೆ ತಿಳಿದಿರುವುದು ಆಜ್ಞೆ ಮಾಡುವುದು ಮಾತ್ರವೇ
Correct answer
Nitish R,ನೀವು ಏಕೆ ಈ ರೀತಿ ಕಾಮೆಂಟ್ ಮಾಡಿದ್ದೀರಿ? ಬಸವ ತತ್ವ ಸಮಾನತೆಯ,ಮಾನವೀಯತೆಯ, ದಯೆ, ಅನುಕಂಪದ ತತ್ವ. ಲಿಂಗಾಯತ ವನ್ನ ವೀರಶೈವ ಅಂದರೆ ವಿರೋಧಿಸ ಬೇಕಲ್ಲ? ವೀರಶೈವ ಜಾತಿವ್ಯವಸ್ಥೆಯ ಪಟ್ಟಭದ್ರರಲ್ಲಿ ನಿಂತಿದೆ. ಡಾ.ನಾರನಾಳರ ಅಂಕಣದಲ್ಲಿ ತಪ್ಪಿದ್ದರೆ ಟೀಕಿಸಿ, ಬಸವ ತತ್ವ ಅರಿಯದೆ ತಾವು ವಿನಾಕಾರಣ ಕಾಮೆಂಟ್ ಮಾಡಿದ್ದೀರಿ. ತಪ್ಪನ್ನ ತಪ್ಪು ಎಂದರೆ ಹೇಗೆ ಅದು ಹೀನಾಯ ಸಂಸ್ಕೃತಿಯಾಗುತ್ತೆ. ತಾವು ದಯವಿಟ್ಟು ಬಸವ ತತ್ವ ಏನು ಅಂತಾದರೂ ಹೇಳಿ,ಸಹೋದರ.
ಸರ್ 12 ನೇ ಶತಮಾನದ ಪೂರ್ವದಲ್ಲಿ ಏನೂತು ಅನ್ನೋದನ್ನು ತಿಳಿದು, ನನಗೆ ಹೇಳಿ ಸಾಕು, ಅದು ಬೇಡ, ಕಳೆದ 50 ವರ್ಷಗಳ ಹಿಂದೆ ಸಮಾಜದ ಹೇಗಿತ್ತು ಅನ್ನೋದನ್ನ ಹೇಳಿ, ಹಾಗೂ ಕಲ್ಬುರ್ಗಿಯವರ ಸಂಶೋಧನೆಯ ಎಲ್ಲಾ ಪುಸ್ತಕಗಳನ್ನು ಒಮ್ಮೆ ಓದಿ ಹೇಳಿ ನೀವು ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ 🙏 ಓಂ ನಮಃ ಶಿವಾಯ
ಈಗ ನಡೆಯುತ್ತರುವ ಲಿಂಗಾಯತ ಧರ್ಮದವರ ಮನೆಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಉದಾಹರಣೆಗೆ ಗೃಹಪ್ರವೇಶ,ಮದುವೆ,ನಾಮಕರಣ ಇತ್ಯಾದಿ ಗಳಿಗೆ ಈಗ ನಡೆಸೆಕೊಡುತ್ತಿರುವವರ ಜಾಗದಲ್ಲಿ ಬಸವ ತತ್ವ ಕ್ರಿಯಾ ಮೂರ್ತಿಗಳನ್ನು ಎಲ್ಲಾ ಕಡೆಗೆ ಸಿಗುವ ಹಾಗೆ (ಈಗ ಸಿಗುತ್ತಿರುವ ಅವರ ರೀತಿಯಲ್ಲಿ) ಮಾಡುವದು ಅತೀ ಅವಶ್ಯ