ಬಸವ ಸಂಘಟನೆಗಳು ಲಿಂಗಾಯತ ನಾಯಕರಿಗೆ ಮೂಗುದಾರ ಹಾಕುವ ಸಮಯ ಬಂದಿದೆ
ಬೆಂಗಳೂರು
ಒಂದು ವರ್ಷದ ಹಿಂದೆ ಸಚಿವ ಎಂ ಬಿ ಪಾಟೀಲ್ ಲಿಂಗಾಯತರ ವಿರುದ್ಧ ಲಿಂಗಾಯತರನ್ನು, ದಲಿತರ ವಿರುದ್ಧ ದಲಿತರನ್ನು ಛೂ ಬಿಡುವುದು ಆರೆಸ್ಸೆಸ್‌ನವರ ಚಾಳಿ ಎಂದು ಹೇಳಿದ್ದರು.
ಪ್ರತಿಯೊಂದು ಸಮುದಾಯವನ್ನು ಕಾಡುತ್ತಿರುವ ಹಲವಾರು ವಿಷಯಗಳ ಬಗ್ಗೆ ಆರೆಸ್ಸೆಸ್‌ನವರಿಗೆ ತಮ್ಮದೇ ನಿಲುವಿರುತ್ತದೆ. ಸಾಮಾನ್ಯವಾಗಿ ಆ ನಿಲುವನ್ನು ಬಿಂಬಿಸಲು ಆಯಾ ಸಮುದಾಯಗಳ ಮುಖಂಡರನ್ನೇ ಬಳಸುಕೊಳ್ಳುತ್ತಾರೆ. ಅದರಿಂದ ಏನೇ ಗೊಂದಲ, ಗಲಾಟೆಯಾದರೂ ಅದು ಸಮುದಾಯದೊಳಗೆಯೇ ನಡೆಯುತ್ತದೆ. ಯಾವ ಪ್ರಸಂಗದಲ್ಲಿಯೂ ತಮ್ಮ ಕೈ ಸುಡದಂತೆ ನೋಡಿಕೊಳ್ಳುತ್ತಾರೆ.
ಆದರೆ ಕಳೆದ ವಾರ ಮೊದಲ ಬಾರಿಗೆ ಆರೆಸ್ಸೆಸ್ ನಾಯಕ ಬಿ ಎಲ್ ಸಂತೋಷ್ ಲಿಂಗಾಯತ ಸಮಾಜದ ಕುತ್ತಿಗೆಗೆ ನೇರವಾಗಿ ಕೈ ಹಾಕಿ ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ಬಂದಿದ್ದಾರೆ. ಕನ್ನೇರಿ ಸ್ವಾಮಿಯನ್ನು ವಿಜಯಪುರದಿಂದ ನಿರ್ಬಂಧಿಸಿರುವುದು ಸಿದ್ದರಾಮಯ್ಯ ಸರಕಾರದ ಅತ್ಯಂತ ಕ್ರೂರ ನಡೆ ಎಂದು ಬಹಿರಂಗ ಹೇಳಿಕೆ ನೀಡುವ ಧೈರ್ಯ ತೋರಿಸಿದ್ದಾರೆ.
ಮೊದಲ ಬಾರಿಗೆ ಬಿ ಎಲ್ ಸಂತೋಷ್ ಲಿಂಗಾಯತ ಸಮಾಜದ ಕುತ್ತಿಗೆಗೆ ನೇರವಾಗಿ ಕೈ ಹಾಕಿದ್ದಾರೆ
ಕನ್ನೇರಿ ಸ್ವಾಮಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಯಾವ ಕಾರಣಕ್ಕೆ ಅವರನ್ನು ವಿಜಯಪುರ ಮತ್ತು ಬಾಗಲಕೋಟೆಯಿಂದ ಓಡಿಸಲಾಗಿದೆ ಎನ್ನುವುದು ಬಿ. ಎಲ್. ಸಂತೋಷ್ ರಂತಹ ಹಿಂದೂ ತಾಲಿಬಾನಿಗಳ ತಲೆಗೆ ಹೊಳೆಯುವ ಪ್ರಶ್ನೆಯಲ್ಲ.
ಸಂತೋಷ್ ಹೇಳಿಕೆ ಬರುತ್ತಿದ್ದಂತೆಯೇ ವಿಜಯೇಂದ್ರ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿಯಂತಹ ಲಿಂಗಾಯತ ಮುಖಂಡರು ಸಾಲುಸಾಲಾಗಿ ಕನ್ನೇರಿ ಸ್ವಾಮಿ ಬೆಂಬಲಕ್ಕೆ ಬಂದು ನಿಂತರು.
ಲಿಂಗಾಯತರ ಮತಗಳ ಮೂಲಕವೇ ಹೊಟ್ಟೆ ಹೊರೆದುಕೊಳ್ಳುವ ಇವರಿಗೂ ಲಿಂಗಾಯತ ಮಠಾಧೀಶರ ಮೇಲೆ ಬಳಕೆಯಾಗಿರುವ ಭಾಷೆ ಮುಖ್ಯವಾಗಲಿಲ್ಲ. ಸಂತೋಷ್ ಹೇಳಿಕೊಟ್ಟ ಗಿಳಿಪಾಠವನ್ನೇ ಮುದ್ದಾಗಿ ಉಲಿದು ಸುಮ್ಮನಾದರು.
ಲಿಂಗಾಯತರ ನಾಯಕರಿಗೂ ನಮ್ಮ ಮಠಾಧೀಶರ ಮೇಲೆ ಬಳಕೆಯಾಗಿರುವ ಭಾಷೆ ಮುಖ್ಯವಾಗಲಿಲ್ಲ.
ಬಿಜೆಪಿಯಲ್ಲಿರುವ ಯಾವ ಲಿಂಗಾಯತನಿಗೂ ಸ್ವಂತ ಬುದ್ದಿ ಬಳಸುವ ಅಥವಾ ಸಂತೋಷ್ ಹಾಕುವ ಗೆರೆಯನ್ನು ದಾಟಲಾಗುವುದಿಲ್ಲ ಎನ್ನುವುದು ಇದರ ಒಳಾರ್ಥ. ಇವರುಗಳಿಗೆ ಬೀಳುವ ಲಿಂಗಾಯತ ಮತಗಳೂ ಕೊನೆಗೆ ತಲುಪುವುದು ಬಿಜೆಪಿಯನ್ನು ಕಾಲಿನಡಿ ಇಟ್ಟುಕೊಂಡಿರುವ ಸಂತೋಷರಂತಹ ಆರೆಸ್ಸೆಸ್ ನಾಯಕರನ್ನೇ.
ಅದಕ್ಕೆ ಇನ್ನು ಮೇಲೆ ಲಿಂಗಾಯತ ನಾಯಕರ ನಾಯಕ ಬಿ ಎಲ್ ಸಂತೋಷನ್ನೂ ಕೂಡ ‘ಲಿಂಗಾಯತ ನಾಯಕ’ ಎಂದು ಕರೆಯುವುದು ಸರಿ ಎಂದು ಅನಿಸುತ್ತದೆ.

ಇದನ್ನು ಹಾಸ್ಯಕ್ಕೆ ಹೇಳುತ್ತಿಲ್ಲ. ನಮ್ಮ ನಾಯಕರನ್ನು ಬಳಸಿಕೊಂಡು ಇಡೀ ಲಿಂಗಾಯತ ಸಮಾಜವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಬಿ ಎಲ್ ಸಂತೋಷ್ ನಡೆಸುತ್ತಿರುವ ಪ್ರಯತ್ನ ಎಲ್ಲರಿಗೂ ಗೊತ್ತಿರುವ ವಿಷಯ. ಇದಕ್ಕೆ ತಡೆಗೋಡೆಯಾಗಿದ್ದ ಯಡಿಯೂರಪ್ಪನವರನ್ನು ಕೆಳಗಿಳಿಸಲು ಇದೂ ಒಂದು ಮುಖ್ಯ ಕಾರಣ.
ಮೆದುಳು, ಬೆನ್ನೆಲುಬು ಎರಡೂ ಇರದ ಈ ಲಿಂಗಾಯತ ನಾಯಕರ ವರ್ತನೆ ಎಲ್ಲರ ಕಣ್ಣಿಗೂ ಬಿದ್ದಿದೆ. ಶುಕ್ರವಾರ ನಡೆದ ಲಿಂಗಾಯತ ಮಠಾದೀಶರ ಒಕ್ಕೂಟದ ಸುದ್ದಿಗೋಷ್ಠಿಯಲ್ಲೂ ಇದು ಚರ್ಚೆಯ ವಿಷಯವಾಯಿತು.
ನಿರ್ಬಂಧದ ಹಿಂದಿನ ಕಾರಣವನ್ನು ಕೇಳದೆ ಅದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಿಗೆ ತಾಯಂದರಿಲ್ಲವೇ ಎಂದು ಒಕ್ಕೂಟದ ಕಾರ್ಯದರ್ಶಿ ಪೂಜ್ಯ ಶಿವಾನಂದ ಸ್ವಾಮಿಗಳು ಪ್ರಶ್ನಿಸಿದರು. ನಮ್ಮ ಪೂಜ್ಯರಿಂದ ಇಂತಹ ನೋವಿನ ಮಾತು ನಾನು ಕೇಳಿದ್ದು ಇದೇ ಮೊದಲು.
ನಿರ್ಬಂಧದ ಕಾರಣ ಕೇಳದೆ ವಿರೋಧಿಸುತ್ತಿರುವ ಬಿಜೆಪಿ ನಾಯಕರಿಗೆ ತಾಯಂದರಿಲ್ಲವೇ?
ಇದು ಯಡಿಯೂರಪ್ಪ ಯುಗವಲ್ಲ
ತಮ್ಮದು ಹೋರಾಟದ ಬದುಕು, ಇಡೀ ಜೀವನವನ್ನು ಸಂಘರ್ಷದಲ್ಲಿಯೇ ಕಳೆದಿದ್ದೇನೆ ಎಂದು ಯಡಿಯೂರಪ್ಪ ಆವಾಗವಾಗ ಹೇಳುತ್ತಿರುತ್ತಾರೆ. ಅವರು ಅತೀ ಹೆಚ್ಚು ಹೋರಾಡಿದ್ದು ಕಾಲಿನಲ್ಲಿ ಸದಾ ಮುಳ್ಳಾಗಿಯೇ ಇದ್ದ ಆರೆಸ್ಸೆಸ್ ಜೊತೆ ಎನ್ನುವುದು ಇಲ್ಲಿ ಗಮನಿಸಬೇಕು.
ನಾಲ್ಕು ಭಾರಿ ಮುಖ್ಯಮಂತ್ರಿಯಾದರೂ ಒಂದು ಭಾರಿಯೂ ಪೂರ್ಣಾವಧಿ ಅಧಿಕಾರ ನಡೆಸದ ದಾಖಲೆ ಯಡಿಯೂರಪ್ಪನವರದು. ಇದರಲ್ಲಿ ಎರಡು ಭಾರಿ ಅಧಿಕಾರ ಕಳೆದುಕೊಂಡಾಗಲೂ ನೇರವಾಗಿ ಆರೆಸ್ಸೆಸ್ ಪಾತ್ರವಿತ್ತು ಎನ್ನುವುದೂ ಗಮನಿಸಬೇಕು.
ಎರಡು ಭಾರಿ ಯಡಿಯೂರಪ್ಪನವರನ್ನು ಅಧಿಕಾರದಿಂದ ತೆಗೆದಿದ್ದು ಆರೆಸ್ಸೆಸ್
2021ರಲ್ಲಿ 75 ವರ್ಷವಾದ ಮೇಲೆ ಒಲ್ಲದ ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದು ಇದೇ ಆರೆಸ್ಸೆಸ್. ಈ ವರ್ಷ ಪ್ರಧಾನಿ ಮೋದಿಗೆ 75 ವರ್ಷವಾದ ಮೇಲೆ ಅದೇ ವಯಸ್ಸಿನ ನಿಯಮ ಸಡಿಲಿಸಿದ್ದು ಇದೇ ಆರೆಸ್ಸೆಸ್.
“ನಮಗೆ ಅಧಿಕಾರಕ್ಕಿಂತ ಸಿದ್ದಾಂತ ಮುಖ್ಯ. ಯಡಿಯೂರಪ್ಪ ಸರಕಾರ ನಮ್ಮ ಅಜೆಂಡಾ ಅನುಷ್ಠಾನಗೊಳಿಸಲು ಪೂರಕವಾಗಿರಲಿಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಇದೇ ಸಮಸ್ಯೆಯಿತ್ತು,” ಎಂದು ಕೆಲವು ವರ್ಷಗಳ ಹಿಂದೆ ಆರೆಸ್ಸೆಸ್ ನಾಯಕರೊಬ್ಬರು ಹೇಳಿದ್ದರು.
“ಯಡಿಯೂರಪ್ಪ ಎಲ್ಲಾ ಅಧಿಕಾರ ತಮ್ಮ ಕೈಯಲ್ಲಿಟ್ಟುಕೊಂಡಿದ್ದರು. ಆರೆಸ್ಸೆಸ್ ನವರಿಗೆ ಅವರ ಕೈಯಿಂದ ಕೆಲಸ ಮಾಡಿಸಿಕೊಳ್ಳುವುದು ಸುಲುಭವಾಗಿರಲಿಲ್ಲ. ಬಿ ಎಲ್ ಸಂತೋಷನ್ನೂ ಬಹಳ ಹೊತ್ತು ಕಾಯಿಸಿದ್ದನ್ನು ನೋಡಿದ್ದೇನೆ,” ಎಂದು ಅಧಿಕಾರಿಯೊಬ್ಬರು ಹೇಳಿದ್ದರು.
ಬಾಲಂಗೋಚಿಗಳು
ಯಡಿಯೂರಪ್ಪನವರ ವರ್ಚಸ್ಸು, ಸಾಮರ್ಥ್ಯದ ಹತ್ತಿರಕ್ಕೂ ಬರಲು ಈಗಿನ ಲಿಂಗಾಯತ ನಾಯಕರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಅವರು ಸಂತೋಷರಂತವರ ಬಾಲಂಗೋಚಿಗಳಾಗಿ ಜೀವನ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಹವ್ಯಕ ಮಹಾಸಭೆಯ ಸಮಾವೇಶದಲ್ಲಿ ಜಗದೀಶ ಶೆಟ್ಟರ್ ಭಾಗವಹಿಸಿದ್ದರು. ಅಲ್ಲಿ ಕ್ಷೀಣಿಸುತ್ತಿರುವ ಹವ್ಯಕ ಜನಸಂಖ್ಯೆಯ ಬಗ್ಗೆ ಕಣ್ಣೀರು ಹಾಕಿಕೊಂಡು ಹವ್ಯಕರು ಹೆಚ್ಚು ಮಕ್ಕಳು ಮಾಡಲು ಕರೆ ಕೊಟ್ಟಿದ್ದರು. ಇಂತಹ ಸಾಮಾಜಿಕ ತುಡಿತವಿರುವ ಶೆಟ್ಟರ್ ಗೆ ಲಿಂಗಾಯತ ಪೂಜ್ಯರಿಗೆ ಆಗಿರುವ ಅಪಮಾನ, ಅದರ ವಿರುದ್ದ ವ್ಯಕ್ತವಾಗುತ್ತಿರುವ ಆಕ್ರೋಶ ಎರಡೂ ಕಾಣಿಸುತ್ತಿಲ್ಲದಿರುವುದು ವಿಚಿತ್ರ.

ಬಸವಣ್ಣ, ಲಿಂಗಾಯತ ವಿಷಯಗಳ ಬಗ್ಗೆ ವಿಜಯೇಂದ್ರ ಯಾವತ್ತಾದರೂ ಮಾತನಾಡಿದ್ದು ನೆನಪಿದೆಯಾ? ಇದೇ ವ್ಯಕ್ತಿ ಹಿಂದೂ, ಹಿಂದುತ್ವದ, ಆರೆಸ್ಸೆಸ್ ವಿಷಯ ಬಂದಾಗ ಎಲ್ಲರಿಗಿಂತ ಮೊದಲು ಬೊಬ್ಬಿಡಲು ಶುರುಮಾಡುವುದು ಯಾಕೆ?
ವಿಜಯೇಂದ್ರರ ಕೆಲವು ಹೇಳಿಕೆಗಳನ್ನು ಗಮನಿಸಿ:
ಬೀದರ್, ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆಗಳಲ್ಲಿ ಇಬ್ಬರು ಬ್ರಾಹ್ಮಣ ಹುಡುಗರ ಜನಿವಾರ ತೆಗೆಸಿದ್ದು “ಹೇಯ” “ಬೌದ್ಧಿಕ ವಿಕೃತಿ” “ಮನುಷ್ಯತ್ವ ಇಲ್ಲದ ನಡೆ” ಎಂದು ಹೇಳಿದ್ದು ವಿಜಯೇಂದ್ರ.
ಇತ್ತೀಚೆಗೆ ಸರಕಾರಿ ಕಾರ್ಯಕ್ರಮಕ್ಕೆ ಆರೆಸ್ಸೆಸ್ ವೇಷದಲ್ಲಿ ಬಂದಿದ್ದ ಶಾಸಕ ಮುನಿರತ್ನರನ್ನು ಡಿ ಕೆ ಶಿವಕುಮಾರ್ ‘ಏಯ್ ಕರಿಟೋಪಿ’ ಎಂದು ಕರೆದಿದ್ದರು.
“ಡಿ.ಕೆ.ಶಿವಕುಮಾರ್ ಅವರಿಗೆ ಕನಿಷ್ಠ ಸೌಜನ್ಯವೂ ಇಲ್ಲ, ಅಪಮಾನ ಮಾಡಿದ್ದು ಮುನಿರತ್ನ ಅವರಿಗಲ್ಲ… ಮುಂಬರುವ ದಿನದಲ್ಲಿ ಪಕ್ಷಕ್ಕೆ ಕರಿಟೋಪಿ ಬೆಲೆ ಏನೆಂದು ತೋರಿಸುತ್ತೇವೆ, ಎಂದು ಹೇಳಿದ್ದು ವಿಜಯೇಂದ್ರ.
ಕರಿ ಟೋಪಿ ಅಂತ ಜೋರಾಗಿ ಕರೆದರೆ ಆರೆಸ್ಸೆಸ್‌ನವರಿಗೆ ಅಪಮಾನವಂತೆ. ನಮಗೆ ಅಕ್ಕ, ಅಮ್ಮ ಅಂದರೂ ಲೆಕ್ಕಕಿಲ್ಲವಂತೆ. ಈ ವ್ಯಕ್ತಿ ಯಡಿಯೂರಪ್ಪ ಪೀಠದ ಉತ್ತರಾಧಿಕಾರಿಯಂತೆ!
ಆರೆಸ್ಸೆಸ್‌ಗೆ ರಕ್ಷಣೆಗೆ ನಿಂತಿರುವ ಇವರಿಗೆ ನಮಗೆ ಅಕ್ಕ, ಅಮ್ಮ ಅಂದರೂ ಲೆಕ್ಕಕಿಲ್ಲ
ಇದೇ ರೀತಿ ಹಿಂದೂ ಕಾರ್ಯಕರ್ತರು, ಹಿಂದೂ ಮುಖಂಡರನ್ನು, ಧರ್ಮಸ್ಥಳದ ವೀರೇಂದ್ರ ಹೆಗಡೆಯನ್ನು ರಕ್ಷಿಸಲು ವಿಜಯೇಂದ್ರ ಲೆಕ್ಕವಿಲ್ಲದಷ್ಟು ಭಾರಿ ತೊಡೆ ತಟ್ಟಿದ್ದಾರೆ.
ಲಿಂಗಾಯತ ಕೋಟಾದಲ್ಲಿ ಮುಖ್ಯಮಂತ್ರಿಯಾದವರು ಬೊಮ್ಮಾಯಿ. ಕನ್ನೇರಿ ಸ್ವಾಮಿಯ ವಿರುದ್ಧ ಲಿಂಗಾಯತ ಸಮಾಜ ಸಿಡಿಯುತ್ತಿದ್ದಂತೆಯೇ ಹಿಂದುತ್ವದ ಟಿವಿ ಚಾನೆಲ್ಲುಗಳು ಅವರ ಬೆಂಬಲಕ್ಕೆ ಬಂದವು.
ವಿವಾದವೆದ್ಧ ಮರುದಿನವೇ ರಿಪಬ್ಲಿಕ್ ಟಿವಿಯಲ್ಲಿ ಕನ್ನೇರಿ ಸ್ವಾಮಿಯ ದೀರ್ಘ ಸಂದರ್ಶನವಿತ್ತು. ಅಲ್ಲಿ ಆತ ಲಿಂಗಾಯತ ಪೂಜ್ಯರ ಮೇಲೆ ಮತ್ತೆ ಬಾಯಿಗೆ ಬಂದ ಹಾಗೆ ಮಾತನಾಡಿದಾಗೆಲ್ಲ ಮುಂದೆ ಕುಳಿತು ಚಪ್ಪಾಳೆ ತಟ್ಟಿದ್ದು ಇದೇ ಬೊಮ್ಮಾಯಿ. ವಚನ ದರ್ಶನ ಬಿಡುಗಡೆಯಲ್ಲೂ ಮುಂದಿನ ಸಾಲಿನಲ್ಲಿ ಕೂತು ಸಂಭ್ರಮಿಸಿದ್ದು ಇದೇ ವ್ಯಕ್ತಿ.

ಇವರೆಲ್ಲಾ ಆರೆಸ್ಸೆಸ್‌ನವರ ಮೇಲಿನ ಪ್ರೀತಿ, ಅಭಿಮಾನದಿಂದ ಈ ರೀತಿ ನಡೆದುಕೊಳ್ಳುತ್ತಿಲ್ಲ. ನಮಗಿಂತ ಹೆಚ್ಚಿಗೆ ಆರೆಸ್ಸೆಸ್ ಬಿಸಿ ತಟ್ಟಿರುವುದು ಇವರಿಗೆ. ಇವರ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಇವರು ಯಾವ ಆರೆಸ್ಸೆಸ್‌ನೂ ಇವರು ಕ್ಯಾರೇ ಎನ್ನುವುದಿಲ್ಲ.
2023ರ ಚುನಾವಣೆಯಲ್ಲಿ ಟಿಕೆಟ್ ತಪ್ಪಿದಾಗ ಶೆಟ್ಟರ್ ರಾತ್ರೋರಾತ್ರಿ ಲಿಂಗಾಯತರಾಗಿ ಬಿ ಎಲ್ ಸಂತೋಷ್ ವಿರುದ್ಧ ತಿರುಗಿ ಬಿದ್ದರು. ಸಿಕ್ಕಸಿಕ್ಕಲ್ಲಿ ಸಂತೋಷ್, ಬಿಜೆಪಿ, ಆರೆಸ್ಸೆಸ್ ಮಾನಕಳೆದು ಕಾಂಗ್ರೆಸ್ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಯತ್ನಾಳ್ ಹಾವಳಿ ಅತಿಯಾದಾಗ ವಿಜಯೇಂದ್ರ ಕೂಡ ಆರೆಸ್ಸೆಸ್‌ಗೆ ಗಂಭೀರವಾದ ಎಚ್ಚರಿಕೆ ನೀಡಿದರು. ಕೆಲವು ದುಷ್ಟ ಶಕ್ತಿಗಳು ಲಿಂಗಾಯತ ಸಮಾಜವನ್ನು ಕಾಡುತ್ತಿವೆ ಎಂಬ ಮಂತ್ರಗಳು ವಿಜಯೇಂದ್ರ ಬಣದಿಂದ ಬರಲು ಶುರುವಾದ ನಂತರವೇ ಯತ್ನಾಳ್ ಉಚ್ಚಾಟನೆಯಾಗಿದ್ದು.
ಅವಕಾಶವಾದಿಗಳು
ಆದರೆ ಬಿಜೆಪಿಯಲ್ಲಿ ಉಳಿಯಲು ಇವರು ಆರೆಸ್ಸೆಸ್‌ನ ಓಲೈಸುವುದು ಅನಿರ್ವಾಯ. ಇದಕ್ಕೆ ತಾವುಗಳು ಬಂದಿರುವ ಸಮಾಜವನ್ನೂ ಬಲಿ ಕೊಡಲು ಈ ಅವಕಾಶವಾದಿಗಳು ಸಿದ್ಧರಿದ್ದಾರೆ. ಇವರಿಗೆ ಲಿಂಗಾಯತರು ಹರಕೆಯ ಕುರಿಗಳಷ್ಟೇ.
ಲಿಂಗಾಯತರು ತಮ್ಮ ನಾಯಕರನ್ನು ಪ್ರಶ್ನಿಸಿದೆ ಸಡಿಲ
ಬಿಟ್ಟಿರುವುದು ಇಲ್ಲಿರೋ ಸಮಸ್ಯೆ.
ಸಮಾಜದ ಬೆಂಬಲದಿಂದ ಆಯ್ಕೆಯಾದ ಮೇಲೆ ಇವರಲ್ಲಿ ಅದೇ ಸಮಾಜಕ್ಕೆ ಬದ್ದವಾಗಿರುವ ಪ್ರಾಮಾಣಿಕತೆಯಿಲ್ಲ. ಬದಲಾಗಿ ಲಿಂಗಾಯತರ ವಿರೋಧಿಗಳ ಜೊತೆ ಮುಚ್ಚುಮರೆಯಿಲ್ಲದೆ ಕೈ ಜೋಡಿಸುವ ಧೈರ್ಯ ಎಲ್ಲಿಂದ ಬರುತ್ತದೆ?
ಆರೆಸ್ಸೆಸ್‌ನವರು ಇವರನ್ನು ಪ್ರಶ್ನಿಸಿ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಲಿಂಗಾಯತರು ಇವರನ್ನು ಇಲ್ಲಿಯವರೆಗೆ ಪ್ರಶ್ನಿಸಿದೆ ಸಡಿಲ ಬಿಟ್ಟಿದ್ದಾರೆ. ಇದು ಇಲ್ಲಿರೋ ಸಮಸ್ಯೆ.
ಇದಕ್ಕೆ ಪರಿಹಾರ ಹುಡುಕಬೇಕಾಗಿರುವ ಜವಾಬ್ದಾರಿ ಬಸವ ಸಂಘಟನೆಗಳದು.
ಮೂಗುದಾರ ಹಾಕುವ ಸಮಯ
ನಮ್ಮ ನಾಯಕರು ಲಿಂಗಾಯತ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದನ್ನು ಅವರಿಗೆ ಮನವರಿಕೆ ಮಾಡುವ ಅಗತ್ಯವಿದೆ.
ಕಳೆದ 50 ವರ್ಷಗಳಲ್ಲಿ ಬಸವ ಸಂಘಟನೆಗಳು ನಾಡಿನುದ್ದಕ್ಕೂ ತಲೆಯೆತ್ತಿವೆ. ಇವರಿಗೆ ಒಂದೇ ಅಜೆಂಡಾ: ಬಸವಣ್ಣ. ಸದಾ ಜನರ ಜೊತೆ ಸಕ್ರಿಯವಾಗಿರುವ ಇವರು ಇಂದು ಶರಣ ಸಮಾಜದ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದಲ್ಲಿ ತೋರಿಸಿದಂತೆ ಜಿಲ್ಲೆ ಜಿಲ್ಲೆಗಳಲ್ಲಿ ಸಾವಿರಾರು ಜನರನ್ನು ಸೇರಿಸುವ ಸಾಮರ್ಥ್ಯ ನಮ್ಮ ಪೂಜ್ಯರು ಹಾಗೂ ಸಂಘಟನೆಗಳಿಗಿದೆ.
ದುಡ್ಡಿಲ್ಲದೆ, ಬರೀ ಬಸವಣ್ಣನವರ ಹೆಸರಿನಲ್ಲಿ ಜನ ಸೇರಿಸಿರುವ ರೀತಿಗೆ ರಾಜಕಾರಣಿಗಳು ಬೆರಗಾಗಿದ್ದಾರೆ. ಅಭಿಯಾನದ ಯಶಸ್ಸು, ಅದರಿಂದ ಹೊಮ್ಮಿದ ಸಂದೇಶಗಳಿಂದ ನಮ್ಮ ಸೈದ್ಧಾಂತಿಕ ವಿರೋಧಿಗಳಿಗೆ ಚಳಿ ಜ್ವರ ಬಂದು ಇಷ್ಟೆಲ್ಲಾ ವಿವಾದವೆಬ್ಬಿಸುವಂತೆ ಮಾಡಿದೆ.
ಕೆಲವು ರಾಜಕಾರಣಿಗಳು ತಾವೇ ಬದಲಾಗಿದ್ದಾರೆ. ಇನ್ನೂ ಕೆಲವರನ್ನು ಬದಲಾಯಿಸೋ ಕಾಲ ಬಂದಿದೆ.
ಬಸವ ಸಂಘಟನೆಗಳು ಇಲ್ಲಿಯವರೆಗೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿವೆ. ಲಿಂಗಾಯತ ಧರ್ಮ ವಿರೋಧಿಸುವ ರಾಜಕಾರಣಿಗಳಿಗೆ ಮೂಗುದಾರ ಹಾಕಬೇಕಾದರೆ ಈಗ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಅನಿವಾರ್ಯ.
ಬಸವ ಸಂಘಟನೆಗಳು ಈಗ ರಾಜಕೀಯ ಪ್ರಜ್ಞೆ
ಬೆಳೆಸಿಕೊಳ್ಳುವುದು ಅನಿವಾರ್ಯ
ಅಭಿಯಾನ ಬಹುತೇಕವಾಗಿ ಪಕ್ಷಾತೀತವಾಗಿ ನಡೆದದ್ದು ಅದರ ಯಶಸ್ಸಿಗೆ ಮುಖ್ಯ ಕಾರಣ. ಆ ನಿಲುವನ್ನು ಬಸವ ಸಂಘಟನೆಗಳು ಮುಂದುವರೆಸಬೇಕು.
ಲಿಂಗಾಯತ ಧರ್ಮ ಬೆಂಬಲಿಸುವ ರಾಜಕಾರಣಿಗಳನ್ನು ಯಾವ ಪಕ್ಷದಲ್ಲೇ ಇರಲಿ ಅವರನ್ನು ಬಸವ ಸಂಘಟನೆಗಳು ಜಾತ್ಯತೀತವಾಗಿ ಬೆಂಬಲಿಸಬೇಕು. ಅದೇ ರೀತಿ ಲಿಂಗಾಯತ ಧರ್ಮದ ವಿರೋಧಿಗಳಿಗೆ ಬಿಸಿಯನ್ನೂ ಮುಟ್ಟಿಸಬೇಕು.
ಇದು ನಮಗಿರುವ ಬಹಳ ದೊಡ್ಡ ಅಸ್ತ್ರ, ಇದನ್ನು ಬಳಸಿಕೊಳ್ಳಲು ಕಲಿಯಬೇಕು. ಎದ್ದೇಳು ಕರ್ನಾಟಕದಂತಹ ಪ್ರಯತ್ನಗಳು ಸಮಾಜದ ಸಂಘಟನೆಗಳು ಹೇಗೆ ಚುನಾವಣೆಯ ದಿಕ್ಕು ಬದಲಿಸಬಹುದೆಂದು ಈಗಾಗಲೇ ತೋರಿಸಿವೆ. ಅದರಲ್ಲಿ ಕೆಲಸ ಮಾಡಿದ ಅನುಭವ ಅನೇಕ ಬಸವ ಸಂಘಟನೆಗಳಿಗಿದೆ.
ಇದು ಅಷ್ಟೇನೂ ಕಷ್ಟದ ವಿಷಯವಲ್ಲ. ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದರೆ ಅಥವಾ ಸೋಲಿಸಬೇಕೆಂದರೆ ಇಡೀ ಸಮುದಾಯದ ಮತಗಳನ್ನು ಬದಲಿಸುವ ಅಗತ್ಯವಿಲ್ಲ. ಅಲ್ಲಲ್ಲಿ ಕೆಲವು ಮತಗಳನ್ನು ತಿರುಗಿಸಿದರೆ ಸಾಕು.
ಒಬ್ಬ ಅಭ್ಯರ್ಥಿಯನ್ನು ಸೋಲಿಸಬೇಕೆಂದರೆ ಅಲ್ಲಲ್ಲಿ ಕೆಲವು ಮತಗಳನ್ನು ತಿರುಗಿಸಿದರೆ ಸಾಕು.
ಅನೇಕ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಅಂತರ ಕೂದಲೆಳೆಯಷ್ಟು ಮಾತ್ರವಿರುತ್ತದೆ. 2023ರ ಚುನಾವಣೆಯಲ್ಲಿ 34 ಕ್ಷೇತ್ರಗಳಲ್ಲಿ 5,000 ಮತಗಳಿಗಿಂತ ಕಡಿಮೆ ಅಂತರದಲ್ಲಿ ನಿರ್ಣಯವಾದವು. 12 ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಸಾವಿರಕ್ಕೂ ಕಡಿಮೆಯಿತ್ತು.
ಚುನಾವಣೆಯ ಆತಂಕ ಪ್ರತಿಯೊಬ್ಬ ರಾಜಕಾರಣಿಗೂ ಇರುತ್ತದೆ. ಒಂದೊಂದು ಮತವನ್ನೂ ಲೆಕ್ಕ ಹಾಕುವ ಸಂದರ್ಭದಲ್ಲಿ ಬೇಡದ ವಿರೋಧವನ್ನು ಕಟ್ಟಿಕೊಳ್ಳುವ ಸಾಹಸಕ್ಕೆ ಯಾರೂ ಕೈ ಹಾಕುವುದಿಲ್ಲ.
16 ವರ್ಷಗಳಿಂದ ಹಿಡಿತದಲ್ಲಿ ಇಟ್ಟುಕೊಂಡಿದ್ದ ಶಿಗ್ಗಾವಿಯಲ್ಲಿ ಬೊಮ್ಮಾಯಿ ಮಗನನ್ನು ಗೆಲ್ಲಿಸಲಾಗಲಿಲ್ಲ. ಯಡಿಯೂರಪ್ಪ ಕುಟುಂಬದ ಭದ್ರಕೋಟೆ ಶಿಕಾರಿಪುರದಲ್ಲಿ ವಿಜಯೇಂದ್ರ ಗೆದ್ದಿದ್ದು 11,000 ಮತಗಳಿಂದ. ಯತ್ನಾಳ್ ಗೆಲುವಿನ ಅಂತರ 8,000 ಮತಗಳು ಮಾತ್ರ.
ಲಿಂಗಾಯತ ನಾಯಕರಿಗೆ ಬಿಸಿ ಮುಟ್ಟಿಸಲು ಚುನಾವಣೆಗೆ ಕಾಯುವ ಅವಶ್ಯಕತೆಯಿಲ್ಲ. ಅವಕಾಶ ಸಿಕ್ಕಲ್ಲಿ ಬಸವ ಸಂಘಟನೆಗಳು ಅವರನ್ನು ಪ್ರಶ್ನಿಸಬೇಕು. ಅವಕಾಶ ಸಿಗದಿದ್ದರೆ ನಮ್ಮ ಅಭಿಪ್ರಾಯವನ್ನು ತೀಕ್ಷ್ಣವಾಗಿ ಮುಟ್ಟಿಸುವ ದಾರಿ ಹುಡುಕಬೇಕು. ಆರು ತಿಂಗಳು ಇದನ್ನು ಸರಿಯಾಗಿ ಎಲ್ಲಾ ಮಾಡಿದರೆ ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.
ಇಲ್ಲಿ ಸಮಸ್ಯೆಯಿರುವುದು ಬಿಜೆಪಿಯವರಲ್ಲಿ ಮಾತ್ರವಲ್ಲ. ಕಾಂಗ್ರೆಸ್ ನಾಯಕರಲ್ಲೂ ಸಮಸ್ಯೆಗಳಿವೆ. ಸಚಿವ ಶಿವಾನಂದ ಪಾಟೀಲಗೆ ಶಾಂತಿ ಸಂಧಾನ ಮಾಡಿಸಿ ಬನ್ನಿ ಎಂದು ಕರೆದಿದ್ದವರು ಯಾರು?
ಲಿಂಗಾಯತ ನಾಯಕರಿಗೆ ಮೂಗುದಾರ ಹಾಕಿದರೆ ಆರೆಸ್ಸೆಸ್‌ನವರೂ ದಾರಿಗೆ ಬರುತ್ತಾರೆ. ಅಧಿಕಾರ ಬರಬಹುದು ಹೋಗಬಹುದು. ಮಂದಿರದ ಹವಾ ಬರಬಹುದು ಹೋಗಬಹುದು. ಕರ್ನಾಟಕದಲ್ಲಿ ಬಸವ ಶಕ್ತಿ ಮಾತ್ರ ನಿರಂತರ.
ಮಂದಿರದ ಹವಾ ಬರಬಹುದು ಹೋಗಬಹುದು.
ಕರ್ನಾಟಕದಲ್ಲಿ ಬಸವ ಶಕ್ತಿ ಮಾತ್ರ ನಿರಂತರ.
ಸರಿಯಾದ ವಿಶ್ಲೇಷಣೆ. ಕೊನೆ ಸಾಲು ಬೆಂಕಿ
Power hungry politicians and money hungry Swamijies can be traced and cornered by the people . If politicians and swamijies forget their expected responsibilities with humility they must be replaced by the dedicated youth . Now after the Basava Sanskriti Utsava in all districts True Colours of Religious and political leaders have come to light . Even Kanheri swami incident is not without merits . Several hidden forces against Sharana Dharma or BasavaDharma have been exposed . No more gimmicks of wait and watch !
🎯💐
ಲಿಂಗಾಯತ ಧರ್ಮದ ಶರಣರು ವಿಚಾರವಂತರಾಗಬೇಕು.ಇಲ್ಲಿ ಎರಡು ವಿಷಯ ನಾವು ಗಮನಿಸಬೇಕು. ಒಂದು ಜಗತ್ತಿನಲ್ಲಿ ಅತೀ ಹೆಚ್ಚು ಯುವಕ ಯುವತಿರನ್ನು (youths) ಹೊಂದಿರುವ ದೇಶ ನಮ್ಮದು,ಈ ಯುವ ಜನತೆಯಲ್ಲಿ ಸರಿಯಾದ ನಡೆ ನುಡಿ ಗಳನ್ನು ಹೇಗೆ ಬಿತ್ತಬೇಕು? ಇದನ್ನು
Focus ಮಾಡಿ. ಯಾವುದೇ ರಾಜ್ಸಕೀಯ ಸಿದ್ಧಾಂತಗಳಿಗೆ,ಬೆದರಿಕೆಗಳಿಗೆ ಅಥವಾ ಒತ್ತಡಗಳಿಗೆ ಮಣಿಯದ ಮನೋಜ್ಞಾನ ಅವರದ್ದಾಗಿರಬೇಕು ಶರಣು ಶರಣಾರ್ಥಿಗಳು
ರಾಜ್ಯವಾಳುತ್ತೇವೆ ಅನ್ನೋ ಭ್ರಮೆಯಲ್ಲಿರೋ ಒಂದು ಜನ ಈ ಮಟ್ಟದ ನಾಯಕರನ್ನು ಬಿಂಬಲಿಸುತ್ತಿರುವುದು ನಾಚಿಕೆಗೇಡು
ಮಾನ್ಯರೇ ಇಷ್ಟೆಲ್ಲಾ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿರುವ ಬಸವಮೀಡಿಯಾ ಕ್ಕೆ ಅಲ್ಪ ಮತಿಯಾದ ನಾನು ನೀಡಬಹುದಾದ ಒಂದು ಚಿಕ್ಕ ಸಲಹೆ ಅಥವಾ ಸಂಶಯ ನಮ್ಮ ಲಿಂಗಾಯತ ಸಮುದಾಯದ ಒಕ್ಕೂಟ ಏಕ ನಾಯಕತ್ವ ನಾಯಕ ಸ್ವಾಮೀಜಿ ಮತ್ತು ಒಬ್ಬನೇ ಒಬ್ಬ ನಾಯಕ ನನ್ನು ಒಪ್ಪಿ ಸಂಘಟಿಸಲು ಸಾಧ್ಯ ವಾಗುತ್ತಿಲ್ಲವೇ ??????
ಹುಬ್ಬಳ್ಳಿ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಮಹಾರಾಷ್ಟ್ರ ದ ಸಂಘಟಕರೊಬ್ಬರು ಜೈನ ಧರ್ಮದ ಮಾನ್ಯತೆ ಪಡೆದ ಕುರಿತು ಅಮಿತ್ ಷಾ ಹೆಸರು ಉಲ್ಲೆಖಿಸಿದ ತಕ್ಷಣವೇ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ರವರ ತೀವ್ರ ಪ್ರತಿಕ್ರಿಯೆ ಬಂದಿತು……ಆದರೆ ಇವರಿಬ್ಬರೂ ಲಿಂಗಾಯತ ಸ್ವಾಮಿಗಳಿಗೆ ಅವಾಚ್ಯ ಶಬ್ದಗಳ ನಿಂದನೆ ಬಗ್ಗೆ ತುಟಿ ಪಿಟಿಕ್ ಮಾಡದಿರುವುದು ವಿಪರ್ಯಾಸ
ಬಸವ ಸಂಸ್ಕೃತಿ ಅಭಿಯಾನ ಹೆಸರಲ್ಲಿ ಲಿಂಗಾಯತ ಮಾತಾಡಿಷರು ಹಾಗು ಕೆಲವರು ಕೂಡ ಸಾಕಷ್ಟು ತಪ್ಪು ಸಂದೇಶಗಳನ್ನ ಕೊಡುತ್ತಾವೀರಶೈವ ಲಿಂಗಾಯತ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿದ್ದಾರ್ ಫಲಿತಾಂಶ. R s s ವಿರುದ್ಧ ಹೊರಡ ಬೇಕಾದರೆ ವೀರಶೈವ ಮತ್ತು ಲಿಂಗಾಯತರು ಒಂದಾಗಬೇಕು
ಅತ್ಯಂತ ಸುಂದರ, ಸಮಯೋಚಿತ, ಅರ್ಥಪೂರ್ಣವಾದ ಲೇಖನ. ಲಿಂಗಾಯತ ರಾಜಕಾರಣಿಗಳಿಗೆ. ಛಾಟಿ ಏಟು ಬೀಸಿದಂತಿದೆ.
ಅರುಣ ಅವರಿಗೆ ಅಭಿನಂದನೆಗಳು.
ಧನ್ಯವಾದಗಳು ಸರ್
– ಅರುಣ್
ಅರುಣ ಸರ್ ನೀ ಬರೆದಿರುವುದೆಲ್ಲವು ಸತ್ಯವಿದೆ. ಆಳ ಬೇರು ಇಳಿದಿರುವ RSS ವಿರುದ್ಧ ಹೋರಾಡಲು ಲಿಂಗಾಯತರು ಯಾವ ರೀತಿ ತಯಾರಾಗ ಬೇಕೆನ್ನುವುದು ಈಗಲೇ ನೀಲನಕ್ಷೆ ತಯಾರಾಗ ಬೇಕಿದೆ. ರಾಜ್ಯದಲ್ಲಿ ಅವರನ್ನು ಎದಿರಿಸುವ ತಾಕತ್ತು ಲಿಂಗಾಯತರಿಗೆ ಮಾತ್ರ ಇರುವದರಿಂದ. ನಾವುಗಳ ಬಸವಣ್ಣ ಹೇಳಿದಂತೆ ಅಪ್ಪ ಕಾಕ ದೊಡ್ಡಪ್ಪ ಎನ್ನುತ್ತ ಸಮಾಜದ ಎಲ್ಲಾ ಜನರನ್ನು ಸೇರಿಸಿ ಹೋರಾಟದ ರೂಪುರೇಷ ಹೆಣೆಯ ಬೇಕಿದೆ. ವಂದನೆಗಳೊಂದಿಗೆ.
ಉತ್ತಮವಾದ ವಿಶೇಷ ವರದಿ ಲಿಂಗಾಯತ ನಾಯಕರು ಲಿಂಗಾಯತ ಜನರಿಗಾಗಿ, ತತ್ವಕ್ಕಾಗಿ ಏಳಿಗೆಗೆ ರಾಜಕೀಯ ಮಾಡುತ್ತಿಲ್ಲ. ಮಠಾಧೀಶರಿಗೆ ಅಸಂಬದ್ಧ ಮಾತುಗಳಾಡಿದರೂ ಉತ್ತರ ನೀಡದ ಇವರು ಜನಿವಾರಕ್ಕೆ ಒತ್ತಿ ಬಿದ್ದ ಲಿಂಗಾಯತ ನಾಯಕರು. ಅದೇ ಜನಿವಾರ ಮುಖಂಡ ಮಾತನಾಡಿದಾಗ ಅವರ ಪರ ಮಾತನಾಡುತ್ತಾರೆ ಹೊರತು ಮಠಾಧೀಶರಿಗೆ ಹಾಡಿದ ಮಾತು ಸರಿಯಲ್ಲ ಹೇಳಲಿಲ್ಲ. ಅಧಿಕಾರಕ್ಕಾಗಿ ಇನ್ನೊಬ್ಬರ ಓಲೈಕೆ ಮಾಡುತ್ತಾರೆ ಎಂದರೆ ಮೂರು ಬಿಟ್ಟು ನಿಂತರ. ಲಿಂಗಾಯತ ನಾಯಕರಲ್ಲಿ ಯಡಿಯೂರಪ್ಪ ನವರು ನೂರು ಪಾಲು ಉತ್ತಮ ಯಾವ ಸಂದರ್ಭದಲ್ಲಿ ತಮ್ಮ ಅಸ್ತಿತ್ವ ಬಿಟ್ಟಿರಲಿಲ್ಲ ಅದೇ ಸಂತೋಷನಲ್ಲಿ ಸಂತೋಷ ಕಾಣದಂತೆ ಮಾಡಿದವರು. ಆದರೆ ಇವರು ಸಂತೋಷ ಹಾಕಿದ ರೇಖೆ ದಾಟದೇ ಅಲ್ಲೇ ಗಿರಕೆ ಹೊಡೆಯುವ ಗಿರಾಕಿಗಳು.
BJP ನಾಯಕರು ಟಿಕೆಟ್ ಕೇಳುವಾಗ ಲಿಂಗಾಯತರು ಗೆದ್ದ ಮೇಲೆ ಹಿಂದೂಗಳಾಗುತ್ತಾರೆ. ಲಿಂಗಾಯತರ ಮತಗಳಿಂದ ಗೆದ್ದು ಬಂದರೂ ಲಿಂಗಾಯತರ ಯಾವ ಸಮಸ್ಯೆಯನ್ನೂ ಇವರು ಬಗೆಹರಿಸಲ್ಲ. RSS ನ ಬ್ರಾಹ್ಮಣರು ಹೇಳಿದಂತೆ ಕುಣಿಯುತ್ತಾರೆ. ತಮ್ಮದೆ ಧರ್ಮ ಗುರುವನ್ನು ನಿಂದಿಸಲು ಹೇಳಿದರೆ ಅದನ್ನೂ ಮಾಡುತ್ತಾರೆ. ಇವರ ಹೇಳಿಕೆಗಳು ಶಾಖೆಯಿಂದ ಚೀಟಿಯಲ್ಲಿ ಬಂದವುಗಳಾಗಿರುತ್ತವೆ. ಇವರಿಗೆ ಸ್ವಂತ ಬುದ್ಧಿಯೆ ಇರುವುದಿಲ್ಲ. RSS ಇವರಿಗೆ ಹುದ್ದೆ ಕೊಟ್ಟಿರುತ್ತದೆ ಅಧಿಕಾರ ಕೊಡೋದಿಲ್ಲ.
ಈ ಬಿ ಎಲ್ ಸಂತೋಷ್ ಕುಟೀಲ ಹಾರುವ ಬುದ್ದಿಯವನಿಗೆ ಲಿಂಗಾಯತ ನಾಯಕರು ತಿರುಗಿಬಿಳುವ ಕಾಲ ದೂರವಿಲ್ಲ ಇವನಿಗೆ ಮುಗುದಾರ ಹಾಕಿ ಇವನ ಕುತ್ಸಿತ ನೀತಿ ಬಯಲು ಮಾಡಬೇಕು.
ನಮ್ಮ ೩೦೦ ಜನ ಲಿಂಗಾಯತ ಮಠಾಧೀಶರಿಗೆ ಕೀಳು ಮಟ್ಟದ ಭಾಷೆ ಬಳಸಿ ಚಪ್ಪಲಿಯಿಂದ ಹೊಡೆಯಬೇಕು ಎಂದಿದ್ದ ಕನೇರಿ ಬೆಂಬಲಕ್ಕೆ ಬಿ.ಎಲ್. ಸಂತೋಷನ ಆಜ್ಞೆಯಿಂದ ಬೆನ್ನೆಲುಬು ಇಲ್ಲದ ಲಿಂಗಾಯತ ನಾಯಕರು ನಿಂತಿದಾರೆ ಎಂದರೆ, ಇವರು ಕೂಡ ೩೦೦ ಲಿಂಗಾಯತ ಮಠಾಧೀಶರಿಗೆ ಅವಮಾನ ಮಾಡಿದಂತೆ.
ಮುಂದಿನ ಬಾರಿ ಇವರು ಮತಭಿಕ್ಷೆಗೆ ಬಂದಾಗ ಸಮಸ್ತ ಲಿಂಗಾಯತ ಸ್ವಾಮೀಜಿಗಳಿಗೆ ಅವಮಾನ ಮಾಡಿದಾಗ ಅದನ್ನು ಸಮರ್ಥಿಸಿಕೊಂಡಂತಹ ಈ ಬೆನ್ನೆಲುಬು ಇಲ್ಲದ ರಾಜಕಾರಣಿಗಳನ್ನು ಮತ್ತಿವರ ಮಕ್ಕಳನ್ಮು ಪ್ರಶ್ನೆ ಕೇಳಿಯೇ ಬಿಡುತ್ತೇವೆ, ಇವರು ಎಲ್ಲಿ ಹೋದರೂ ಕೇಳುತ್ತೇವೆ .
ಇನ್ನು ಮೇಲೆ ನಮ್ಮ ಮಠದ ಕಾರ್ಯಕ್ರಮದಗಳಲ್ಲಿ, ಯಾವುದೇ ಕಾರ್ಯಲ್ರಮಗಳಲ್ಲಿಯೂ ಇವರು ಪಾಲ್ಗೊಳ್ಳಲಿ ಇವರಿಗೆ ಪ್ರಶ್ನೆ ಕೇಳಿಯೇ ತೀರುತ್ತೇವೆ
ಕನೇರಿ ಸ್ವಾಮಿ, ಬಿ.ಎಲ್. ಸಂತೋಷನಷ್ಟೇ ಡೇಂಜರಸ್ ಬೆನ್ನೆಲಬು ಇಲ್ಲದ ಲಿಂಗಾಯತ ನಾಯಕರು ( ಅವು ಬಿಜೆಪಿಯಲ್ಲಿಯೂ ಇವೆ ಕಾಂಗ್ರೆಸ್ ನಲ್ಲಿಯೂ ಇವೆ ) .ಇವರಿಗೆ ಬಿಸಿ ಮುಟ್ಟಿಸಿಯೇ ತೀರುತ್ತೇವೆ .
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕ್ರತಿಕ ನಾಯಕನೆಂದು ಗುರುತಿಸುವುದಂತೂ ಬಿಜೆಪಿಯವರು ಮಾಡುತ್ತಿದ್ದಿಲ್ಲ , ಈಗ ಹೊಟ್ಟೆಕಿಚ್ಚಿನಿಂದ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗಾಯತ ಸ್ವಾಮೀಜಿಗಳಿಗೆ ಅವಮಾನ ಮಾಡಿದವರನ್ನು ಸಮರ್ಥಿಸಿಕೊಂಡಿದ್ದಾರೆ ,ಇಂತವರಿಗೆ ಮತ್ತಿವರ ಮಕ್ಜಳಿಗೆ ಚುನಾವಣೆ ಸಮಯದಲ್ಲೇ ಭುದ್ದಿ ಕಲಿಸುತ್ತೇವೆ.
ಕನ್ನೇರಿ ಮಠದ ಕುನ್ನೀ ಹಿಂದೆ ಕಾಶಿ ಕೋಣವು ಬೆಂಬಲಕ್ಕೆ ನಿಂತಿದೆ
ಲಿಂಗಾಯತ ಧರ್ಮದ ಮಾನ್ಯತೆ ಕುರಿತು ಹೋರಾಡುವವರು ವರ್ಷಕ್ಕೊಮ್ಮೆ ಜಾತ್ರೆ ಮಾಡದೆ ನಿರಂತರ ಪ್ರಯತ್ನ ಮುಖ್ಯ
ಇನ್ನೂ ಬಿಜೆಪಿ ಮುಖಂಡರು ಕನ್ನೇರಿ ಸ್ವಾಮೀಜಿಗೆ ಬೆಂಬಲ ಸೂಚಿಸಿದವರು ಲಿಂಗಾಯತ ಮತ ಮತ್ತು.ಕುರ್ಚಿಗಾಗಿ
ತಮ್ಮ ಅಮ್ಮ ಅಪ್ಪರನ್ನು ಸೂಳೆ ಎಂದರೂ ನಡೆಯುತ್ತೆ ಎನ್ನುವ ಬೊಮ್ಮಾಯಿ ಶೆಟ್ಟರ ವಿಜಯೇಂದ್ರ
ಮುಂದಿನ ದಿನಗಳಲ್ಲಿ ಲಿಂಗಾಯತರ ಕಾರ್ಯಕ್ರಮಕ್ಕೆ ಅವರನ್ನು ಸಂಪೂರ್ಣ ಧಿಕ್ಕರಿಸ ಬೇಕು
ಯುವಕರಿಗೆ ಮೊದಲು ಇತಿಹಾಸ ಪ್ರಜ್ಞೆ ಮೂಡಿಸಬೇಕು ನಮ್ಮ ಲಿಂಗಾಯತ ಧರ್ಮದ ಬೆಲೆ ತಿಳಿಯದ ಕಾರಣ ಅವರು ಕೇಸರಿ ಶಾಲು ಹಾಕಿ ಅಪ್ಪನನ್ನೇ ಬಿಟ್ಟು ಪಕ್ಕದವರ ಆಚರಣೆಗೆ ಬಲಿ ಆಗಿದ್ದಾರೆ ಅವರಿಗೆ ಧರ್ಮ ಎಂದರೆ ಇನ್ನೂ ತಿಳಿದಿಲ್ಲ ರಾಜಕೀಯ ಪಕ್ಷಗಳು ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತವೆ ಹಿರಿಯರು ಈಗಾಗಲೇ ಬಲಿ ಆಗಿದ್ದಾರೆ ಇನ್ನೂ ಯುವಕರ dj ಕುಡಿತ ಕುಣಿತ ಹಿಂದೂ ಮುಸ್ಲಿಂ ಅಂತ ಬಲಿ ಕೊಡುತ್ತಿದ್ದಾರೆ ಈ BL ಸಂತೋಷ ಎಡಿಯೂರಪ್ಪ ಬೊಮ್ಮಾಯಿ ಇನ್ನೂ ಕೆಲವರು ತಮ್ಮ ಲಾಭವನ್ನು ನೋಡುತ್ತಾರೆ ಅಷ್ಟೇ ಧರ್ಮವನ್ನು ಉಳಿಸುವುದಿಲ್ಲ ಅವರಿಗೆ ಧೈರ್ಯವಾಗಿ ಪ್ರಶ್ನೆ ಮಾಡುವ ಗಂಡಸ್ತನವಿಲ್ಲ ಬಿಡಿ ಅವರಿಗೇ ತಾಯಿನ ಬೈದರು ಅವರು ಯಾವ ಪಕ್ಷದವನು ಅಂತ ನೋಡುತ್ತಾರೆ ಅಷ್ಟೇ.. ಶರಣು ಶರಣಾರ್ಥಿ 🙏
ಕನ್ನೇರಿ ಮಠದ ಸ್ವಾಮೀಜಿಯ ವಿರುದ್ಧ ಮಠಾಧೀಶರ ಒಕ್ಕೂಟದ ವತಿಯಿಂದ ಪ್ರಕರಣ ದಾಖಲು ಮಾಡಲು ಕೋರಿಕೆ
ಇಲ್ಲದಿದ್ದರೆ ನಾಳೆ ದಿನಕ್ಕೊಬ್ಬ ಕಾವಿ ಹೀಗೆ ಹಗುರ ಮಾತಾಡುತ್ತಾರೆ
ಧನ್ಯವಾದಗಳು ಏನೇ ಆದರೂ ಸ್ವಾಮಿ ಗುರು ಬುದ್ಧಿ ಅಪ್ಪಗಳು ಯಂದು ಕರೆಸಿ ಕೊಂಡು ಸನ್ಮಾರ್ಗದಲ್ಲಿ ನಡೆದು ಸಮಾಜ ಉದ್ದಾರ ಮಾಡಲು ಸರ್ವಸಂಗ ಪರೀತ್ಯಾಗಿ ಕಾವಿಧಾರಿ ಸನ್ಯಾಸಿ ಬಾಯಲ್ಲಿ ಬರಬಾರದ ಶಬ್ದ ಬಂದು ಸಮಾಜದ ಸ್ವಾಸ್ತ್ಯ ಕೆಡಿಸಿದೆ ಆಡಿದ ಮಾತುಗಳು ಗ್ರಾಮ್ಯ ವೇ ಇರಬಹುದು ತಪ್ಪು ತಪ್ಪೇ ಕಾನ್ನೇರಿ ಶ್ರೀ ಬೇಷರತ್ತಾಗಿ ಲಿಂಗಾಯತ ಸಮಾಜದ ಕ್ಷಮೆ ಕೋರಿ ವಿವಾದಗಳ ಕೊನೆಗೂಳಿಸುದು ಉಚಿತ
ನೀಚ ನಡಹಳ್ಳಿ ೧೦ ಮೇ ೨೦೧೫ ರಂದು ಹುಬ್ಬಳಿಯ ಕಲ್ಯಾಣ ನಗರದ ರಹವಾಸಿಗಳ.ಕಲ್ಯಾಣ ಮಂಟಪ ವೇದಿಕೆ ಹಂಚಿಕೊಂಡು ಕಾರ್ಯಕ್ರಮ ಮಾತನಾಡಿ
ಲಿಂಗಾಯಿತ ಇದು ಸ್ವತಂತ್ರ ಧರ್ಮ
ಇದು ಬಸವಣ್ಣನವರು ಸ್ಥಾಪಿಸಿದ ಹಿಂದುವಲ್ಲದ ಎಂಬುದನ್ನು ಹೇಳಿ ಬಸವಣ್ಣ ಕರ್ನಾಟಕದ ನಾಡ ಪ್ರಭು ಹೊರತು ಕೆಂಪೇಗೌಡ ಅಲ್ಲ ಅಂತ ಭಾಷಣ ಮಾಡಿ ಟಿವಿಯಲ್ಲಿ ಮಿಂಚಿದ್ದು ಮರೆತಿರಾ
ಅವತ್ತು ಡಾ ಎಂ ಎಂ ಕಲಬುರ್ಗಿ ಸರ್ ಇದ್ದರೂ
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ ಕಾರ್ಯಕ್ರಮದಲ್ಲಿ ನೀವು
ಲಿಂಗಾಯತ ಬಸವಣ್ಣನವರ ಪರ ಹೆಮ್ಮೆ ನುಡಿಗಳು
ಬಿಜೆಪಿಯಲ್ಲಿ ಮಾಯವಾದವು ಅಲ್ಲವೇ
ನಡಹಳ್ಳಿ
ತಮ್ಮಲ್ಲರ ವಿಚಾರಧಾರೆಗೆ ಮತ್ತು ಪ್ರತಿಕ್ರಿಯಿಸಿದ ಎಲ್ಲ ಶರಣ ಬಂಧುಗಳಿಗೆ ಶರಣು ಶರಣಾರ್ಥಿ. ಮಠಾಧೀಶರ ಒಕ್ಕೂಟ ತೀವ್ರವಾದ ಹೋರಾಟಕ್ಕೆ ಕಟಿ ಬದ್ಧರಾಗಿದ್ದಾರೆ. ಒಕ್ಕೂಟದಿಂದ ದಾವೆ ಹೂಡಲು ಅಣಿಯಾಗಬೇಕು. ೩೦೦ ಜನರಿಗೆ ಅವಹೇಳನ ಮಾಡಿದ್ದು, ಅಪರಾಧ, ಅಕ್ಷಮ್ಮೆ ವಲ್ಲವೇ? ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ. ಶುಭವಾಗಲಿ
Power hungry politicians and money hungry Swamijies can be traced and cornered by the people . If politicians and swamijies forget their expected responsibilities with humility they must be replaced by the dedicated youth . Now after the Basava Sanskriti Utsava in all districts True Colours of Religious and political leaders have come to light . Even Kanheri swami incident is not without merits . Several hidden forces against Sharana Dharma or BasavaDharma have been exposed . No more gimmicks of wait and watch !
ನಮ್ಮ ಲಿಂಗಾಯತ ಧರ್ಮದ ಯುವ ಪೀಳಿಗೆ ‘ವಾಟ್ಸಾಪ್ ಯುನಿವರ್ಸಿಟಿ ‘ ಯಿಂದ ಹೊರಬರುವಂತೆ ಮಾಡುವುದು ಹೇಗೆ ಅನ್ನುವುದೇ ದೊಡ್ಡ ಸಮಸ್ಯೆ. ನಮ್ಮ ವಿರೋಧಿಗಳು ನಮ್ಮವರೇ ಆಗುವಂತೆ ಮಾಡುವುದು RSS ನ ಮೂಲ ಉದ್ದೇಶ. ಎಲ್ಲಿಯಾದರೂ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ಶುರು ಮಾಡಿದ ಕೂಡಲೇ ಗೊಣಗಲು, ವಿರೋಧ ಮಾಡಲು ನಮ್ಮ ಯುವಕರೇ ಪ್ರಾರಂಭ ಮಾಡುತ್ತಾರೆ ಇನ್ನೂ ಕೆಲವರು ಬಾಯಿಗೆ ಬೀಗ ಹಾಕಿಕೊಂಡು ಬಿಡುತ್ತಾರೆ. ದಯವಿಟ್ಟು ಇದರ ಬಗ್ಗೆ ಪೂಜ್ಯರು ಗಮನಹರಿಸಬೇಕಾಗಿ ವಿನಂತಿ.
ಸತ್ಯವಾದ ಹಾಗೂ ಸಂಯೋಜಿತವಾದ ಲೇಖನ.ಲಿಂಗಾಯತರು ಜಾಗ್ರತರಾಗಬೇಕು ಹಾಗೂ ನಮ್ಮ ರಾಜಕೀಯ ನಾಯಕರನ್ನು ನೇರವಾಗಿ ಪ್ರಶ್ನಿಸುವಂತಾಗಬೇಕು.