ಕಲಬುರ್ಗಿ:
ಸಮುದಾಯ ಕಲಬುರಗಿ ಮತ್ತು ಪಲ್ಲವ ಪ್ರಕಾಶನ, ಚನ್ನಪಟ್ಟಣ ಇವರ ಸಹಯೋಗದಲ್ಲಿ
ಶರಣ ಮಹಾಂತೇಶ ನವಲಕಲ್ಲ ಅವರು ಬರೆದ ” ಬುದ್ಧ ಗಂಟೆಯ ಸದ್ಧು ” ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ಕನ್ನಡ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಶರಣ ಡಾ. ವಿಕ್ರಮ್ ವಿಸಾಜಿ ವಹಿಸಿದ್ಧರು. ಪುಸ್ತಕ ಬಿಡುಗಡೆಯನ್ನು ಶರಣ ಡಾ. ಶಿವಶರಣ ಮೂಳೆಗಾಂವ್ ಮಾಡಿದರು.
ಅತಿಥಿಗಳಾಗಿ ಡಾ.ಮೀನಾಕ್ಷಿ ಬಾಳಿ, ಆರ್.ಕೆ. ಹುಡಗಿ, ಬಿ.ಆರ್.ಬುದ್ಧಾ, ಅಪ್ಪಗೆರೆ ಜಯಪ್ರಕಾಶ್, ಡಾ. ಅಶೋಕ ಶೆಟಕಾರ, ದತ್ತಾತ್ರೇಯ ಇಕ್ಕಳಕಿ, ಶ್ರೀಶೈಲ ಘೂಳಿ, ಮಹಿಪಾಲರೆಡ್ಡಿ ಮುನ್ನೂರು ಮುಂತಾದವರಿದ್ದರು.