ಬಸವಕಲ್ಯಾಣ
ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ ಆರಂಭೋತ್ಸವ ನಿಮಿತ್ತ ಗುರವಾರ ಬಸವೇಶ್ವರ ದೇವಸ್ಥಾನದಿಂದ ಪರುಷಕಟ್ಟೆಯವರೆಗೆ ವಚನ ಸಾಹಿತ್ಯದ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ವಚನ ಗಾಯನ, ಜೈ ಘೋಷಗಳು, ಛತ್ರ, ಚಾಮರ, ಡೊಳ್ಳು, ಸಮವಸ್ತ್ರ ಧರಿಸಿ ಶರಣೆಯರು ತಲೆಯ ಮೇಲೆ ಹೊತ್ತ ವಚನ ಸಾಹಿತ್ಯ ಕಟ್ಟುಗಳು ಮೆರವಣಿಗೆಗೆ ವಿಶಿಷ್ಟ ಮೆರಗು ಕೊಟ್ಟವು.

ಪರುಷ ಕಟ್ಟೆಯಲ್ಲಿ ವಚನ ಪಠಣದ ನಂತರ ಮಾತನಾಡಿದ ಡಾ.ಗಂಗಾಂಬಿಕಾ ಅಕ್ಕ 12ನೇ ಶತಮಾನದಲ್ಲಿ ಬಸವಣ್ಣನವರು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಕುಳಿತುಕೊಳ್ಳುತ್ತಿದ್ದ ಪವಿತ್ರ ಪರುಷಕಟ್ಟೆಗೆ ಬೇಡಿದನ್ನು ನೀಡುವ ಶಕ್ತಿ ಇದೆ ಎಂದು ಹೇಳಿದರು.
ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮಿ ಮಾತನಾಡಿ, ವಚನಗಳ ಪ್ರಸಾರ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು, ಅದಕ್ಕಾಗಿ ಗಣಚಾರದ ತತ್ವ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಶರಣುಸಲಗರ, ಬಸವ ಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮಿ, ಅನುಭವ ಮ೦ಟಪದ ಗಾಯತ್ರಿ ತಾಯಿ, ಪೂಜ್ಯ ಸತ್ಯಕ್ಕೆ ತಾಯಿ, ಕಲ್ಯಾಣಮ್ಮ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್.ಭುರಾಳೆ, ಕೋಶಾಧ್ಯಕ್ಷ ಶಿವರಾಜಶಾಶೆಟ್ಟಿ ಕಾರ್ಯದರ್ಶಿ ನಾಗಯ್ಯಾ ಸ್ವಾಮಿ, ಬಿಡಿಪಿಸಿ ನಿರ್ದೇಶಕ ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ವಿಜಯಲಕ್ಷ್ಮೀ ಗಡ್ಡೆ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ತೊಂಡಾರೆ, ಮುಖಂಡರಾದ ಬಸವರಾಜ ಬಾಲಿಕಿಲೆ, ಶಿವಕುಮಾರ ಬಿರದಾರ, ರವಿಂದ ಕೊಳಕೂರ, ಲಿಂಗರಾಜ ಶಾಶೆಟ್ಟಿ, ಡಾ. ಅಮರನಾಥ ಸೋಲಪುರೆ, ಡಾ. ಸಂಗೀತಾ ಮಂಠಾಳೆ, ಸುಲೋಚನಾಗುದಗೆ, ಸೋನಾಲಿನೀಲಕಂಠ, ಮೀನಾ ಜಾಧವ, ಕವಿತಾ ಮೂಲಗೆ, ಸುಮಂಗಲಾ ಬಸವನ ಬಾಗೇವಾಡಿ ಸೇರಿ ಹಲವಾರು ಶರಣ-ಶರಣೆಯರು ಭಾಗವಹಿಸಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.



