ಮುಂದಿನ ದಿನಗಳಲ್ಲಿ ಶ್ರೀಗಳ ವಿರುದ್ಧ ಹೋರಾಟ ಮಾಡುವುದಾಗಿಯೂ ಮನವಿಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ
ಬಸವಣ್ಣನವರ ಅನುಯಾಯಿಗಳಿಗೆ ತಾಲಿಬಾನಿಗಳು ಎಂದು ಕರೆಯುವ ಮೂಲಕ ಸಮಸ್ತ ಬಸವಾನುಯಾಯಿಗಳಿಗೆ ನೋವನ್ನುಂಟು ಮಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ದಾವಣಗೆರೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಲ್ಲದೇ ಮುಂದಿನ ದಿನಗಳಲ್ಲಿ ಸ್ವಾಮಿಗಳ ವಿರುದ್ಧ ಹೋರಾಟ ಮಾಡುವುದಾಗಿಯೂ ಮನವಿಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಮನುವಾದಿಗಳ ಕೈಗೊಂಬೆಯಾಗಿ, ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ತತ್ವಸಿದ್ಧಾಂತ ಮಠದ ಪೀಠಾಧಿಪತಿಯಾಗಿಯೂ ಬಸವತತ್ವಕ್ಕೆ ವಿರುದ್ಧವಾದ ಹೇಳಿಕೆ ನೀಡುತ್ತ ಉದ್ಧಟತನ ತೋರುತ್ತಿದ್ದಾರೆ. ಕೂಡಲೇ ಇವರು ಬಸವಧರ್ಮದ ಎಲ್ಲಾ ಭಕ್ತರಲ್ಲಿ ಕ್ಷಮೆಯಾಚಿಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಪರಿಷತ್ತಿನ ಅಧ್ಯಕ್ಷ ಎಸ್.ಬಿ. ರುದ್ರಗೌಡ ಗೋಪನಾಳ್ ಜೊತೆಗೆ ಪದಾಧಿಕಾರಿಗಳಾದ ಕೊಟ್ರೇಶ ಐರಣಿ, ಹನಗವಾಡಿ ಸಿದ್ದೇಶಣ್ಣ, ಅತ್ತಿಗೆರೆ ನಾಗರಾಜ, ಕರೂರು ಹನುಮಂತಪ್ಪ, ಶಿವಣ್ಣ, ವಕೀಲರಾದ ಸತೀಶ ಅರವಿಂದ ಮೊದಲಾದವರು ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲಿಂಗಾಯತ ಧರ್ಮದ ಅರ್ಥ ಅವರಿಗೆ ಇದೇಯೋ ಇಲ್ಲವೋ? ಬೇಳೆ ಯಾವ ಪಾತ್ರೆಯಲ್ಲಿ ಕುದಿಯುತ್ತದೆಯೋ ಅಂಥ ಪಾತ್ರೆಯನ್ನು ಆಯ್ಕೆ ಮಾಡಿಕೊಂಡಿರುವ ಸ್ವಾಮಿಗಳು ಇವರು