ಸಿಂಧನೂರು ತಾಲ್ಲೂಕ ಚಿಕ್ಕಬೇವರ್ಗಿ ಗ್ರಾಮದ ಗೋನಾಳ ಕುಟುಂಬ ಹಾಗೂ ಯಲಬುರ್ಗಾ ತಾಲೂಕು ಕುಡಗುಂಟಿ ಗ್ರಾಮದ ಭುವನಕೊಪ್ಪ ಕುಟುಂಬದವರ ನಾಮಕರಣ ಸಮಾರಂಭ ಮಂಗಳವಾರದಂದು ಕುಡಗುಂಟಿ ಗ್ರಾಮದಲ್ಲಿ ಲಿಂಗಾಯತ ನಿಜಾಚರಣೆಯಂತೆ ನೆರವೇರಿತು.
ವಿಶ್ವಗುರು, ಧರ್ಮಗುರು ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ,
ಬಸವ ಕೇಂದ್ರದ ಅನುಭಾವಿ ಶರಣ ಪಿ.ವೀರಭದ್ರಪ್ಪನವರು ನೇತೃತ್ವ ವಹಿಸಿ ಅನುಭಾವ ನೀಡಿದರು ಹಾಗೂ ನಿಜಾಚರಣೆ ನಡೆಸಿಕೊಟ್ಟರು.
ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಹೂ,ಹಾರ ಹಾಕಿ,ಬಸವ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭೀಮಾ ಹಾಗೂ ಗ್ಯಾನಪ್ಪ ಗೋನಾಳ ದಂಪತಿಗಳ ಉದರದಲ್ಲಿ ಜನಿಸಿದ ಹೆಣ್ಣುಮಗುವಿಗೆ “ಶಿವದೀಕ್ಷಾ” ಎಂದು ಕುಟುಂಬ ವರ್ಗದವರು ನಾಮಕರಣ ಮಾಡಿದರು.
ಶರಣರಾದ ಬಸವರಾಜ ಕೋಳಿಹಾಳ, ಶರಣಬಸಪ್ಪ ಸಾಹುಕಾರ, ಹನುಮಂತಪ್ಪ ಬೇರ್ಗಿ,ಶಂಭನಗೌಡ ತಿಳಿಗೋಳ, ಅಮರೇಶಪ್ಪ ಬಳ್ಳಾರಿ,ಬಸಪ್ಪ ಭುವನಕೊಪ್ಪ,ಈರಪ್ಪ ಚಿಕೇನಕೊಪ್ಪ,ಕಲ್ಲನಗೌಡ ಪಾಟೀಲ,ಕರೇಗೌಡ ಪೋಲೀಸ್ ಪಾಟೀಲ್,ಶಿವಪ್ಪ ಚಿಕ್ಕೇನಕೊಪ್ಪ,ಹಂಪಮ್ಮ ಗೋನಾಳ, ಗಂಗಮ್ಮ ಪಿ.ಹಾಗೂ ಎರಡು ಕುಟುಂಬದ ಬಂಧುಗಳು,ನಾಗರಿಕರು ಪಾಲ್ಗೊಂಡಿದ್ದರು.