ವೀರಶೈವ ಲಿಂಗಾಯತರನ್ನು ಕಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಸಮಾವೇಶ: ರೇಣುಕಾಚಾರ್ಯ

ಬಸವ ಮೀಡಿಯಾ
ಬಸವ ಮೀಡಿಯಾ

“ಹಿಂದೂ ಸಮಾವೇಶ ಯಾಕೆ… ಒಂದೇ ಧರ್ಮದ ಮೇಲೆ ರಾಜಕಾರಣ ಮಾಡಲು ಸಾಧ್ಯವಿಲ್ಲ… ನಮ್ಮ ಮುಖ್ಯಮಂತ್ರಿಗಳಿಗೆ ದುಷ್ಟ ಶಕ್ತಿಗಳು ತೊಂದರೆ ಕೊಟ್ಟಿವೆ.”

ದಾವಣಗೆರೆ

ಸಮಾಜವನ್ನು ಕಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶವನ್ನು ಮೇ ತಿಂಗಳಲ್ಲಿ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶನಿವಾರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಸಮಾಜ ಒಡೆಯುವ ಪ್ರಯತ್ನ

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸೇರಿ ನಮ್ಮ ಸಮಾಜದ 9 ಜನರು ಮುಖ್ಯಮಂತ್ರಿಗಳಾಗಿದ್ದು ಎಲ್ಲರಿಗೂ ಈ ದುಷ್ಟ ಶಕ್ತಿಗಳು ಕಾಟಕೊಟ್ಟಿವೆ. ಕೆಲವು ದುಷ್ಟ ಶಕ್ತಿಗಳು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ, ಆದ್ದರಿಂದ ಸಮಾಜ ಜಾಗೃತವಾಗಬೇಕಿದೆ, ಒಗ್ಗಟ್ಟಿನ ಮೂಲಕ ಉತ್ತರ ಕೊಡಬೇಕಾಗಿದೆ, ಎಂದು ಹೇಳಿದರು.

ಯಾರು ಈ ದುಷ್ಟ ಶಕ್ತಿಗಳು ಎಂದು ಪತ್ರಕರ್ತರು ಕೇಳಿದಾಗ ಸಮಯ, ಸಂಧರ್ಭ ಬಂದಾಗ ಹೇಳುತ್ತೇನೆ ಎಂದು ಹೇಳಿದರೂ ಸಮಾಜದ ಮತ್ತೊಬ್ಬ ಶಾಸಕ ಬಸನ ಗೌಡ ಯತ್ನಾಳರು ಈ ಶಕ್ತಿಗಳ ಜೊತೆಗಿದ್ದರೆಂದು ಸೂಚಿಸಿದರು.

ಹಿಂದೂ ಸಮಾವೇಶವನ್ನು ಯಾಕೆ?

“ನಾವು ವೀರಶೈವ ಲಿಂಗಾಯತ ಸಮಾವೇಶ ಮಾಡಿದ 10 ದಿನಗಳ ನಂತರ ಹಿಂದೂ ಸಮಾವೇಶವನ್ನು ಮಾಡುತ್ತೇನೆ ಎಂದು ಯಾಕೆ ಹೇಳುತ್ತೀರಾ, ನಮ್ಮನ್ನು ಯಾಕೆ ಅನುಕರಣೆ ಮಾಡುತ್ತೀರಾ,” ಎಂದು ಯತ್ನಾಳರನ್ನು ಪ್ರಶ್ನಿಸಿದರು.

“ಒಟ್ಟಾಗಿ ಹೋಗೋಣ ಬನ್ನಿ ಅಂದರೆ ಅಪಸ್ವರ ಎತ್ತುತ್ತೀರಾ, ನಿಮ್ಮನ್ನು (ದುಷ್ಟ ಶಕ್ತಿಗಳು) ಯಡಿಯೂರಪ್ಪನವರ ವಿರುದ್ಧ ಚೂರಿಯಂತೆ ಬಳಸಿಕೊಳ್ಳುತ್ತಿದ್ದಾರೆ, ನಿಮ್ಮನ್ನು ಬಲಿ ಪಶು ಮಾಡುತ್ತಾರೆ,” ಎಂದು ಎಚ್ಚರಿಸಿದರು.

“ನೀವು (ಯತ್ನಾಳ) ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಬೇಡ.
ಬೇಕಾದಾಗ ಹಿಂದೂ ಹುಲಿ ಆಗುತ್ತೀರಿ, ಪಂಚಮಸಾಲಿ ಅನ್ನುತ್ತೀರಿ, ವೀರಶೈವ ಲಿಂಗಾಯತ ಅನ್ನುತ್ತೀರಿ, ಸಂದರ್ಭಕ್ಕೆ ತಕ್ಕಂತೆ ಮುಖವಾಡ ಹಾಕಿಕೊಳ್ಳಬೇಡಿ.
ಎಲ್ಲದಕ್ಕಿಂತ ಸಮಾಜವೇ ಮುಖ್ಯ, (ನಮ್ಮನ್ನು) ವಿರೋಧ ಮಾಡಬೇಡಿ, ಎಂದು ಹೇಳಿದರು.

ಒಂದೇ ಧರ್ಮದ ರಾಜಕಾರಣ ಸಾಧ್ಯವಿಲ್ಲ

ಯಡಿಯೂರಪ್ಪ ನಮ್ಮ ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರು. ಅವರನ್ನು ಕೆಳಗಿಸಿಳಿದ ಮೇಲೆ ಸಮಾಜದ ಮತಗಳು ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಹೋಗಿವೆ.

“ಒಂದೇ ಧರ್ಮದ ಮೇಲೆ ರಾಜಕಾರಣ ಮಾಡಲು ಸಾಧ್ಯವಿಲ್ಲ, ಪರಿಶಿಷ್ಟ ಜಾತಿಗಳು, ಹಿಂದುಳಿದ ವರ್ಗಗಳೂ ಬೇಕು ರಾಜಕಾರಣ ಮಾಡೋದಿಕ್ಕೆ,” ಎಂದು ಯತ್ನಾಳರಿಗೆ ತಿಳಿ ಹೇಳಿದರು

ದಾವಣಗೆರೆ ಸಮಾವೇಶ

ದಾವಣಗೆರೆ ಸಮಾವೇಶದ ಬಗ್ಗೆ ಮಾತನಾಡುತ್ತ ಈಗಾಗಲೇ 17 ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳಾಗಿವೆ. ಮುಖಂಡರ ಜತೆಗೆ ಚರ್ಚಿಸಲಾಗಿದೆ. ನಗರದಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಮಾವೇಶ ನಡೆಸುವುದು ನಿಶ್ಚಿತ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳು, ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಗುವುದು ಎಂದು ಹೇಳಿದರು. ಅಲ್ಲದೆ ರಾಜ್ಯದ ಪ್ರತಿಯೊಂದು ಜಿಲ್ಲೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಿಂದಲೂ 10 ಲಕ್ಷ ವೀರಶೈವ ಲಿಂಗಾಯತರನ್ನು ಕರೆ ತಂದು ಸಮಾವೇಶ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GavGlyNxCLf7iBbDBH8P5b

Share This Article
4 Comments
  • This fellow is neither Virashaiva not Lingayat. He is Beds jangama. This is what his school certificate shows. He is unfit to be a virashaiva or Lingayat leader. He has been rejected by people.Shsme.

    • ಬೇಡ ಜಂಗಮರ ಸಮಾವೇಶ ಮಾಡಿ. ಲಿಂಗಾಯತ ಹೆಸರು ಯಾವರೀತಿಯಲ್ಲು ಬಳಸುವ ಅರ್ಹತೆ ನಿಮಗಿಲ್ಲ. ಈಗ ಲಿಂಗಾಯತರು ಜಾಗೃತರಾಗಿದ್ದಾರೆ. ನಿಮ್ಮ ಪಂಚಪೀಠಗಳ ಆಟ ಮತ್ತು ಬುದ್ದಿವಂತಿಕೆಗೆ ಅವರಲ್ಲಿ ಜಾಗವಿಲ್ಲ.

  • ಇವನೊಬ್ಬ ಕೊಳಕು ರಾಜಕಾರಣಿ, ರೇಣುಕಾಚಾರ್ಯ ಎಂಬ ಹೆಸರಿನ ಈ ರೌಡಿರಾಜಕಾರಣಿ ಬೇಡಜಂಗಮನೆಂದು ಹೇಳಿಕೊಳ್ಳಲು ನಾಚಿಕೆ ಇಲ್ಲ ಇವನಿಗೆ. ಯೆಡಿಯೂರಪ್ಪ ಒಬ್ಬ RSS

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ. says:

    ಈ ರೇಣುಕಾಚಾರ್ಯ ಎನ್ನುವ ಬಿಜೆಪಿಯ ಬೇಡಜಂಗಮನು ಮನುವಾದಿಗಳ ಕಾಲಿನ ಆಳಿನಂತೆ ನಡೆದುಕೊಂಡು ಹೋಗುವ ಆರ್ ಎಸ್ ಎಸ್ ನ ಕಾಲಾಳು ಯಡಿಯೂರಪ್ಪನನ್ನು ಲಿಂಗಾಯತರ ನಾಯಕನಂತೆ ಪ್ರತಿ ಬಿಂಬಿಸುತಾನೆ.ಆರ್ ಎಸ್ ಎಸ್ ನ ಚೆಡ್ಡಿ ಹಾಕುವ ಇವನು ಲಿಂಗಾಯತ ನಾಯಕನಾಗಲು ಯಾವ ಯೋಗಯೋಗ್ಯತೆ ಯನ್ನು ಹೊಂದಿದಾನೆ.

Leave a Reply

Your email address will not be published. Required fields are marked *