ಕಸಾಪ ಸಮ್ಮೇಳನದಲ್ಲಿ ಬಸವಣ್ಣನವರ ನಿರ್ಲಕ್ಷ್ಯ ಉದ್ದೇಶಪೂರ್ವಕ. ಇಲ್ಲಿದೆ ಸಾಕ್ಷಿ

ಎಂ. ಎ. ಅರುಣ್
ಎಂ. ಎ. ಅರುಣ್

ಇದು ಕಣ್ಣೊರೆಸುವ ಪ್ರಯತ್ನವಷ್ಟೇ. ಈಗಲೂ ಮುಖ್ಯದ್ವಾರ, ಸಭಾ ಮಂಟಪ, ವಿಚಾರ ಸಂಕಿರಣ ಎಲ್ಲೂ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸುಳಿವಿಲ್ಲ. ಯಾವುದೇ ಚರ್ಚಾ ಘೋಷ್ಠಿಯಲ್ಲಿ ವಚನಗಳ ಸುಳಿವಿಲ್ಲ.

ಮಂಡ್ಯ

ಬಸವ ಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕರ್ತರು ವಿಶ್ವಗುರು ಬಸವಣ್ಣನವರ ಮಹಾದ್ವಾರವನ್ನು ಮಂಡ್ಯ-ಬೆಂಗಳೂರು ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಿರ್ಮಿಸಿದ್ದಾರೆ.

ಡಿಸೆಂಬರ್ 20ರಿಂದ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಬೇರೆ ಬೇರೆ ಪ್ರಮುಖರ ಹೆಸರಿನಲ್ಲಿ 15 ದಿನಗಳ ಮುಂಚೆಯೇ 60ಕ್ಕೂ ಹೆಚ್ಚು ಮಹಾದ್ವಾರಗಳು, ಕಮಾನುಗಳು ಜಿಲ್ಲೆಯ ಹಲವೆಡೆ ನಿರ್ಮಾಣವಾಗಿದೆ. ಈ ಮಹಾದ್ವಾರಗಳಲ್ಲಿ ಇರುವ ಕೆಲವು ಹೆಸರುಗಳನ್ನು ಯಾರೂ ಕೇಳಿಲ್ಲ.

ಆದರೆ ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಸವಣ್ಣನವರ ಕಡೆಗಣನೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸಮ್ಮೇಳನಕ್ಕೆ ಮೂರು ದಿನಗಳ ಮುಂಚೆ ಈ ಮಹಾದ್ವಾರ ನಿರ್ಮಿಸಿದ್ದಾರೆ.

ಇದಕ್ಕೆ ಸಂಬಂದಿಸಿದ ವ್ಯಕ್ತಿಯೊಬ್ಬರು ಸಮ್ಮೇಳನಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಿರುವ ಮಹಾದ್ವಾರ, ಕಮಾನುಗಳ ಪಟ್ಟಿಯನ್ನು ಬಸವ ಮೀಡಿಯಾದ ಜೊತೆ ಹಂಚಿಕೊಂಡಿದ್ದಾರೆ. ಇದರಲ್ಲಿ 62 ಹೆಸರುಗಳಿವೆ. ಮೊದಲ 61 ಹೆಸರುಗಳು ಟೈಪ್ ಆಗಿವೆ. ಕೊನೆಯ ಹೆಸರು “ಬಸವಣ್ಣ” ಅಂತ ಕೈ ಬರಹದಲ್ಲಿ ಸೇರಿಸಿದ್ದಾರೆ.

ಇದರ ಅರ್ಥವೇನು?

ಕನ್ನಡ ಸಾಹಿತ್ಯ ಪರಿಷತ್ ಮಹೇಶ್ ಜೋಶಿಯವರಿಗೆ ಬಸವಣ್ಣನವರ ಹೆಸರಿನಲ್ಲಿ ಯಾವುದೇ ಮಹಾದ್ವಾರ ನಿರ್ಮಿಸುವ ಉದ್ದೇಶವಿರಲಿಲ್ಲ. ನಮ್ಮ ಪ್ರತಿಭಟನೆ ಶುರುವಾಗುತ್ತಿದ್ದಂತೆಯೇ ನಮ್ಮ ಸಿಟ್ಟು ಶಮನಗೊಳಿಸಲು ಇದನ್ನು ಮಾಡಿದ್ದಾರೆ. ಇಲ್ಲದಿದ್ದರೆ ಬಸವಣ್ಣನವರ ಹೆಸರು ಕೈಯಲ್ಲಿ ಬರೆದು ಸೇರಿಸುವ ಅಗತ್ಯವೇನಿತ್ತು, ಎಂದು ಮಂಡ್ಯ ಜಿಲ್ಲೆ ಲಿಂಗಾಯತ ಮಹಾಸಭಾ ಅಧ್ಯಕ್ಷ ಹಾಗೂ ಕನ್ನಡ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ , ಎಂ ಎಸ್ ಮಂಜುನಾಥ್, ಕೇಳಿದರು.

ನವೆಂಬರ್ ತಿಂಗಳು ಜಿಲ್ಲಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮುಖ್ಯದ್ವಾರ ಮತ್ತು ಸಭಾ ಮಂಟಪದಲ್ಲಿ ಬಸವಣ್ಣನವರ ಹೆಸರಿರಬೇಕು, ವಚನಗಳ ಮೇಲೆ ಚರ್ಚಾಗೋಷ್ಠಿ ನಡೆಯಬೇಕು ಎಂದು ಮೂರು ಬೇಡಿಕೆಗಳನ್ನು ಇಟ್ಟಿದ್ದೆವು. ಅಷ್ಟನ್ನೂ ಜಿಲ್ಲಾಧಿಕಾರಿಗಳು ಬರೆದುಕೊಂಡರು. ನಂತರ 7-8 ಸಭೆಗಳಲ್ಲಿ ಇದರ ಬಗ್ಗೆ ಕೇಳಿದ್ದೇವೆ. ಆದರೂ ನಮ್ಮ ಎಲ್ಲಾ ಬೇಡಿಕೆಗಳನ್ನೂ ಕಡೆಗಣಿಸಲಾಗಿದೆ, ಎಂದು ದೂರಿದರು.

ಇತೀಚೆಗೆ ಕೇಳಿದಾಗ ಜಿಲ್ಲಾಧಿಕಾರಿಗಳು ಇವೆಲ್ಲಾ ಮಹೇಶ್ ಜೋಶಿ ಅಧ್ಯಕ್ಷತೆಯ ಕಸಾಪ ಸಮಿತಿಯ ನಿರ್ಧಾರಗಳು. ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಹೇಳಿ ಕೈ ತೊಳೆದುಕೊಂಡರು.

10 ದಿನಗಳ ಹಿಂದೆ ಆಮಂತ್ರಣ ಪತ್ರಿಕೆಗಳಲ್ಲಿ ಬಸವಣ್ಣ, ಕುವೆಂಪು ಹೆಸರು ಇಲ್ಲದಿದ್ದು ಗಮನಿಸಿ ಓಂಕಾರ ಶರಣರ, ಕಾಯಕ ಯೋಗಿ ಫೌಂಡೇಶನ್, ಲಿಂಗಾಯತ ಮಹಾಸಭಾ ಮುಂತಾದ ಬಸವ ಪರ ಸಂಘಟನೆಗಳ ಸಹಯೋಗದಲ್ಲಿ ಹೋರಾಟ ಶುರು ಮಾಡಿ ಜಿಲ್ಲೆಯ ಶಾಸಕರನ್ನ, ಮಂತ್ರಿಗಳನ್ನ ಸಂಪರ್ಕಿಸಿದ ಮೇಲೆ ನೆನ್ನೆ ರಾತ್ರಿ ಕಾಟಾಚಾರಕ್ಕೆ ಒಂದು ದ್ವಾರ ನಿರ್ಮಿಸಿದ್ದಾರೆ.

ಇದು ಕಣ್ಣೊರೆಸುವ ಪ್ರಯತ್ನವಷ್ಟೇ. ಈಗಲೂ ಮುಖ್ಯದ್ವಾರ, ಸಭಾ ಮಂಟಪ, ವಿಚಾರ ಸಂಕಿರಣ ಎಲ್ಲೂ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸುಳಿವಿಲ್ಲ. ಯಾವುದೇ ಚರ್ಚಾ ಘೋಷ್ಠಿಯಲ್ಲಿ ವಚನಗಳ ಸುಳಿವಿಲ್ಲ.

ಡಿಸೆಂಬರ್ 20 ಮೆರವಣಿಗೆಯಲ್ಲೂ ನೂರೊಂದು ಮಹಿಳೆಯರಿಗೆ ಬಿಂದಿಗೆ ಕೊಟ್ಟು ನಡೆಸುತ್ತಾರಂತೆ. ಬಸವಾದಿ ಶರಣರನ್ನು, ವಚನಗಳನ್ನು ಬಿಂಬಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಮಂಜುನಾಥ್ ಹೇಳಿದರು.

ವಚನ ಚಳುವಳಿ ವೈದಿಕರ ವಿರುದ್ಧ ನಡೆದ ಚಳುವಳಿ. ಅದಕ್ಕೆ ಅದರ ಮಹತ್ವವನ್ನು ನಿರಾಕರಿಸುವುದು ಮನುವಾದಿಗಳ ಅಜೆಂಡಾ. ಮಹೇಶ್ ಜೋಶಿ ಸಂಘ ಪರಿವಾರದಿಂದ ಬಂದವರು. ಅವರು ಉದ್ದೇಶಪೂರ್ವಕವಾಗಿಯೇ ಬಸವಾದಿ ಶರಣರನ್ನ, ವಚನಗಳನ್ನ ಕಡೆಗಣಿಸುತ್ತಿದ್ದಾರೆ.

73
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಸವಣ್ಣನವರನ್ನು ಕಡೆಗಣನೆಯ ಕಾರಣ:

ಒಂದು ಕಡೆ ಸಂಘ ಪರಿವಾರದವರು ವಚನ ದರ್ಶನದಂತಹ ಪುಸ್ತಕ ಬರೆದು ಜನರಲ್ಲಿ ವಚನಗಳ ಬಗ್ಗೆ ತಪ್ಪು ಕಲ್ಪನೆ ಹರಡಲು ದುಡ್ಡು ಖರ್ಚು ಮಾಡುತ್ತಾರೆ. ಇನ್ನೊಂದು ಕಡೆ ತಮ್ಮ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ವಚನಗಳಿಗೆ ಯಾವುದೇ ಜಾಗ ಸಿಗದ ಹಾಗೆ ನೋಡಿಕೊಳ್ಳುತ್ತಾರೆ. ಇವರ ಅಜೆಂಡಾ ಎಲ್ಲಾ ಪ್ರಗತಿಪರರು ಅರ್ಥಮಾಡಿಕೊಳ್ಳಬೇಕು, ಎಂದು ಹೇಳಿದರು.

ಕಸಾಪ ಸಮ್ಮೇಳನದಲ್ಲಿ ಬಸವಣ್ಣನವರಂತೆ ರಾಷ್ಟ್ರಕವಿ ಕುವೆಂಪು ಅವರನ್ನೂ ಕಡೆಗಣಿಸಿದ್ದಾರೆ. ಅವರ ಹೆಸರಿನಲ್ಲಿಯೂ ಮಹಾದ್ವಾರವನ್ನು ಎರಡು ದಿನದ ಹಿಂದೆ ಹಾಕಿದ್ದಾರೆ, ಎಂದು ಮಂಜುನಾಥ್ ಹೇಳಿದರು.

Share This Article
3 Comments
  • ಬಸವಣ್ಣನವರಿಲ್ಲದ ಸಮ್ಮೇಳನ ಅರ್ಥಹೀನ…ವಿಶ್ವ ಗುರು ಕಡೆಗಣನೆಗೆ ನಮ್ಮ ವಿರೋಧ……ಕಾಯಕಯೋಗಿ ಫೌಂಡೇಶನ್, ಮಂಡ್ಯ.

  • ವಿಶ್ವ ಗುರು ಬಸವಣ್ಣನವರನ್ನು ಅವಮಾನಿಸುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿಕ್ಕಾರ

  • ವಿಶ್ವ ಗುರು ಮತ್ತು ವಿಶ್ವ ಮಾನವರ ಚರ್ಚೆಯಿಲ್ಲದೆ ಕನ್ನಡ ಸಾಹಿತ್ಯ ಸಂಭ್ರಮ ಶೂನ್ಯ, ಮತ್ತು ಈ ಈ ಮನುವಾದಿ ಮನಸ್ಥಿತಿಗೆ ಧಿಕ್ಕಾರ 😡😡

Leave a Reply

Your email address will not be published. Required fields are marked *