ಕಲಬುರ್ಗಿ
ನಗರದ ಪಂಚಶೀಲ ನಗರ ಕೊಳಚೆ ಪ್ರದೇಶದ ಬಡಾವಣೆಯಲ್ಲಿ “ಬಸವ ಪಂಚಮಿ” ಅಂಗವಾಗಿ ಮಕ್ಕಳಿಗೆ ಹಾಲುಣಿಸುವ ಕಾರ್ಯಕ್ರಮ ನಡೆಸಲಾಯಿತು.
ಸ್ಲಂ ಜನರ ಸಂಘಟನೆ ಕರ್ನಾಟಕ, ಕಲಬುರ್ಗಿ ಜಿಲ್ಲಾ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಸುಮಾರು 140ಕ್ಕು ಹೆಚ್ಚು ಮಕ್ಕಳಿಗೆ ಹಾಲನ್ನು ಕೊಡಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಲ್ಲಮಪ್ರಭು ನಿಂಬರ್ಗಾ, ಬ್ರಹ್ಮಾನಂದ ಮಿಂಚಾ, ಕರಣಕುಮಾರ ಬಂದರವಾಡ, ಶಿವಕುಮಾರ ಚಿಂಚೊಳಿ, ಬಸಮ್ಮಾ ಬೀಮಪುರೆ, ಸಂಜೀವಕುಮಾರ ಕಾಂಬಳೆ, ಶ್ರೀಧರ ಪಂಚಶೀಲನಗರ, ನರಸಿಂಗ ಕುದಂಪುರ, ಮಲ್ಲಿಕಾರ್ಜುನ ಸಿಂಗೆ ಮತ್ತಿತರ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.