ವಿಜಯಪುರ
ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಹಾಗೂ ಪ್ರತಿಭಾ ಪಾಟೀಲ ಮತ್ತು ರಾಹುಲ ಬೆಳಮಕರ ಹಾಗೂ ಪ್ರೇಮಾ ಬೆಳಂಕರ ಅವರುಗಳ 25ನೇ ವಾರ್ಷಿಕ ಶರಣ ದಾಂಪತ್ಯ ಉತ್ಸವ, ಮಕ್ಕಳಿಬ್ಬರ ಲಿಂಗದೀಕ್ಷೆ ಹಾಗೂ ಶಾಲು ಹೊದಿಸುವ ಸಮಾರಂಭ ಕಳೆದ ಶುಕ್ರವಾರ ಸಂಜೆ ನಗರದ ವಿಜಯಪುರದ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.
ಆರಂಭದಲ್ಲಿ ಬಸವ ಧ್ವಜಾರೋಹಣವನ್ನು ಹಿರಿಯ ಶರಣಜೀವಿ ಶಿವಪುತ್ರಪ್ಪ ಸಂಗೊಳಗಿ ನೆರವೇರಿಸಿದರು. ಬಸವಧ್ವಜ ಗೀತೆಯನ್ನು ವಚನಮೂರ್ತಿ ಅಶೋಕ ಬರಗುಂಡಿ ಶರಣರು ಎಲ್ಲರಿಗೂ ಹಾಡಿಸಿದರು. ಸಂವಿಧಾನ ಪೀಠಿಕೆಯನ್ನು ಶರಣ ನಿವೃತ್ತ ಪ್ರಾಚಾರ್ಯರಾದ ಎಸ್.ಎಸ್. ಚೋರಗಿ ಎಲ್ಲರಿಗೂ ಓದಿಸಿದರು.