ಎಪ್ರಿಲ್ 14 ಕೂಡಲಸಂಗಮದಲ್ಲಿ ಭೀಮ ಸಂಕಲ್ಪ ಬಸವ ಸ್ಮರಣೆ

ಕೂಡಲಸಂಗಮ :

ಇಲ್ಲಿನ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಎಪ್ರಿಲ್ 14 ರಂದು ಬೆಳಿಗ್ಗೆ 9ಕ್ಕೆ ‘ಭೀಮ ಸಂಕಲ್ಪ ಬಸವ ಸ್ಮರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ವಿಭಾಗದ ಸಂಚಾಲಕ ಎಂ.ಪಿ. ಗಿರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಮಹಾಸ್ವಾಮೀಜಿ ಮಾಡುವರು. ಕುಂವೆಂಪು ವಿಶ್ವವಿದ್ಯಾಲಯ ಕನ್ನಡ ಭಾಷಾ ಭಾರತಿ  ಮುಖ್ಯಸ್ಥ ಜಿ. ಪ್ರಶಾಂತ ನಾಯಕ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಸೈಯದ್ ರೋಷನ್ ಮುಲ್ಲಾ, ಸಿ.ಎಂ. ಪೈಜ್, ಮನು ಸಿದ್ದಾರ್ಥ ಗುರೂಜಿ, ತ್ಯಾಗರಾಜ ಸ್ವಾಮೀಜಿ, ರಾಮಣ್ಣ ಮೈಸೂರು, ಚಿಕ್ಕಮುನಿಯಪ್ಪ ಕಿತ್ತಗನೂರು ಭಾಗವಹಿಸುವರು.

ಸಮಾಜದಲ್ಲಿ ಶೋಷಣೆಗೆ ಒಳಗಾದ, ಬಡತನದ ಬೇಗೆಯಲ್ಲೇ ಬೆಳದ ಜನರ ಕಷ್ಟಗಳಿಗೆ ಸಂವಿಧಾನದ ಮೂಲಕ ಬಲ ತುಂಬಿದ್ದು ಅಂಬೇಡ್ಕರ, ಅವರಿಗೂ 8 ಶತಮಾನಗಳ ಹಿಂದೆ ಅನುಭವ ಮಂಟಪದ ಮೂಲಕ ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮನವರಿಗೆ ಮಾಡಿಸಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದು ಬಸವಣ್ಣ. ಈ ಇಬ್ಬರ ದಾರಿ, ಕಾಲಘಟ್ಟ ಬೇರೆಯಾದರೂ ಗುರಿ ಒಂದೇ. ಆಲೋಚನೆ, ಇಟ್ಟ ಹೆಜ್ಜೆ ಒಂದೇ. ಇಬ್ಬರು ಮಹಾನ್ ಚೇತನಗಳ ನೆನೆಯುವ, ಬದುಕಿನಲ್ಲಿ ಅವರು ಸಂದೇಶ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಬಸವಣ್ಣನವರ ನೆಲ್ಲದಲ್ಲಿ ಹಮ್ಮಿಕೊಂಡಿದೆ.

ಬಡಜನರ ದುಶ್ಚಟ ಬಿಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಳೆದ ನಾಲ್ಕು ವರ್ಷದಿಂದ ಒಂದೊಂದು ಸ್ಥಳದಲ್ಲಿ ಕಾರ್ಯಕ್ರಮ ಮಾಡಿದೆ. ಈ ವರ್ಷ 300ಕ್ಕೂ ಅಧಿಕ ಜನರನ್ನು ಬಸವಣ್ಣನ ವಿದ್ಯಾಭೂಮಿ, ಐಕ್ಯಸ್ಥಳವಾದ ಕೂಡಲಸಂಗಮಕ್ಕೆ ಬೆಂಗಳೂರು, ದೇವನಹಳ್ಳಿಯಿಂದ ಕರೆದುಕೊಂಡು ಬಂದು ದುಶ್ಚಟ ಬೀಡಲು ಸಂಕಲ್ಪ ಮಾಡಿಸಿ, ಅಂಬೇಡ್ಕರ, ಬಸವಣ್ಣನವರ ಸ್ಮರಣೆ-ಚಿಂತನೆ ಮಾಡಲಾಗುವುದು ಎಂದು ಗಿರೀಶ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *