ಹಂಡೆ ವಜೀರರು ಸೇರಿದಂತೆ ಎಲ್ಲಾ ಲಿಂಗಾಯತರು ಒಂದಾಗಲಿ: ಸಿ.ಎಸ್. ನಾಡಗೌಡ

ಹಣಮಗೌಡ ಪಾಟೀಲ
ಹಣಮಗೌಡ ಪಾಟೀಲ

ಸಂಭ್ರಮದಿಂದ ನಡೆದ ರಾಜಾ ಹನುಮಪ್ಪನಾಯಕರ ರಾಜ್ಯಮಟ್ಟದ ಜಯಂತ್ಯೋತ್ಸವ

 ನಿಡಗುಂದಿ:

ಪಟ್ಟಣದಲ್ಲಿ ಗುರುವಾರ ಇಲ್ಲಿನ ಕಮದಾಳ ಮುದ್ದೇಶ್ವರ ಮಂಗಲ ಭವನದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ನೇತೃತ್ವದಲ್ಲಿ ವಿಜಯನಗರ ಸಾಮ್ರಾಜ್ಯ ರಕ್ಷಕ ರಾಜಾ ಹಂಡೆ ಹನುಮಪ್ಪನಾಯಕ ಅವರ 540ನೇ ರಾಜ್ಯಮಟ್ಟದ ಜನ್ಮದಿನಾಚರಣೆ ಸಮಾರಂಭ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಎಂ.ಎಸ್.ಐ.ಎಲ್. ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್. ನಾಡಗೌಡ ಮಾತನಾಡುತ್ತ, ಹಂಡೆ ಹನುಮಪ್ಪ ನಾಯಕರು ಹಲವಾರು ಮಠಮಾನ್ಯಗಳಿಗೆ ದಾನ ಧರ್ಮಗಳನ್ನು ಮಾಡಿದ್ದಾರೆ, ಸಾವಿರಾರು ಎಕರೆ ಭೂಮಿ ದಾನ ಮಾಡಿ, ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು. ‌

ವಿಜಯಪುರ ಜಿಲ್ಲೆ, ಬಸವನಬಾಗೇವಾಡಿ ತಾಲೂಕು, ಮುತ್ತಗಿ ಗ್ರಾಮವು ರಾಜಾ ಹಂಡೆ ಹನುಮಪ್ಪ ನಾಯಕರ ಮೂಲ ಸ್ಥಳವಾಗಿದ್ದು. ಅವರ ಮನೆತನವು ಕೃಷ್ಣೆಯ ದಕ್ಷಿಣ ಭಾಗದಲ್ಲಿ ಉತ್ತಮ ಆಡಳಿತ ನಡೆಸಿತ್ತು. ಹಂಡೆ ಅರಸರು ಅನಂತಪುರ, ಬಳ್ಳಾರಿ, ಪೆನುಗೊಂಡಗಳಲ್ಲಿ ಸಾಮ್ರಾಜ್ಯ ನಿರ್ಮಿಸಿ ವಿಜಯಪುರ ಜಿಲ್ಲೆಗೆ ಆಗಮಿಸಿದರು ಎಂದರು.

ವೀರಶೈವ ಲಿಂಗಾಯತ ಹಂಡೆ ವಜೀರ ಸೇರಿದಂತೆ ನಾವೆಲ್ಲರೂ ಲಿಂಗಾಯತರು ಒಂದು ಆಗಬೇಕು. ಉತ್ತರ ಕರ್ನಾಟಕದಲ್ಲಿ ಲಿಂಗಾಯುತ ಪ್ರಬಲ ಸಮಾಜವಾದರೂ ನಾವು 3ನೇ ಸ್ಥಾನದಲ್ಲಿ ಬರಲು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳ ಕಾರಣ ಎಂದು ಹೇಳಿದರು.

ಕೆಲವು ಲಿಂಗಾಯತ ರೆಡ್ಡಿ, ಲಿಂಗಾಯತ ಗಾಣಿಗ, ಸರ್ಕಾರದ ಸಹಾಯ ಪಡೆಯಲು ಮಾಹಿತಿ ವೀರಶೈವ ಲಿಂಗಾಯತ ಕೈ ಬಿಟ್ಟಿರುವುದರಿಂದ ಲಿಂಗಾಯತರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಆದರೆ ಹಂಡೆ ವಜೀರ ಸಮುದಾಯ ಮಾತ್ರ ವೀರಶೈವ ಲಿಂಗಾಯತ ಎಂದೇ ಎಲ್ಲಾ ಗಣಿತಿಯಲ್ಲಿ ಬರೆಸಿದ್ದಾರೆ ಎಂದು ಪ್ರಶಂಸಿಸಿದರು.

ವೀರಶೈವ ಲಿಂಗಾಯತ ಧರ್ಮದಲ್ಲಿ ಕುಂಬಾರ, ವ್ಯಾಪಾರಿ, ಕೃಷಿಕ ಹೀಗೆ ಹಲವಾರು ಬಗೆಯ ಕಾಯಕದಲ್ಲಿ ತೊಡಗಿದ್ದರು. ನಮ್ಮವರೊಳಗೆ ನಾವು ಬೇರೆಯಾಗಬಾರದು, ಆರ್ಥಿಕ ಶೈಕ್ಷಣಿಕವಾಗಿ ಆಲೋಚನೆ ಮಾಡಬೇಕು ಎಂದು ಹೇಳಿದರು.

ವಜೀರ ಎಂದರೆ ಪರ್ಷಿಯನ್ ಅರೇಬಿಕ್ ನಲ್ಲಿ ಹಿರಿಯಸ್ಥಾನ, ಮುಖಂಡತತ್ವ ಸ್ಥಾನ ಎಂದು ಕರೆಯಲಾಗುತ್ತದೆ. ಅಂತ ಬಿರುದು ಹಂಡೆ ಹನುಮಪ್ಪನಾಯಕ ಅವರು ಭಾದಷಾ ವಜೀರ್ ಅವರು ಬಿರುದು ಪಡೆದಿದ್ದರು. ಹಂಡೆ ಲಿಂಗಾಯತರಾದ ಇವರು ಹಂಡೆ ವಜೀರ ಲಿಂಗಾಯತರಾದರು.

ಚರಿತ್ರೆ ಮತ್ತು ಇತಿಹಾಸವುಳ್ಳ ಸಮಾಜ, ವ್ಯವಸಾಯ ಮಾಡುವ ರೆಡ್ಡಿ, ಪಂಚಮಸಾಲಿ, ಹಂಡೆ ವಜೀರ ಸಮುದಾಯಗಳನ್ನು ಶೂದ್ರರ ಪಟ್ಟಿಯಲ್ಲಿ ಇರಿಸಲಾಗಿದೆ. ಮೂಲಗಳನ್ನು ಹುಡುಕಬೇಕು ಹುಡುಕಿದರೆ ನಾವೆಲ್ಲರೂ ಒಂದು, ನಮ್ಮಲ್ಲಿ ಒಗ್ಗಟ್ಟು ಒಂದು ಶಕ್ತಿ ಅದನ್ನು ಇನ್ನೊಬ್ಬರು ಬಳಕೆ ಮಾಡಲು ಅವಕಾಶ ಕೊಡಬಾರದು.

ಸಮಾಜದ ಹಿತಕ್ಕಾಗಿ ಒಗ್ಗಟ್ಟು ಮುಖ್ಯ. ಧರ್ಮದ ವಿಷಯದಲ್ಲಿ ಅಲ್ಪಸಂಖ್ಯಾತರು ಒಂದಾಗುತ್ತಾರೆ. ನಮ್ಮಲ್ಲಿ ಧರ್ಮವೆಂಬ ಸರಪಳಿ ತುಂಡಾಗದಂತೆ ನಿಗಾವಹಿಸಿ ಶಿಕ್ಷಣ ಮತ್ತು ಕಾಯಕಕ್ಕೆ ಆದ್ಯತೆ ನೀಡಲು ಕೋರಿದರು. ಹಣವಂತ ಹಾಗೂ ಬಡವನ ಸ್ಥಿತಿ ಎರಡನ್ನು ನೋಡಿದ್ದು, ಕೇವಲ ಅನುಕಂಪದಿಂದ ಹೊಟ್ಟೆ ತುಂಬುವುದಿಲ್ಲ, ಯುವಕರು ದುಶ್ಚಟಗಳಿಂದ ಮುಕ್ತರಾಗಿ ಉತ್ತಮ ಜೀವನ ಸಾಗಿಸಬೇಕು ಎಂದು ಶಾಸಕ ನಾಡಗೌಡರು ಸಲಹೆ ನೀಡಿದರು‌.

ಪ್ರೊ. ಆಯ್. ಬಿ. ಹಿರೇಮಠ ಉಪನ್ಯಾಸ ನೀಡಿ, ಹಂಡೆ ವಜೀರ ಸಮುದಾಯವು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ರೆಡ್ಡಿ ಸಮಾಜದ ಇತಿಹಾಸ, ನೊಣಬರ ಇತಿಹಾಸ, ಹಂಡೆ ವಜೀರ ಸಮಾಜ ಇತಿಹಾಸಗಳ ಸಂಶೋಧನೆಯಾಗಬೇಕು ಎಂದರು.

ಕೃಷ್ಣೆಯ ತೀರದಲ್ಲಿ ಮಾಂಡಲೀಕ ಅರಸರಾಗಿ ರಾಜಾ ಹಂಡೆ ಹನುಮಪ್ಪನಾಯಕ ಅವರು ಆದಿಲ್ ಶಾಹಿ ಆಡಳಿತದಲ್ಲಿ ಪೇಶ್ವೆಗಳನ್ನು ಸದೆಬಡಿದವರು. ಹನುಮಪ್ಪನಾಯಕನ 5ಜನ ಮಕ್ಕಳೊಂದಿಗೆ ಶಕ್ತಿ ಪ್ರದರ್ಶನ ಮಾಡಿದವರು, ಎರಡನೆಯ ಆದಿಲ್ ಶಾಹಿ ಇವರ ಶೌರ್ಯಕ್ಕೆ ಮಾರು ಹೋಗಿ ಮತಾಂತರಕ್ಕೆ ಪ್ರೇರೇಪಿಸಿದರು. ಇದಕ್ಕೆ ಒಪ್ಪದ ಅವರು ದೇಹಬಿಟ್ಟೇನು ಮತಾಂತರ ಆಗಲು ಸಾಧ್ಯವಿಲ್ಲ, ನಿಮ್ಮ ಮಗಳನ್ನು ನನಗಾಗಲಿ ಮಕ್ಕಳಿಗಾಗಲಿ ಮದುವೆ ಮಾಡಿದರೆ ಶೌರ್ಯದ ಮಕ್ಕಳನ್ನು ಕೊಡಲು ಸಾಧ್ಯವೆಂದು ಕಟುವಾಗಿ ನುಡಿದಿದ್ದರು ಎಂದು ಉಪನ್ಯಾಸದಲ್ಲಿ ಹೇಳಿದರು.

ರಾಜ್ಯದಲ್ಲಿ ವೀರಶೈವ ಲಿಂಗಾಯತರು ಸರ್ಕಾರದ ಸೌಲಭ್ಯಕ್ಕಾಗಿ ವಿಭಜನೆಯಾಗದೆ ಒಗ್ಗಟ್ಟಾಗಿರುವದು ಮುಖ್ಯ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜಿತ್ ಮಾತನಾಡಿ, ರಾಜಾ ಹನುಮಪ್ಪನಾಯಕರ ಚರಿತ್ರೆ ಇನ್ನಷ್ಟು ಸಂಶೋಧನೆ ಆಗಬೇಕು. ನಮ್ಮ ನಾಡು ಶರಣರ ನಾಡು, ಭಾವೈಕ್ಯತೆಯ ನಾಡು ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ದೇವೇಂದ್ರ ಗೋನಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಸೋಮನಗೌಡ ಪಾಟೀಲ್ (ಸಾಸನೂರ) ಸಮಾರಂಭವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ. ಎಸ್.ಎಸ್. ಪಾಟೀಲ ವಹಿಸಿದ್ದರು.

ಸಾನಿಧ್ಯವನ್ನು ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಬ್ಯಾಲ್ಯಾಳದ ಶ್ರೀಶೈಲ ಮುತ್ಯಾ, ಮುತ್ತಗಿಯ ವೀರ ರುದ್ರಮುನಿಸ್ವಾಮಿ ವಹಿಸಿದ್ದರು.

ಶಾಸಕ ರಾಜುಗೌಡ ಪಾಟೀಲ, ಆರ್.ಎಸ್. ಪಾಟೀಲ, ಬಸವರಾಜ ವಂದಾಲ, ಶಂಕರಗೌಡ ಶಿವಣಗಿ, ಅವ್ವಣ್ಣಗೌಡ ಗ್ವಾತಗಿ, ಭೀಮನಗೌಡ ಕೊಡಗಾನೂರ, ಹಣಮಗೌಡ ಪಾಟೀಲ ಚಿರ್ಚನಕಲ್ಲ ಮತ್ತಿತರರು ಇದ್ದರು. ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *