ಕನ್ನೇರಿ ಶ್ರೀಗಳೇ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬಾರದೆಂದು ವಿರೋಧ ಮಾಡುತ್ತಿರುವವರು ತಾಲಿಬಾನಿಗಳು
ಬೀದರ
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಸುವರ್ಣ ನ್ಯೂಸ್ ಗೆ ಕೊಟ್ಟ ಸಂದರ್ಶನ ಒಂದರಲ್ಲಿ “ಬಸವ ತಾಲಿಬಾನಿಗಳು” ಎಂಬ ಪದವನ್ನು ಬಳಸಿ ಇಡೀ ನಾಡಿನ ಬಸವಾಭಿಮಾನಿಗಳನ್ನು, ಬಸವಭಕ್ತರನ್ನು ನಿಂದಿಸಿದ್ದಾರೆ. ವಿಶ್ವಗುರು ಬಸವಣ್ಣನವರ ಹೆಸರಿನ ಜೊತೆ “ತಾಲಿಬಾನಿ” ಪದವನ್ನು ಸೇರಿಸಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಅವಮಾನಗೈದಿದ್ದಾರೆ.
12ನೇ ಶತಮಾನದಲ್ಲಿ ಸಮಾಜದಲ್ಲಿ ಶೋಷಣೆಗೆ ಕಾರಣವಾಗಿದ್ದ ಜಾತಿ ಪದ್ಧತಿಯನ್ನು ಕಿತ್ತೊಗೆಯುವ ಉದ್ದೇಶದಿಂದ, ಹುಟ್ಟಿನಿಂದ ಬ್ರಾಹ್ಮಣರಾಗಿದ್ದ ಮಧುವರಸರ ಮಗಳು ಮತ್ತು ಹುಟ್ಟಿನಿಂದ ಸಮಗಾರರಾಗಿದ್ದ ಹರಳಯ್ಯನವರ ಮಗನಿಗೆ ಇಷ್ಟಲಿಂಗ ದೀಕ್ಷೆ ಕೊಟ್ಟು ಮದುವೆ ಮಾಡಿಸಿದಾಗ ಶರಣರಾದ ಹರಳಯ್ಯ, ಮಧುವರಸ ಮತ್ತು ಶೀಲವಂತರ ಕಣ್ಣುಗಳನ್ನು ಕೀಳಿಸಿ, ಅವರನ್ನು ಆನೆಯ ಕಾಲಿಗೆ ಕಟ್ಟಿ ಮುಳ್ಳಿನ ಮೇಲೆ ಎಳೆದಾಡಿಸಿ ಹಿಂಸೆ ಕೊಟ್ಟು ಕೊಲೆ ಮಾಡಿದ ಸಂಪ್ರದಾಯವಾದಿಗಳು “ತಾಲಿಬಾನಿಗಳು”.
ಬಸವಾದಿ ಶರಣರು ಬರೆದಿರುವಂತಹ ವಚನಗಳು ಮುಂದಿನ ಜನಾಂಗಕ್ಕೆ ಮುಟ್ಟಬಾರದು ಎಂಬ ದುರುದ್ಧೇಶದಿಂದ ಲಕ್ಷ-ಲಕ್ಷ ವಚನಗಳನ್ನು ಸುಟ್ಟು ಹಾಕಿದವರು “ತಾಲಿಬಾನಿಗಳು”.
ಜಗತ್ತಿನ ಕಲ್ಯಾಣಕ್ಕಾಗಿ ಈ ವಚನಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ತಮ್ಮ ಪ್ರಾಣವನ್ನು ಲೆಕ್ಕಿಸದೆ ವಚನಗಳ ರಕ್ಷಣೆ ಮಾಡಲು ಮುಂದಾದ ಸಾವಿರಾರು ಶರಣರ ಕೊಲೆ ಮಾಡಿದ ಸಂಪ್ರದಾಯವಾದಿಗಳು “ತಾಲಿಬಾನಿಗಳು”.
850 ವರ್ಷಗಳ ಅಜ್ಞಾತವಾಸದಿಂದ ವಚನ ಸಾಹಿತ್ಯವು ಹೊರಬಂದಾಗ ಲಿಂಗಾಯತರು ಜಾಗೃತಗೊಂಡು, ಲಿಂಗಾಯತವು ಒಂದು ಜಾತಿಯಲ್ಲ, ಇದೊಂದು ಸ್ವತಂತ್ರ ಧರ್ಮ, ಇದು ವಿಶ್ವಧರ್ಮ ಎಂಬ ಅರಿವು ಎಲ್ಲಾ ಕಡೆ ಮೂಡಿದಾಗ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಸಿಗಬಾರದೆಂದು ವಿರೋಧ ಮಾಡುತ್ತಿರುವವರು “ತಾಲಿಬಾನಿಗಳು”.
ಮಾನವರಲ್ಲಿ ಅರಿವು ಮೂಡಿಸಿ ಶರಣರನ್ನಾಗಿಸಿ ಸ್ವತಂತ್ರರನ್ನಾಗಿ ಮಾಡುವುದು ಶರಣ ಸಂಸ್ಕೃತಿ. ಆದರೆ ಜನರು ಬೌದ್ಧಿಕವಾಗಿ, ಧಾರ್ಮಿಕವಾಗಿ ಗುಲಾಮಗಿರಿಯಲ್ಲಿಯೆ ಬದುಕಬೇಕು ಎಂದು ಬಯಸುವವರು “ತಾಲಿಬಾನಿಗಳು”.
ಕನ್ನೇರಿ ಮಠದ ಸ್ವಾಮಿಗಳು ಈ ರೀತಿ ಮಾತನಾಡಿ ತಮ್ಮ ಅಜ್ಞಾನ ಮತ್ತು ದುರಹಂಕಾರವನ್ನು ಪ್ರದರ್ಶಿಸಿಕೊಂಡಿದ್ದಾರೆ.
ನಾಡಿನ ಬಸವಾಭಿಮಾನಿಗಳ, ಬಸವ ಭಕ್ತರ ನಿಂದನೆ ಮಾಡಿರುವ ಕಾಡಸಿದ್ದೇಶ್ವರ ಸ್ವಾಮಿಗಳು ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು.
ಹುಟ್ಟಿನಿಂದ ಲಿಂಗಾಯತ ಧರ್ಮದವರು ಆದರೂ ಲಿಂಗಾಯತ ಧರ್ಮದ ವಿರೋಧಿ ಮನುವಾದಿಗಳ ಪರ ವಕಾಲತ್ತು ವಹಿಸುವ ಧರ್ಮ ದ್ರೋಹಿಗಳ ಆತ್ಮ ಸಾಕ್ಷಿ ಬಡಿದು ಎಚ್ಚರಿಸುವ ಲೇಖನ. ಇದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡರೆ ಲಿಂಗಾಯತ ಧರ್ಮಕ್ಕೇ ಉತ್ತಮ ಭವಿಷ್ಯ ಇದೆ ಅಂತ ಅನ್ನಿಸುತ್ತೆ.
ವಚನಗಳನ್ನು ಬಿಸಾಡಿದವರು, ಆನೆಗಳಿಂದ ಏಳದಡಿದವರು ತಾಲಿಬಾನಿಗಳು ಎಂದಿರುವದು ಸರಿಯಿದೆ