ಕುಷ್ಟಗಿ
ಬಸವ ಸಂಸ್ಕೃತಿ ಅಭಿಯಾನಕ್ಕೆ, ಲಿಂಗಾಯತ ಪೂಜ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬಸವ ಸಮಿತಿ ಸದಸ್ಯರು ತಹಶೀಲ್ದಾರರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಮಿತಿಯ ಪ್ರಮುಖರು ಕನ್ನೇರಿ ಸ್ವಾಮಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ, ದ್ವೇಷಭರಿತ, ಪ್ರಚೋದನಾತ್ಮಕ, ಸಂವಿಧಾನ ಬಾಹಿರ ಹೇಳಿಕೆ ನೀಡಿರುವದು ಖಂಡನೀಯವಾಗಿದೆ.
ಇದರಿಂದ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರೆಂದು ಘೋಷಿಸಿದ ಕರ್ನಾಟಕ ಸರ್ಕಾರ, ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿಯಾದ ಲಿಂಗಾಯತ ಮಠಾಧಿಪತಿಗಳು ಹಾಗೂ ಬಸವಭಕ್ತರು, ಅನುಯಾಯಿಗಳಿಗೆ ಅವಹೇಳನ ಮಾಡಿದಂತಾಗಿದೆ.
ಸಮಾಜದಲ್ಲಿ ಉದ್ರೇಕ ಮತ್ತು ದ್ವೇಷ ಹರಡಲು ಕಾರಣವಾಗುವುದರೊಂದಿಗೆ ಧಾರ್ಮಿಕ ಸಹಿಷ್ಣತೆಗೆ ಕನ್ನೇರಿ ಸ್ವಾಮಿ ಧಕ್ಕೆ ತಂದಿದ್ದಾರೆ. ಆದ್ದರಿಂದ ಸ್ವಾಮೀಜಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ರಾಮನಗೌಡ ವಕೀಲರು, ತಿಪ್ಪಣ್ಣ ತಾವರಗೇರಾ, ಡಾ. ಶಿವಲಿಂಗಪ್ರಭು ಸುಂಕದ, ಬಸನಗೌಡ, ಎಚ್.ಬಿ. ಜಗ್ಗಲ, ಶರಣಪ್ಪ ತಟ್ಟಿ, ಕಳಕಪ್ಪ ರೆಡ್ಡೇರ್, ಎಂ.ಎಂ. ಮಹಾಲಿಂಗಪೂರ, ಶರಣಪ್ಪ ಜಿಗೇರಿ, ಸಂಗನಬಸಪ್ಪ ಮರೋಳ, ಮಹೇಶ ಹಡಪದ, ಶಿವಾಜಿ ಪಾಟೀಲ, ದೊಡ್ಡಪ್ಪ, ಸಿದ್ರಾಮಪ್ಪ ಕೌದಿ, ಸಿ.ಎನ್.ಉಪ್ಪೀನ ಸೇರಿದಂತೆ ಮತ್ತಿತರರು ಇದ್ದರು.